PRABHAVAA.COM

ಪರಿಶಿಷ್ಟ ಜಾತಿ ಸದಸ್ಯರ ವಿರುದ್ಧ ಆಧಾರರಹಿತ ದೂರು – ಕಾಂತಕುಮಾರ್ ವಿರುದ್ಧ ತೀವ್ರ ಆಕ್ರೋಶ, ಬಂಧನಕ್ಕೆ ಪರಿಶಿಷ್ಟ ಜಾತಿ/ವರ್ಗ/ಧಾರ್ಮಿಕ ಅಲ್ಪಸಂಖ್ಯಾತರ ಒಕ್ಕೂಟ ಒತ್ತಾಯ

Bengaluru Urban:

Font size:

ಪರಿಶಿಷ್ಟ ಜಾತಿ ಸದಸ್ಯರ ವಿರುದ್ಧ ಆಧಾರರಹಿತ ದೂರು – ಕಾಂತಕುಮಾರ್ ವಿರುದ್ಧ ತೀವ್ರ ಆಕ್ರೋಶ, ಬಂಧನಕ್ಕೆ ಪರಿಶಿಷ್ಟ ಜಾತಿ/ವರ್ಗ/ಧಾರ್ಮಿಕ ಅಲ್ಪಸಂಖ್ಯಾತರ ಒಕ್ಕೂಟ ಒತ್ತಾಯ

ಬೆಂಗಳೂರು , ಆ. 12-ಆಲ್ ಕರ್ನಾಟಕ ಸ್ಟೇಟ್ ಸ್ಟೂಡೆಂಟ್ಸ್ ಅಸೋಸಿಯೇಷನ್ (ರಿ) ಅಧ್ಯಕ್ಷ ಎಂದು ಹೇಳಿಕೊಳ್ಳುವ ಕಾಂತಕುಮಾರ್ ಎಂಬುವವರು ಕಾಂತಕುಮಾರ್ ಎಂಬ ವ್ಯಕ್ತಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಮತ್ತು ಆಯೋಗದ ಸದಸ್ಯರ ವಿರುದ್ಧ ಆಧಾರರಹಿತ ದೂರುಗಳನ್ನು ದಾಖಲಿಸಿ, ಹಣ ವಸೂಲಿ ಮಾಡುವ ದಂಧೆ ನಡೆಸುತ್ತಿರುವುದು ಸಮಾಜದ ಶಾಂತಿ ಮತ್ತು ನ್ಯಾಯಕ್ಕೆ ಧಕ್ಕೆ ತರುವ ಗಂಭೀರ ಕುತಂತ್ರವಾಗಿದೆ ಎಂದು ಪರಿಶಿಷ್ಟ ಜಾತಿ/ವರ್ಗ/ಧಾರ್ಮಿಕ ಅಲ್ಪಸಂಖ್ಯಾತರ ಒಕ್ಕೂಟ ಅದ್ಯಕ್ಷರಾದ ಮಾರ ಸಂದ್ರ ಮುನಿಯಪ್ಪ ಆರೋಪ ಮಾಡಿದ್ದಾರೆ

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,ಕಾಂತಕುಮಾರ್ ಪರಿಶಿಷ್ಟ ಜಾತಿಯ ವಿರೋಧಿಯಾಗಿದ್ದು, ವಿದ್ಯಾರ್ಥಿಗಳು ಮತ್ತು ಸದಸ್ಯರನ್ನು ಬೆದರಿಸಲು ಹಾಗೂ ಅವರ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇಂತಹ ದೂರುಗಳು ಕಾನೂನುಬಾಹಿರವಾಗಿದ್ದು, ಸಮಾಜದಲ್ಲಿ ಅಸಮಾಧಾನ ಉಂಟುಮಾಡುವ ಕುತಂತ್ರದ ಭಾಗವೆಂದು ಅವರು ಹೇಳಿದರು. ಅವರು ಸರ್ಕಾರವನ್ನು ತಕ್ಷಣವೇ ಕಾಂತಕುಮಾರ್ ಅವರನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಮುನಿಯಪ್ಪ ಅವರು ಮುಂದುವರಿದು, ಈ ಎಲ್ಲಾ ದೂರುಗಳನ್ನು ‘ಬಿ ರಿಪೋರ್ಟ್’ ಮಾಡಿ ಹಿಂಪಡೆಯಬೇಕು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹಲವು ಸಂಘಟನೆಗಳ ನಾಯಕರು ಸಹ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು. ಬಸವರಾಜ್ ಕೌತಾಳ್, ಒಳಮೀಸಲಾತಿ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷರು, ಪಿ. ಮೂರ್ತಿ ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷರು, ಜೀವನಹಳ್ಳಿ ನಾರಾಯಣ್, ಪ್ರೊ. ಬಿ. ಕೃಷ್ಣಪ್ಪ, ಕೋಡಿಗಲ್ ರಮೇಶ್, ತ್ಯಾಗರಾಜ್ ಹಾಗೂ ವೇಣುಗೋಪಾಲ್ ಮೌರ್ಯ್ ಸೇರಿದಂತೆ ಅನೇಕ ನಾಯಕರು ಒಕ್ಕೂಟದ ಹೋರಾಟಕ್ಕೆ ಬೆಂಬಲ ಘೋಷಿಸಿದರು.

ಮುನಿಯಪ್ಪ ಅವರು ಕೊನೆಯ ಮಾತಿನಲ್ಲಿ ಪರಿಶಿಷ್ಟ ಜಾತಿಯವರ ಘನತೆಯನ್ನು ಕುಗ್ಗಿಸುವ ಯಾವುದೇ ಪ್ರಯತ್ನವನ್ನು ಒಕ್ಕೂಟ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸರ್ಕಾರವು ತಕ್ಷಣವೇ ಕ್ರಮ ಕೈಗೊಂಡು ಸಮಾಜದಲ್ಲಿ ಶಾಂತಿ ಮತ್ತು ನ್ಯಾಯವನ್ನು ಕಾಪಾಡಬೇಕೆಂದು ಅವರು ಒತ್ತಾಯಿಸಿದರು.

ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಮೇ ಮತ್ತು ಜೂನ್ ತಿಂಗಳಲ್ಲಿಬೆಂಗಳೂರು, ಬುಧವಾರ, ಆಗಸ್ಟ್ 12, 2026 – ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಮೇ ಮತ್ತು ಜೂನ್ ತಿಂಗಳಲ್ಲಿ ಪತ್ರಾಂಕಿತ ಅಧಿಕಾರಿಗಳ ಹುದ್ದೆಗಳಿಗೆ ಪೂರ್ವಬಾವಿ ಮತ್ತು ಮುಖ್ಯ ಪರೀಕ್ಷೆಗಳನ್ನು ನಡೆಸಿ, ನಂತರ ಸಂದರ್ಶನ ಪ್ರಕ್ರಿಯೆಯನ್ನು ಜೂನ್ ಎರಡನೇ ವಾರದಲ್ಲಿ ಸಂಪೂರ್ಣಗೊಳಿಸಲಾಯಿತು. ಆದರೆ, ಸಂದರ್ಶನ ಮುಗಿದು ಸುಮಾರು 20 ದಿನಗಳ ನಂತರ, ಆಲ್ ಕರ್ನಾಟಕ ಸ್ಟೇಟ್ ಸ್ಟೂಡೆಂಟ್ಸ್ ಅಸೋಸಿಯೇಷನ್ (ರಿ) ಅಧ್ಯಕ್ಷ ಎಂದು ಹೇಳಿಕೊಳ್ಳುವ ಕಾಂತಕುಮಾರ್ ಎಂಬುವವರು ವಿಧಾನಸೌಧ ಪೊಲೀಸ್ ಠಾಣೆ, ಎಂ.ಎಸ್. ಬಿಲ್ಡಿಂಗ್ ಇವರಿಗೆ ದಿನಾಂಕ ಜುಲೈ 3, 2026 ರಂದು ಮೂರು ದೂರುಗಳನ್ನು ಸಲ್ಲಿಸಿದರು.

ಈ ದೂರುಗಳಲ್ಲಿ ಅನುಪ್ ಎಸ್, ಮಂದಿರ ಮತ್ತು ಶ್ರೀಮತಿ ಮಮಿತಾ ಎಂಬ ಅಭ್ಯರ್ಥಿಗಳ ಹೆಸರುಗಳನ್ನು ಉಲ್ಲೇಖಿಸಿ, ಅವರು ಲೋಕಸೇವಾ ಆಯೋಗದ ಪರಿಶಿಷ್ಟ ಜಾತಿಯ ಸದಸ್ಯರಿಗೆ ಅಕ್ರಮವಾಗಿ ಹಣ ನೀಡಿರುವುದಾಗಿ ಅಥವಾ ನೀಡುವುದಾಗಿ ಆರೋಪಿಸಲಾಗಿದೆ. ಅನುಪ್ ಎಸ್ ಅವರು ಸದಸ್ಯ ಬೋಜನಾಯಕ್ ಅವರಿಗೆ 1 ಕೋಟಿ 50 ಲಕ್ಷ ರೂಪಾಯಿಗಳನ್ನು ನೀಡಿರುವುದಾಗಿ, ಮಂದಿರ ಅವರು ಸಂದರ್ಶನ ಪೂರ್ವದಲ್ಲಿ ಹುದ್ದೆ ದೊರಕಿಸಲು ಹಣ ನೀಡಿರುವುದಾಗಿ, ಹಾಗೂ ಮಮಿತಾ ಅವರು ಸದಸ್ಯೆ ಶಾಂತ ಹೊಸಮನಿಯವರಿಗೆ ಅಕ್ರಮ ಹಣ ನೀಡಿರುವುದಾಗಿ ದೂರುಗಳಲ್ಲಿ ಹೇಳಲಾಗಿದೆ.

ಆದರೆ, ಈ ಆರೋಪಗಳಿಗೆ ಯಾವುದೇ ದಾಖಲೆ, ಸಾಕ್ಷಿ ಅಥವಾ ಮಾಹಿತಿಯ ಮೂಲವನ್ನು ನೀಡಿಲ್ಲ. ಕೇವಲ ಸದಸ್ಯರ ಮತ್ತು ಅಭ್ಯರ್ಥಿಗಳ ದೂರವಾಣಿ ಸಂಖ್ಯೆಯನ್ನು ಮಾತ್ರ ಉಲ್ಲೇಖಿಸಲಾಗಿದೆ. 384 ಹುದ್ದೆಗಳಿಗೆ ನಡೆದಿರುವ ಸಂದರ್ಶನದಲ್ಲಿ ಕೇವಲ 3 ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಹೆಸರು ಮತ್ತು ಸಂಬಂಧಪಟ್ಟ ಸದಸ್ಯರ ಹೆಸರುಗಳನ್ನು ಮಾತ್ರ ಉಲ್ಲೇಖಿಸಿರುವುದು, ಈ ದೂರುಗಳು ಆಧಾರರಹಿತವಾಗಿರುವುದನ್ನು ತೋರಿಸುತ್ತದೆ.

ಪರಿಶಿಷ್ಟ ಜಾತಿ/ವರ್ಗ/ಧಾರ್ಮಿಕ ಅಲ್ಪಸಂಖ್ಯಾತರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಮಾರಸಂದ್ರ ಮುನಿಯಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂತಕುಮಾರ್ ಪರಿಶಿಷ್ಟ ಜಾತಿಯ ವಿರೋಧಿಯಾಗಿದ್ದು, ವಿದ್ಯಾರ್ಥಿಗಳು ಮತ್ತು ಸದಸ್ಯರನ್ನು ಬೆದರಿಸಲು ಹಾಗೂ ಅವರ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅವರು ಸರ್ಕಾರವನ್ನು ತಕ್ಷಣವೇ ಕಾಂತಕುಮಾರ್ ಅವರನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಮುನಿಯಪ್ಪ ಅವರು ಈ ಎಲ್ಲಾ ದೂರುಗಳನ್ನು ‘ಬಿ ರಿಪೋರ್ಟ್’ ಮಾಡಿ ಹಿಂಪಡೆಯಬೇಕು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹಲವು ಸಂಘಟನೆಗಳ ನಾಯಕರು ಸಹ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.

ಮುನಿಯಪ್ಪ ಅವರ ಕೊನೆಯ ಮಾತಿನಲ್ಲಿ, “ಪರಿಶಿಷ್ಟ ಜಾತಿಯವರ ಘನತೆಯನ್ನು ಕುಗ್ಗಿಸುವ ಯಾವುದೇ ಪ್ರಯತ್ನವನ್ನು ನಾವು ಸಹಿಸುವುದಿಲ್ಲ. ಸರ್ಕಾರವು ತಕ್ಷಣವೇ ಕ್ರಮ ಕೈಗೊಂಡು ಸಮಾಜದಲ್ಲಿ ಶಾಂತಿ ಮತ್ತು ನ್ಯಾಯವನ್ನು ಕಾಪಾಡಬೇಕು” ಎಂದು ಸ್ಪಷ್ಟಪಡಿಸಿದರು.

Comments

Leave a Comment

Prev Post ಬೈರಮಂಗಲ, ಕಂಚುಗಾರನಹಳ್ಳಿ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿ: ಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಬಿಡದಿ ರೈತರ ಮನವಿ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

Read all News