PRABHAVAA.COM

ಮೈಸೂರು ದಸರಾ – ಪರಂಪರೆ, ಇತಿಹಾಸ ಮತ್ತು ವೈಭವ

Bengaluru Urban:

Font size:

ಮೈಸೂರು ದಸರಾ – ಪರಂಪರೆ, ಇತಿಹಾಸ ಮತ್ತು ವೈಭವ (ಡಾ. ಶಾಲಿನಿ ರಜನೀಶ್) ಸರ್ಕಾರದ ಮುಖ್ಯ ಕಾರ್ಯದರ್ಶಿ

ಮೈಸೂರು ದಸರಾ – ಪರಂಪರೆ, ಇತಿಹಾಸ ಮತ್ತು ವೈಭವ

(ಡಾ. ಶಾಲಿನಿ ರಜನೀಶ್)

ಸರ್ಕಾರದ ಮುಖ್ಯ ಕಾರ್ಯದರ್ಶಿ

ದಸರೆಯ ಮಹತ್ವ
ಭಾರತೀಯ ಹಬ್ಬಗಳು ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯೊಂದಿಗೆ ಮಾನವೀಯ ಮೌಲ್ಯಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪ್ರಮುಖ ಮಾಧ್ಯಮಗಳಾಗಿವೆ. ಇಂದಿನ ಯುವ ಪೀಳಿಗೆಗೆ ಇದರ ಪರಿಚಯವನ್ನು ಮಾಡುವುದು ಅತೀ ಅಗತ್ಯ ಹಾಗೂ ಭಾರತೀಯರಿಗೆ ನಮ್ಮ ದೇಶದ ಸಾಂಸ್ಕೃತಿಕ ಶ್ರೀಮಂತಿಕೆ ಬಗ್ಗೆ ಹೆಮ್ಮೆಯನ್ನು ಹೊಂದುವಂತಹ ಒಂದು ಸುವರ್ಣಾವಕಾಶವಾಗಿದೆ.
“ದಸರಾ” ಭಾರತದ ಪ್ರಮುಖ ಪಾರಂಪರಿಕ ಹಬ್ಬಗಳಲ್ಲಿ ಒಂದಾಗಿದೆ. ನವರಾತ್ರಿ ಮತ್ತು ವಿಜಯದಶಮಿಯನ್ನು ಒಳಗೊಂಡ ಹತ್ತು ದಿನಗಳ ಈ ಉತ್ಸವವು ಪೌರಾಣಿಕ, ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಮಹತ್ವವನ್ನು ಹೊಂದಿದೆ. ಮಾತ್ರವಲ್ಲ, ಅಂತರಾಷ್ಟ್ರೀಯ ಮಟ್ಟದಲ್ಲಿ “ಮೈಸೂರು ದಸರಾ” ಆಚರಣೆಯ ವೈಶಿಷ್ಟ್ಯವನ್ನು ಗಮನಿಸಿ, 2008ರಲ್ಲಿ ಯುನೆಸ್ಕೋ ದಸರಾ ಆಚರಣೆಯ ಕಲಾಪ್ರಕಾರಗಳನ್ನು ‘ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ’ ಎಂದು ಗುರುತಿಸಿದೆ.

ಪ್ರಾಚೀನ ಕಾಲದ ದಸರಾ ವೈಭವ
ಶರದೃತುವಿನಲ್ಲಿ ಆಚರಿಸಲಾಗುವ ನವರಾತ್ರಿಯು ದೇವಿಯ ವಿವಿಧ ರೂಪಗಳ ಆರಾಧನೆಗೆ ಸಮರ್ಪಿತವಾಗಿದ್ದು, ವಿಜಯದಶಮಿಯನ್ನು ವಿಜಯದ ಸಂಕೇತವಾಗಿ ಆಚರಿಸಲಾಗುತ್ತದೆ.ದುಷ್ಟಶಕ್ತಿಯ ಮೇಲೆ ಸತ್ಕಾರ್ಯ ಮತ್ತು ಧರ್ಮದ ವಿಜಯವೇ ಇದರ ಪ್ರಮುಖ ಸಂದೇಶ. ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ದಸರಾ ಆಚರಿಸಲಾಗುತ್ತಿದ್ದರೂ, ಮೈಸೂರು ದಸರಾ ತನ್ನ ವಿಶಿಷ್ಟ ಪರಂಪರೆ, ರಾಜವೈಭವ ಮತ್ತು ಸಾಂಸ್ಕೃತಿಕ ಆಚರಣೆಗಳಿಂದ ವಿಶ್ವಪ್ರಸಿದ್ಧವಾಗಿದೆ.
ನವರಾತ್ರಿ ಮತ್ತು ದೇವಿ ಆರಾಧನೆ
ಪುರಾಣಗಳಲ್ಲಿ ಮಹಿಷಾಸುರನಂತಹ ಅಸುರ ಶಕ್ತಿಗಳ ವಿರುದ್ಧ ಚಾಮುಂಡೇಶ್ವರಿ ದೇವಿಯ ವಿಜಯದ ಕಥೆಗಳು ನವರಾತ್ರಿ ಆಚರಣೆಯೊಂದಿಗೆ ಸಂಬಂಧ ಹೊಂದಿವೆ. ಅಸುರರ ಸಂಹಾರದ ಮೂಲಕ ಧರ್ಮ ಮತ್ತು ಸತ್ಯದ ವಿಜಯವನ್ನು ಸಂಭ್ರಮಿಸಲಾಗುತ್ತದೆ. ಮೈಸೂರು ದಸರೆಯಲ್ಲಿ ಚಾಮುಂಡೇಶ್ವರಿ ದೇವಿಯ ಆರಾಧನೆಗೆ ವಿಶೇಷ ಸ್ಥಾನವಿದೆ.

ಪ್ರಕೃತಿಯನ್ನು ಮಾತೃಸ್ವರೂಪವಾಗಿ ಕಾಣುವ ಭಾರತೀಯ ಪರಂಪರೆಯಲ್ಲಿ ಶಕ್ತಿಯನ್ನು ಶೈಲಪುತ್ರೀ, ಬ್ರಹ್ಮಚಾರಿಣೀ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನೀ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ದಿಧಾತ್ರಿ ಎಂಬ ನವರೂಪಗಳಲ್ಲಿ ಆರಾಧಿಸಲಾಗುತ್ತದೆ.
ಘಟಸ್ಥಾಪನೆ, ದೇವಿ ಪೂಜೆ, ಸರಸ್ವತಿ ಪೂಜೆ, ದುರ್ಗಾಷ್ಟಮಿ, ಆಯುಧ ಪೂಜೆ ಹಾಗೂ ಇತರ ಧಾರ್ಮಿಕ ವಿಧಿವಿಧಾನಗಳು ಈ ಅವಧಿಯಲ್ಲಿ ನಡೆಯುತ್ತವೆ. ಹತ್ತನೆಯ ದಿನವಾದ ವಿಜಯದಶಮಿಯು ವಿಜಯಲಕ್ಷ್ಮಿ ಅಥವಾ ಅಪರಾಜಿತಾ ದೇವಿಯ ಆರಾಧನೆಯನ್ನು ನಡೆಸಲಾಗುತ್ತದೆ. ನವರಾತ್ರಿಯ ಒಂಭತ್ತು ದಿನಗಳು ದೇವಿಯ ಒಂಭತ್ತು ವಿವಿಧ ಬಣ್ಣಗಳನ್ನು ಸಂಕೇತಿಸುತ್ತವೆ. ದಿನ-1 ಕಿತ್ತಳೆ, ದಿನ-2 ಬಿಳಿ, ದಿನ-3 ಕೆಂಪು, ದಿನ-4 ಕಡುನೀಲಿ, ದಿನ-5 ಹಳದಿ, ದಿನ-6 ಹಸಿರು, ದಿನ-7 ಬೂದು, ದಿನ-8 ನೇರಳೆ, ದಿನ-9 ನವಿಲು ಹಸಿರು ಬಣ್ಣಗಳಿಂದ ದೇವಿಯನ್ನು ಅಲಂಕರಿಸಲಾಗುತ್ತದೆ. ಅಲ್ಲದೇ, ಹೆಣ್ಣುಮಕ್ಕಳೂ ಸಹ ನವರಾತ್ರಿಯ ಪ್ರತಿದಿನವೂ ಅದೇ ಬಣ್ಣದ ಉಡುಪುಗಳನ್ನು ಧರಿಸಿ ಸಂಭ್ರಮಿಸುತ್ತಾರೆ.
ವಿಜಯದಶಮಿಗೆ ರಾಮಾಯಣದ ಹಿನ್ನೆಲೆಯೂ ಇದೆ. ಶ್ರೀರಾಮನು ರಾವಣನನ್ನು ಸಂಹರಿಸಿದ ದಿನವೆಂದು ಇದನ್ನು ಆಚರಿಸುವ ಸಂಪ್ರದಾಯವಿದೆ. ಹೀಗಾಗಿ ದಸರಾ ದೇವಿಯ ವಿಜಯ ಮತ್ತು ಶ್ರೀರಾಮನ ವಿಜಯ ಎರಡನ್ನೂ ಪ್ರತಿನಿಧಿಸುವ ಮಹತ್ವದ ಹಬ್ಬವಾಗಿದೆ.
ಐತಿಹಾಸಿಕ ಹಿನ್ನೆಲೆ
ಮೈಸೂರು ದಸರೆಯ ಇತಿಹಾಸ ಅತ್ಯಂತ ಪ್ರಾಚೀನವಾಗಿದೆ. ಭಾರತದ ವಿವಿಧ ರಾಜವಂಶಗಳ ಕಾಲದಲ್ಲಿಯೇ ದುರ್ಗಾ ಮತ್ತು ಮಹಿಷಮರ್ದಿನಿಯ ಆರಾಧನೆಯ ಶಿಲ್ಪಗಳು ಕಂಡುಬರುವುದರಿಂದ ದಸರಾ ಆಚರಣೆಯು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿರುವುದಾಗಿ ಪರಿಗಣಿಸಲಾಗಿದೆ. ಶ್ರೀರಂಗಪಟ್ಟಣದ ಪತನದ ನಂತರ ಮೈಸೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು 1799ರಲ್ಲಿ ಮೈಸೂರಿನಲ್ಲಿ ದಸರಾ ಉತ್ಸವಕ್ಕೆ ಮರುಚಾಲನೆ ನೀಡಿದರು.
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ದಸರಾ ಉತ್ಸವವು ಅತ್ಯಂತ ವೈಭವದಿಂದ ನಡೆಯುತ್ತಿತ್ತು. ಇಂದಿನ ಮೈಸೂರು ದಸರಾ ವಿಜಯನಗರದ ಈ ಪರಂಪರೆಯ ಮುಂದುವರಿದ ರೂಪವಾಗಿದೆ.
ಮೈಸೂರು ಒಡೆಯರ ಕಾಲದ ದಸರಾ ವೈಭವ
ಮೈಸೂರು ಅರಸರಾದ ಶ್ರೀ ರಾಜ ಒಡೆಯರ್ ಅವರು ಸಾ.ಶ. 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಹತ್ತು ದಿನಗಳ ದಸರಾ ಉತ್ಸವವನ್ನು ಆರಂಭಿಸಿದರು. ನಂತರ ಮೈಸೂರು ಒಡೆಯರ ಆಡಳಿತದಲ್ಲಿ ದಸರಾ ಉತ್ಸವವು ರಾಜವೈಭವದ ಪ್ರಮುಖ ಸಂಕೇತವಾಗಿ ಬೆಳೆಯಿತು.1648ರಲ್ಲಿ ರಣಧೀರ ಕಂಠೀರವ ನರಸರಾಜ ಒಡೆಯರ್ ಅವರ ಕಾಲದ ದಸರಾ ಆಚರಣೆಗಳ ವಿವರಗಳನ್ನು ಕವಿ ಗೋವಿಂದವೈದ್ಯರು ತಮ್ಮ ‘ಕಂಠೀರವ ನರಸರಾಜ ವಿಜಯ’ ಕೃತಿಯಲ್ಲಿ ದಾಖಲಿಸಿದ್ದಾರೆ. ಆ ಕಾಲದಲ್ಲಿ ದೇವಿ ಆರಾಧನೆ, ಆಯುಧ ಪೂಜೆ, ರಾಜದರ್ಬಾರ್, ಮಲ್ಲಯುದ್ಧ, ನೃತ್ಯ, ಸಂಗೀತ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ದಸರೆಯ ಪ್ರಮುಖ ಭಾಗವಾಗಿದ್ದವು.

ಕಂಠೀರವನರಸರಾಜಒಡೆಯರ್
ಮೈಸೂರು ಒಡೆಯರ ಕಾಲದಲ್ಲಿ ದಸರಾ ರಾಜಮನೆತನದ ಪ್ರಮುಖ ಉತ್ಸವವಾಗಿತ್ತು. ನವರಾತ್ರಿಯ ಸಂದರ್ಭದಲ್ಲಿ ರಾಜರು ಕುಲದೇವತೆ ಹಾಗೂ ಇತರ ದೇವತೆಗಳನ್ನು ಪೂಜಿಸಿ, ಪಟ್ಟದ ಆನೆ ಮತ್ತು ಕುದುರೆಗಳಿಗೆ ಪೂಜೆ ಸಲ್ಲಿಸುತ್ತಿದ್ದರು. ರಾಜದರ್ಬಾರ್, ಆಯುಧ ಪೂಜೆ ಮತ್ತು ವಿಜಯದಶಮಿ ಮೆರವಣಿಗೆಗಳು ಪ್ರಮುಖ ಕಾರ್ಯಕ್ರಮಗಳಾಗಿದ್ದವು.

ಚತುರಂಗಬಲಆಯುಧಪೂಜೆಗೆ (32 ಆಯುಧಗಳಪೂಜೆ) ಅಣಿಗೊಂಡಆಯುಧಗಳು
ಮಹಾನವಮಿಯಂದು ಪಟ್ಟದ ಕತ್ತಿ ಸೇರಿದಂತೆ ರಾಜವಂಶದ ಆಯುಧಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.ಹಿಂದಿನ ಕಾಲದಲ್ಲಿ ರಾಜದರ್ಬಾರ್, ಮಲ್ಲಯುದ್ಧ, ಸಂಗೀತ, ನೃತ್ಯ, ಬಾಣಬಿರುಸು ಮತ್ತು ವಿವಿಧ ರಾಜಕೀಯ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳು ದಸರೆಯ ಭಾಗವಾಗಿದ್ದವು. ಕಾಲ ಬದಲಾದಂತೆ ಅವುಗಳಲ್ಲಿ ಹಲವು ರೂಪಾಂತರಗೊಂಡಿದ್ದರೂ, ದಸರೆಯ ಮೂಲ ಪರಂಪರೆ ಇಂದಿಗೂ ಮುಂದುವರಿದಿದೆ.

ಅರಮನೆಯ ಒಳಭಾಗದಲ್ಲಿ ನಡೆಯುವ ಕೌತುಕಭರಿತ
ಮಲ್ಲಯುದ್ಧದ ಚಿತ್ರ


ಮುಮ್ಮಡಿಕೃಷ್ಣರಾಜಒಡೆಯರ್
ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ದಸರಾ ಆಚರಣೆ ವಿಶೇಷ ವೈಭವವನ್ನು ಪಡೆದಿತ್ತು. ಮಹಾನವಮಿಯಂದು ಕತ್ತಿ, ಖಡ್ಗ ಸೇರಿದಂತೆ ರಾಜವಂಶದ ವಿವಿಧ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತಿತ್ತು. ವಿಜಯದಶಮಿಯಂದು ರಾಜರು ರಾಜಪೋಷಾಕಿನಲ್ಲಿ ಖಡ್ಗ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದರು. ಆ ಕಾಲದಲ್ಲಿ ಇಂದಿನಂತೆ ಚಿನ್ನದ ಅಂಬಾರಿಯಲ್ಲಿ ರಾಜರು ಸಂಚರಿಸುತ್ತಿರಲಿಲ್ಲ. ಆನೆಗಳು ಎಳೆಯುವ ಬೆಳ್ಳಿಯ ರಥದಲ್ಲಿ ಮಹಾರಾಜರು ಕುಳಿತು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ನಂತರ ಕುದುರೆಯೇರಿ ಸೈನ್ಯ ವೀಕ್ಷಿಸಿ, ಬನ್ನಿಮರಕ್ಕೆ ಪೂಜೆ ಸಲ್ಲಿಸುವ ಸಂಪ್ರದಾಯವೂ ಇತ್ತು.
ಚಾಮುಂಡಿ ಬೆಟ್ಟದ ವಿಶೇಷತೆ
ಮೈಸೂರು ದಸರೆಯ ಧಾರ್ಮಿಕ ಹಿನ್ನೆಲೆಯ ಪ್ರಮುಖ ಕೇಂದ್ರ ಚಾಮುಂಡಿ ಬೆಟ್ಟ. ನವರಾತ್ರಿಯ ಸಂದರ್ಭದಲ್ಲಿ ಚಾಮುಂಡೇಶ್ವರಿ ದೇವಿಗೆ ಪ್ರತಿದಿನ ವಿಶೇಷ ಅಲಂಕಾರ ಮತ್ತು ಪೂಜೆಗಳನ್ನು ನೆರವೇರಿಸಲಾಗುತ್ತದೆ.
ದೇವಿಯನ್ನು ವಿವಿಧ ಶಕ್ತಿರೂಪಗಳಲ್ಲಿ ಅಲಂಕರಿಸುವ ಸಂಪ್ರದಾಯವಿದೆ. ನವರಾತ್ರಿಯ ಹತ್ತು ದಿನಗಳ ಅವಧಿಯಲ್ಲಿ ದೇವಿಯ ವಿವಿಧ ಅಲಂಕಾರಗಳು ಭಕ್ತರನ್ನು ಆಕರ್ಷಿಸುತ್ತವೆ. ವಿಜಯದಶಮಿಯಂದು ದೇವಿಯನ್ನು ಅಪರಾಜಿತೆಯ ರೂಪದಲ್ಲಿ ಆರಾಧಿಸಲಾಗುತ್ತದೆ.
ನವರಾತ್ರಿಯ ಮತ್ತೊಂದು ವಿಶೇಷ ಆಚರಣೆ ಕುಮಾರಿ ಪೂಜೆ. 2-10 ವಯಸ್ಸಿನ ಬಾಲಕಿಯರನ್ನು ದೇವಿಯ ವಿವಿಧ ರೂಪಗಳ ಪ್ರತೀಕವಾಗಿ ಪೂಜಿಸುವ ಸಂಪ್ರದಾಯವೂ ಕೆಲವು ಕಡೆಗಳಲ್ಲಿ ಕಂಡುಬರುತ್ತದೆ.
ಅರಮನೆಯ ಪ್ರಮುಖ ಆಕರ್ಷಣೆ ಸಿಂಹಾಸನ
ಆಕರ್ಷಣೆಮೈಸೂರುಸಂಸ್ಥಾನದಲ್ಲಿಮತ್ತೊಂದುಪ್ರಮುಖಸಿಂಹಾಸನವಾಗಿದೆಇದುರತ್ನಖಚಿತಚಿನ್ನದಸಿಂಹಾಸನವಾಗಿದ್ದುಇದಕ್ಕೆಅದರದೆಆದಇತಿಹಾಸವಿದೆದಸರಾಸಂದರ್ಭಗಳಲ್ಲಿಮಾತ್ರವೀಕ್ಷಣೆಗೆಸಾರ್ವಜನಿಕರಿಗೆಲಭ್ಯವಿದ್ದು, ಈಚಿನ್ನದಸಿಂಹಾಸನವುದಸರಾಮುಂಚೆಒಂದುಶುಭಮುಹೂರ್ತದಲ್ಲಿಖಾಸಗಿದರ್ಬಾರ್ಹಾಲಿನಲ್ಲಿಜೋಡಣೆಮಾಡಲಾಗುತ್ತದೆಸುಮಾರು 30 ರಿಂದ 40 ದಿನಗಳಕಾಲವೀಕ್ಷಣೆಮಾಡಬಹುದಾಗಿದೆ.ಈಚಿನ್ನದಸಿಂಹಾಸನದಲ್ಲಿಹಲವುವೈಶಿಷ್ಟ್ಯಗಳುಕೂಡಿದ್ದು, ಈಚಿನ್ನದಸಿಂಹಾಸನಬೆಳ್ಳಿಯಮೆಟ್ಟಿಲುಹೊಂದಿದ್ದುಎರಡುಬದಿಯಲ್ಲಿದರ್ಪಣಾಸುಂದರಿಯರುಇದ್ದು, ಮಹಾರಾಜರಿಗೆಸ್ವಾಗತಮಾಡುವಭಂಗಿಯಲ್ಲಿನಿಂತಿರುವಹಾಗೆರೂಪಿಸಲಾಗಿದೆ. ಇನ್ನುಈಚಿನ್ನದಸಿಂಹಾಸನದಮೇಲ್ಬಾಗದಲ್ಲಿಚಿನ್ನದಛಾಮರಹೊಂದಿದ್ದುಅದಕ್ಕೆಮಯೂರಪಕ್ಷಿಯನ್ನುಜೋಡಿಸಲಾಗಿದೆ. ಸುತ್ತಲುಮುತ್ತುಗಳಿಂದಅಲಂಕೃತವಾಗಿದೆ. ಇನ್ನುಸಿಂಹಾಸನದಹಿಂಭಾಗದಮೇಲ್ಬಾಗದಲ್ಲಿಲಕ್ಷ್ಮಿಚಾಮುಂಡೇಶ್ವರಿಮತ್ತುಸರಸ್ಕೃತಿಯಮೂರ್ತಿಇದ್ದು, ತಳಭಾಗದಲ್ಲಿವಿಜಯದಶಮಿಯದಿನಸಿಂಹಾಸನಕ್ಕೆರಾಜವಂಶಸ್ಥರಿಂದಹೋಮಹವನನಡೆಸಿಸಿಂಹವನ್ನುಜೋಡಿಸುತ್ತಾರೆ.

ಮೈಸೂರುಅರಸರಬೆಡಗಿನರತ್ನಖಚಿತಸ್ವರ್ಣಸಿಂಹಾಸನ
"ಸ್ವರ್ಣಕಲಾನಿಪುಣ" ಸಿಂಗಣ್ಣಾಚಾರ್ಯಈಸಿಂಹಾಸನವನ್ನುಚಿನ್ನಾಭರಣಗಳು, ಬೆಲೆಬಾಳುವರತ್ನಗಳುಮತ್ತುಬೆಳ್ಳಿಯಪ್ರತಿಮೆಗಳಿಂದಶೃಂಗರಿಸಿದ್ದಾರೆ. ಕಾಲಕ್ರಮೇಣಇದಕ್ಕೆಚಿನ್ನದಹಾಳೆಗಳು, ನವರತ್ನಗಳುಮತ್ತುಕಲಾತ್ಮಕಅಲಂಕಾರಗಳನ್ನುಅಳವಡಿಸಿಭವ್ಯರೂಪನೀಡಲಾಗಿದೆ.

ವಿದ್ಯುತ್ದೀಪಾಲಂಕಾರ:
ನಾಡಹಬ್ಬದಸರಾಮಹೋತ್ಸವದಅಂಗವಾಗಿಚಾಮುಂಡೇಶ್ವರವಿದ್ಯುತ್ಸರಬರಾಜುನಿಗಮದ (CESC) ವತಿಯಿಂದಮೈಸೂರುನಗರದಲ್ಲಿಸುಮಾರು 130 ರಿಂದ 136 ಕಿಲೋಮೀಟರ್ಉದ್ದದರಸ್ತೆಗಳಿಗೆವೈವಿಧ್ಯಮಯಹಾಗೂಆಕರ್ಷಕವಿದ್ಯುತ್ದೀಪಾಲಂಕಾರಮಾಡಲಾಗುತ್ತದೆ.
ಇಡೀಮೈಸೂರುನಗರವನ್ನು - ಕಂಗೊಳಿಸುವಂತೆಮಾಡುವಈದೀಪಾಲಂಕಾರವುನಗರದಸುಮಾರು 118 ಪ್ರಮುಖವೃತ್ತಗಳುಮತ್ತುಜಂಕ್ಷನ್ಗಳನ್ನುಒಳಗೊಂಡಿರುತ್ತದೆ. ಇದರೊಂದಿಗೆಕರ್ನಾಟಕದಸಂಸ್ಕೃತಿಮತ್ತುಸಾಧಕರನ್ನುಬಿಂಬಿಸುವ 75ಕ್ಕೂಹೆಚ್ಚುಕಲಾಕೃತಿಗಳನ್ನುಎಲ್ಇಡಿದೀಪಗಳಮೂಲಕಪ್ರದರ್ಶಿಸಲಾಗುತ್ತದೆ. ದೇಶಹಾಗೂವಿದೇಶಗಳಿಂದಬರುವಪ್ರವಾಸಿಗರವೀಕ್ಷಣೆಗಾಗಿಈಅದ್ಭುತಬೆಳಕಿನಹಬ್ಬವನ್ನುಒಟ್ಟು 21 ದಿನಗಳಕಾಲಮುಂದುವರಿಸಲಾಗುತ್ತದೆ.
ಅರಮನೆ ದಸರಾ ಮತ್ತು ನಾಡಹಬ್ಬ ದಸರಾ
1969ರ ನಂತರ ಮೈಸೂರು ರಾಜಮನೆತನದ ಆಡಳಿತ ಅಂತ್ಯಗೊಂಡ ಹಿನ್ನೆಲೆಯಲ್ಲಿ ದಸರಾ ಆಚರಣೆಯಲ್ಲಿ ಮಹತ್ವದ ಬದಲಾವಣೆ ಉಂಟಾಯಿತು. ಪ್ರಸ್ತುತ ಮೈಸೂರಿನಲ್ಲಿ ದಸರಾ ಎರಡು ಪ್ರಮುಖ ರೂಪಗಳಲ್ಲಿ ನಡೆಯುತ್ತದೆ.
ಒಂದೆಡೆ ಅರಮನೆಯೊಳಗೆ ರಾಜಮನೆತನದ ಪರಂಪರೆಯನ್ನು ಮುಂದುವರಿಸಿಕೊಂಡು ಧಾರ್ಮಿಕ ಮತ್ತು ಸಾಂಪ್ರದಾಯಿಕ ಆಚರಣೆಗಳು ನಡೆಯುತ್ತವೆ. ಖಾಸಗಿ ದರ್ಬಾರ್, ಸರಸ್ವತಿ ಪೂಜೆ, ಆಯುಧ ಪೂಜೆ, ವಿಜಯದಶಮಿ, ಶಮೀಪೂಜೆ ಹಾಗೂ ಇತರ ಸಾಂಪ್ರದಾಯಿಕ ವಿಧಿವಿಧಾನಗಳು ಇದರ ಭಾಗವಾಗಿವೆ.
ಮತ್ತೊಂದೆಡೆ ಕರ್ನಾಟಕ ಸರ್ಕಾರವು ಸಾರ್ವಜನಿಕರಿಗಾಗಿ ‘ನಾಡಹಬ್ಬ ದಸರಾ’ವನ್ನು ಆಯೋಜಿಸುತ್ತದೆ. ಜಂಬೂ ಸವಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿವಿಧ ಸಾರ್ವಜನಿಕ ಕಾರ್ಯಕ್ರಮಗಳು ಇದರ ಪ್ರಮುಖ ಆಕರ್ಷಣೆಗಳಾಗಿವೆ.
ಹೀಗಾಗಿ ಇಂದಿನ ಮೈಸೂರು ದಸರಾ ರಾಜಮನೆತನದ ಪರಂಪರೆ ಮತ್ತು ಆಧುನಿಕ ಸಾರ್ವಜನಿಕ ಉತ್ಸವದ ಸಮನ್ವಯವಾಗಿ ರೂಪುಗೊಂಡಿದೆ.
ಚಾಮುಂಡೇಶ್ವರಿ ಉತ್ಸವ ಮತ್ತು ಜಂಬೂ ಸವಾರಿ
ಮೈಸೂರು ದಸರಾ ಮತ್ತು ಆನೆಗಳ ನಡುವಿನ ಸಂಬಂಧವು ಬಹಳ ಹಳೆಯದು. ಒಡೆಯರ ಕಾಲದ ರಾಜವೈಭವದ ಮೆರವಣಿಗೆಗಳಿಂದ ಆರಂಭವಾದ ಈ ಪರಂಪರೆ, ಇಂದು ಸರ್ಕಾರದ ನೇತೃತ್ವದಲ್ಲಿ ನಡೆಯುವ ಜಂಬೂ ಸವಾರಿಯ ರೂಪದಲ್ಲಿ ಮುಂದುವರಿದಿದೆ. ಜಂಬೂಸವಾರಿಆರಂಭಕ್ಕೆಮುನ್ನಶುಭಕುಂಭಲಗ್ನದಲ್ಲಿಅರಮನೆಯಬಲರಾಮದ್ವಾರದಲ್ಲಿನಂದಿಧ್ವಜಕ್ಕೆಮೊದಲುಪೂಜೆಸಲ್ಲಿಸಲಾಗುತ್ತದೆ. ಚಿನ್ನದಅಂಬಾರಿಯಲ್ಲಿವಿರಾಜಮಾನಳಾಗಿಆಸೀನಳಾಗಿರುವತಾಯಿಚಾಮುಂಡೇಶ್ವರಿದೇವಿಮೂರ್ತಿಗೆಪುಷ್ಪಾರ್ಚನೆಸಲ್ಲಿಸಲಾಗುತ್ತದೆ. ಆಬಳಿಕ24 ಕುಶಾಲತೋಪುಗಳಗೌರವವನ್ನುಸಮರ್ಪಣೆಮಾಡಲಾಗುತ್ತದೆ. ಅಲ್ಲಿಂದಅರಮನೆಆವರಣದಲ್ಲಿವಿಜಯದಶಮಿಯಅತ್ಯಾಕರ್ಷಕಮೆರವಣಿಗೆಗೆಚಾಲನೆದೊರೆಯುತ್ತದೆ. ಜಂಬೂಸವಾರಿಯುಅರಮನೆಆವರಣದಿಂದಬನ್ನಿಮಂಟಪದವರೆಗೆನಡೆಯುತ್ತದೆ. ಚಿನ್ನದಅಂಬಾರಿಯಲ್ಲಿವಿರಾಜಮಾನಳಾದದೇವಿಚಾಮುಂಡೇಶ್ವರಿಯನ್ನುಹೊತ್ತು 14 ಅಲಂಕೃತಗಜಗಳೊಂದಿಗೆ, ಜನಸಾಗರದೊಡನೆಧೀರ-ಗಂಭೀರನಡಿಗೆಯಲ್ಲಿಮೆರವಣಿಗೆಯಲ್ಲಿಸಾಗುವಗಜರಾಜನಠೀವಿಗೆಸರಿಸಾಟಿಯಿಲ್ಲ. ಭಾರತದಬೇರೆಲ್ಲೂದಸರಾಸಮಯದಲ್ಲಿಇಷ್ಟೊಂದುಸಂಖ್ಯೆಯಲ್ಲಿಆನೆಗಳುಪಾಲ್ಗೊಳ್ಳುವುದಿಲ್ಲ.


ಅಲಂಕಾರಕ್ಕೆಸಜ್ಜಾಗಿರುವ 80 ಕೆ.ಜಿಚಿನ್ನದ 750 ಕೆ.ಜಿತೂಕದಅಂಬಾರಿ
ಅಂಬಾರಿಹೊತ್ತಬಲರಾಮನಜತೆಗೆಪೊಲೀಸ್ಬ್ಯಾಂಡ್ನಆಕರ್ಷಕತಾಳವಾದ್ಯಕಳೆಗಟ್ಟುತ್ತದೆ. ಅಲ್ಲದೆ, ಕಂಸಾಳೆಕುಣಿತ, ಕಲಾತಂಡಗಳನೃತ್ಯಪ್ರದರ್ಶನಗಳಜತೆಗೆರಾಜ್ಯದ ವಿವಿಧ ಜಿಲ್ಲೆಗಳ ಸಂಸ್ಕೃತಿ ಸಾರುವ ಸ್ತಬ್ಧಚಿತ್ರಗಳುಎಲ್ಲರಗಮನಸೆಳೆಯುತ್ತದೆ. ಇದರವೀಕ್ಷಣೆಗೆಸಾವಿರಾರುಸಂಖ್ಯೆಯಲ್ಲಿಜನರುಸೇರುತ್ತಾರೆ.


ಜಂಬೂಸವಾರಿಯಲ್ಲಿಅಲಂಕೃತಆನೆಗಳು
ದಸರೆಯ ವಿಶೇಷ ಕಾರ್ಯಕ್ರಮಗಳು:
ಯುವಸಂಭ್ರಮ, ಯುವದಸರಾ:

ದಸರಾಗೆಯುವಜನರನ್ನುಸೆಳೆಯಲುಯುವಸಂಭ್ರಮಮತ್ತುಯುವದಸರಾಸಾಂಸ್ಕೃತಿಕಕಾರ್ಯಕ್ರಮಗಳನ್ನುನಡೆಸಲಾಗುತ್ತದೆ. ಮೈಸೂರುವಿಶ್ವವಿದ್ಯಾಲಯದಲ್ಲಿರುವಬಯಲುರಂಗಮಂದಿರದಲ್ಲಿಯುವಸಂಭ್ರಮಸಮಾರಂಭನಡೆಯುತ್ತದೆ. ಇದರಲ್ಲಿಸ್ಥಳೀಯಕಲಾವಿದರಿಗೆಆದ್ಯತೆನೀಡಲಾಗುತ್ತದೆ. ಜನಪದಸೇರಿದಂತೆವಿವಿಧಪ್ರಾಕಾರಗಳನೃತ್ಯಕಲಾವಿದರಪ್ರದರ್ಶನಗಮನಸೆಳೆಯುತ್ತದೆ. ವಿವಿಧಜಿಲ್ಲೆಗಳಶಾಲಾ-ಕಾಲೇಜುವಿದ್ಯಾರ್ಥಿಗಳುಈಸಾಂಸ್ಕೃತಿಕಕಾರ್ಯಕ್ರಮಗಳನ್ನುನಡೆಸಿಕೊಡುತ್ತಾರೆ. ಇನ್ನುಯುವದಸರಾದಲ್ಲಿಸಿನಿಮಾತಾರೆಯರುಹಾಗೂಖ್ಯಾತಗಾಯಕರಸಮಾಗಮವಾಗುತ್ತದೆ. ಮಹಾರಾಜಮೈದಾನದಲ್ಲಿಸಮಾರಂಭನಡೆಯುತ್ತದೆ. ತಮ್ಮನೆಚ್ಚಿನನಟ-ನಟಿಯರು, ಗಾಯಕರನ್ನುನೋಡಲುಅಪಾರಸಂಖ್ಯೆಯಲ್ಲಿಯುವದಸರಾದಲ್ಲಿಜನಸೇರುತ್ತಾರೆ.

ಕಂಬಳ:

ಮೈಸೂರುದಸರಾದಲ್ಲಿಇದೇಮೊದಲಬಾರಿಗೆಕರಾವಳಿಯಕೃಷಿಸಂಸ್ಕೃತಿಹಾಗೂಜನಪದದಪ್ರತೀಕವಾದ ‘ಕಂಬಳ’ ಆಯೋಜನೆಮಾಡಲಾಗುತ್ತಿದೆ. ಅಕ್ಟೋಬರ್ 18 ಮತ್ತು 19 ರಂದುಮೈಸೂರಿನಸಾತಗಳ್ಳಿಯಲ್ಲಿಆಯೋಜಿಸಲುಅಧಿಕೃತವಾಗಿಸಿದ್ಧತೆಗಳುನಡೆದಿವೆ. ದಷ್ಟಪುಷ್ಟವಾಗಿಬೆಳೆಸಿದಕೋಣಗಳುನ್ನುಹಸನಾಗಿಹದಮಾಡಿದಮಣ್ಣಿನಗದ್ದೆಯಲ್ಲಿಓಡಿಸುವಸ್ಪರ್ಧೆಯೇಕಂಬಳ. ಈಕ್ರೀಡೆದಕ್ಷಿಣಕನ್ನಡಮತ್ತುಉಡುಪಿಜಿಲ್ಲೆಯಜನಪದದೊಂದಿಗೆಹಾಸುಹೊಕ್ಕಾಗಿದೆ. ಸಾಂಸ್ಕೃತಿಕಹಿನ್ನೆಲೆಯಕ್ರೀಡೆಯನ್ನುದಸರಾದಲ್ಲಿಆಯೋಜಿಸಲಾಗುತ್ತಿದೆ.

ಮೇಳಗಳು:

ಕೃಷಿ, ಆಹಾರಮೇಳಗಳನ್ನುದಸರಾದಲ್ಲಿನಡೆಸಲಾಗುತ್ತದೆ. ರಾಜ್ಯದನಾನಾಭಾಗಗಳಸ್ಥಳೀಯಹಾಗೂವಿಶೇಷತಿನಿಸುಗಳುಮಳಿಗೆಗಳಲ್ಲಿಸಿಗುತ್ತವೆ. ಆಹಾರಪ್ರಿಯರಿಗೆಈಮೇಳಖುಷಿಕೊಡುತ್ತದೆ. ಇಲ್ಲಿಸ್ಪರ್ಧೆಗಳನ್ನುಸಹಆಯೋಜನೆಮಾಡಲಾಗುತ್ತದೆ. ತಿನ್ನುವಮತ್ತುಅಡುಗೆಸ್ಪರ್ಧೆಗಳುನಡೆಯುತ್ತವೆ. ವಿಜೇತರಿಗೆವಿಶೇಷಬಹುಮಾಗಳುಸಹಇರುತ್ತವೆ. ಕೃಷಿಮೇಳವುರೈತರಿಗೆಸಹಕಾರಿಯಾಗಲಿದೆ. ನಾನಾತಳಿಯಬೆಳೆಗಳುಮತ್ತುಹಣ್ಣುಗಳಪ್ರದರ್ಶನ, ಮಾರಾಟಕ್ಕೆಅವಕಾಶಇರುತ್ತದೆ. ರೈತರಿಗೆಕೃಷಿಸಂಬಂಧಿತಸಲಹೆಗಳಿಗಾಗಿವಿಚಾರಣಾಸಂಕಿರಣಗಳನ್ನುಸಹಆಯೋಜನೆಮಾಡಲಾಗುತ್ತದೆ.

ಫಲಪುಷ್ಪ, ವಸ್ತುಪ್ರದರ್ಶನ:

ದಸರಾದಲ್ಲಿಫಲಪುಷ್ಪಮತ್ತುವಸ್ತುಪ್ರದರ್ಶನಗಳುಪ್ರಮುಖಆಕರ್ಷಣೆಯಾಗಿದೆ. ವಿವಿಧಬಗೆಯಪುಷ್ಪಗಳಿಂದನಾನಾಮಾದರಿಗಳನ್ನುರಚಿಸಿಪ್ರದರ್ಶಿಸಲಾಗುತ್ತದೆ. ಆಕರ್ಷಕಪುಷ್ಪಮಾದರಿಗಳುಜನರನ್ನುಸೆಳೆಯುವಂತಿರುತ್ತವೆ. ಅನೇಕರಿಗೆಇದುಸೆಲ್ಫಿಸ್ಪಾಟ್ಆಗುತ್ತದೆ. ಸರ್ಕಾರಗಳಪ್ರಮುಖಯೋಜನೆಗಳನ್ನು, ಕಾರ್ಯಸಾಧನೆಗಳನ್ನುವಸ್ತುಪ್ರದರ್ಶನದಮೂಲಕತಿಳಿಸಲಾಗುತ್ತದೆ. ನಾಡು-ದೇಶದಇತಿಹಾಸ, ಪ್ರವಾಸಿತಾಣಗಳಬಗ್ಗೆಅರಿವುಮೂಡಿಸುವಮಾದರಿಗಳುಇರುತ್ತವೆ.

ಗೊಂಬೆಪ್ರದರ್ಶನ

ಸ್ಥಳೀಯವಾಗಿ ‘ಗೊಂಬೆಹಬ್ಬ’ ಅಥವಾ ‘ಬೊಂಬೆಮನೆ’ ಎಂದುಕರೆಯಲ್ಪಡುವಮೈಸೂರುದಸರಾಗೊಂಬೆಪ್ರದರ್ಶನವುಶತಮಾನಗಳಷ್ಟುಹಳೆಯಸಂಪ್ರದಾಯವಾಗಿದೆ. ಇದರಲ್ಲಿನವರಾತ್ರಿಹಬ್ಬದಸಂದರ್ಭದಲ್ಲಿಮನೆಗಳುಮತ್ತುಸಾರ್ವಜನಿಕಸ್ಥಳಗಳಲ್ಲಿಸುಂದರವಾಗಿಹಾಗೂವ್ಯವಸ್ಥಿತವಾಗಿಜೋಡಿಸಲಾದಗೊಂಬೆಗಳುಮತ್ತುಮೂರ್ತಿಗಳನ್ನುಪ್ರದರ್ಶಿಸಲಾಗುತ್ತದೆ. ಈಪ್ರದರ್ಶನವುರಾಮಾಯಣದಂತಹಪೌರಾಣಿಕಮಹಾಕಾವ್ಯಗಳು, ದಸರಾಮೆರವಣಿಗೆಯದೃಶ್ಯಗಳು (ಜಂಬೂಸವಾರಿ), ನವದುರ್ಗೆಯರುಮತ್ತುಅಷ್ಟಲಕ್ಷ್ಮಿಯರಜೊತೆಗೆಸಮಕಾಲೀನಅಥವಾಸಾಮಾಜಿಕ, ಸಾಂಸ್ಕೃತಿಕವಿಷಯಗಳನ್ನುಹೆಚ್ಚಾಗಿಬಿಂಬಿಸುತ್ತವೆ.

ಮಕ್ಕಳ ದಸರಾ

ದಸರಾದಲ್ಲಿ ವಿಶೇಷ ಆಕರ್ಷಣೆ ಮಕ್ಕಳ ದಸರಾ ಆಗಿದೆ. ಮಕ್ಕಳ ದಸರಾದಲ್ಲಿ ವಿಶೇಷವಾಗಿ ವಿವಿಧ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ವಿಶೇಷ ಸಾಧನೆ ತೋರಿದ ಮಕ್ಕಳಿಂದ ಮಕ್ಕಳ ದಸರಾವನ್ನು ಉದ್ಘಾಟಿಸಲಾಗುತ್ತದೆ.
ಮೈಸೂರು ದಸರಾ ಕೇವಲ ಧಾರ್ಮಿಕ ಉತ್ಸವವಲ್ಲ. ಇದು ಕರ್ನಾಟಕದ ಸಾಂಸ್ಕೃತಿಕ ಪರಂಪರೆ, ಕಲೆ, ಸಂಗೀತ, ನೃತ್ಯ, ಜನಪದ ಸಂಪ್ರದಾಯಗಳು ಮತ್ತು ಐತಿಹಾಸಿಕ ನೆನಪುಗಳನ್ನು ಒಂದೆಡೆ ಸೇರಿಸುವ ಉತ್ಸವವಾಗಿದೆ.

ಗೋಷ್ಠಿಗಳು:

ಖ್ಯಾತವಿದ್ವಾಂಸರು, ಸಾಹಿತಿಗಳು, ಕವಿಗಳನೆಲೆವೀಡುಮೈಸೂರು. ಸಂಗೀತ-ಸಾಹಿತ್ಯಕ್ಷೇತ್ರಗಳಿಗೆಮೈಸೂರುತನ್ನದೇಆದಕೊಡುಗೆನೀಡಿದೆ. ಆದ್ದರಿಂದದಸರಾದಲ್ಲಿಕವಿಗೋಷ್ಠಿ, ವಿಚಾರಸಂಕಿರಣಗಳು, ಸಂಗೀತಕಚೇರಿಗಳನ್ನುಆಯೋಜಿಸಲಾಗುತ್ತದೆ. ದಸರಾಮತ್ತುಯುವಕವಿಗೋಷ್ಠಿಮೂಲಕಸಾಹಿತ್ಯಾಸಕ್ತರನ್ನುಸೆಳೆಯಲಾಗುತ್ತದೆ. ಓದುಗಪ್ರಿಯರಿಗಾಗಿಪುಸ್ತಕಮೇಳಕೂಡನಡೆಸಲಾಗುತ್ತದೆ. ಸಂಗೀತಪ್ರಿಯರಿಗಾಗಿಅರಮನೆಯಲ್ಲಿಸಂಗೀತಕಾರ್ಯಕ್ರಮಗಳುಜರುಗುತ್ತವೆ. ಖ್ಯಾತವಿದ್ವಾಂಸರು, ಕಲಾವಿದರುಸಂಗೀತಕಾರ್ಯಕ್ರಮಗಳನ್ನುನಡೆಸಿಕೊಡುತ್ತಾರೆ. ಕಲಾಸಕ್ತರಿಗಾಗಿಚಲಚಿತ್ರೋತ್ಸವ, ನಾಟಕಪ್ರದರ್ಶನಗಳುಸಹನಡೆಯುತ್ತವೆ.

ಪಂಜಿನಕವಾಯತು

ವಿಜಯದಶಮಿಯಂದುಜಂಬೂಸವಾರಿಮೆರವಣಿಗೆಬಳಿಕಸಂಜೆಮೈಸೂರಿನಬನ್ನಿಮಂಟಪಮೈದಾನದಲ್ಲಿನಡೆಯುವಅತ್ಯಂತಆಕರ್ಷಕಮತ್ತುರೋಮಾಂಚಕಅಂತಿಮಕಾರ್ಯಕ್ರಮಪಂಜಿನಕವಾಯತು. ಇದುಪೊಲೀಸ್ಪಡೆಗಳಕವಾಯತು, ಸಾಹಸಪ್ರದರ್ಶನಹಾಗೂಬಣ್ಣಬಣ್ಣದಪಟಪಟಿಸುವಪಂಜುಗಳಬೆಳಕಿನಸಂಭ್ರಮದೊಂದಿಗೆಕಣ್ಮನಸೆಳೆಯುತ್ತದೆ. ಅತ್ಯಾಕರ್ಷಕಅಶ್ವಾರೋಹಿದಳದಸಾಹಸಗಳು, ಮೈಜುಮ್ಮೆನಿಸುವಮೋಟಾರ್ಸೈಕಲ್ಸಾಹಸಪ್ರದರ್ಶನಗಳು (ಡೇರ್ಡೆವಿಲ್ಸ್ಟಂಟ್ಸ್), ಪೊಲೀಸ್ಬ್ಯಾಂಡ್ವಾದನಮತ್ತುಪಂಜುಗಳೊಂದಿಗೆಸಾಮೂಹಿಕಕವಾಯತುನಡೆಯುತ್ತದೆ. ರಾತ್ರಿಯವೇಳೆಆಕಾಶದಲ್ಲಿಮೂಡುವವರ್ಣರಂಜಿತಸುಂದರಸಿಡಿಮದ್ದುಪ್ರದರ್ಶನಹಾಗೂಲೇಸರ್/ಡ್ರೋನ್ಶೋಕೂಡಗಮನಸೆಳೆಯುತ್ತದೆ. ದಸರಾಗೆ ಅಂತಿಮ ಸ್ಪರ್ಶ ನೀಡುವ ಕಾರ್ಯಕ್ರಮ ಇದಾಗಿದೆ. ರಾಜರ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ಪರಂಪರೆಯು ದಸರಾ ಉತ್ಸವದ ಸಮಾಪ್ತಿಯನ್ನು ಸಾರುತ್ತದೆ.

ಅರಮನೆಯೊಳಗಿನ ಸಾಂಪ್ರದಾಯಿಕ ಆಚರಣೆಗಳು ಮೈಸೂರು ಒಡೆಯರ ಇತಿಹಾಸವನ್ನು ನೆನಪಿಸಿದರೆ, ಸಾರ್ವಜನಿಕ ದಸರಾ ಕಾರ್ಯಕ್ರಮಗಳು ಆ ಪರಂಪರೆಯನ್ನು ಜನಸಾಮಾನ್ಯರೊಂದಿಗೆ ಸಂಪರ್ಕಿಸುತ್ತವೆ.

ಸಮಾರೋಪ
ಮೈಸೂರು ದಸರಾ ಹಲವು ಶತಮಾನಗಳ ಇತಿಹಾಸ, ಧಾರ್ಮಿಕ ನಂಬಿಕೆ, ರಾಜಪರಂಪರೆ, ಕಲೆ, ಸಂಸ್ಕೃತಿ ಮತ್ತು ಜನಪಾಲ್ಗೊಳ್ಳುವಿಕೆಯ ಅಪೂರ್ವ ಸಂಗಮವಾಗಿದೆ. ವಿಜಯನಗರದ ಪರಂಪರೆಯಿಂದ ಮೈಸೂರು ಒಡೆಯರ ರಾಜವೈಭವದವರೆಗೆ ಮತ್ತು ಅಲ್ಲಿಂದ ಇಂದಿನ ನಾಡಹಬ್ಬದ ರೂಪದವರೆಗೆ ದಸರಾ ಹಲವು ಹಂತಗಳನ್ನು ದಾಟಿ ಬೆಳೆದಿದೆ.
ಬನ್ನಿ, ಈ ವರ್ಷದ ನಾಡಹಬ್ಬ ದಸರಾದಲ್ಲಿ ಎಲ್ಲರೂ ಪಾಲ್ಗೊಂಡು, ವೈವಿಧ್ಯಮ ಆಚರಣೆಗಳನ್ನು ಕಣ್ತುಂಬಿಕೊಳ್ಳೋಣ!

(ಡಾ. ಶಾಲಿನಿ ರಜನೀಶ್)
ಸರ್ಕಾರದ ಮುಖ್ಯ ಕಾರ್ಯದರ್ಶಿ

Comments

Leave a Comment

Prev Post ಅಕ್ಟೋಬರ್ 10-11ರಂದು ಕರ್ನಾಟಕ ಅಂಚೆ ವೃತ್ತದಿಂದ ಫಿಲಾಟೆಲಿ ಪಾಸ್‌ಪೋರ್ಟ್ ನೇರ ಮಾರಾಟ
Next Post ಸೇವಾ ಜ್ಯೋತಿ ಯಾತ್ರೆಯ ಸಮಾರೋಪದಲ್ಲಿ ಯಡಿಯೂರಪ್ಪ–ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ಶಕ್ತಿಪ್ರದರ್ಶನ

ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ

ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ: ಎಂ ಬಿ ಪಾಟೀಲ

ಇನ್ನೆರಡು ತಿಂಗಳಲ್ಲಿ ಕಳೆದೆರಡು ಸಾಲಿನ ಉದ್ಯೋಗಿನಿ‌ ಯೋಜನೆಯ ಸಹಾಯ ಧನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ತೇರದಾಳ ಶಾಸಕ ಸಿದ್ದು ಸವದಿ ಕೇಳಿದ ಪ್ರಶ್ನೆಗೆ ಸಚಿವರ ಉತ್ತರ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಲಸಿಕೆ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಅಕ್ಕಪಡೆ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News