PRABHAVAA.COM

ಕೇರಳದಲ್ಲೊಂದು ಗೋಶಾಲೆ ಸಹಿತ ಮನೆ.

Kerala:

Font size:

ಕೇರಳದಲ್ಲೊಂದು ಗೋಶಾಲೆ ಸಹಿತ ಮನೆ.

From Jayaram Udupi

ಕೇರಳದಲ್ಲೊಂದು ಗೋಶಾಲೆ ಸಹಿತ ಮನೆ.

ಕೇರಳಂ/ ಮಂಗಳೂರು:

ಹೊಸ ಮನೆ ಕಟ್ಟಿ ಗೃಹ ಪ್ರವೇಶಕ್ಕೆ ತಯಾರಾದಾಗ ಜನರು ಸಾಮಾನ್ಯವಾಗಿ ಕೇಳುವ ಪ್ರಶ್ನೆ ಎಷ್ಟು ಬಿ.ಎಚ್.ಕೆ. ಯದ್ದು ಎಂಬುದು. ಕೇರಳದ ಕೂಳೂರು ಕನ್ಯಾನದಲ್ಲಿ ಉದ್ಯಮಿ ಡಾ. ಸದಾಶಿವ ಶೆಟ್ಟಿ ಕನ್ಯಾನ ಅವರು ಕಟ್ಟಿದ ಹೊಸ ಮನೆಗೆ ಬಿ.ಎಚ್.ಕೆ. ಮಾನದಂಡ ಅನ್ವಯಿಸದು.ಯಾಕೆಂದರೆ ಅವರ ಮನೆ ಗೋಶಾಲೆ ಸಹಿತ ಮನೆ ಎಂಬ ಹೊಸ ಪರಿಕಲ್ಪನೆಯನ್ನು ಮೂಡಿಸಿದೆ.

ಹೊಸ ಮನೆ ಕಟ್ಟುವಾಗ ಡಾ. ಸದಾಶಿವ ಶೆಟ್ಟಿ ಅವರು ಗೋಶಾಲೆ ಸಹಿತ ಮನೆ ಕಟ್ಟುವ ಯೋಜನೆ ಹೊಂದಿದ್ದರು. ಇನ್ನೊಂದು ವೈಶಿಷ್ಟ್ಯ ಎಂದರೆ ಅವರ ಇಡೀ ಕೂಡು ಕುಟುಂಬ ಒಂದೇ ಆವರಣದಲ್ಲಿ‌ ವಾಸ್ತವ್ಯ ಹೂಡುವಂತೆ ಮನೆಗಳ ನಿರ್ಮಾಣವಾಗಿದೆ. ಸುತ್ತ‌ ಹಲಸು ಸಹಿತ‌ ವಿವಿಧ ಹಣ್ಣುಗಳ‌ ದೊಡ್ಡ ಮರಗಳಿವೆ. ಗೋ ಶಾಲೆ ವೀಕ್ಷಿಸಲು ಬರುವವರಿಗೆ ವಾಸ್ತವ್ಯ ಹೂಡುವುದಾದರೂ ಅದಕ್ಕೆ ವ್ಯವಸ್ಥೆ ಇದೆ. ಮುಂಜಾನೆದ್ದು‌ಹಕ್ಕಿಗಳ ಕಲರವ ಕೇಳಿದ ಹಾಗೆ ದೇಸೀ ದನಗಳ ಅಂಬಾ ಧ್ವನಿ ಕೇಳಬಹುದು.

ದನವೊಂದು ಧ್ವನಿ‌ ಹೊರಡಿಸುವಾಗ ವಿವಿಧ ತರಂಗಾಂತರಗಳಿರುತ್ತವೆ. ಹಸಿವಾದಾಗ ಅದು ಹೊರಡಿಸುವ ಧ್ವನಿ, ಹುಲ್ಲು ಹಾಕುವಾಗ ಅದು ಹೊರಡಿಸುವ ಧ್ವನಿಯಲ್ಲಿ ವ್ಯತ್ಯಾಸಗಳು ಇರುತ್ತವೆ.

ಗೋಶಾಲೆಯನ್ನು ಅತ್ಯಂತ ಆಧುನಿಕ ರೀತಿಯಲ್ಲಿ ನಿರ್ಮಿಸಲಾಗಿದೆ. ಬೆಳಕು ಮತ್ತು‌ ನೈಸರ್ಗಿಕ ಗಾಳಿಗಾಗಿ ಸಾಕಷ್ಟು ತೆರೆದ ಅವಕಾಶ ಇರುವಂತೆ ನಿರ್ಮಿಸಲಾಗಿದೆ. ರಾತ್ರಿ ವೇಳೆ ಬೆಳಕಿಗಾಗಿ‌ ವಿದ್ಯುತ್‌ ದೀಪದ ವ್ಯವಸ್ಥೆ ಇದೆ. ದಿನದ ಇಪ್ಪತ್ತ ನಾಲ್ಕು‌ ಗಂಟೆಯೂ ನೀರಿನ ವ್ಯವಸ್ಥೆ ಇದೆ.‌ ಹಟ್ಟಿ‌ ನೀರು ಬಸಿದು ಹೋಗಲು ಸಣ್ಣ ಕಾಲುವೆಗಳಂತಹ ರಚನೆಗಳನ್ನು ಅಳವಡಿಸಲಾಗಿದೆ. ಚರ್ಮ ಸೂಕ್ಷ್ಮ ಇರುವ ದನಗಳಿಗೆ , ಕರುಗಳಿಗೆ ದೊರಗು‌ ನೆಲದಿಂದ ಗಾಯಗಳಾಗದಂತೆ ಕಾಪಾಡಲು ರಬ್ಬರ್ ಶೀಟ್ ಗಳನ್ನು‌ ಅಳವಡಿಸಲಾಗಿದೆ. ಫ್ಯಾನ್ ವ್ಯವಸ್ಥೆಯೂ ಇದೆ.

ಲಕ್ಷ್ಮಿ,‌ ಸರಸ್ವತಿ, ಗೋದಾವರಿ, ಸುಂದರಿ, ಗಂಗೆ, ಕಾವೇರಿ..ಹೀಗೆ ದೇಶದ ನದಿ, ದೇವತೆಗಳ ಹೆಸರಿನ ಸಂಗಮ ಈ ಗೋಶಾಲೆ. ಒಂದೊಂದು ದನಕ್ಕೂ ಐಡೆಂಟಿಟಿ ಉಂಟು.

ಗೋಶಾಲೆ ಸಹಿತ ಮನೆಯ ರೂವಾರಿ ಡಾ.ಸದಾಶಿವ ಶೆಟ್ಟಿ ಕೃಷಿ ಕುಟುಂಬದಿಂದ ಬಂದವರು. ಕಷ್ಟ- ಪರಂಪರೆಯನ್ನು ಬೆನ್ನಿಗಿಟ್ಟುಕೊಂಡು ಓದಿದವರು. ದೈವದ ಪ್ರಸಾದ ಹಿಡಿದು ಮುಂಬಯಿ ಸೇರಿದ ವಿದ್ಯಾವಂತ ಯುವಕ ಪರಿಶ್ರಮದಿಂದ ಉದ್ಯಮಿಯಾದವರು. ಹೆಚ್ಚು‌ಕಮ್ಮಿ ಅರ್ಧ ಶತಮಾನದಷ್ಟು ತಮ್ಮ ಆಯುಷ್ಯವನ್ನು‌ ಮುಂಬಯಿಯಲ್ಲಿ ಕಳೆದವರು. ಹೇರಂಭಾ ಗುಂಪಿನ ಉದ್ಯಮ ಸಮೂಹದ ಸ್ಥಾಪಕಾಧ್ಯಕ್ಷರು. ಔಷಧ ತಯಾರಿಕಾ ಉದ್ಯಮದಲ್ಲಿಯೂ ಹೆಜ್ಜೆ ಮೂಡಿಸಿದವರು. ರಫ್ತು ಕ್ಷೇತ್ರದ ಸಾಧನೆಗಾಗಿ ವೃತ್ತಿಪರ ಪ್ರಶಸ್ತಿ ಗೌರವಗಳನ್ನು ಕೇಂದ್ರ ಸರಕಾರದಿಂದ ಪಡೆದವರು. ಕರ್ನಾಟಕ ಸರಕಾರದಿಂದ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದವರು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗಮನಾರ್ಹ ಹಾಜರಾತಿ ಇರುವ ಉತ್ಪನ್ನಗಳನ್ನು ತಯಾರಿಸಿ ದೊಡ್ಡ ಪ್ರಮಾಣದ ವಿದೇಶೀ ವಿನಿಮಯ ಗಳಿಸುತ್ತಿರುವ ಈ ಉದ್ಯಮಿ ಊರಿಗೆ ಮರಳಿ ಬಂದು ಕಟ್ಟಿದ ಮನೆಯೇ ಗೋಶಾಲೆ ಸಹಿತ ಮನೆ. ಸ್ಥಳೀಯವಾಗಿ ಅವರು ಮಹಾದಾನಿಯಾಗಿ ಪರಿಚಿತರು.
ಕೇರಳದಲ್ಲಿ ಗ್ರಾಮೀಣ ಶಿಕ್ಷಣ ವ್ಯವಸ್ಥೆ ಬಲಪಡಿಸಲು ಶಾಲೆಗಳಿಗೆ ವಾಹನಗಳನ್ನು ಒದಗಿಸಿದ್ದಾರೆ. ಮಧೂರು ದೇವಾಲಯದ ಜೀರ್ಣೋದ್ಧಾರ ಸಹಿತ ಅನೇಕ ದೇವಾಲಯಗಳ ಜೀರ್ಣೋದ್ದಾರಗಳಲ್ಲಿ ಕೈಜೋಡಿಸಿ ಮುಂಚೂಣಿಯಲ್ಲಿ ನಿಂತವರು. ಡಾ. ಶೆಟ್ಟಿ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೇರಳ ವಿಧಾನಸಭೆಯ ಹಿಂದಿನ ಸ್ಪೀಕರ್ ಅಭಿನಂದನಾ ಭಾಷಣ ಮಾಡಲು ಕಾರ್ಯಕ್ರಮ ವಿಳಂಬದ ನಡುವೆಯೂ ಸರದಿ‌ಬರುವ ತನಕ ಕಾಯುತ್ತ ಕುಳಿತಿದ್ದರು. ತಮ್ಮ ಭಾಷಣದಲ್ಲಿ ಅವರು ಹೇಳಿದ ಮಾತು .."ಶೆಟ್ಟಿ ನನ್ನ ಮಿತ್ರರು. ನಾನು ನಾಳೆ ಬೆಳಿಗ್ಗೆ ತಿರುವನಂತಪುರದಲ್ಲಿ ಇರಬೇಕು. ಅಧಿವೇಶನ ನಡೆಯುತ್ತಿದೆ, ಆದರೆ ಅಭಿನಂದನಾ ಗೌರವ ನೋಡಬೇಕು ಎಂದು ನಿಂತಿದ್ದೇನೆ."..ಹೀಗೆ ಹೇಳುವಾಗ ಸಮಯ ರಾತ್ರಿ ಹತ್ತು ಗಂಟೆ ಕಳೆದಿತ್ತು.

ಗೋಶಾಲೆ ಸಹಿತ ಮನೆ ಎಂಬುದು ಹೊಸ ಪರಿಕಲ್ಪನೆ. ಅದರ ಪರಿಸರವನ್ನು ಇತರರೂ ಅನುಭವಿಸುವಂತಾಗಲಿ ಎನ್ನುವುದು ಡಾ. ಶೆಟ್ಟರ ಉದಾರವಾದಿ‌ ನಿಲುವು.
ಬೆಳಿಗ್ಗೆ ಚಹಾಕ್ಕೆ ಎಲ್ಲರಿಗೂ ಹಾಲು ಬೇಕು. ಮಕ್ಕಳಿಗೆ ಹಾಲು ಮೊಸರು ಬೇಕು.ಆದರೆ ದನ ಸಾಕಯವುದು ಯಾರು, ಅದು ರಗಳೆಯ ಕೆಲಸ ಎಂಬ ಮಾತು ಚಾಲ್ತಿಯಲ್ಲಿರುವಾಗ ಗೋವುಗಳ‌ ಮಹತ್ವ ಬರೇ ಹಾಲು-ಮೊಸರಿಗೆ ಸೀಮಿತ ಅಲ್ಲ ಅಲ್ಲೋಂದು ಆಶೀರ್ವಾದದ ಸಂತಸಮಯ ಬದುಕು ಇದೆ ಎಂದು ಸಾರಲು ಹೊರಟಿದ್ದಾರೆ ಡಾ.ಸದಾಶಿವ ಶೆಟ್ಟಿ. ಅಂದ ಹಾಗೆ ಈ ಗೋಶಾಲೆಯಲ್ಲಿ ಲೀಟರುಗಟ್ಟಲೆ ಹಾಲು ಕರೆಯುವ ಮಿಶ್ರತಳಿಯ ದನಗಳಿಲ್ಲ. ದೇಸೀ ದನಗಳೇ ಎಲ್ಲ.

Comments

Leave a Comment

Prev Post 11 ಜಿಲ್ಲೆಗಳಲ್ಲಿ ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿಗೆ ಆದೇಶ
Next Post ಫಲ್ಗುಣಿ ನದಿ ಕಲುಷಿತ: ಕಪ್ಪಾದ ನೀರು, ಮೀನುಗಳ ಸಾವು

‎ನಾಡಿನ ಜನರ ಹೃದಯದಲ್ಲಿ ಯಡಿಯೂರಪ್ಪರಿಗೆ ಶಾಶ್ವತ ಸ್ಥಾನ- ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಎಲೆಕೊಡಿಗೇಹಳ್ಳಿ ಶ್ರೀನಂದಿಬಸವೇಶ್ವರ ನೂತನ ದೇವಾಲಯದ ಮಂಡಲ ಪೂಜೆ

ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಕಾಯ್ದೆ ಜಾರಿಗೆ

ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಕಾಯ್ದೆ ಜಾರಿಗೆ

ಕಾಸರಗೋಡು: ದೇವರ ನಾಡಿನ ಸಂಪ್ರದಾಯದ ಭವ್ಯತೆ

ಕಾಸರಗೋಡು: ದೇವರ ನಾಡಿನ ಸಂಪ್ರದಾಯದ ಭವ್ಯತೆ

Read all News