PRABHAVAA.COM

ಸಚಿವ ಎಂ ಬಿ ಪಾಟೀಲರ ಫ್ರಾನ್ಸ್, ನೆದರ್ಲೆಂಡ್ಸ್‌ ಪ್ರವಾಸ

:

Font size:

ಸಚಿವ ಎಂ ಬಿ ಪಾಟೀಲರ ಫ್ರಾನ್ಸ್, ನೆದರ್ಲೆಂಡ್ಸ್‌ ಪ್ರವಾಸ ಸಾಫ್ರಾನ್, ನೆಕ್ಸ್ಪೀರಿಯಾ ಜತೆ ಹೂಡಿಕೆ ಮಾತುಕತೆ

ಸಚಿವ ಎಂ ಬಿ ಪಾಟೀಲರ ಫ್ರಾನ್ಸ್, ನೆದರ್ಲೆಂಡ್ಸ್‌ ಪ್ರವಾಸ

ಸಾಫ್ರಾನ್, ನೆಕ್ಸ್ಪೀರಿಯಾ ಜತೆ ಹೂಡಿಕೆ ಮಾತುಕತೆ

ಬೆಂಗಳೂರು: ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಸೆಳೆಯುವ ಉದ್ದೇಶದಿಂದ ಫ್ರಾನ್ಸ್ ಮತ್ತು ನೆದರ್ಲೆಂಡ್ಸ್‌ ಪ್ರವಾಸದಲ್ಲಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಗುರುವಾರ ಸ್ಯಾಫ್ರಾನ್, ಎಲ್ ಎಫ್ ಬಿ, ನೆಕ್ಸ್ಪೀರಿಯಾ, ರಾಯಲ್ ಡಿ ಹ್ಯೂಸ್, ಎಸ್ಸಿಲಾರ್-ಲಕ್ಸೋಟಿಕ ಮುಂತಾದ‌ ಕಂಪನಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಜತೆಗೆ ಈ ಎಲ್ಲಾ ಕಂಪನಿಗಳನ್ನು ಮುಂದಿನ ವರ್ಷ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಏರೋಸ್ಪೇಸ್ ಕಂಪನಿಯಾಗಿರುವ ಸಾಫ್ರಾನ್ ಗೆ ರಾಜ್ಯದಲ್ಲಿ ಏವಿಯಾನಿಕ್ಸ್, ಬಾಹ್ಯಾಕಾಶ ವಿದ್ಯುನ್ಮಾನ ಮತ್ತಿತರ ಅಡ್ವಾನ್ಸ್ಡ್ ಏರೋಸ್ಪೇಸ್ ಮತ್ತು ರಕ್ಷಣಾ ತಂತ್ರಜ್ಞಾನಗಳಲ್ಲಿ ಬಂಡವಾಳ ಹೂಡಿಕೆಯನ್ನು ಪರಿಗಣಿಸುವಂತೆ ಕೋರಲಾಗಿದೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಕಂಪನಿಯ ಪ್ರತಿನಿಧಿಗಳು, 2025ರ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿದ್ದ ಒಡಂಬಡಿಕೆಯಂತೆ ಬೆಂಗಳೂರಿನಲ್ಲಿ 12 ಸಾವಿರ ಚದರ ಮೀಟರ್ ವಿಸ್ತಾರದ ಎಲೆಕ್ಟ್ರಾನಿಕ್ ಉತ್ಪಾದನಾ ಘಟಕ ಮತ್ತು ಕಲ್ಯಾಣಿ ಟೆಕ್ ಪಾರ್ಕ್ ನಲ್ಲಿ 3,000 ಚ.ಮೀ. ಸಂಶೋಧನೆ ಮತ್ತು ಅಭಿವೃದ್ಧಿ ಘಟಕಗಳ ನಿರ್ಮಾಣ ಮುಕ್ತಾಯದ ಹಂತಕ್ಕೆ ಬಂದಿರುವುದಾಗಿ ತಿಳಿಸಿದರು.

ಎಸ್ಸಿಲಾರ್-ಲಕ್ಸೋಟಿಕ ಕಂಪನಿಯು ಕನ್ನಡಕ ಮತ್ತು ಮೆಡ್-ಟೆಕ್ ವಲಯಗಳಲ್ಲಿ ಹೆಸರು ಮಾಡಿದೆ. ರಾಜ್ಯದಲ್ಲಿ ಅಡ್ವಾನ್ಸಡ್ ಲೆನ್ಸ್ ತಯಾರಿಕೆಯನ್ನು ಪರಿಗಣಿಸುವಂತೆ ಕಂಪನಿಗೆ ಕೋರಲಾಗಿದೆ. ಇದೇ ರೀತಿಯಲ್ಲಿ ಡಚ್ ಹೈನುಗಾರಿಕೆ ಕಂಪನಿಯಾದ ಡೇ ಹ್ಯೂಸ್ ರಾಜ್ಯದ ಹಾಲು ಮಹಾಮಂಡಳಿ ಜತೆ ಸಹಭಾಗಿತ್ವ ಹೊಂದಲು ಒಲವು ವ್ಯಕ್ತಪಡಿಸಿದೆ ಎಂದು ಅವರು ವಿವರಿಸಿದ್ದಾರೆ.

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ನೆಕ್ಸ್ ಪೀರಿಯಾ ಕಂಪನಿಗೆ ರಾಜ್ಯದಲ್ಲಿ ಎಟಿಎಂಪಿ (ಅಸೆಂಬ್ಲಿ, ಟೆಸ್ಟಿಂಗ್, ಮಾರ್ಕಿಂಗ್ ಮತ್ತು ಪ್ಯಾಕಿಂಗ್) ಸ್ಥಾವರ ಸ್ಥಾಪನೆಗೆ ಮುಂದಾಗುವಂತೆ ಪ್ರಸ್ತಾಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮಾತುಕತೆಯಲ್ಲಿ ನೆಕ್ಸ್ ಪೀರಿಯಾ ಕಂಪನಿಯ ಹಿರಿಯ ನಿರ್ದೇಶಕ ಹೇನ್ಸ್ ವ್ಯಾನ್ ರೆಮ್ಡೋಂಕ್, ಡೇ ಹ್ಯೂಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಟ್ಜರ್ ಔಡ್ಜೆನಸ್, ಎಸ್ಸಿಲಾರ್-ಲಕ್ಸೋಟಿಕ ಕಂಪನಿಯ ಸಿಇಒ ಪಾಲ್ ಡು ಸೈಲಾಂಟ್, ವೇಣು ಅಂಬಟಿ, ಸಾಫ್ರಾನ್ ಕಂಪನಿಯ ಸಿಇಒ ಫ್ರಾಂಕ್ ಸೌದೊ, ಅಲೆಕ್ಸಾಂಡರ್ ಡೆರ್ವಾಕ್ಸ್ ಮುಂತಾದವರು ಭಾಗವಹಿಸಿದ್ದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಖುಷ್ಬು ಗೋಯಲ್, ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.

Comments

Leave a Comment

Prev Post ಕರ್ನಾಟಕ ಸರ್ಕಾರದ ನಿರ್ದೇಶನ – ಮಾಹಿತಿ ಹಕ್ಕು ಕಾಯ್ದೆ ಅನುಷ್ಠಾನ ಕಟ್ಟುನಿಟ್ಟಾಗಿ ಪಾಲನೆ

ಸವಾಲು ಎದುರಿಸಲು ಆಧುನಿಕ ಜ್ಞಾನಸೃಷ್ಟಿ ಅಗತ್ಯ: ಎಂ ಬಿ ಪಾಟೀಲ

ಅಗಸ್ತ್ಯ ಇಂಟರ್ನ್ಯಾಷನಲ್ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗಿ

ಮೇ ತಿಂಗಳಲ್ಲಿ ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026 ಆಯೋಜನೆ

ಮೇ ತಿಂಗಳಲ್ಲಿ ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026 ಆಯೋಜನೆ

ಕಲಬುರಗಿಯಲ್ಲಿ ಪಿಎಂ ಮಿತ್ರ ಜವಳಿ ಪಾರ್ಕ್ ಯೋಜನೆ

ಕೆಐಎಡಿಬಿ ಮೂಲಕ ಮೊದಲ ಹಂತ ಅಭಿವೃದ್ಧಿಗೆ ತೀರ್ಮಾನ: ಎಂ ಬಿ ಪಾಟೀಲ

ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಹೆಚ್‌ಎಂಟಿ ಉನ್ನತಿಗೆ ಕ್ರಮ ಎಂದ ಹೆಚ್‌ʼಡಿಕೆ

ಇಡೀ ದಿನ ಕಾರ್ಖಾನೆಯಲ್ಲೇ ಸಂಚರಿಸಿದ ಸಚಿವರು; ಆಡಳಿತ ವರ್ಗ, ಕಾರ್ಮಿಕರು, ಇನ್ನಿತರ ಪ್ರಮುಖರೊಂದಿಗೆ ವಿಸ್ತೃತ ಸಮಾಲೋಚನೆ

7,506 ಕೋಟಿ ರೂ. ಹೂಡಿಕೆಯ 55 ಯೋಜನೆಗಳಿಗೆ ಅಸ್ತು: ಎಂ ಬಿ ಪಾಟೀಲ

7,506 ಕೋಟಿ ರೂ. ಹೂಡಿಕೆಯ 55 ಯೋಜನೆಗಳಿಗೆ ಅಸ್ತು: ಎಂ ಬಿ ಪಾಟೀಲ

ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆ: ರಾಜ್ಯದ ನೇತೃತ್ವದಲ್ಲಿ ಪಾಲುದಾರರ ಕಾರ್ಯಾಗಾರ

50ಕ್ಕೂ ಹೆಚ್ಚು ಉನ್ನತ ಪ್ರತಿನಿಧಿಗಳು ಭಾಗಿ, ಕರ್ನಾಟಕಕ್ಕೆ ನೀತಿ ನಿರೂಪಣೆಯ ಅವಕಾಶ

Read all News