ಭೈರವೈಕ್ಯ ಬಾಲಗಂಗಾಧರನಾಥ ಮಹಾಸ್ವಾಮಿಗಳ 14ನೇ ಪುಣ್ಯಸಂಸ್ಮರಣೆ – ನೂತನ ಮುಖ್ಯಮಂತ್ರಿಗಳು ಹಾಗೂ ಸಚಿವರಿಗೆ ಭವ್ಯ ಸನ್ಮಾನ ಸಮಾರಂಭ"
ಭೈರವೈಕ್ಯ ಬಾಲಗಂಗಾಧರನಾಥ ಮಹಾಸ್ವಾಮಿಗಳ 14ನೇ ಪುಣ್ಯಸಂಸ್ಮರಣೆ – ನೂತನ ಮುಖ್ಯಮಂತ್ರಿಗಳು ಹಾಗೂ ಸಚಿವರಿಗೆ ಭವ್ಯ ಸನ್ಮಾನ ಸಮಾರಂಭ"
ಬೆಂಗಳೂರು, ಸೆ.10 - ಆದಿಚುಂಚನಗಿರಿ ಮಠದ ಪರಮಪೂಜ್ಯ ಭೈರವೈಕ್ಯ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳ 14ನೇ ವರ್ಷದ ಪುಣ್ಯಸಂಸ್ಮರಣೆ ಕಾರ್ಯಕ್ರಮವನ್ನು ಭಕ್ತಿ-ಭಾವಪೂರ್ಣವಾಗಿ ಹಮ್ಮಿಕೊಳ್ಳಲಾಗಿದೆ. ನಾಡಿನ ಶ್ರೇಯೋಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಅರ್ಪಿಸಿದ ಮಹಾಸ್ವಾಮಿಗಳ ಸ್ಮರಣಾರ್ಥವಾಗಿ, ರಾಜ್ಯದ ನೂತನ ಮುಖ್ಯಮಂತ್ರಿಗಳು ಹಾಗೂ ಸಚಿವರಿಗೆ ವಿಶೇಷ ಅಭಿನಂದನೆ ಮತ್ತು ಸನ್ಮಾನ ಸಮಾರಂಭವನ್ನು 'ಮಾನ್ಯ ಮುಖ್ಯಮಂತ್ರಿಗಳ ಅಭಿನಂದನಾ ಸಮಿತಿ' ಆಯೋಜಿಸಿದೆ.
ಈ ಬೃಹತ್ ಸಮಾರಂಭವು ಸೆಪ್ಟೆಂಬರ್ 20, 2025 ಭಾನುವಾರದಂದು ಬೆಂಗಳೂರು ನಗರದ ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ವಿಶೇಷವಾಗಿ, ಐತಿಹಾಸಿಕ "ಗಂಗ ರಾಜವಂಶದ ವೇದಿಕೆ"ಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ನಾಡಿನ ಪರಂಪರೆ ಮತ್ತು ಸಮುದಾಯದ ಒಗ್ಗಟ್ಟನ್ನು ಸಾರುವ ಮಹತ್ವದ ವೇದಿಕೆಯಾಗಲಿದೆ.
ಪರಮಪೂಜ್ಯ ಶ್ರೀಗಳ ದಿವ್ಯ ಆಶೀರ್ವಾದದೊಂದಿಗೆ ನಡೆಯುತ್ತಿರುವ ಈ ಅಭಿನಂದನಾ ಸಮಾರಂಭವು ಸಮುದಾಯದ ಸಂಘಟನೆ ಹಾಗೂ ಭವಿಷ್ಯದ ಸಮಾಜಮುಖಿ ಕಾರ್ಯಗಳಿಗೆ ದಿಕ್ಕೂಚಿಯಾಗಲಿದೆ. ನೂತನ ಸರ್ಕಾರವನ್ನು ಗೌರವಿಸುವುದು ಹಾಗೂ ಮಹಾಸ್ವಾಮಿಗಳ ಉದಾತ್ತ ಆದರ್ಶಗಳನ್ನು ಸ್ಮರಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಸಮಿತಿಯ ಪರವಾಗಿ, ಸಮುದಾಯದ ಹಿರಿಯರು, ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖಂಡರು, ಯುವಜನರು ಹಾಗೂ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕಳಕಳಿಯಿಂದ ವಿನಂತಿಸಲಾಗಿದೆ. ಮಾಧ್ಯಮ ಮಿತ್ರರು ಈ ಮಾಹಿತಿಯನ್ನು ತಮ್ಮ ದಿನಪತ್ರಿಕೆಗಳು ಹಾಗೂ ವಾಹಿನಿಗಳ ಮೂಲಕ ನಾಡಿನಾದ್ಯಂತ ತಲುಪಿಸಲು ಸಹಕರಿಸಬೇಕೆಂದು ಸಮಿತಿಯು ಮನವಿ ಮಾಡಿದೆ.
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದವರು ಕೆ.ಟಿ. ಚಂದ್ರು ನಟರಾಜ್ ಗೌಡ, ಜಯಶ್ರೀ ಗೌಡ, ವಿಶ್ವನಾಥ್ ಎನ್. ಗೌಡ, ವಿಜಯ್ ಕುಮಾರ್, ವಿನಯ್ ಕುಮಾರ್ ಹಾಗೂ ಪೂಜಾರಿ ರಘು ದೊಡ್ಡರಿ.






Comments
Leave a Comment