ಏಷ್ಯನ್ ಗೇಮ್ಸ್ 2026: ಕರ್ನಾಟಕದ ಕ್ರೀಡಾಪಟುಗಳಿಗೆ ಭರ್ಜರಿ ಸನ್ಮಾನ
ಏಷ್ಯನ್ ಗೇಮ್ಸ್ 2026: ಕರ್ನಾಟಕದ ಕ್ರೀಡಾಪಟುಗಳಿಗೆ ಭರ್ಜರಿ ಸನ್ಮಾನ
ಸಿಎಂ ಡಿ ಕೆ ಶಿವಕುಮಾರ್ ಅವರು ಏಷ್ಯನ್ ಗೇಮ್ಸ್ ನಲ್ಲಿ ಪದಕ ಗೆದ್ದ ಕರ್ನಾಟಕದ ಕ್ರೀಡಾಪಟುಗಳಿಗೆ ವಿಧಾನಸೌಧದಲ್ಲಿ ಮಂಗಳವಾರ ಸನ್ಮಾನಿಸಿದರು.
ಡಿಸಿಎಂ ಡಾ. ಜಿ ಪರಮೇಶ್ವರ್, ಕರ್ನಾಟಕ ರಾಜ್ಯ ಒಲಂಪಿಕ್ಸ್ ಸಂಸ್ಥೆ ಅಧ್ಯಕ್ಷರಾದ ಕೆ ಗೋವಿಂದರಾಜು, ಪದಕ ವಿಜೇತ ಕ್ರೀಡಾಪಟುಗಳಾದ ಅಥ್ಲೀಟ್ ಎಂ ಆರ್ ಪೂವಮ್ಮ (ಚಿನ್ನ, ಬೆಳ್ಳಿ), ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ (ಬೆಳ್ಳಿ), ಕ್ರಿಕೆಟ್ ಆಟಗಾರ್ತಿ ಶ್ರೇಯಾಂಕ ಪಾಟೀಲ್ (ಚಿನ್ನ), ಬ್ಯಾಡ್ಮಿಂಟನ್ ಆಟಗಾರ ಆಯುಷ್ ಶೆಟ್ಟಿ (ಕಂಚು), ಶೂಟರ್ ತಿಲೋತ್ತಮ ಸೇನ್ (ಬೆಳ್ಳಿ), ಹಾಕಿ ಆಟಗಾರ ಮೋಹಿತ್ ಎಚ್ ಎಸ್ (ಚಿನ್ನ), ಅಥ್ಲೀಟ್ ಸ್ನೇಹ ಎಸ್ ಎಸ್ (ಕಂಚು), ಯುವ ಸಬಲೀಕರಣ ಹಾಗೂ ವಾರ್ತಾ ಇಲಾಖೆ ಆಯಕ್ತರಾದ ಅನುಚೇತ್ ಮತ್ತಿತರರು ಉಪಸ್ಥಿತರಿದ್ದರು.
ಮೊದಲ ಬಾರಿಗೆ ನಗದು ಪ್ರೋತ್ಸಾಹ ಧನ
ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ ಕರ್ನಾಟಕದ 20 ಕ್ರೀಡಾಪಟುಗಳಿಗೆ ತಲಾ ರೂ. 5.00 ಲಕ್ಷ ನಗದು ಪ್ರೋತ್ಸಾಹ ಧನವನ್ನು ಮಂಜೂರು ಮಾಡಲಾಗಿದೆ.
ಪದಕ ವಿಜೇತರಿಗೆ ನಗದು ಪುರಸ್ಕಾರ ಹೆಚ್ಚಳ
ಈ ಹಿಂದೆ ಚಿನ್ನದ ಪದಕ ವಿಜೇತರಿಗೆ ರೂ. 35 ಲಕ್ಷ, ಬೆಳ್ಳಿಗೆ ರೂ. 25 ಲಕ್ಷ ಹಾಗೂ ಕಂಚಿಗೆ ರೂ. 15 ಲಕ್ಷ ನೀಡಲಾಗುತ್ತಿತ್ತು. ಇದೀಗ ಮೊತ್ತವನ್ನು ಪರಿಷ್ಕರಿಸಿ:
- ಚಿನ್ನ: ₹1.00 ಕೋಟಿ
- ಬೆಳ್ಳಿ: ₹75 ಲಕ್ಷ
- ಕಂಚು: ₹50 ಲಕ್ಷ
ಈ ಪರಿಷ್ಕೃತ ಮೊತ್ತವನ್ನು ಏಷ್ಯನ್ ಗೇಮ್ಸ್-2026ರಲ್ಲಿ ಪದಕ ವಿಜೇತರಾದ 08 ಕ್ರೀಡಾಪಟುಗಳಿಗೆ ನೀಡಲಾಗುತ್ತಿದೆ. ಜೊತೆಗೆ, ಇವರಿಗೆ ಹೆಚ್ಚುವರಿಯಾಗಿ ತಲಾ ರೂ. 5 ಲಕ್ಷ ಪ್ರೋತ್ಸಾಹ ಧನವನ್ನೂ ನೀಡಲಾಗುವುದು.
ಗುಂಪು-ಬಿ ಹುದ್ದೆಗೆ ನೇರ ನೇಮಕಾತಿ
ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತರಿಗೆ ರಾಜ್ಯ ಸರ್ಕಾರವು ಗುಂಪು-ಬಿ ಹುದ್ದೆಗೆ ನೇರ ನೇಮಕಾತಿ ಅವಕಾಶ ಕಲ್ಪಿಸಿದೆ. ಆಯ್ಕೆ ಪ್ರಕ್ರಿಯೆ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯ ಸಮಿತಿಯ ಮೂಲಕ ನಡೆಯಲಿದೆ.
ಗುರಿ: ಒಲಿಂಪಿಕ್ಸ್ ಯೋಜನೆ
ಏಷ್ಯನ್ ಗೇಮ್ಸ್ ಪದಕ ವಿಜೇತರಾದ ಎಂ.ಆರ್. ಪೂವಮ್ಮ, ಸ್ನೇಹಾ ಎಸ್.ಎಸ್., ಶ್ರೇಯಾಂಕಾ ಪಾಟೀಲ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತ ಶಿಲ್ಪಾ ಕೆ.ಎಸ್. ಅವರನ್ನು "ಗುರಿ: ಒಲಿಂಪಿಕ್ಸ್" ಯೋಜನೆಗೆ ಸೇರ್ಪಡೆ ಮಾಡಲಾಗಿದೆ. ಇವರಿಗೆ ತಲಾ ರೂ. 10 ಲಕ್ಷ ನಗದು ಪ್ರೋತ್ಸಾಹ ಧನ ನೀಡಲಾಗುವುದು.
ಸಾಧಕ ಕ್ರೀಡಾಪಟುಗಳಿಗೆ ಮೀಸಲಾತಿ
ರಾಜ್ಯ ಸರ್ಕಾರವು 03-10-2026ರಂದು ಅಧಿಸೂಚನೆ ಹೊರಡಿಸಿ ಸಾಧಕ ಕ್ರೀಡಾಪಟುಗಳಿಗೆ ಎಲ್ಲಾ ಹಂತದ ಸರ್ಕಾರಿ ಹುದ್ದೆಗಳ ನೇರ ನೇಮಕಾತಿಯಲ್ಲಿ 2% ಮೀಸಲಾತಿ ಜಾರಿಗೊಳಿಸಿದೆ.






Comments
Leave a Comment