4.36 ಲಕ್ಷ ಕೋಟಿ ಸಾಲ ಮಾಡಿ ರಾಜ್ಯ ದಿವಾಳಿ ಮಾಡಿದೆ ನಿಖಿಲ್ ಕುಮಾರಸ್ವಾಮಿ ಕಿಡಿ
ಬನ್ನೂರಿನಲ್ಲಿ ಬೃಹತ್ ರೈತ ಸ್ವಾಭಿಮಾನ ಯಾತ್ರೆಗೆ ಅದ್ದೂರಿ ಸ್ವಾಗತ
**
ಬನ್ನೂರು (ಟಿ.ನರಸೀಪುರ): ಕಾವೇರಿ ಮತ್ತು ಕಬಿನಿ ಭಾಗದ ರೈತರ ಬದುಕು ಬೀದಿಗೆ ಬಂದಿದ್ದರೂ, ಕೆಆರ್‌ಎಸ್‌ನಲ್ಲಿ 97 ಅಡಿ ನೀರಿದ್ದರೂ ನಮ್ಮ ರೈತರಿಗೆ ನೀರು ಬಿಡದೆ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಡುವ ಮೂಲಕ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸ್ವಾಭಿಮಾನ ಯಾತ್ರೆಯ ಅಂಗವಾಗಿ ಬನ್ನೂರಿನ ಕಾವೇರಿ ಸರ್ಕಲ್ ನಿಂದ ಸಂತೆಮಾಳದ ವರೆಗೆ ಸಾವಿರಾರು ರೈತರೊಂದಿಗೆ ಪಾದಯಾತ್ರೆ ನಡೆಸಿ ಮಾತನಾಡಿದ ಅವರು, ಹಿಂದಿನ ಸರ್ಕಾರದಲ್ಲಿ 77 ಅಡಿ ಇದ್ದರೂ ನಾಲೆಗಳಿಗೆ ನೀರು ಬಿಟ್ಟಿದ್ದೇವೆ. ಇಂದು 97 ಅಡಿ ಇದ್ದರೂ ನಾಲೆ ಆಧುನೀಕರಣ, ಹೂಳು ತೆಗೆಯದೆ ಗುತ್ತಿಗೆದಾರರಿಗೆ ಕಾಂಟ್ರಾಕ್ಟ್ ಕೊಟ್ಟು ಪರ್ಸೆಂಟೇಜ್ ಹೊಡೆಯುತ್ತಿದ್ದಾರೆ. ಒಂದು ಎಕರೆಗೆ ರೈತ 25-30 ಸಾವಿರ ಖರ್ಚು ಮಾಡಿದ್ದಾನೆ, ಸರ್ಕಾರ 2500 ರೂ. ಭಿಕ್ಷೆ ಹಾಕುತ್ತಿದೆ. ಕನಿಷ್ಠ 25,000 ಪರಿಹಾರ, ನಿರಂತರ ವಿದ್ಯುತ್, ಮೇವು ಕೇಂದ್ರ ಮತ್ತು ಸಂಪೂರ್ಣ ಸಾಲಮನ್ನಾ ಮಾಡಬೇಕು, ಇಲ್ಲದಿದ್ದರೆ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತಾರೆ" ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ಆಯವ್ಯಯದ ಅಧಿಕೃತ ದಾಖಲೆಗಳೇ ಕಾಂಗ್ರೆಸ್ ಸರ್ಕಾರದ ಆರ್ಥಿಕ ಧ್ವಂಸವನ್ನು ಬಯಲು ಮಾಡಿದೆ. ಕಳೆದ 4 ವರ್ಷಗಳಲ್ಲಿ (2023-24 ರಿಂದ 2026-27) ಈ ಸರ್ಕಾರ ಮಾಡಿರುವ ಒಟ್ಟು ಸಾಲ ಬರೋಬ್ಬರಿ ರೂ.l 4,36,000 ಕೋಟಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
75 ವರ್ಷಗಳ ಇತಿಹಾಸದಲ್ಲಿ ಇಷ್ಟೊಂದು ವೇಗವಾಗಿ ಸಾಲದ ಹೊರೆ ಹೆಚ್ಚಿರಲಿಲ್ಲ. ಈ ಸರ್ಕಾರದ ಬೇಕಾಬಿಟ್ಟಿ ಆಡಳಿತದಿಂದಾಗಿ ರಾಜ್ಯದ ಒಟ್ಟು ಸಾಲದ ಹೊರೆ ಇಂದು ರೂ. 8.14 ಲಕ್ಷ ಕೋಟಿ ದಾಟಿದೆ. ಪ್ರತಿಯೊಬ್ಬ ಕನ್ನಡಿಗನ ತಲೆಯ ಮೇಲೂ ಸಾವಿರಾರು ರೂಪಾಯಿ ಸಾಲದ ಹೊರೆ ಹೊರಿಸಿರುವುದು ಈ ಸರ್ಕಾರದ ಸಾಧನೆ ಎಂದು ಟೀಕಿಸಿದ್ದಾರೆ.
ವಿಧಾನಸಭೆಯಲ್ಲೇ ಸರ್ಕಾರವೇ ಒಪ್ಪಿಕೊಂಡಂತೆ ಕಳೆದ 3 ವರ್ಷಗಳಲ್ಲಿ ರೈತರ ಒಂದೇ ಒಂದು ರೂಪಾಯಿ ಸಾಲಮನ್ನಾ ಮಾಡಿಲ್ಲ. ರೈತನಿಗೆ ಶೂನ್ಯ, ಆದರೆ ಹಳೆಯ ಸಾಲದ ಬಡ್ಡಿ ಕಟ್ಟಲು ಮಾತ್ರ ಪ್ರತಿ ವರ್ಷ ಬೊಕ್ಕಸದಿಂದ 48,000 ಕೋಟಿ ರೂಪಾಯಿ ಪೋಲಾಗುತ್ತಿದೆ. ಇದು ಅಭಿವೃದ್ಧಿ ಸರ್ಕಾರವಲ್ಲ, ಸಾಲ ಮಾಡಿ ಬಡ್ಡಿ ಕಟ್ಟುವ ದಿವಾಳಿ ಸರ್ಕಾರ ಎಂದು ನಿಖಿಲ್ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ.
ಯಾರು ಯಾರೋ ಏನೇನೊ ಮಾತಾಡುತ್ತಾರೆ,ಅದಕ್ಕೆಲ್ಲ ಕೆರಳಬೇಡಿ, ನಾಳೆ ಚುನಾವಣೆ ನಡೆದರೆ ಎಲ್ಲಾ ಕಾಂಗ್ರೆಸ್ ಶಾಸಕರು ಮನೆಗೆ ಕಳುಹಿಸಲು ರಾಜ್ಯದ ಜನತೆ ಕಾಯುತ್ತಿದ್ದಾರೆ. 2028ರ ಚುನಾವಣೆ ದೂರವಿಲ್ಲ
ಎಲ್ಲರು ಒಟ್ಟಾಗಿ ಸಂಘಟನೆ ಮಾಡೋಣ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಟಿ. ನರಸೀಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು, ಜಿಲ್ಲಾಧ್ಯಕ್ಷರಾದ ಅಶ್ವಿನ್ ಕುಮಾರ್ ಅವರು, ಮಾಜಿ ಶಾಸಕರಾದ ಡಾ. ಕೆ. ಅನ್ನದಾನಿ ಅವರು, ವಿಧಾನಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ ಅವರು
ಮುಖಂಡರಾದ ಕೃಷ್ಣನಾಯಕ್ ಅವರು,ಶ ಅಭಿಷೇಕ್ ಮಣೆಗಾರ್ ಅವರು ತಾಲ್ಲೂಕು ಅಧ್ಯಕ್ಷರಾದ ಶ್ ಚಿನ್ನಸ್ವಾಮಿ ಅವರು ಸೇರಿದಂತೆ ಪಕ್ಷದ ಪದಾಧಿಕಾರಿಗಳು , ಕಾರ್ಯಕರ್ತರು, ಯುವ ಮುಖಂಡರು ಉಪಸ್ಥಿತರಿದ್ದರು.






Comments
Leave a Comment