ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ : 24ನೇ ಸಾಂಸ್ಕೃತಿಕ ಸಿಂಚನ ಮತ್ತು ಪ್ರಶಸ್ತಿ ಪ್ರದಾನ
ಬೆಂಗಳೂರು, ಸೆ.14: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಅಂಗವಾಗಿ ‘ಇದು ನಿಮ್ಮ ವಾಹಿನಿ ಕಲಾ ವೇದಿಕೆ’ ಹಾಗೂ ‘ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್’ ಸಹಯೋಗದಲ್ಲಿ ಆಯೋಜಿಸಿದ್ದ 24ನೇ ಸಾಂಸ್ಕೃತಿಕ ಸಿಂಚನ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಗರದ ನಯನ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಕೆ.ಎಸ್. ರಾಜಣ್ಣ, ಲೋಕಾಯುಕ್ತದ ನಿವೃತ್ತ ನ್ಯಾಯಾಧೀಶ ಜಸ್ಟೀಸ್ ಡಾ. ಸಂತೋಷ್ ಹೆಗ್ಡೆ, ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ, ಪತ್ರಕರ್ತ ಗಂಡಸಿ ಸದಾನಂದ ಸ್ವಾಮಿ, ಕಲಾವಿದ ಕೆಟಿವಿ ಗಣೇಶ್ ರಾವ್ ಕೇಸರಸ್ಕರ್ ಹಾಗೂ ಹಿರಿಯ ಗಾಯಕ ಶಶಿಧರ್ ಕೋಟೆ ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸರಿಗಮಪ ಜ್ಯೂರಿ ಸದಸ್ಯ ಸಚಿನ್ ಎಸ್. ನರ್ಗಾತ್, ಎಚ್.ಕೆ. ಮೊಹಮ್ಮದ್ ಅಸ್ಲಂ, ವಸ್ತ್ರ ವಿನ್ಯಾಸಕಾರ ಲಕ್ಷ್ಮೀ ಕೃಷ್ಣ, ಇವೆಂಟ್ ಕೋ-ಆರ್ಡಿನೇಟರ್ ಚಂದ್ರಿಕಾ ಹಾಗೂ ಇದು ನಿಮ್ಮ ವಾಹಿನಿ ಕಲಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ. ಚಿಕ್ಕಹೆಜ್ಜಾಜಿ ಮಹದೇವ್, ಎಸ್. ನಂಜುಂಡ, ಎಸ್. ಸವಿತಾ, ಟಿ.ಆರ್. ಚೂಡಾಮಣಿ, ಜಯಚಿತ್ರ, ಪವಿತ್ರಾ ಎಂ.ಆರ್., ಸುಮಾ ಎಂ., ಅಂಜನಾ ಲಮ, ಸಂಧ್ಯಾಪ್ರಿಯ ಜಿ., ಅರ್ಪಣ ಕುಮಾರಿ, ಅರ್ಚನ ಎಂ.ಎನ್., ರೆಶ್ಮಾ, ರೂಪ ಎನ್., ರಿಟಾ ವಿ., ರಮ್ಯ ಜಿ., ಅಭಿನಯ ಎಂ., ಜ್ಯೋತಿ ಭಿಡೆ ಆರ್., ಸುಮೇರಾ ಅಮನ್, ವೆಂಕಟೇಶ ಮೂರ್ತಿ ಎಸ್.ವಿ., ಮಂಚೇನಹಳ್ಳಿ ಪ್ರಕಾಶ್ ಎನ್. ಜಿಂಗಾಡೆ, ರೂಪಾ ಕೆ., ಭವಾನಿ ಆರ್., ಕುಮಾರ ತೇಜಸ್ ಎಸ್., ಕೃತಿಕಾ ಆರ್. ಹಾಗೂ ಕುಮಾರಿ ಸೌಜನ್ಯ ವಿ. ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಅವರ ಸೇವೆ ಮತ್ತು ಪ್ರತಿಭೆಗೆ ಪ್ರೋತ್ಸಾಹ ನೀಡಲಾಯಿತು. ಕಾರ್ಯಕ್ರಮವು ಗಣ್ಯರು, ಕಲಾವಿದರು, ಪತ್ರಕರ್ತರು ಹಾಗೂ ಸಾರ್ವಜನಿಕರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ನೆರವೇರಿತು.







Comments
Leave a Comment