PRABHAVAA.COM

ಸರ್ಕಾರದ ವತಿಯಿಂದ ಇಂಜಿನಿಯರ್ ಗಳ ದಿನ ಆಚರಣೆ: ಸಿಎಂ ಡಿ ಕೆ ಶಿವಕುಮಾರ್ ಘೋಷಣೆ

Bengaluru Urban:

Font size:

ಸರ್ಕಾರದ ವತಿಯಿಂದ ಇಂಜಿನಿಯರ್ ಗಳ ದಿನ ಆಚರಣೆ: ಸಿಎಂ ಡಿ ಕೆ ಶಿವಕುಮಾರ್ ಘೋಷಣೆ

ಬೆಂಗಳೂರು, ಸೆ. 15:

"ಮುಂದಿನ ವರ್ಷದಿಂದ ಸರ್ಕಾರದ ವತಿಯಿಂದ ಇಂಜಿನಿಯರ್ ಗಳ ದಿನ ಆಚರಣೆ ಮಾಡಲಾಗುವುದು" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಕೆ ಆರ್ ವೃತ್ತದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಶಿವಕುಮಾರ್ ಅವರು ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು.

"ಸರ್ಕಾರ ವತಿಯಿಂದ ಇಂಜಿನಿಯರ್ ದಿನ ಆಚರಿಸುವ ಪ್ರಸ್ತಾವನೆ ನೀಡಿದ್ದು, ನಾನು ಅದಕ್ಕೆ ಸಮ್ಮತಿ ಸೂಚಿಸಿದ್ದೇನೆ. ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ 1 ಲಕ್ಷಕ್ಕೂ ಹೆಚ್ಚು ತಯಾರು ಮಾಡುತ್ತಿದೆ. ಭಾರತದಲ್ಲಿ ಅತಿ ಹೆಚ್ಚು ಇಂಜಿನಿಯರ್ ಇದ್ದು, ಅವರನ್ನು ಗುರುತಿಸುವುದು ನಮ್ಮ ಕರ್ತವ್ಯ. ಎಲ್ಲಾ ಇಂಜಿನಿಯರ್ ಗಳು ರಾಜ್ಯದ ಉದ್ದಗಲ ಗಮನಿಸಬೇಕು. ಇದರ ರೂಪುರೇಷೆಗಳನ್ನು ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು" ಎಂದು ತಿಳಿಸಿದರು.

ಅಭಿವೃದ್ಧಿಗೆ ಅಡಿಪಾಯ ಹಾಕುವವರು ಇಂಜಿನಿಯರ್ ಗಳು

"ಇಂದು ಇಂಜಿನಿಯರ್ ಗಳ ದಿನವಾಗಿದ್ದು, ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ಸರ್ಕಾರದ ಪರವಾಗಿ ಮಾಲಾರ್ಪಣೆ ಮಾಡಲಾಗಿದೆ. ಇಂಜಿನಿಯರ್ ಗಳು ದೇಶದ ಆಸ್ತಿ. ವಿಜ್ಞಾನಿಗಳ ಸಂಶೋಧನೆಗಳನ್ನು ಕಾರ್ಯಗತಗೊಳಿಸುತ್ತಿರುವವರು ಇಂಜಿನಿಯರ್ ಗಳು. ಎಲ್ಲಾ ಅಭಿವೃದ್ಧಿಗೆ ಅಡಿಪಾಯ ಹಾಕುವವರು ಇಂಜಿನಿಯರ್ ಗಳು. ವಾಸ್ತುಶಿಲ್ಪದ ಪರಂಪರೆಯಲ್ಲಿ ನಾವು ಇಂಜಿನಿಯರ್ ಗಳನ್ನು ಗುರುತಿಸುತ್ತಿದ್ದೆವು. ಈಗ ಇಂಧನ, ಕಟ್ಟಡ ನಿರ್ಮಾಣ, ಐಟಿ ತಂತ್ರಜ್ಞಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ವಿಶ್ವೇಶ್ವರಯ್ಯ ಅವರು ದೇಶಕ್ಕೆ ಮಾದರಿ. ಕರ್ನಾಟಕಕ್ಕೆ ಅವರ ಕೊಡುಗೆ ಅಪಾರ" ಎಂದು ತಿಳಿಸಿದರು.

Comments

Leave a Comment

Prev Post ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ : 24ನೇ ಸಾಂಸ್ಕೃತಿಕ ಸಿಂಚನ ಮತ್ತು ಪ್ರಶಸ್ತಿ ಪ್ರದಾನ
Next Post ಕರ್ನಾಟಕ ಪ್ರವಾಸೋದ್ಯಮದಲ್ಲಿ ಹೂಡಿಕೆಗೆ ಯುಎಇ ಕನ್ನಡಿಗ ಉದ್ಯಮಿಗಳಿಗೆ ಸಚಿವ ಕೆ.ಜೆ. ಜಾರ್ಜ್ ಆಹ್ವಾನ

ಸವಾಲು ಎದುರಿಸಲು ಆಧುನಿಕ ಜ್ಞಾನಸೃಷ್ಟಿ ಅಗತ್ಯ: ಎಂ ಬಿ ಪಾಟೀಲ

ಅಗಸ್ತ್ಯ ಇಂಟರ್ನ್ಯಾಷನಲ್ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗಿ

ಮೇ ತಿಂಗಳಲ್ಲಿ ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026 ಆಯೋಜನೆ

ಮೇ ತಿಂಗಳಲ್ಲಿ ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026 ಆಯೋಜನೆ

ಕಲಬುರಗಿಯಲ್ಲಿ ಪಿಎಂ ಮಿತ್ರ ಜವಳಿ ಪಾರ್ಕ್ ಯೋಜನೆ

ಕೆಐಎಡಿಬಿ ಮೂಲಕ ಮೊದಲ ಹಂತ ಅಭಿವೃದ್ಧಿಗೆ ತೀರ್ಮಾನ: ಎಂ ಬಿ ಪಾಟೀಲ

ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಹೆಚ್‌ಎಂಟಿ ಉನ್ನತಿಗೆ ಕ್ರಮ ಎಂದ ಹೆಚ್‌ʼಡಿಕೆ

ಇಡೀ ದಿನ ಕಾರ್ಖಾನೆಯಲ್ಲೇ ಸಂಚರಿಸಿದ ಸಚಿವರು; ಆಡಳಿತ ವರ್ಗ, ಕಾರ್ಮಿಕರು, ಇನ್ನಿತರ ಪ್ರಮುಖರೊಂದಿಗೆ ವಿಸ್ತೃತ ಸಮಾಲೋಚನೆ

7,506 ಕೋಟಿ ರೂ. ಹೂಡಿಕೆಯ 55 ಯೋಜನೆಗಳಿಗೆ ಅಸ್ತು: ಎಂ ಬಿ ಪಾಟೀಲ

7,506 ಕೋಟಿ ರೂ. ಹೂಡಿಕೆಯ 55 ಯೋಜನೆಗಳಿಗೆ ಅಸ್ತು: ಎಂ ಬಿ ಪಾಟೀಲ

ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆ: ರಾಜ್ಯದ ನೇತೃತ್ವದಲ್ಲಿ ಪಾಲುದಾರರ ಕಾರ್ಯಾಗಾರ

50ಕ್ಕೂ ಹೆಚ್ಚು ಉನ್ನತ ಪ್ರತಿನಿಧಿಗಳು ಭಾಗಿ, ಕರ್ನಾಟಕಕ್ಕೆ ನೀತಿ ನಿರೂಪಣೆಯ ಅವಕಾಶ

Read all News