PRABHAVAA.COM

ತುಮಕೂರು ಡಿಸಿಸಿ ಬ್ಯಾಂಕ್: ರೈತರ ಷೇರು, ಠೇವಣಿ ಆಧಾರಿತ ಸಾಲ – 25.60 ಕೋಟಿ ಲಾಭ, 12.20% ಡಿವಿಡೆಂಡ್ ಘೋಷಣೆ

Tumakuru:

Font size:

ವ್ಯಾಪಾರ, ವ್ಯವಹಾರಗಳನ್ನು ಬ್ಯಾಂಕಿನ ಮೂಲಕ ನಡೆಸಿದರೆ ಸಂಸ್ಥೆಯ ಅಭಿವೃದ್ಧಿಗೆ ಸಹಕಾರಿ;ಕೆ.ಎನ್. ರಾಜಣ್ಣ

ತುಮಕೂರು: ನಗರದ ಡಿ.ಸಿ.ಸಿ. ಬ್ಯಾಂಕ್ ಕೇಂದ್ರ ಕಛೇರಿಯಲ್ಲಿ 2026-27ನೇ ಸಾಲಿನ 72ನೇ ವಾರ್ಷಿಕ ಮಹಾಸಭೆ ಸರ್ವ ಸದಸ್ಯರ ಸಮಾರಂಭ ಜರುಗಿತು. ಈ ಸಂದರ್ಭದಲ್ಲಿ ಮಾಜಿ ಸಹಕಾರ ಸಚಿವರು ಹಾಗೂ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್. ರಾಜಣ್ಣ ಅವರು ಸಹಕಾರಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರು ಕೇವಲ ಸಾಲಕ್ಕಾಗಿ ಬ್ಯಾಂಕಿಗೆ ಬರುವುದನ್ನು ಬಿಟ್ಟು ತಮ್ಮ ವ್ಯಾಪಾರ, ವ್ಯವಹಾರಗಳನ್ನು ಬ್ಯಾಂಕಿನ ಮೂಲಕ ನಡೆಸಿದರೆ ಸಂಸ್ಥೆಯ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು. ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆಯುವುದು ಜನರ ಹಕ್ಕು, ಮರುಪಾವತಿ ಅವರ ಜವಾಬ್ದಾರಿ ಎಂದು ಅವರು ನೆನಪಿಸಿದರು. ಬರಗಾಲದಲ್ಲಿ ಬೆಳೆ ಸಾಲ ಪಡೆಯುವುದರಿಂದ ಪ್ರಯೋಜನವಿಲ್ಲ, ಬದಲಿಗೆ ಹಸು, ಕುರಿ ಸಾಕಾಣಿಕೆ ಸಾಲ ಪಡೆದರೆ ಆದಾಯ ಹೆಚ್ಚುತ್ತದೆ ಎಂದು ಸಲಹೆ ನೀಡಿದರು. ಒಂದು ಸಾಲ ತೀರಿಸಲು ಮತ್ತೊಂದು ಸಾಲ ಪಡೆಯುವುದು ತಪ್ಪು, ಇದರಿಂದ ಬಡ್ಡಿ, ಚಕ್ರಬಡ್ಡಿ ಸೇರಿ ಅಡಮಾನವಿಟ್ಟ ಭೂಮಿಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ ಎಂದು ಎಚ್ಚರಿಸಿದರು.

ಡಿಸಿಸಿ ಬ್ಯಾಂಕಿನ ಸಾಲದಲ್ಲಿ ಸರ್ಕಾರದ ಹಣವಿಲ್ಲ, ರೈತರ ಷೇರು ಮತ್ತು ಠೇವಣಿ ಹಣದಿಂದಲೇ ಸಾಲ ನೀಡಲಾಗುತ್ತಿದೆ ಎಂದು ರಾಜಣ್ಣ ಹೇಳಿದರು. ಈ ವರ್ಷದಿಂದ ನಬಾರ್ಡ್ ಮತ್ತು ಅಪೇಕ್ಸ್ ಬ್ಯಾಂಕಿನ ಸಾಲವನ್ನು ಕಡಿಮೆ ಮಾಡಿರುವುದರಿಂದ ಸೊಸೈಟಿಗಳು ಕೃಷಿಯೇತರ ಸಾಲಗಳನ್ನು ನೀಡಲು ಮುಂದಾಗಬೇಕು ಎಂದು ಸೂಚಿಸಿದರು. ಜಿಲ್ಲೆಯಲ್ಲಿ ಮೇವು ಬ್ಯಾಂಕ್, ಗೋಶಾಲೆ ತೆರೆದರೆ, ರೈತರಿಗೆ ಗುಣಮಟ್ಟದ ಮಧ್ಯಾಹ್ನದ ಊಟ ಒದಗಿಸಲು ಡಿಸಿಸಿ ಬ್ಯಾಂಕ್ ಸಿದ್ದವಿದೆ ಎಂದು ಘೋಷಿಸಿದರು. ರೈತನದ್ದು ನೀಡುವಕೆಯೇ ಹೊರತು ಬೇಡುವಕೆಯಲ್ಲ, ಆದರೆ ಪ್ರಕೃತಿ ಕೆಲವೊಮ್ಮೆ ಅವನನ್ನು ಅಸಹಾಯಕನನ್ನಾಗಿ ಮಾಡುತ್ತದೆ ಎಂದು ಹೇಳಿದರು.

ಕೇಂದ್ರ ಸರ್ಕಾರ 1964ರ ಸಹಕಾರಿ ಕಾಯ್ದೆಗೆ 2025ರಲ್ಲಿ ತಿದ್ದುಪಡಿ ಮಾಡಿ ಒಬ್ಬ ವ್ಯಕ್ತಿ 10 ವರ್ಷಗಳ ಕಾಲ ಮಾತ್ರ ಪದಾಧಿಕಾರಿಯಾಗಿ ಮುಂದುವರೆಯಬೇಕು ಎಂಬ ನಿಯಮ ತಂದಿರುವುದನ್ನು ವಿರೋಧಿಸಿ, ರೈತರ ಷೇರುಗಳಿಂದಲೇ ನಡೆಯುವ ಸಹಕಾರಿ ಬ್ಯಾಂಕುಗಳಿಗೆ ಇದು ಅನ್ವಯಿಸುವುದನ್ನು ಖಂಡಿಸಿದರು. ಈ ನಿರ್ಣಯವನ್ನು ಆರ್.ಬಿ.ಐಗೆ ಕಳುಹಿಸಲಾಗುವುದು ಎಂದು ತಿಳಿಸಿದರು. ಪ್ರಸ್ತುತ ವರ್ಷದಲ್ಲಿ ಡಿಸಿಸಿ ಬ್ಯಾಂಕು 146 ಕೋಟಿ ಷೇರು ಬಂಡವಾಳದೊಂದಿಗೆ 215 ಕೋಟಿ ಸಾಲ ಸೌಲಭ್ಯ ವಿತರಿಸಿದ್ದು, 25.60 ಕೋಟಿ ಒಟ್ಟು ಲಾಭ ಗಳಿಸಿದೆ. ವೆಚ್ಚ ಕಳೆದು 5.55 ಕೋಟಿ ನಿವ್ವಳ ಲಾಭ ಪಡೆದಿದೆ. ಎನ್.ಪಿ.ಎ ಶೇ.2.96 ಇದ್ದು, ಶೇ.12.20 ಡಿವಿಡೆಂಡ್ ಷೇರುದಾರರಿಗೆ ನೀಡಲಾಗುತ್ತಿದೆ. ಮೃತರಾದ ಸಾಲಗಾರರ 25 ಸಾವಿರ ರೂ. ಸಾಲವನ್ನು ಮನ್ನಾ ಮಾಡಲಾಗುತ್ತಿದ್ದು, ಇದುವರೆಗೆ 50 ಕೋಟಿ ರೂ.ಗಳನ್ನು ಸಾಲಮನ್ನಾಕ್ಕೆ ಬಳಸಲಾಗಿದೆ ಎಂದು ಅಂಕಿ ಅಂಶಗಳ ಮೂಲಕ ವಿವರಿಸಿದರು.

ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ. ರಾಜಣ್ಣ, ಎಂ.ಎಲ್.ಸಿ. ಆರ್. ರಾಜೇಂದ್ರ, ಶಾಸಕ ಕೆ. ಷಡಕ್ಷರಿ, ಬಿ. ಶಿವಣ್ಣ, ಎಸ್. ಲಕ್ಷ್ಮಿನಾರಾಯಣ, ಎಸ್. ಹನುಮಾನ್, ಜಿ.ಎಸ್. ರವಿ, ಎಸ್.ಆರ್. ರಾಜಕುಮಾರ್, ಎಂ. ಸಿದ್ದಲಿಂಗಪ್ಪ, ಪ್ರಭಾಕರ್, ಬಿ. ನಾಗೇಶಬಾಬು, ಮಾಲತಿ, ಆರ್. ರವಿಕುಮಾರ್, ಪಿ.ಆರ್. ನಾರಾಯಣಗೌಡ, ಸಿಇಓ ಜಂಗಮಪ್ಪ, ಸಲಹೆಗಾರ ರಮಣರೆಡ್ಡಿ, ಸಹಕಾರ ಇಲಾಖೆ ಉಪನಿಬಂಧಕರಾದ ಚಂದ್ರಶೇಖರ್, ಚಂದ್ರಗಿರಿ ಲಕ್ಷ್ಮಿನಾರಾಯಣ, ಕುಂಭಣ್ಣ, ಟಿ.ಪಿ. ಮಂಜುನಾಥ್, ನಬಾರ್ಡ್ ಅಧಿಕಾರಿ ಮೋಹನ್ ಸಾಯಿ ಗಣೇಶ್, ಗಣಕಯಂತ್ರ ವಿಭಾಗದ ಮಹಾಪ್ರಭಂಧಕ ಎಸ್. ಶ್ರೀಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Comments

Leave a Comment

Prev Post ಗೋನೂರು ತಲುಪಿದ ಭದ್ರೆ: ಸೆ.24 ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ ಹಾಗೂ ಸಾರ್ವಜನಿಕ ಸಭೆ
Next Post ನಾಡಿನ ಸಮಸ್ತ ಜನತೆಗೆ ಸಿಎಂ ಡಿ ಕೆ ಶಿವಕುಮಾರ್ ಅವರಿಂದ ಗೌರಿ, ಗಣೇಶ ಹಬ್ಬದ ಶುಭಾಶಯ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

Read all News