ಅಕ್ಟೋಬರ್ 10-11ರಂದು ಕರ್ನಾಟಕ ಅಂಚೆ ವೃತ್ತದಿಂದ ಫಿಲಾಟೆಲಿ ಪಾಸ್‌ಪೋರ್ಟ್ ನೇರ ಮಾರಾಟ
ಅಕ್ಟೋಬರ್ 10-11ರಂದು ಕರ್ನಾಟಕ ಅಂಚೆ ವೃತ್ತದಿಂದ ಫಿಲಾಟೆಲಿ ಪಾಸ್‌ಪೋರ್ಟ್ ನೇರ ಮಾರಾಟ
ಬೆಂಗಳೂರು , ಅ.7-ಕರ್ನಾಟಕ ಅಂಚೆ ವೃತ್ತವು ಅಂಚೆ ಸಂಸ್ಕೃತಿಯ ವೈಭವವನ್ನು ಮತ್ತೊಮ್ಮೆ ಜನರ ಮುಂದೆ ತರುವ ಉದ್ದೇಶದಿಂದ ಫಿಲಾಟೆಲಿ ಪಾಸ್‌ಪೋರ್ಟ್ ಎಂಬ ವಿಶಿಷ್ಟ ಸಂಗ್ರಹಣಾ ವಸ್ತುವಿನ ನೇರ ಮಾರಾಟವನ್ನು ಅಕ್ಟೋಬರ್ 10 ಮತ್ತು 11ರಂದು ಆಯೋಜಿಸಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ರೂಪಿಸಲಾದ ಈ ಪಾಸ್‌ಪೋರ್ಟ್ ಕರ್ನಾಟಕದ ಪಾರಂಪರಿಕ ಅಂಚೆ ಕಚೇರಿಗಳ Permanent Pictorial Cancellations ಸಂಗ್ರಹಿಸಲು ಅಪರೂಪದ ಅವಕಾಶ ಒದಗಿಸುವುದರೊಂದಿಗೆ, ಸಂಗ್ರಾಹಕರಿಗೆ ಜೀವನಪರ್ಯಂತ ಉಳಿಸಿಕೊಳ್ಳಬಹುದಾದ ಸ್ಮರಣಿಕೆಯಾಗಿ ಪರಿಣಮಿಸಲಿದೆ.
ಕರ್ನಾಟಕ ಅಂಚೆ ವೃತ್ತವು ಫಿಲಾಟೆಲಿ ಪಾಸ್‌ಪೋರ್ಟ್ ಎಂಬ ವಿಶಿಷ್ಟ ಸಂಗ್ರಹಣಾ ವಸ್ತುವಿನ ನೇರ ಮಾರಾಟವನ್ನು ಅಕ್ಟೋಬರ್ 10 ಮತ್ತು 11ರಂದು ರಾಜ್ಯದ ಪ್ರಮುಖ ಅಂಚೆ ಕಚೇರಿಗಳಲ್ಲಿ ಆಯೋಜಿಸಿದೆ.
ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ರೂಪಿಸಲಾದ ಈ ಪಾಸ್‌ಪೋರ್ಟ್ ಕರ್ನಾಟಕದ ಪಾರಂಪರಿಕ ಅಂಚೆ ಕಚೇರಿಗಳ Permanent Pictorial Cancellations ಸಂಗ್ರಹಿಸಲು ಅಪರೂಪದ ಅವಕಾಶವನ್ನು ಒದಗಿಸುತ್ತದೆ ಎಂದು ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಸ್ವಾತಿ ಪಾಂಡೆ ಪತ್ರಿಕಾಗೋಷ್ಠಯಲ್ಲಿ ವಿವರಿಸಿದರು.
ಸಂಗ್ರಾಹಕರಿಗೆ ಇದು ಜೀವನಪರ್ಯಂತ ಉಳಿಸಿಕೊಳ್ಳಬಹುದಾದ ಸ್ಮರಣಿಕೆಯಾಗಿ ಪರಿಣಮಿಸಲಿದೆ. ಮಾರಾಟವು ಶನಿವಾರ ಮತ್ತು ಭಾನುವಾರ ನಡೆಯಲಿದ್ದು, ಪ್ರತಿ ಪಾಸ್‌ಪೋರ್ಟ್ ಬೆಲೆ ₹600 ನಿಗದಿಪಡಿಸಲಾಗಿದೆ. ಕೌಂಟರ್‌ಗಳಲ್ಲಿ ಸರತಿ ಸಾಲು ಮೂಲಕ ಟೋಕನ್‌ಗಳ ಆಧಾರದಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು.
ಆನ್‌ಲೈನ್ ಮಾರಾಟ ಅಥವಾ ಮುಂಗಡ ಕಾಯ್ದಿರಿಸುವ ವ್ಯವಸ್ಥೆ ಇರುವುದಿಲ್ಲ. ಒಟ್ಟು 3,000 ಪ್ರತಿಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ಬೆಂಗಳೂರು ಪ್ರಧಾನ ಅಂಚೆ ಕಚೇರಿಗೆ 3,500, ಮೈಸೂರು, ಮಂಗಳೂರು ಮತ್ತು ಬೆಳಗಾವಿ ಮುಖ್ಯ ಅಂಚೆ ಕಚೇರಿಗಳಿಗೆ ತಲಾ 1,500 ಪಾಸ್‌ಪೋರ್ಟ್‌ಗಳನ್ನು ಹಂಚಲಾಗಿದೆ.
ಈ ಬಿಡುಗಡೆಯನ್ನು ಸಾಂಸ್ಕೃತಿಕ ಸಂಭ್ರಮವಾಗಿ ಆಚರಿಸಲು ಬೆಂಗಳೂರು ಜಿಪಿಒದಲ್ಲಿ ವಿಶೇಷ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಸಂದರ್ಶಕರು ಡಿಜಿಟಲ್ ಡಿಟಾಕ್ಸ್ ವಲಯದಲ್ಲಿ ಸಾಂಪ್ರದಾಯಿಕ ಪತ್ರ ಬರವಣಿಗೆಯಲ್ಲಿ ಭಾಗವಹಿಸಬಹುದಾಗಿದೆ. ಉಚಿತ ಚಿತ್ರ ಅಂಚೆಕಾರ್ಡ್‌ಗಳು ಮತ್ತು ಬರವಣಿಗೆ ಸಾಮಗ್ರಿಗಳನ್ನು ಒದಗಿಸಲಾಗುತ್ತದೆ.
ಪ್ರತಿಯೊಂದು ಪಾಸ್‌ಪೋರ್ಟ್ ಖರೀದಿಗೆ ಅಂಚೆಪೆಟ್ಟಿಗೆಯ ವಿನ್ಯಾಸದ ಬುಕ್ ಮಾರ್ಕ್ ಹಾಗೂ ವಿಶೇಷ ಕಾಗದದ ಚೀಲ ಉಚಿತವಾಗಿ ನೀಡಲಾಗುತ್ತದೆ. ಚನ್ನಪಟ್ಟಣ ಆಟಿಕೆ ಶೈಲಿಯ ಪೆನ್‌ಸ್ಟ್ಯಾಂಡ್‌ಗಳು ಮತ್ತು ಅಂಚೆಪೆಟ್ಟಿಗೆ ವಿನ್ಯಾಸದ ಕೀಚೈನ್‌ಗಳು ಸಾರ್ವಜನಿಕರ ಖರೀದಿಗೆ ಲಭ್ಯವಿರುತ್ತವೆ. ಪಾಸ್‌ಪೋರ್ಟ್ ಪೂರ್ಣಗೊಳಿಸಿದ ಸಂಗ್ರಾಹಕರಿಗೆ ವಿಶೇಷ ಉಡುಗೊರೆ ಕಿಟ್ ನೀಡಿ ಸನ್ಮಾನಿಸಲಾಗುವುದು.
ಸಂದರ್ಶಕರ ಸುಗಮ ಸಂಚಾರಕ್ಕಾಗಿ ಪ್ರತ್ಯೇಕ ಬ್ಯಾರಿಕೇಡ್‌ಗಳ ಸರತಿ ಸಾಲುಗಳನ್ನು ನಿರ್ಮಿಸಲಾಗಿದ್ದು, ಪ್ರತಿ 15 ಮೀಟರ್ ಅಂತರದಲ್ಲಿ ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ನಗದು ಸ್ವೀಕಾರ ಕೌಂಟರ್‌ಗಳ ಜೊತೆಗೆ ತ್ವರಿತ ಯುಪಿಐ ಕ್ಯೂಆರ್ ಪಾವತಿ ವ್ಯವಸ್ಥೆ ಕಾರ್ಯನಿರ್ವಹಿಸಲಿವೆ.
ಅಕ್ಟೋಬರ್ 10 ಮತ್ತು 11ರಂದು ಬೆಂಗಳೂರು ಜಿಪಿಒ ಆವರಣದಲ್ಲಿ ವಾಹನ ನಿಲುಗಡೆ ಸೌಲಭ್ಯ ಇರುವುದಿಲ್ಲ. ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಸಲಹೆ ನೀಡಲಾಗಿದ್ದು, ಮೆಟ್ರೋ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ನಿಲ್ದಾಣ ಅಥವಾ ಕಬ್ಬನ್ ಪಾರ್ಕ್ ನಿಲ್ದಾಣ ತಲುಪಬಹುದು. ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಅವರು ಈ ಕಾರ್ಯಕ್ರಮವನ್ನು ರಾಜ್ಯದ ಅಂಚೆ ಸಂಸ್ಕೃತಿಯ ಸಂಭ್ರಮವಾಗಿ ರೂಪಿಸಿದ್ದು, ಸಂಗ್ರಾಹಕರಿಗೆ ಅಪರೂಪದ ಅನುಭವ ನೀಡಲಿದೆ ಎಂದು ತಿಳಿಸಿದ್ದಾರೆ.






Comments
Leave a Comment