ಪಿಯು ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: ₹4 ಕೋಟಿ ವೆಚ್ಚದಲ್ಲಿ ‘ಮಾರ್ಗದರ್ಶನ ಮತ್ತು ಶೈಕ್ಷಣಿಕ ಭೇಟಿ’ ಕಾರ್ಯಕ್ರಮಕ್ಕೆ ಸರ್ಕಾರದ ಅಸ್ತು!
ಪಿಯು ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: ₹4 ಕೋಟಿ ವೆಚ್ಚದಲ್ಲಿ ‘ಮಾರ್ಗದರ್ಶನ ಮತ್ತು ಶೈಕ್ಷಣಿಕ ಭೇಟಿ’ ಕಾರ್ಯಕ್ರಮಕ್ಕೆ ಸರ್ಕಾರದ ಅಸ್ತು!
https://www.facebook.com/share/p/1FAb32n5rm/
ರಾಜ್ಯದ 96 ಪಿಎಂಶ್ರೀ (PM SHRI) ಸಂಯೋಜಿತ ಪದವಿ ಪೂರ್ವ ಕಾಲೇಜುಗಳ 20,000 ವಿದ್ಯಾರ್ಥಿಗಳಿಗೆ 2026-27ನೇ ಶೈಕ್ಷಣಿಕ ಸಾಲಿನಲ್ಲಿ ವಿಶೇಷ ‘ಮಾರ್ಗದರ್ಶನ ಮತ್ತು ರಚನಾತ್ಮಕ ಭೇಟಿ ಕಾರ್ಯಕ್ರಮ’ (Mentorship and Exposure Programme) ಆಯೋಜಿಸಲು ಕರ್ನಾಟಕ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಪ್ರಮುಖ ಅಂಶಗಳು:ಅನುದಾನ: ಪ್ರತಿ ವಿದ್ಯಾರ್ಥಿಗೆ ₹2,000 ದಂತೆ ಒಟ್ಟು ₹4 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಫಲಾನುಭವಿಗಳು: ರಾಜ್ಯದ 30 ಜಿಲ್ಲೆಗಳ 96 ಪಿಎಂಶ್ರೀ ಪಿಯು ಕಾಲೇಜುಗಳ ಪ್ರಥಮ (13,149) ಮತ್ತು ದ್ವಿತೀಯ ಪಿಯು (12,029) ವಿದ್ಯಾರ್ಥಿಗಳ ಪೈಕಿ ಒಟ್ಟು 20,000 ಅರ್ಹ ವಿದ್ಯಾರ್ಥಿಗಳಿಗೆ ಈ ಅವಕಾಶ ಸಿಗಲಿದೆ. ಯೋಜನೆಯ ವಿಶೇಷತೆ: ವೃತ್ತಿ ಮಾರ್ಗದರ್ಶನ, ಹಳೆಯ ವಿದ್ಯಾರ್ಥಿಗಳು ಹಾಗೂ ವೃತ್ತಿಪರರೊಂದಿಗೆ ಸಂವಾದ, STEAM ವೃತ್ತಿ ನಕ್ಷೆ ಕಾರ್ಯಾಗಾರ, ನಾಯಕತ್ವ ತರಬೇತಿ ಮತ್ತು 50 ವಿದ್ಯಾರ್ಥಿಗಳ ತಂಡಗಳಲ್ಲಿ 2 ದಿನಗಳ ರಚನಾತ್ಮಕ ಶೈಕ್ಷಣಿಕ ಭೇಟಿ ಇರಲಿದೆ. ಜವಾಬ್ದಾರಿ: 'ಕರ್ನಾಟಕ ದರ್ಶನ' ಯಶಸ್ಸಿನ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಸುರಕ್ಷಿತ ಪ್ರಯಾಣ, ವಸತಿ ಹಾಗೂ ಆಹಾರದ ಸಂಪೂರ್ಣ ನಿರ್ವಹಣೆಯನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ (KSTDC) ವಹಿಸಲಾಗಿದೆ. ಸುರಕ್ಷತೆಗೆ ಮೊದಲ ಆದ್ಯತೆ: ಪೋಷಕರ ಲಿಖಿತ ಅನುಮತಿ ಕಡ್ಡಾಯವಾಗಿದ್ದು, ವಿದ್ಯಾರ್ಥಿನಿಯರಿಗೆ ಮಹಿಳಾ ಮೇಲ್ವಿಚಾರಕರ ನೇಮಕ, ವಿಮೆ ಹಾಗೂ ತುರ್ತು ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಪಾಲಿಸಲು ಸರ್ಕಾರ ಸೂಚಿಸಿದೆ. ವಿದ್ಯಾರ್ಥಿಗಳ ಕಲಿಕಾ ಆಸಕ್ತಿ ಮತ್ತು ಹಿಂದಿನ ಸಾಲಿನ ಅಂಕಗಳ ಆಧಾರದ ಮೇಲೆ ಆಯಾ ಕಾಲೇಜಿನ ಪ್ರಾಂಶುಪಾಲರು ಪಾರದರ್ಶಕವಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ.
#KarnatakaEducation #PMSHRI #PUStudents #KSTDC #StudentExposure #KarnatakaGovernment #EducationNews #KannadaNews






Comments
Leave a Comment