PRABHAVAA.COM

ಕಾಸರಗೋಡು: ದೇವರ ನಾಡಿನ ಸಂಪ್ರದಾಯದ ಭವ್ಯತೆ

Kerala:

Font size:

ಕಾಸರಗೋಡು: ದೇವರ ನಾಡಿನ ಸಂಪ್ರದಾಯದ ಭವ್ಯತೆ

From Jayram Udupi

ಕಾಸರಗೋಡು :

ದೇವರ ಸ್ವಂತ ನಾಡು ಕೇರಳದಲ್ಲಿ ಧಾರ್ಮಿಕ ಮೌಲ್ಯಗಳ ಆಚಾರ ವಿಚಾರಗಳಿಗೆ ಅದರದ್ದೇ ಆದ ಮಹತ್ವವಿದೆ. ತಲತಲಾಂತರದಿಂದ ಬಳುವಳಿಯಾಗಿ ಬಂದ ಸಂಪ್ರದಾಯವನ್ನು ಇಂದಿಗೂ ಉಳಿಸಿಕೊಂಡು ಹೋಗುತ್ತಾ ಇದ್ದಾರೆ. ಕೇರಳ ಎಂದಾಕ್ಷಣ ನೆನಪಿಗೆ ಬರುವುದು ಹಸಿರ ಐಸಿರಿಯ ನಡುವೆ ದೇವಾಲಯದ ಭವ್ಯತೆ - ಅದರ ಘನತೆಯನ್ನು ಸಾರುವ ಕೆಲವು ಅಪರೂಪದ ಆಚರಣೆ .

ಕೇರಳಂ ರಾಜ್ಯದ ಮತ್ಯಾವುದೇ ಕ್ಷೇತ್ರದಲ್ಲಿ ಕಾಣ ಸಿಗದ ಪಂಚದೇವರ ಉತ್ಸವ ಮೂರ್ತಿಗಳ ಭೂತ ಬಲಿಯು ಈ ಸನ್ನಿಧಿಯಲ್ಲಿ ಮಾತ್ರವೇ ನೋಡಬಹುದಾಗಿದೆ . ತಾಳ ಮೇಳಗಳ ಚೆಂಡೆ ನಾದಗಳ ಝೇಂಕಾರ , ಪಂಚ ಮೂರ್ತಿಗಳ ಅಲಂಕಾರ , ವೈದಿಕ ಆಚಾರ ಅನುಷ್ಠಾನದ ನೋಟವೇ ಸುಮಧುರ.

ಈ ಎಲ್ಲಾ ಅದ್ಬುತಗಳೊಂದಿಗೆ ವಿರಾಜಮಾನವಾಗಿ ಮೆರೆಯುವ ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಊರ ಪರವೂರ ಭಕ್ತರ ದಿಂಡೇ ಹರಿದು ಬರುತ್ತದೆ . ಅಷ್ಟಕ್ಕೂ ಈ ಅಪರೂಪದ ದೇವಾಲಯದ ಇರುವುದು ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿತ್ತಾರಿ ಗ್ರಾಮದ ಬಯಲು ಸೀಮೆಯ ಬಾರಿಕ್ಕಾಡು ಅಥವಾ ವಾರಿಕಾಟಪ್ಪನ್ ಮಹಿಷಮರ್ಧಿನಿ ಕ್ಷೇತ್ರದಲ್ಲಿ .

ಪುರಾಣ ಪ್ರಸಿದ್ಧ ಕ್ಷೇತ್ರದಲ್ಲಿ ಬ್ರಹ್ಮಶ್ರೀ ಬಾರಿಕ್ಕಾಡುತ್ತಾಯರ ದಿವ್ಯ ಉಪಸ್ಥಿತಿಯಲ್ಲಿ ಕ್ಷೇತ್ರ ಕಾರ್ಯಗಳು ನಡೆಯುತ್ತದೆ . ಶ್ರೀ ಮಹಾ ಗಣಪತಿ , ಶ್ರೀ ಧರ್ಮಶಾಸ್ತ್ರ , ಶ್ರೀ ಮಹಾ ವಿಷ್ಣು , ಶ್ರೀ ಮಹಿಷಾಮರ್ಧಿನಿ , ಶ್ರೀ ಮಹಾದೇವ ಎಂಬೀ ಪಂಚ ದೇವರುಗಳ ಆರಾಧನೆ ನಡೆಯುವುದರಿಂದ ಪಂಚ ದೇವರ ಪಾವನ ಭೂಮಿಯೆಂದು ಕರೆಯಲ್ಪಡುತ್ತದೆ . ಶ್ರೀ ಸನ್ನಿಧಿಯಲ್ಲಿ ಮೇಷ ಮಾಸದ ವಾರ್ಷಿಕ ಜಾತ್ರೆಯಂದು ೫ ಉತ್ಸವ ಮೂರ್ತಿಗಳ ಬಲಿ ನರ್ತನ ಸೇವೆಯು ನಡೆಯುತ್ತದೆ . ಇದು ಕೇರಳ ರಾಜ್ಯದ ಮತ್ಯಾವುದೇ ಸನ್ನಿದಿಯಲ್ಲಿ ಇಂತಹ ಅಪರೂಪದ ವಿದ್ಯಮಾನ ನಡೆಯುವುದಿಲ್ಲ . ಶ್ರೀ ಕ್ಷೇತ್ರದಲ್ಲಿ ಮಹಿಷಮರ್ದಿನಿ ಗುಡಿಯು ಪ್ರತೇಕವಾಗಿದ್ದು ಪಡುವಣ ದಿಕ್ಕಿಗೆ ಮುಖಮಾಡಿದೆ . ಉಳಿದ ೪ ಉಪದೇವರುಗಳಿಗೆ ಪ್ರತೇಕವಾದ ಗುಡಿಯಿದ್ದು ಅದು ಮೂಡಣ ದಿಕ್ಕಿಗೆ ಮುಖಮಾಡಿದೆ .

ವಾರ್ಷಿಕ ಜಾತ್ರಾ ಮಹೋತ್ಸವ ಮೇ 8 ಮತ್ತು 9 ರಂದು ನಡೆಯಿತು. ಈ ಸಂದರ್ಭದಲ್ಲಿ ಸಾಂಸ್ಕೃತಿಕ , ಧಾರ್ಮಿಕ ಕಾರ್ಯಕ್ರಮಗಳು ನಡೆದವು .

ಜಾತ್ರೆಯ ಎರಡನೇ ದಿನ ಬಾರಿಕ್ಕಾಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಿಂದ ಶ್ರೀಭೂತ ಬಲಿ, ಉತ್ಸವ ಮೂರ್ತಿ ಮೆರವಣಿಗೆ, , ವಸಂತ ಮಂಟಪದಲ್ಲಿ ಕಟ್ಟೆಪೂಜೆ , ಪಂಚ ಮೂರ್ತಿಗಳ ನೃತ್ಯೋತ್ಸವ ಬಲಿ ನಡೆಯಿತು . ಪಂಚ ಮೂರ್ತಿಗಳ ಅಪರೂಪದ ದಿವ್ಯ ದರ್ಶನವನ್ನು ಪಡೆದು ಆನಂದ ಅನುಭವಿಸಿದ, ಭಕ್ತಿಯಿಂದ ನಮಿಸಿದ ಭಕ್ತ ಜನರ ಸಂಖ್ಯೆ ಸಾವಿರಾರು.

Comments

Leave a Comment

Prev Post *ಅದ್ದೂರಿಯಾಗಿ ಪ್ರದರ್ಶನಗೊಂಡ “ಸಂಪೂರ್ಣ ರಾಮಾಯಣ
Next Post ಮೀಸಲಾತಿಯನ್ನು ಶೆಡ್ಯೂಲ್ 9ಗೆ ಸೇರಿಸದಿದ್ದರೆ ಉಗ್ರ ಹೋರಾಟ!

‎ನಾಡಿನ ಜನರ ಹೃದಯದಲ್ಲಿ ಯಡಿಯೂರಪ್ಪರಿಗೆ ಶಾಶ್ವತ ಸ್ಥಾನ- ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಎಲೆಕೊಡಿಗೇಹಳ್ಳಿ ಶ್ರೀನಂದಿಬಸವೇಶ್ವರ ನೂತನ ದೇವಾಲಯದ ಮಂಡಲ ಪೂಜೆ

ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಕಾಯ್ದೆ ಜಾರಿಗೆ

ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಕಾಯ್ದೆ ಜಾರಿಗೆ

ಕೇರಳದಲ್ಲೊಂದು ಗೋಶಾಲೆ ಸಹಿತ ಮನೆ.

ಕೇರಳದಲ್ಲೊಂದು ಗೋಶಾಲೆ ಸಹಿತ ಮನೆ.

Read all News