PRABHAVAA.COM

ರಾಜ್ಯ ಛಲವಾದಿ ಸಂಗಮ: ದಲಿತರ ಹಕ್ಕುಗಳಿಗಾಗಿ ಬಲಿಷ್ಠ ಹೋರಾಟದ ಘೋಷಣೆ

Bengaluru Urban:

Font size:

ರಾಜ್ಯ ಛಲವಾದಿ ಸಂಗಮ: ದಲಿತರ ಹಕ್ಕುಗಳಿಗಾಗಿ ಬಲಿಷ್ಠ ಹೋರಾಟದ ಘೋಷಣೆ

ರಾಜ್ಯ ಛಲವಾದಿ ಸಂಗಮ: ದಲಿತರ ಹಕ್ಕುಗಳಿಗಾಗಿ ಬಲಿಷ್ಠ ಹೋರಾಟದ ಘೋಷಣೆ

ಬೆಂಗಳೂರು,ಸೆ. 11-ದಲಿತರ ಯೋಜನೆಗಳಿಗೆ ಮೀಸಲಾದ ಸುಮಾರು 54,000 ಕೋಟಿ ರೂಪಾಯಿ SCSP ಮತ್ತು TSP ನಿಧಿಗಳನ್ನು ಸರ್ಕಾರ ತನ್ನ ಐದು ಗ್ಯಾರೆಂಟಿ ಯೋಜನೆಗಳಿಗೆ ದುರುಪಯೋಗಪಡಿಸಿಕೊಂಡಿದೆ ಎಂದ ರಾಜ್ಯ ಛಲವಾದಿ ಸಂಗಮ ಆರೋಪಿಸಿದೆ.

ವಿದ್ಯಾರ್ಥಿ ವೇತನ ವಿತರಣೆಯಲ್ಲಿ ವಿಳಂಬ, ನಿಲಯಗಳ ಆಧುನೀಕರಣದ ಕೊರತೆ, ಗುಣಾತ್ಮಕ ಶಿಕ್ಷಣದಿಂದ ವಂಚನೆ, ಹಾಗೂ ವಿಶೇಷ ಘಟಕ ಯೋಜನೆಗಳಿಗೆ ಅನುದಾನ ನೀಡದಿರುವುದು ದಲಿತರ ಸಬಲೀಕರಣವನ್ನು ಕತ್ತಲೆಗೆ ದೂಡಿದೆ ಎಂದು ಸಂಘಟನೆಯು ತಿಳಿಸಿದೆ.

ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಪರಿಷ್ಕೃತ ಮೀಸಲಾತಿ ವ್ಯವಸ್ಥೆಯನ್ನು ನ್ಯಾಯಾಲಯದಲ್ಲಿ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಸಂಘಟನೆಯು ಆರೋಪಿಸಿದೆ. ಸಂವಿಧಾನವನ್ನು ಬೊಬ್ಬೆ ಹೊಡೆಯುವ ಕಾಂಗ್ರೆಸ್ ಸರ್ಕಾರ ದಲಿತರ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಹೇಳಿದೆ. ಒಳ ಮೀಸಲಾತಿ ನೆಪದಲ್ಲಿ ಬಲಗೈ ಸಮುದಾಯಗಳ ಉಪಜಾತಿಗಳನ್ನು ಇತರ ವರ್ಗಗಳಲ್ಲಿ ಸೇರಿಸಿ ಮೀಸಲಾತಿ ಪ್ರಮಾಣ ಕಡಿತಗೊಳಿಸಿರುವುದು ದೊಡ್ಡ ದ್ರೋಹವೆಂದು ಸಂಘಟನೆಯು ಖಂಡಿಸಿದೆ. ರಾಜ್ಯದಲ್ಲಿ ದಲಿತ ಮಹಿಳೆಯರ ಮೇಲಿನ ಹಿಂಸಾಚಾರ ಪ್ರಕರಣಗಳು ಹೆಚ್ಚುತ್ತಿರುವುದನ್ನು ಉಲ್ಲೇಖಿಸಿ, ರಾಯಚೂರು ಜಿಲ್ಲೆಯ ಅಶ್ವಿನಿ ಹಾಗೂ ರಾಣಿಮಾ ಪ್ರಕರಣಗಳನ್ನು ಉದಾಹರಣೆ ನೀಡಿದೆ.

ಸಂಘಟನೆಯು ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಯುವಜನತೆಗೆ ತಲುಪಿಸುವುದರ ಜೊತೆಗೆ, ಯಾವುದೇ ಸರ್ಕಾರ ಸಮುದಾಯದ ವಿರುದ್ಧ ನಿಲುವು ತೆಗೆದುಕೊಂಡರೆ ಅದನ್ನು ಖಂಡಿಸುವುದಾಗಿ ಘೋಷಿಸಿದೆ. ಪ್ರತೀ ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ಸಮಿತಿಗಳನ್ನು ರಚಿಸಿ, ರಾಜ್ಯ ಸಮಿತಿಯ ಮೂಲಕ ಬಲಿಷ್ಠ ಸಂಘಟನೆಯನ್ನು ರೂಪಿಸುವ ಯೋಜನೆ ಕೈಗೊಳ್ಳಲಾಗಿದೆ. ರಾಜ್ಯಾದ್ಯಂತ ಅರಿವು, ಹೋರಾಟ, ಚರ್ಚೆ, ವಿಚಾರ ಸಂಕಿರಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮೀಸಲಾತಿ ಸಮರ್ಥನೆ, ಸಂವಿಧಾನ ರಕ್ಷಣೆ ಮುಂತಾದ ಚಟುವಟಿಕೆಗಳ ಮೂಲಕ ಬಲಗೈ ಸಮುದಾಯದ ಏಳಿಗೆಗೆ ಶ್ರಮಿಸುವುದಾಗಿ ಸಂಘಟನೆಯು ವಿವರಿಸಿದೆ,

Comments

Leave a Comment

Prev Post ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಾರಿಗೆ ಇಲಾಖೆಯ ವಿಶೇಷ ತಪಾಸಣೆ ಮತ್ತು ಹೆಚ್ಚುವರಿ ಬಸ್ ವ್ಯವಸ್ಥೆ – ಪ್ರಯಾಣಿಕರ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮಗಳು
Next Post ರಿಯಲ್ ಎಸ್ಟೇಟ್ ಏಜೆಂಟ್ ಸಿಎಂ ಡಿಕೆಶಿ, ಯೂ ಟರ್ನ್ ಸರ್ಕಾರ

ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ

ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ: ಎಂ ಬಿ ಪಾಟೀಲ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಲಸಿಕೆ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಅಕ್ಕಪಡೆ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News