PRABHAVAA.COM

ರಾಜ್ಯ ಸಚಿವ ಸಂಪುಟ ಖಾತೆ ಹಂಚಿಕೆ: ಶಿವಕುಮಾರ್ ಕೈಯಲ್ಲಿ ಹಣಕಾಸು ಸೇರಿದಂತೆ ಪ್ರಮುಖ ಇಲಾಖೆಗಳು

Bengaluru Urban:

Font size:

ರಾಜ್ಯ ಸಚಿವ ಸಂಪುಟ ಖಾತೆ ಹಂಚಿಕೆ: ಶಿವಕುಮಾರ್ ಕೈಯಲ್ಲಿ ಹಣಕಾಸು ಸೇರಿದಂತೆ ಪ್ರಮುಖ ಇಲಾಖೆಗಳು

ರಾಜ್ಯ ಸಚಿವ ಸಂಪುಟ ಖಾತೆ ಹಂಚಿಕೆ: ಶಿವಕುಮಾರ್ ಕೈಯಲ್ಲಿ ಹಣಕಾಸು ಸೇರಿದಂತೆ ಪ್ರಮುಖ ಇಲಾಖೆಗಳು

ಬೆಂಗಳೂರು, ಆ.12 -ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸಚಿವ ಸಂಪುಟದ ಖಾತೆ ಹಂಚಿಕೆ ಗೊಂದಲಗಳಿಗೆ ಕೊನೆಗೂ ತೆರೆ ಬಿದ್ದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹಣಕಾಸು, ಸಂಪುಟ ವ್ಯವಹಾರಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಗುಪ್ತಚರ, ಮಾಹಿತಿ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ, ಕೃಷಿ ಮಾರುಕಟ್ಟೆ, ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯ, ಬಿಡಿಎ ಮತ್ತು ಬಿಎಂಆರ್‌ಡಿಎ ವ್ಯಾಪ್ತಿಯ ಅಡಿಯಲ್ಲಿ ಬರುವ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಹಂಚಿಕೆಯಾಗದ ಎಲ್ಲಾ ಖಾತೆಗಳು ವಹಿಸಲಾಗಿದೆ.

ಪ್ರಮುಖ ಸಚಿವರಿಗೆ ಖಾತೆ ಬದಲಾವಣೆ ಈ ಸಂದರ್ಭದಲ್ಲಿದ್ದ ಖಾತೆಗಳನ್ನು ಬದಲಾವಣೆ ಮಾಡಲಾಗಿದೆ

ರಾಮಲಿಂಗಾರೆಡ್ಡಿ – ಜಲಸಂಪನ್ಮೂಲ ಇಲಾಖೆಯಿಂದ ಅರಣ್ಯ, ಪರಿಸರ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಗೆ ಬದಲಾವಣೆ ಮಾಡಲಾಗಿದೆ.

ಕೆ.ಎಚ್. ಮುನಿಯಪ್ಪ – ಆಹಾರ ಇಲಾಖೆಯಿಂದ ಸಮಾಜ ಕಲ್ಯಾಣ ಇಲಾಖೆಗೆ ವರ್ಗಾವಣೆ.

ಯು.ಟಿ. ಖಾದರ್ – ಆರೋಗ್ಯ ಇಲಾಖೆಯ ಜೊತೆಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಗಳ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

ಸಚಿವರು ಹಾಗೂ ಅವರಿಗೆ ಹಂಚಿಕೆಯಾದ ಇಲಾಖೆಗಳ ಪೂರ್ಣ ಪಟ್ಟಿ:

ಎನ್. ಚಲುವರಾಯಸ್ವಾಮಿ – ಜಲಸಂಪನ್ಮೂಲ ಇಲಾಖೆ
ಎಚ್.ಸಿ. ಬಾಲಕೃಷ್ಣ – ಪೌರಾಡಳಿತ ಇಲಾಖೆ
ಸಂತೋಷ್ ಲಾಡ್ – ಕಾರ್ಮಿಕ ಇಲಾಖೆ
ಬಸವಂತಪ್ಪ – ಬಂದರು ಮತ್ತು ಮೀನುಗಾರಿಕೆ ಇಲಾಖೆ
ಮಧು ಬಂಗಾರಪ್ಪ – ಪ್ರಾಥಮಿಕ ಶಿಕ್ಷಣ ಇಲಾಖೆ
ಬಸವರಾಜ ರಾಯರೆಡ್ಡಿ – ಉನ್ನತ ಶಿಕ್ಷಣ ಇಲಾಖೆ
ಬಿ. ಝಡ್. ಜಮೀರ್ ಅಹಮದ್ ಖಾನ್ – ವಸತಿ ಇಲಾಖೆ
ಲಕ್ಷ್ಮಣ್ ಸವದಿ – ಸಹಕಾರ ಇಲಾಖೆ
ಡಾ. ಅಜಯ್ ಸಿಂಗ್ – ಸಣ್ಣ ನೀರಾವರಿ ಇಲಾಖೆ
ಎಸ್. ಎಸ್. ಮಲ್ಲಿಕಾರ್ಜುನ – ಗಣಿ ಮತ್ತು ಭೂವಿಜ್ಞಾನ ಇಲಾಖೆ
ರಿಜ್ವಾನ್ ಅರ್ಷದ್ – ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
ಶಿವರಾಜ್ ತಂಗಡಗಿ – ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಆರ್. ಪುಟ್ಟರಂಗಶೆಟ್ಟಿ – ಪಶುಸಂಗೋಪನೆ ಇಲಾಖೆ
ಕೆ.ಎಂ. ಶಿವಲಿಂಗೇಗೌಡ – ಅಬಕಾರಿ ಇಲಾಖೆ
ವಿಜಯಾನಂದ ಕಾಶಪ್ಪನವರ್ – ಸಣ್ಣ ಕೈಗಾರಿಕೆ ಇಲಾಖೆ
ಪಿ.ಎಂ. ನರೇಂದ್ರ ಸ್ವಾಮಿ – ಕೃಷಿ ಇಲಾಖೆ
ಕೆ. ನಾಗೇಂದ್ರ – ಯೋಜನೆ ಮತ್ತು ಸಾಂಖ್ಯಿಕ ಇಲಾಖೆ
ಎಸ್.ವಿ. ರಘುಮೂರ್ತಿ – ಪರಿಶಿಷ್ಟ ಪಂಗಡಗಳ (ST) ಕಲ್ಯಾಣ ಇಲಾಖೆ
ರುದ್ರಪ್ಪ ಲಮಾಣಿ – ಸಕ್ಕರೆ ಖಾತೆ
ಇತರೆ ಪ್ರಮುಖ ಹುದ್ದೆಗಳ ಜವಾಬ್ದಾರಿ:
ಮಂಕಾಳು ವೈದ್ಯ – ಡೆಪ್ಯುಟಿ ಸ್ಪೀಕರ್ (ಉಪಾಧ್ಯಕ್ಷರು, ವಿಧಾನಸಭೆ)
ಆರ್.ವಿ. ದೇಶಪಾಂಡೆ – ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು
ಎ.ಎಸ್. ಪೊನ್ನಣ್ಣ – ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ

Comments

Leave a Comment

Prev Post ಪರಿಶಿಷ್ಟ ಜಾತಿ ಸದಸ್ಯರ ವಿರುದ್ಧ ಆಧಾರರಹಿತ ದೂರು – ಕಾಂತಕುಮಾರ್ ವಿರುದ್ಧ ತೀವ್ರ ಆಕ್ರೋಶ, ಬಂಧನಕ್ಕೆ ಪರಿಶಿಷ್ಟ ಜಾತಿ/ವರ್ಗ/ಧಾರ್ಮಿಕ ಅಲ್ಪಸಂಖ್ಯಾತರ ಒಕ್ಕೂಟ ಒತ್ತಾಯ

ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ

ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ: ಎಂ ಬಿ ಪಾಟೀಲ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಲಸಿಕೆ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಅಕ್ಕಪಡೆ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News