PRABHAVAA.COM

ಲಿಸಿ ಏರೋಸ್ಪೇಸ್, ಆರ್ಕೆಮಾ ಕಂಪನಿಗಳ ಜತೆ ಮಹತ್ತ್ವದ ವಿಚಾರ ವಿನಿಮಯ

:

Font size:

ಫ್ರಾನ್ಸ್‌ನಲ್ಲಿ ಕೈಗಾರಿಕಾ ಸಚಿವ ಎಂ ಬಿ ಪಾಟೀಲ

ಫ್ರಾನ್ಸ್‌ನಲ್ಲಿ ಕೈಗಾರಿಕಾ ಸಚಿವ ಎಂ ಬಿ ಪಾಟೀಲ

ಲಿಸಿ ಏರೋಸ್ಪೇಸ್, ಆರ್ಕೆಮಾ ಕಂಪನಿಗಳ ಜತೆ ಮಹತ್ತ್ವದ ವಿಚಾರ ವಿನಿಮಯ

ಬೆಂಗಳೂರು: ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಬಂಡಾವಳ ಹೂಡಿಕೆ ಸೆಳೆಯುವ ಉದ್ದೇಶದೊಂದಿಗೆ ಫ್ರಾನ್ಸ್ ಪ್ರವಾಸದಲ್ಲಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಅವರು ಮೂರನೆಯ ದಿನವಾದ ಬುಧವಾರ ಲಿಸಿ ಏರೋಸ್ಪೇಸ್, ಆಬರ್ಟ್ ಅಂಡ್ ಡುವಲ್‌ ಮತ್ತು ಆರ್ಕೆಮಾ ಕಂಪನಿಗಳ ಜತೆ ಮಹತ್ತ್ವದ ಮಾತುಕತೆ ನಡೆಸಿದ್ದಾರೆ.

ಈ ಬಗ್ಗೆ ಪ್ಯಾರಿಸ್ ನಿಂದ ಮಾಹಿತಿ ನೀಡಿರುವ ಅವರು, ಸಂಕೀರ್ಣ ಮೆಟಾಲಿಕ್ ಮೆಟೀರಿಯಲ್ ಕ್ಷೇತ್ರದಲ್ಲಿ ಅಗ್ರ ಕಂಪನಿಯಾಗಿರುವ ಆಬರ್ಟ್ ಅಂಡ್ ಡುವಲ್ ಕಂಪನಿಗೆ ಬೆಳಗಾವಿಯಲ್ಲಿ ಈಗಾಗಲೇ ಇರುವ ತನ್ನ ಉತ್ಪಾದನಾ ಘಟಕದ ಸಾಮರ್ಥ್ಯವನ್ನು ಹೆಚ್ಚಿಸುವಂತೆ ಕೋರಲಾಗಿದೆ ಎಂದಿದ್ದಾರೆ.

ಕಂಪನಿಯು ಬೆಳಗಾವಿಯಲ್ಲಿನ ಏಕಸ್ ಏರೋಸ್ಪೇಸ್ ವಿಶೇಷ ಆರ್ಥಿಕ ವಲಯದಲ್ಲಿ ನೆಲೆಯೂರಿದೆ. ಕಂಪನಿಯು ಮತ್ತಷ್ಟು ಹೂಡಿಕೆ ಮಾಡುವ ಕುರಿತು ಏಕಸ್ ಜತೆ ಚರ್ಚಿಸಬೇಕಾದ ಅಗತ್ಯವನ್ನು ರಾಜ್ಯ ಸರಕಾರ ಮತ್ತು ಕಂಪನಿಯ ಪ್ರತಿನಿಧಿಗಳು ಒಪ್ಪಿಕೊಂಡಿದ್ದಾರೆ.
ಕಂಪನಿಯು ರಾಜ್ಯದಲ್ಲಿ
ಸ್ಕ್ವಾಡ್ ಫೋರ್ಜಿಂಗ್ ಇಂಡಿಯಾ ಜತೆಯಲ್ಲೂ ಸಹಭಾಗಿತ್ವ ಹೊಂದಿದೆ
ಎಂದು ಅವರು ತಿಳಿಸಿದ್ದಾರೆ.

ಲಿಸಿ ಏರೋಸ್ಪೇಸ್ ಕಂಪನಿಯು ಬಿಡಿಭಾಗಗಳ ತಯಾರಿಕೆಯಲ್ಲಿ ಪರಿಣತಿ ಹೊಂದಿದ್ದು, ಬೆಂಗಳೂರಿನಲ್ಲಿ ತಯಾರಿಕಾ ಘಟಕವನ್ನು ಹೊಂದಿದೆ. ಕಂಪನಿಯು ತನ್ನ ಭವಿಷ್ಯದ ಹೂಡಿಕೆ ಯೋಜನೆಗಳನ್ನು ಹಂಚಿಕೊಂಡಿದೆ. ನಾವು ರಾಜ್ಯದಲ್ಲೇ ಹೂಡಿಕೆ ಮಾಡುವಂತೆ ಹೇಳಿದ್ದೇವೆ ಎಂದು ಅವರು ನುಡಿದಿದ್ದಾರೆ.

ಬೆಂಗಳೂರಿನಲ್ಲಿ ತನ್ನ ತಯಾರಿಕಾ ಸ್ಥಾವರ ಹೊಂದಿರುವ ಮೆಟೀರಿಯಲ್ಸ್ ಕ್ಷೇತ್ರದ ಆರ್ಕೆಮಾ ಕಂಪನಿಯೊಂದಿಗಿನ ಮಾತುಕತೆಯೂ ಸಕಾರಾತ್ಮಕವಾಗಿ ನಡೆಯಿತು. ಮುಖ್ಯವಾಗಿ ಬ್ಯಾಟರಿ ಉತ್ಪಾದನೆಗೆ ಇರುವ ಸದವಕಾಶಗಳ ಬಗ್ಗೆ ಮನದಟ್ಟು ಮಾಡಿಕೊಡಲಾಗಿದೆ ಎಂದು ಪಾಟೀಲ ಮಾಹಿತಿ ನೀಡಿದ್ದಾರೆ.

ಮಾತುಕತೆಯಲ್ಲಿ ಲಿಸಿ ಏರೋಸ್ಪೇಸ್ ಕಂಪನಿಯ ಉನ್ನತ ಪ್ರತಿನಿಧಿಗಳಾದ ಫ್ರಾಂಕೋಯಿಸ್ ಕ್ಸೇವಿಯರ್, ಭಾರತದ ವಿಭಾಗದ ಮುಖ್ಯಸ್ಥ ಅನಿಲ್ ಚೌಧರಿ, ಆರ್ಕೆಮಾ ಕಂಪನಿಯ ಉಪಾಧ್ಯಕ್ಷ ಅಬ್ದುಲ್ ಖಾದರ್ ಕದ್ರಿ, ಮಾಥ್ಯೂ ಲಾರೆಂಟ್, ವರ್ಜಿನ್ ಗುರಿನ್, ಆಬರ್ಟ್ ಅಂಡ್ ಡುವನ್ ಸಿಎಫ್‌ಒ ಪ್ಯಾಟ್ರಿಕ್ ಭಾಗವಹಿಸಿದ್ದರು.

ಫ್ರಾನ್ಸ್ ಕನ್ನಡ ಬಳಗದ ಭೇಟಿ (ಬಾಕ್ಸ್)
ಪ್ಯಾರಿಸ್‌ನಲ್ಲಿ ಸಕ್ರಿಯವಾಗಿರುವ 'ಫ್ರಾನ್ಸ್ ಕನ್ನಡ ಬಳಗ'ದ ಪದಾಧಿಕಾರಿಗಳು ಸಚಿವ ಎಂ ಬಿ ಪಾಟೀಲ ಅವರನ್ನು ಬುಧವಾರ ಭೇಟಿಯಾಗಿದ್ದರು.

ಈ ಸಂದರ್ಭದಲ್ಲಿ ಬಳಗದ ಸದಸ್ಯರು ಫ್ರಾನ್ಸ್ ಮತ್ತು ಕರ್ನಾಟಕದ ಬಲವರ್ಧನೆಗೆ ಅನೇಕ ಚಿಂತನೆಗಳನ್ನು ಹಂಚಿಕೊಂಡರು. ಜತೆಗೆ ಫ್ರಾನ್ಸ್ ನಲ್ಲಿ ಕನ್ನಡ ಸಂಸ್ಕೃತಿ, ಭಾಷೆ, ಸಾಂಸ್ಕೃತಿಕ ವಿನಿಮಯ, ವಿದ್ಯಾರ್ಥಿಗಳಿಗೆ ಒದಗಿಸಬೇಕಾದ ಅವಕಾಶ ಇತ್ಯಾದಿಗಳ ಬಗ್ಗೆ ವಿಚಾರ ವಿನಿಮಯ ನಡೆಸಲಾಯಿತು ಎಂದು ಸಚಿವರು ತಿಳಿಸಿದ್ದಾರೆ.

Comments

Leave a Comment

Prev Post ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ನಿಯಮ ಸಡಿಲಿಕೆಗೆ ವಿಶೇಷ ಸದನ ಸಮಿತಿ ಮಧ್ಯಂತರ ವರದಿ ಸ್ವೀಕರಿಸಿದ ಸಚಿವ ಮಧು ಬಂಗಾರಪ್ಪ
Next Post ರಾಜ್ಯದ ವಿಜ್ಞಾನ ಕೇಂದ್ರಗಳಲ್ಲಿ ‘ವಿದ್ಯಾರ್ಥಿ–ವಿಜ್ಞಾನಿ ಸಂವಾದ’ಕ್ಕೆ ಇಸ್ರೋ ಸಹಕಾರ ಕೋರಿದ ಸಚಿವ ಡಾ. ಅಜಯ್ ಧರಂ ಸಿಂಗ್

ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟಕ್ಕೆ ₹10.61 ಕೋಟಿ ಲಾಭ.

ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟಕ್ಕೆ ₹10.61 ಕೋಟಿ ಲಾಭ.

ಬಾಗ್ಮನೆ ಸಾಧನೆ ದೇಶವೇ ಹೆಮ್ಮೆಪಡುವಂತದ್ದು: ಡಿಸಿಎಂ ಡಿ.ಕೆ. ಶಿವಕುಮಾರ್

ಬಾಗ್ಮನೆ ಸಾಧನೆ ದೇಶವೇ ಹೆಮ್ಮೆಪಡುವಂತದ್ದು: ಡಿಸಿಎಂ ಡಿ.ಕೆ. ಶಿವಕುಮಾರ್

₹6,000 ಕೋಟಿ ಹೂಡಿಕೆಗೆ ಆ್ಯಕ್ಸಿಸ್‌ಕೇಡ್ಸ್‌ ಏರೊಸ್ಪೇಸ್‌ ಒಲವು: ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ

* ಮೂರು ವರ್ಷಗಳಲ್ಲಿ ವೈಮಾಂತರಿಕ್ಷ, ರಕ್ಷಣೆ, ಎಂಆರ್‌ಒ, ತಯಾರಿಕಾ ಕ್ಲಸ್ಟರ್‌ ಅಭಿವೃದ್ಧಿ * 20 ಸಾವಿರ ಪ್ರತ್ಯಕ್ಷ ಹಾಗೂ 54 ಸಾವಿರ ಪರೋಕ್ಷ ಉದ್ಯೋಗ ಅವಕಾಶಗಳು ಸೃಷ್ಟಿ

ಎಂ.ಸಿ.ಸಿ.ಬ್ಯಾಂಕ್ ಕಾರ್ಯವ್ಯಾಪ್ತಿ ರಾಜ್ಯಕ್ಕೆ ವಿಸ್ತರಣೆ: ಅಧ್ಯಕ್ಷ ಅನಿಲ್ ಲೋಬೋ

ಎಂಸಿಸಿ ಬ್ಯಾಂಕ್: ದೇರಳಕಟ್ಟೆ ಮತ್ತು ಕಟಪಾಡಿಯಲ್ಲಿ ಹೊಸ ಶಾಖೆಗಳ ಉದ್ಘಾಟನೆ, 1,535 ಕೋಟಿ ರೂ. ವ್ಯವಹಾರ ಮೈಲಿಗಲ್ಲು

ಬ್ಯಾಂಕ್ ನೀಡುವ ಸಾಲದಿಂದ ಗ್ರಾಹಕರು ಆದಾಯ ಹೆಚ್ಚಿಸಿಕೊಳ್ಳಬೇಕು: ಬಸವರಾಜ ಬೊಮ್ಮಾಯಿ

ಬ್ಯಾಂಕ್ ನೀಡುವ ಸಾಲದಿಂದ ಗ್ರಾಹಕರು ಆದಾಯ ಹೆಚ್ಚಿಸಿಕೊಳ್ಳಬೇಕು: ಬಸವರಾಜ ಬೊಮ್ಮಾಯಿ

ಹೂಡಿಕೆ ಆಕರ್ಷಣೆಗೆ ಕೋಲ್ಕತ್ತಾದಲ್ಲಿ ರೋಡ್ ಶೋ ನಡೆಸಿದ ಸಚಿವ ಎಂ.ಬಿ.ಪಾಟೀಲ

ಹೂಡಿಕೆ ಆಕರ್ಷಣೆಗೆ ಕೋಲ್ಕತ್ತಾದಲ್ಲಿ ರೋಡ್ ಶೋ ನಡೆಸಿದ ಸಚಿವ ಎಂ.ಬಿ.ಪಾಟೀಲ

Read all News