ಕರ್ನಾಟಕ ವಕ್ಸ್ ನಿಯಮಗಳ ಕರಡು ಪರಿಶೀಲನೆಗೆ ಸಚಿವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚನೆ
ಬೆಂಗಳೂರು, ಅಕ್ಟೋಬರ್ 5, 2026:
ಕರ್ನಾಟಕ ರಾಜ್ಯ ವಕ್ಸ್ ನಿಯಮಗಳನ್ನು ಜಾರಿಗೊಳಿಸಲು ಸರ್ಕಾರವು ಮಹತ್ವದ ಸಮಿತಿಯನ್ನು ರಚಿಸಿದೆ. ಕೇಂದ್ರ ಸರ್ಕಾರದ UMEED ಕಾಯ್ದೆ 2025ರ ಕಲಂ 109ರ ಅಡಿಯಲ್ಲಿ ರೂಪಿಸಲಾದ ಕರಡು ನಿಯಮಗಳನ್ನು ಪರಿಶೀಲಿಸಿ ಅಂತಿಮಗೊಳಿಸಲು ಈ ಸಮಿತಿ ಕಾರ್ಯನಿರ್ವಹಿಸಲಿದೆ.
ಸಮಿತಿಯ ಅಧ್ಯಕ್ಷರಾಗಿ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಸ್ ಸಚಿವರು ನೇಮಕಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಡಾ. ಸೈಯದ್ ನಾಸೀರ್ ಹುಸೇನ್, ಮಾನ್ಯ ಲೋಕಸಭಾ ಸದಸ್ಯರು, ಹಾಗೂ ಡಾ. ಸೈಯದ್ ಮುಹಮ್ಮದ್ ಅಲಿ ಅಲ್-ಹುಸೈನಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ವಕ್ಸ್ ಮಂಡಳಿ ಕಾರ್ಯನಿರ್ವಹಿಸಲಿದ್ದಾರೆ.
ಸದಸ್ಯರಾಗಿ ಪ್ರಮುಖ ಅಧಿಕಾರಿಗಳು ಹಾಗೂ ತಜ್ಞರುಗಳನ್ನು ಒಳಗೊಂಡಿದ್ದಾರೆ:
ಸರ್ಕಾರದ ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಸ್ ಇಲಾಖೆ
ಶ್ರೀ ಇಸ್ಲಾ ಉದ್ದೀನ್ ಜೆ. ಗದ್ಯಾಳ್, ಹೆಚ್ಚುವರಿ ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ
ಶ್ರೀ ಶಾಹುಲ್ ಹಮೀದ್, ಹೆಚ್ಚುವರಿ ಅಡ್ವಕೇಟ್ ಜನರಲ್, ಕರ್ನಾಟಕ ಉಚ್ಚ ನ್ಯಾಯಾಲಯ
ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಮುಸ್ತಫಾ ಹುಸೇನ್ ಮತ್ತು ಜಸ್ಟೀಸ್ ಪಠಾಣ್
ನಿವೃತ್ತ ಅಧಿಕಾರಿಗಳು ಅನ್ವರ್ ಪಾಷಾ (ಭಾ.ಆ.ಸೇ) ಮತ್ತು ಎಂ.ಎ. ಖಾಲಿದ್ (ಕ.ಆ.ಸೇ)
ಕರ್ನಾಟಕ ರಾಜ್ಯ ವಕ್ಸ್ ಮಂಡಳಿಯ ಸದಸ್ಯರು ಹಾಗೂ ಮಾಜಿ ಸದಸ್ಯರು
ಹಿರಿಯ ವಕೀಲರಾದ ಶ್ರೀಮತಿ ಅನುರಾಧಾ, ವಕೀಲರಾದ ಶ್ರೀ ಮೊಹಮ್ಮದ್ ಶಾಮಿಲ್ ಮತ್ತು ಶ್ರೀಮತಿ ಸನೋಬರ್ ಫಾತೀಮಾ
ಈ ಸಮಿತಿ ಕರಡು ನಿಯಮಗಳನ್ನು ಪರಿಶೀಲಿಸಿ, ತಿದ್ದುಪಡಿ ಮಾಡಿ, ಅಂತಿಮಗೊಳಿಸಿ ಸರ್ಕಾರಕ್ಕೆ ಸಲ್ಲಿಸುವ ಜವಾಬ್ದಾರಿಯನ್ನು ಹೊಂದಿದೆ. ರಾಜ್ಯದ ವಕ್ಸ್ ಸಂಸ್ಥೆಗಳ ನಿರ್ವಹಣೆಯಲ್ಲಿ ಪಾರದರ್ಶಕತೆ, ನ್ಯಾಯಸಮ್ಮತತೆ ಮತ್ತು ಪರಿಣಾಮಕಾರಿತ್ವವನ್ನು ಖಚಿತಪಡಿಸುವ ನಿಟ್ಟಿನಲ್ಲಿ ಈ ಸಮಿತಿ ಮಹತ್ವದ ಪಾತ್ರ ವಹಿಸಲಿದೆ.







Comments
Leave a Comment