"ಪೊಲೀಸ್ ಠಾಣೆಗಳು ಕಾಂಗ್ರೆಸ್ ಸ್ಟೇಷನ್‌ಗಳಾಗಿ ಮಾರ್ಪಟ್ಟಿವೆ – ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಗಂಭೀರ ಆರೋಪ"
ಬೆಂಗಳೂರು, ಅ. 6 -
ಕರ್ನಾಟಕದಲ್ಲಿ ಪೋಲೀಸ್ ಠಾಣೆಗಳು ಕಾಂಗ್ರೆಸ್ ಸ್ಟೇಷನ್‌ಗಳಾಗಿ ಮಾರ್ಪಟ್ಟಿವೆ ಎಂಬ ಗಂಭೀರ ಆರೋಪವನ್ನು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾಡಿದ್ದಾರೆ.
ಅವರು ಮಂಗಳವಾರ ಗೌರವಾನ್ವಿತ ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, “ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಮೇಲೆ ಸುಮ್ಮನೆ ಕ್ರಿಮಿನಲ್ ಕೇಸುಗಳನ್ನು ಹಾಕಿ ಕಿರುಕುಳ ನೀಡಲಾಗುತ್ತಿದೆ. ಜಯನಗರ ಶಾಸಕರ ಮೇಲೆಯೂ ದೂರು ದಾಖಲಿಸಲಾಗಿದೆ. ಇಡೀ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಕೇಸುಗಳನ್ನು ಹಾಕುತ್ತಿರುವುದು ಕಾಂಗ್ರೆಸ್‌ನ ಗುಂಡಾಗಿರಿ ಸಂಸ್ಕøತಿಯ ಸಾಕ್ಷಿ” ಎಂದು ಟೀಕಿಸಿದರು.
ಅಶೋಕ್ ಅವರೊಂದಿಗೆ ಕುಮಾರಸ್ವಾಮಿ, ಅರಗ ಜ್ಞಾನೇಂದ್ರ, ಪಿ.ಸಿ. ಮೋಹನ್, ಸಿ.ಟಿ. ರವಿ, ಭೋಜೇಗೌಡ, ಮುನಿರಾಜು ಹಾಗೂ ಛಲವಾದಿ ನಾರಾಯಣಸ್ವಾಮಿ ಮತ್ತಿತರರು ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. “ನಮ್ಮ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿರುವ ಈ ಸರ್ಕಾರವನ್ನು ವಜಾ ಮಾಡಬೇಕು” ಎಂದು ಅವರು ಆಗ್ರಹಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕೂಡ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. “ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದವರ ವಿರುದ್ಧ ತಕ್ಷಣ ಎಫ್.ಐ.ಆರ್. ದಾಖಲಿಸುವ ಮೂಲಕ ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಇದು ಕಾನೂನುಬಾಹಿರ” ಎಂದು ಅವರು ಹೇಳಿದರು.
ಅವರು ಸ್ಪಷ್ಟಪಡಿಸಿದ್ದು, ಫಾರಂ ಸೆವೆನ್ ಸಂಬಂಧಿತ ವಿಚಾರ ಚುನಾವಣಾ ಆಯೋಗ ಮತ್ತು ಜನರ ನಡುವೆ ಮಾತ್ರ ಇರುವ ವಿಷಯ. “ಸೆವೆನ್ ಫಾರಂಗಳನ್ನು ತುಂಬಿದವರ ವಿರುದ್ಧ ಸ್ವಯಂಪ್ರೇರಿತವಾಗಿ ಕೇಸುಗಳನ್ನು ಹಾಕುತ್ತಿರುವುದು ಪೆÇಲೀಸ್ ಇಲಾಖೆಯ ಮೇಲೆ ಒತ್ತಡ ಹೇರಿದಂತೆ. ಗೃಹ ಸಚಿವರು ಇಲಾಖೆಯನ್ನು ನಿರ್ವಹಿಸಲು ವಿಫಲರಾಗಿದ್ದಾರೆ” ಎಂದು ಟೀಕಿಸಿದರು.






Comments
Leave a Comment