PRABHAVAA.COM

ನೃತ್ಯೋತ್ಸವ 2026ಕ್ಕೆ ಅದ್ಧೂರಿ ಚಾಲನೆ

Bengaluru Urban:

Font size:

ನೃತ್ಯೋತ್ಸವ 2026ಕ್ಕೆ ಅದ್ಧೂರಿ ಚಾಲನೆ ನೃತ್ಯಕಲೆ ಭಾರತೀಯ ಸಂಸ್ಕೃತಿಯ ಪ್ರತಿಬಿಂಬ: ಗಂಡಸಿ ಸದಾನಂದ ಸ್ವಾಮಿ

ನೃತ್ಯೋತ್ಸವ 2026ಕ್ಕೆ ಅದ್ಧೂರಿ ಚಾಲನೆ
ನೃತ್ಯಕಲೆ ಭಾರತೀಯ ಸಂಸ್ಕೃತಿಯ ಪ್ರತಿಬಿಂಬ: ಗಂಡಸಿ ಸದಾನಂದ ಸ್ವಾಮಿ
ಬೆಂಗಳೂರು, ಅ. 25: ಎಲ್.ಎನ್. ನಾಟ್ಯಲೋಕ ಸಂಸ್ಥೆಯ ವತಿಯಿಂದ, ದಿವ್ಯಾ ಸಂತೋಷ್ ಅವರ ನೇತೃತ್ವದಲ್ಲಿ ಅಕ್ಟೋಬರ್ 25ರಂದು ಆಯೋಜಿಸಲಾದ ‘ನೃತ್ಯೋತ್ಸವ 2026’ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ನಟ ಹಾಗೂ ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ ಮತ್ತು ನಾಯಕ ನಟಿ ರೂಪಿಕಾ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಟ ಹಾಗೂ ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ ಅವರು, ನೃತ್ಯಕಲೆ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬವಾಗಿದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗುವುದರ ಜೊತೆಗೆ, ಮುಂದಿನ ಪೀಳಿಗೆಗೆ ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಪರಿಚಯಿಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ನೃತ್ಯೋತ್ಸವದ ಮೂಲಕ ವಿವಿಧ ನೃತ್ಯ ಕಲಾವಿದರು ತಮ್ಮ ಕಲಾಪ್ರತಿಭೆಯನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸುವುದರೊಂದಿಗೆ ಭಾರತೀಯ ಶಾಸ್ತ್ರೀಯ ನೃತ್ಯಕಲೆಯ ಮಹತ್ವವನ್ನು ಸಾರಿದರು. ನೃತ್ಯಕಲೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್.ಎನ್. ನಾಟ್ಯಲೋಕ ಸಂಸ್ಥೆಯ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯಪಟ್ಟರು.
ದಿವ್ಯಾ ಸಂತೋಷ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವು ನೃತ್ಯಕಲೆಯ ವೈಭವವನ್ನು ಅನಾವರಣಗೊಳಿಸುವುದರೊಂದಿಗೆ ಕಲಾವಿದರಿಗೆ ಪ್ರೋತ್ಸಾಹ ನೀಡುವ ಸಾಂಸ್ಕೃತಿಕ ವೇದಿಕೆಯಾಗಿ ಗಮನ ಸೆಳೆಯಿತು.

Comments

Leave a Comment

Prev Post ನಕಲಿ ಸ್ಟಿಂಗ್‌ ಆಪರೇಷನ್‌: ಸತ್ಯ ಬಹಿರಂಗಕ್ಕೆ ದೂರು ನೀಡಿದ್ದೇನೆ - ಸಿದ್ದರಾಮಯ್ಯ

‎ನಾಡಿನ ಜನರ ಹೃದಯದಲ್ಲಿ ಯಡಿಯೂರಪ್ಪರಿಗೆ ಶಾಶ್ವತ ಸ್ಥಾನ- ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಎಲೆಕೊಡಿಗೇಹಳ್ಳಿ ಶ್ರೀನಂದಿಬಸವೇಶ್ವರ ನೂತನ ದೇವಾಲಯದ ಮಂಡಲ ಪೂಜೆ

ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಕಾಯ್ದೆ ಜಾರಿಗೆ

ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಕಾಯ್ದೆ ಜಾರಿಗೆ

ಕೇರಳದಲ್ಲೊಂದು ಗೋಶಾಲೆ ಸಹಿತ ಮನೆ.

ಕೇರಳದಲ್ಲೊಂದು ಗೋಶಾಲೆ ಸಹಿತ ಮನೆ.

ಕಾಸರಗೋಡು: ದೇವರ ನಾಡಿನ ಸಂಪ್ರದಾಯದ ಭವ್ಯತೆ

ಕಾಸರಗೋಡು: ದೇವರ ನಾಡಿನ ಸಂಪ್ರದಾಯದ ಭವ್ಯತೆ

ಮಂಗಳೂರು: ತಮಿಳುನಾಡು ಮುಖ್ಯಮಂತ್ರಿ-ನಟ ವಿಜಯ್ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ, ಭಾರೀ ಭದ್ರತೆ

ಮಂಗಳೂರು: ತಮಿಳುನಾಡು ಮುಖ್ಯಮಂತ್ರಿ-ನಟ ವಿಜಯ್ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ, ಭಾರೀ ಭದ್ರತೆ

ಯಡಿಯೂರು ಕೆರೆಯ ಎದುರು ‘ಅ.ನ.ಕೃ. ಕನ್ವೆನ್ಷನ್ ಸೆಂಟರ್’ ಹಾಗೂ ‘ಡಾ|| ಪುನೀತ್ ರಾಜ್ ಕುಮಾರ್ ಸಭಾಂಗಣ’ ಭವ್ಯ ಲೋಕಾರ್ಪಣೆ

ಯಡಿಯೂರು ಕೆರೆಯ ಎದುರು ‘ಅ.ನ.ಕೃ. ಕನ್ವೆನ್ಷನ್ ಸೆಂಟರ್’ ಹಾಗೂ ‘ಡಾ|| ಪುನೀತ್ ರಾಜ್ ಕುಮಾರ್ ಸಭಾಂಗಣ’ ಭವ್ಯ ಲೋಕಾರ್ಪಣೆ

Read all News