PRABHAVAA.COM

ಮುಖ್ಯಮಂತ್ರಿಗಳೇ ನ್ಯಾಯಯುತ ಹೋರಾಟ ಹತ್ತಿಕ್ಕಬೇಡಿ: ಬಿ.ವೈ.ವಿಜಯೇಂದ್ರ

Ballari:

Font size:

ಮುಖ್ಯಮಂತ್ರಿಗಳೇ ನ್ಯಾಯಯುತ ಹೋರಾಟ ಹತ್ತಿಕ್ಕಬೇಡಿ: ಬಿ.ವೈ.ವಿಜಯೇಂದ್ರ

ಮುಖ್ಯಮಂತ್ರಿಗಳೇ ನ್ಯಾಯಯುತ ಹೋರಾಟ ಹತ್ತಿಕ್ಕಬೇಡಿ: ಬಿ.ವೈ.ವಿಜಯೇಂದ್ರ

ಕುಡತಿನಿ: ಪ್ರಜಾಪ್ರಭುತ್ವದಲ್ಲಿ ಜನಪರವಾದ ಯಾವುದೇ ರೀತಿ ಹೋರಾಟಗಳನ್ನು ಹತ್ತಿಕ್ಕಲು ಸರ್ಕಾರ ಇಲ್ಲವೇ ಮುಖ್ಯಮಂತ್ರಿಗಳು ಮುಂದಾಗಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹೇಳಿದ್ದಾರೆ.
ಬಳ್ಳಾರಿ ಚಲೋ ಪಾದಯಾತ್ರೆಯ ಸಮಾರೋಪಕ್ಕೆ ಬಳ್ಳಾರಿ ಮುನ್ಸಿಪಲ್ ಮೈದಾನದಲ್ಲಿ ಮೊದಲಿಗೆ ಅನುಮತಿ ನಿರಾಕರಿಸಿದ್ದನ್ನು ಖಂಡಿಸಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಈಗ ನಮ್ಮ ಹೋರಾಟಕ್ಕೆ ಮಣಿದ ಸರ್ಕಾರ ಸಮಾರೋಪ ಸಮಾರಂಭಕ್ಕೆ ಅನುಮತಿ ನೀಡಿದೆ. ನಮ್ಮದು ನ್ಯಾಯ ಸಮ್ಮತ ಹೋರಾಟ. ಯಾವುದೇ ಗಲಾಟೆ, ಗೊಂದಲ ಇಲ್ಲ. ಶಾಂತಿಯುತವಾಗಿ ಮಾಡುವ ಸಮಾರಂಭಕ್ಕೂ ವಿರೋಧ ಮಾಡುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದರು.
ಜಿಲ್ಲಾಧಿಕಾರಿಗಳಿಗೆ ಒತ್ತಡವಿತ್ತು...
ಇದೇ 10ಕ್ಕೆ ಮುನ್ಸಿಪಲ್ ಮೈದಾನದಲ್ಲಿ ಬೃಹತ್ ಸಮಾವೇಶ ಮಾಡಲು ಮನವಿ ಮಾಡಿದ್ದೇವು. ಆದರೆ ಜಿಲ್ಲಾಧಿಕಾರಿ ಅವಕಾಶ ನೀಡಿರಲಿಲ್ಲ. ಅನುಮತಿ ನೀಡದಂತೆ ಅವರ ಮೇಲೆ ಸರ್ಕಾರದ ಒತ್ತಡವಿತ್ತು. ಸಮಾವೇಶವನ್ನು ಎಲ್ಲಾದರೂ ಮಾಡಿಕೊಳ್ಳಲಿ ಎಂಬುದು ಸರ್ಕಾರದ ಧೋರಣೆಯಾಗಿತ್ತು. ಇಂತಹದ್ದನ್ನು ಖಂಡಿಸಿ ನಾವು ಹೋರಾಟ ಮಾಡಲು ಮುಂದಾಗಿದ್ದೆವು. ಈಗ ನಮ್ಮ ಒತ್ತಡಕ್ಕೆ ಮಣಿದು ಅನುಮತಿ ನೀಡಿದ್ದಾರೆ ಎಂದು ಹೇಳಿದರು.
ಜನಪರವಾದ ಹೋರಾಟಕ್ಕೆ ಸರ್ಕಾರ ಯಾವುದೇ ಷರತ್ತು ಹಾಕುವಂತಿಲ್ಲ. ಬೆಂಗಳೂರಿನಲ್ಲಾದರೆ ಹೈಕೋರ್ಟ್ ಮಾರ್ಗಸೂಚಿ ಇದೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆಗೆ ಯಾವುದಾದರೂ ಷರತ್ತು ಹಾಕಿದ್ದರೇ ಎಂದು ಪ್ರಶ್ನಿಸಿದರು. ಭ್ರಮೆಯಲ್ಲಿರುವ ಈ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಅದನ್ನೆಲ್ಲ ಬಿಡಬೇಕು ಎಂದರು.

ಉಸ್ತುವಾರಿ ಸಚಿವರು ಕ್ಷಮೆ ಯಾಚಿಸಲಿ...
ದಾವಣಗೆರೆ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಹರಿಹರ ಶಾಸಕ ಬಿ.ಪಿ ಹರೀಶ್ ಅವರ ಬಗ್ಗೆ ಕೆಟ್ಟ ಕೆಟ್ಟ ಪದ ಬಳಸಿ ಮಾತನಾಡಿದ್ದಾರೆ. ದೊಡ್ಡ ಕುಟುಂಬದ ಹಿನ್ನೆಲೆಯ ವ್ಯಕ್ತಿಯೊಬ್ಬರು ಶಾಸಕರ ಬಗ್ಗೆ ಈ ರೀತಿ ಅಸಂಬದ್ಧವಾಗಿ ಮಾತನಾಡುವುದು ಕೇವಲ ಹರೀಶ್ ಅವರಿಗೆ ಮಾಡಿದ ಅಪಮಾನ ಅಲ್ಲ. ಇಡೀ ಕ್ಷೇತ್ರದ ಕ್ಷೇತ್ರದ ಜನರಿಗೆ ಮಾಡಿದ ಅವಮಾನ. ತಕ್ಷಣ ಸಚಿವ ಮಲ್ಲಿಕಾರ್ಜುನ್ ಅವರು ಬಹಿರಂಗವಾಗಿ ಶಾಸಕರು ಮತ್ತು ಕ್ಷೇತ್ರದ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ತುಚ್ಛ ಮಾತು ಬೇಡ..
ಮಂತ್ರಿ ಇದ್ದೇನೆ ಎಂದು ಅಧಿಕಾರದ ಮದದಲ್ಲಿ ಈ ರೀತಿ ಚುನಾಯಿತ ಶಾಸಕರ ಬಗ್ಗೆ ಅವಾಚ್ಯವಾಗಿ ಮಾತನಾಡಿದರೆ ನೀವು ಎಂತಹವರು ಎಂದು ಜನ ತಿಳಿಯುತ್ತಾರೆ. ಇಂತಹ ಕೆಟ್ಟ ಸ್ಥಿತಿಗೆ ರಾಜ್ಯದ ರಾಜಕಾರಣ ಇಳಿದಿರಲಿಲ್ಲ. ಇದೇ ವರಸೆ ಮುಂದುವರಿದರೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ. ಈ ರೀತಿ ಮಾತನಾಡುವುದು ಸಚಿವರ ಸಂಸ್ಕøತಿ ತೋರಿಸುತ್ತದೆ. ರಾಜಕಾರಣದಲ್ಲಿ ಟೀಕೆ ಮಾಡುವುದು ಸಹಜ. ಆದರೆ ಶಾಸಕರ ಬಗ್ಗೆ ತುಚ್ಛವಾಗಿ ಮಾತನಾಡುವುದು ಸರಿಯಲ್ಲ ಎಂದರು.

Comments

Leave a Comment

Prev Post ಫ್ರಾನ್ಸ್‌ ಪ್ರವಾಸದ ಎರಡನೇ ದಿನ ಥೇಲ್ಸ್, ಸೋಮ್ಫಿ, ಸೆವೆನ್ಸಿಯಾ ಕಂಪನಿಗಳ ಜತೆ‌ ಮಾತುಕತೆ
Next Post ನಗರ ಪ್ರದೇಶದ ಶಾಲಾ ವಿದ್ಯಾರ್ಥಿಗಳಿಗೆ ಗ್ರಾಮಾನುಭವ ಕಾರ್ಯಕ್ರಮಕ್ಕೆ ಸರ್ಕಾರದ ಅನುಮೋದನೆ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ನ್ಯಾ.‌ನಾಗಮೋಹನ್ ದಾಸ್ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ:ಬಸವರಾಜ ಬೊಮ್ಮಾಯಿ

ಸಿಎಂ ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದಿದ್ದಾರೆ: ಬಸವರಾಜ ಬೊಮ್ಮಾಯಿ

ಒಡಿಶಾ ಶಾಸಕರನ್ನು ನಾನು ಕರೆಸಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಪಕ್ಷ ಹೇಳಿದ್ದನ್ನು ಮಾಡುತ್ತೇನೆ ನನಗೆ ಇದು ಹೊಸತಲ್ಲ, ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದಿಂದಲೂ ಇದನ್ನು ಮಾಡುತ್ತಿರುವೆ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News