PRABHAVAA.COM

ಕೊಯ್ಲೋತ್ತರ ಆಹಾರ ನಷ್ಟ ತಡೆಗಟ್ಟಲು 'ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್ 2026' ರಡಿ ಏಳು ನವೀನ ಪರಿಹಾರಗಳ ಆಯ್ಕೆ - ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್

Bengaluru Urban:

Font size:

ಕೊಯ್ಲೋತ್ತರ ಆಹಾರ ನಷ್ಟ ತಡೆಗಟ್ಟಲು 'ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್ 2026' ರಡಿ ಏಳು ನವೀನ ಪರಿಹಾರಗಳ ಆಯ್ಕೆ - ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್

ಕೊಯ್ಲೋತ್ತರ ಆಹಾರ ನಷ್ಟ ತಡೆಗಟ್ಟಲು 'ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್ 2026' ರಡಿ ಏಳು ನವೀನ ಪರಿಹಾರಗಳ ಆಯ್ಕೆ - ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್

​ಬೆಂಗಳೂರು, ನ. 19‌ -

ತೋಟಗಾರಿಕಾ ಉತ್ಪನ್ನಗಳ ಕೊಯ್ಲೋತ್ತರ ನಷ್ಟವನ್ನು ಕಡಿಮೆ ಮಾಡುವ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆಯು 'ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್ 2026' ರ ಅಂತಿಮ ಸುತ್ತಿನಲ್ಲಿ ಏಳು ನವೀನ ಕೃಷಿ-ತಂತ್ರಜ್ಞಾನ ಪರಿಹಾರಗಳನ್ನು ಗುರುತಿಸಲಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿ‌ನಿ ರಜನೀಶ್ ತಿಳಿಸಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (BIEC) ನಡೆದ 'ಬೆಂಗಳೂರು ಟೆಕ್ ಸಮ್ಮಿಟ್ 2026' ರ ಸಮಾರೋಪ ಸಮಾರಂಭದಲ್ಲಿ ಈ ಆಯ್ಕೆಯನ್ನು ಪ್ರಕಟಿಸಲಾಗಿದ್ದು, ರಾಜ್ಯದ ಪ್ರಮುಖ ತೋಟಗಾರಿಕಾ ಬೆಳೆಗಳಾದ ಈರುಳ್ಳಿ, ಮಾವು, ಬಾಳೆ, ಟೊಮೆಟೊ, ದ್ರಾಕ್ಷಿ, ದಾಳಿಂಬೆ ಮತ್ತು ಅನಾನಸ್‌ಗಳ ವಾರ್ಷಿಕ ಉತ್ಪಾದನಾ ಮೌಲ್ಯ ಸುಮಾರು ರೂ. 22,000 ಕೋಟಿಗಳಷ್ಟಿದೆ. ಆದರೆ, ಸೂಕ್ತ ಶೀತಲ ಸಂಗ್ರಹಣೆ, ಪ್ಯಾಕೇಜಿಂಗ್, ಸಾಗಣೆ ಹಾಗೂ ಸಂಸ್ಕರಣಾ ಘಟಕಗಳ ಕೊರತೆಯಿಂದಾಗಿ ಶೇ.10 ರಿಂದ 15ರಷ್ಟು ಉತ್ಪನ್ನಗಳು ಮೌಲ್ಯ ಸರಪಳಿಯ ವಿವಿಧ ಹಂತಗಳಲ್ಲಿ ನಷ್ಟವಾಗುತ್ತಿವೆ. ಈ ನಷ್ಟವನ್ನು ತಡೆಗಟ್ಟಿ ರೈತರಿಗೆ ಉತ್ತಮ ಆರ್ಥಿಕ ಪ್ರತಿಫಲ ದೊರಕಿಸಿಕೊಡಲು ಹಾಗೂ ಮುಖ್ಯಮಂತ್ರಿಗಳ 'ಬಿಯಾಂಡ್ ಬೆಂಗಳೂರು' (Beyond Bengaluru) ಕರೆಗೆ ಪೂರಕವಾಗಿ ಈ ಚಾಲೆಂಜ್ ಆಯೋಜಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಆಹಾರ ನಷ್ಟ ತಡೆಯಲು ಸರ್ಕಾರ, ರೈತ ಸಂಸ್ಥೆಗಳು, ಸಂಶೋಧಕರು ಮತ್ತು ಹೂಡಿಕೆದಾರರ ಸಂಘಟಿತ ಪ್ರಯತ್ನ ಅಗತ್ಯವಿದೆ. ಗುರುತಿಸಲಾದ ಈ ಭರವಸೆಯ ಪರಿಹಾರಗಳನ್ನು ಮೌಲ್ಯಮಾಪನ ಮತ್ತು ಪ್ರಾಯೋಗಿಕ ಅನುಷ್ಠಾನದ ಅವಕಾಶಗಳೊಂದಿಗೆ ಜೋಡಿಸುವುದೇ ಈ ಉಪಕ್ರಮದ ನೈಜ ಯಶಸ್ಸಾಗಲಿದೆ." ಎಂದು ಮುಖ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

​ದೇಶಾದ್ಯಂತ ನಾವೀನ್ಯಕಾರರು ಮತ್ತು ನವೋದ್ಯಮಗಳಿಂದ ಬಂದಿದ್ದ ಒಟ್ಟು 210 ಅರ್ಜಿಗಳನ್ನು ಪರಿಶೀಲಿಸಿ, ತಜ್ಞರ ಮೌಲ್ಯಮಾಪನದ ಬಳಿಕ ಅಂತಿಮವಾಗಿ ಏಳು ವಿಜೇತ ಪರಿಹಾರಗಳನ್ನು ಆಯ್ಕೆ ಮಾಡಲಾಗಿದೆ.

​ಆಯ್ಕೆಯಾದ ಏಳು ನವೀನ ಪರಿಹಾರಗಳು:

​ಅಚ್ಯುತ ಇನ್ನೋವೇಶನ್ಸ್ (Achyutha Innovations): ಉತ್ಪನ್ನಗಳ ದೃಢತೆ ಮತ್ತು ಬಾಳಿಕೆಯ ಅವಧಿಯನ್ನು ಹೆಚ್ಚಿಸುವ ಬೆಳೆ ನಿರ್ದಿಷ್ಟ ಕೊಯ್ಲು ಪೂರ್ವ ವಿಧಾನ ('ರೈಪ್ ಅಂಡ್ ಸ್ಟೇ ಫಿಟ್').

​ದ್ವಾರಾ ಇ-ರಿಜಿಸ್ಟ್ರಿ (Dvara E-Registry Pvt. Ltd.): ರೈತರು ಮತ್ತು ರೈತ ಉತ್ಪಾದಕ ಸಂಸ್ಥೆಗಳಿಗೆ (FPO) ಸುಲಭವಾಗಿ ಸಾಂಸ್ಥಿಕ ಹಣಕಾಸು ಸೌಲಭ್ಯ ಒದಗಿಸುವ ಪರ್ಯಾಯ ಸಾಲ ಮೌಲ್ಯಮಾಪನ ವ್ಯವಸ್ಥೆ ('ಖೇತ್‌ಸ್ಕೋರ್' - KhetScore).

​ಇಕೋ365 (Eco365 Pvt. Ltd.): ತಾಜಾ ಕೃಷಿ ಉತ್ಪನ್ನಗಳ ಬಾಳಿಕೆ ಹೆಚ್ಚಿಸಲು ಮಣ್ಣಿನಲ್ಲಿ ಜೈವಿಕವಾಗಿ ಕರಗುವ ಬೆಳೆ ಆಧಾರಿತ ಪ್ಯಾಕೇಜಿಂಗ್ ವ್ಯವಸ್ಥೆ ('ಫ್ರೆಕ್ಸಾ' - Frexa).

​ಕಾಶಿಕರಿ ಟೆಕ್ಸ್‌ಟೈಲ್ಸ್ (Kashikari Textiles Pvt. Ltd.): ಕೃಷಿ ತ್ಯಾಜ್ಯವಾದ ಅನಾನಸ್ ಎಲೆಗಳಿಂದ ನಾರು ಮತ್ತು ಜವಳಿ ಉತ್ಪನ್ನಗಳನ್ನು ತಯಾರಿಸುವ ವೃತ್ತಾಕಾರದ ಆರ್ಥಿಕತೆ ತಂತ್ರಜ್ಞಾನ.

​ರೂಟ್ಸ್‌ಗೂಡ್ಸ್ (RootsGoods Pvt. Ltd.): ಕೃಷಿ ಉತ್ಪನ್ನಗಳ ಸಂಗ್ರಹಣೆ, ಸಾಗಣೆ ಮತ್ತು ವ್ಯಾಪಾರಕ್ಕಾಗಿ ಡಿಜಿಟಲ್ ಗುಣಮಟ್ಟದ ಮೌಲ್ಯಮಾಪನ ಒದಗಿಸುವ ಸಂಗ್ರಹಣಾ ವೇದಿಕೆ.

​ರುಕಾರ್ಟ್ ಟೆಕ್ನಾಲಜೀಸ್ (Rukart Technologies Pvt. Ltd.): ಕೃಷಿ ಕ್ಷೇತ್ರ ಮತ್ತು ಮಾರುಕಟ್ಟೆಗಳಿಗೆ ಸೂಕ್ತವಾದ ಕಡಿಮೆ ವಿದ್ಯುತ್ ಬಳಕೆಯ ಶೀತಲೀಕರಣ ('ಸಬ್ಜಿ ಕೂಲರ್') ಹಾಗೂ ನೈಸರ್ಗಿಕವಾಗಿ ಹಣ್ಣು ಮಾಗಿಸುವ ಪರಿಹಾರಗಳು.

​ಎಕ್ಸಿಂಪಲ್ ಟೆಕ್ನಾಲಜೀಸ್ (Eximple Technologies Pvt. Ltd.): ರಫ್ತು ಸಾಗಣೆ, ನಿಯಮಾನುಸರಣೆ ಮತ್ತು ವ್ಯಾಪಾರ ಹಣಕಾಸು ಪ್ರಕ್ರಿಯೆಗಳನ್ನು ಸಮಗ್ರವಾಗಿ ನಿರ್ವಹಿಸುವ ಕೃತಕ ಬುದ್ಧಿಮತ್ತೆ (AI) ಆಧಾರಿತ ಡಿಜಿಟಲ್ ವೇದಿಕೆ.

ಗಣ್ಯರ ಅನಿಸಿಕೆ :

"ವಿಜೇತ ಪರಿಹಾರಗಳು ಸಂರಕ್ಷಣೆ, ಶೀತಲೀಕರಣ, ಸಾಗಣೆ, ಹಣಕಾಸು ಮತ್ತು ಮೌಲ್ಯವರ್ಧನೆ ಕ್ಷೇತ್ರಗಳನ್ನು ಒಳಗೊಂಡಿವೆ. ಇವುಗಳ ಕೈಗೆಟುಕುವ ದರ ಮತ್ತು ಸ್ಥಳೀಯ ಬೆಳೆಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯದ ಮೇಲೆ ಇವುಗಳ ಯಶಸ್ಸು ನಿಂತಿದೆ."
​ಭುವನೇಶ್ವರಿ ಬಾಲಸುಬ್ರಮಣಿಯನ್, ಕಂಟ್ರಿ ಡೈರೆಕ್ಟರ್ (ಭಾರತ), GAIN: "ಆಹಾರ ನಷ್ಟವು ರೈತರ ಆದಾಯದ ಜೊತೆಗೆ ಪೌಷ್ಟಿಕ ಆಹಾರದ ಲಭ್ಯತೆಯ ಮೇಲೂ ಪರಿಣಾಮ ಬೀರುತ್ತದೆ. ಉತ್ಪನ್ನಗಳನ್ನು ಸಂರಕ್ಷಿಸುವ ಪರಿಹಾರಗಳನ್ನು ಉತ್ತೇಜಿಸಲು 'ಸಂಪೂರ್ಣ' ಎಲ್ಲರನ್ನೂ ಒಂದೇ ವೇದಿಕೆಗೆ ತಂದಿದೆ." - ​ಶ್ರೀ ಗಿರೀಶ್ (ಐಎಎಸ್),ಕಾರ್ಯದರ್ಶಿಗಳು, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ

"ನಾವೀನ್ಯತೆಗಳನ್ನು ಸಂಸ್ಥೆಗಳು, ಮಾರುಕಟ್ಟೆಗಳು ಮತ್ತು ಬಂಡವಾಳದೊಂದಿಗೆ ಸಂಪರ್ಕಿಸುವ ನಿಟ್ಟಿನಲ್ಲಿ ಈ ಏಳು ಪರಿಹಾರಗಳ ಆಯ್ಕೆಯು ಮಹತ್ವದ ಮೈಲಿಗಲ್ಲಾಗಿದೆ." - ಡಾ. ಪಾರುಲ್ ಸೋನಿ, ಸಂಸ್ಥಾಪಕಿ,Thinkthrough Consulting & ಅಧ್ಯಕ್ಷೆ, ABWCI.

​'ಸಂಪೂರ್ಣ 2026':

ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆಯ ಆತಿಥ್ಯದಲ್ಲಿ 'ಗ್ಲೋಬಲ್ ಅಲೈಯನ್ಸ್ ಫಾರ್ ಇಂಪ್ರೂವ್ಡ್ ನ್ಯೂಟ್ರಿಷನ್' (GAIN), ನ್ಯೂಟ್ರಿಷನ್ ಕನೆಕ್ಟ್, ಥಿಂಕ್‌ಥ್ರೂ ಕನ್ಸಲ್ಟಿಂಗ್ ಮತ್ತು ABWCI ಸಂಸ್ಥೆಗಳು ಜಂಟಿಯಾಗಿ ಈ ಬಹು-ವಲಯ ವೇದಿಕೆಯನ್ನು ರೂಪಿಸಿವೆ. ಎಂಎಂ ಆಕ್ಟಿವ್ ಸೈ-ಟೆಕ್ ಕಮ್ಯುನಿಕೇಷನ್ಸ್ ಮತ್ತು ಕೃಷಿಕಲ್ಪ ಫೌಂಡೇಶನ್ ಇದಕ್ಕೆ ಬೆಂಬಲ ನೀಡಿವೆ. ಮುಂದಿನ ಹಂತದಲ್ಲಿ ಈ ತಂತ್ರಜ್ಞಾನಗಳನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಲು ಸೂಕ್ತ ಪಾಲುದಾರಿಕೆ ಮತ್ತು ಮಾರ್ಗಗಳನ್ನು ಅನ್ವೇಷಿಸಲಾಗುವುದು.

Comments

Leave a Comment

Prev Post ₹5ಕ್ಕೆ ಉಪಹಾರ, ₹10ಕ್ಕೆ ಊಟ: ರಾಜ್ಯದಲ್ಲಿ 16 ಹೊಸ ಇಂದಿರಾ ಕ್ಯಾಂಟೀನ್‌ಗಳ ಲೋಕಾರ್ಪಣೆ
Next Post ರವಿ ಹಂಜ್ ವಿರಚಿತ `ಬಸವ ಮಂಟಪ’ ಕೃತಿ ವಿರುದ್ಧ ಭುಗಿಲೆದ್ದ ಆಕ್ರೋಶ, ಮುಟ್ಟುಗೋಲಿಗೆ ಬಸವ ಸಮಿತಿ ಆಗ್ರಹ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

Read all News