PRABHAVAA.COM

ವಿಪ್ರೋ- ಕವಾಸಕಿ ಕಂಪನಿಯಿಂದ ₹1,000 ಕೋಟಿ ಹೂಡಿಕೆ: ಎಂ‌ ಬಿ ಪಾಟೀಲ

Bengaluru Urban:

Font size:

ಹಾರೋಹಳ್ಳಿಯಲ್ಲಿ ನೂತನ ಹೈಡ್ರಾಲಿಕ್ ಪಂಪ್ ಉತ್ಪಾದನಾ ಘಟಕ ಸ್ಥಾಪನೆ

ವಿಪ್ರೋ- ಕವಾಸಕಿ ಕಂಪನಿಯಿಂದ ₹1,000 ಕೋಟಿ ಹೂಡಿಕೆ: ಎಂ‌ ಬಿ ಪಾಟೀಲ

ಹಾರೋಹಳ್ಳಿಯಲ್ಲಿ ನೂತನ ಹೈಡ್ರಾಲಿಕ್ ಪಂಪ್ ಉತ್ಪಾದನಾ ಘಟಕ ಸ್ಥಾಪನೆ

ಬೆಂಗಳೂರು: ಹೈಡ್ರಾಲಿಕ್ ಪಂಪ್ ತಯಾರಿಕೆಗೆ ಹೆಸರಾಗಿರುವ ವಿಪ್ರೋ‌ - ಕವಾಸಕಿ ಪ್ರಿಸಿಷನ್ ಮಷಿನರಿ ಕಂಪನಿಯು ಹಾರೋಹಳ್ಳಿಯ 5ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ತನ್ನ ಉತ್ಪಾದನಾ ಘಟಕ ಆರಂಭಿಸಲು ಮುಂದೆ ಬಂದಿದೆ. ಇದಕ್ಕಾಗಿ ಕಂಪನಿಯು 1,000 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು, ಇದರಿಂದ 1,200 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ತಮ್ಮನ್ನು ಇಲ್ಲಿನ‌ ಖನಿಜ ಭವನದಲ್ಲಿ ಭೇಟಿಯಾದ ಕಂಪನಿಯ ಸಿಇಒ ಮಿನೋರು ಹತ್ಸುದ ನೇತೃತ್ವದ ಉನ್ನತ ಮಟ್ಟದ ನಿಯೋಗದ ಜತೆ ಅವರು ಮಾತುಕತೆ ನಡೆಸಿದರು.

ಈ ಬಗ್ಗೆ ಮಾತನಾಡಿದ ಪಾಟೀಲ, ಜಪಾನ್ ಮೂಲದ ಕವಾಸಕಿ ಕಂಪನಿ, ವಿಪ್ರೊ ಜತೆ ಸೇರಿ 30 ಎಕರೆ ಭೂಮಿ‌ ಕೇಳಿವೆ.‌ ಇದನ್ನು ನಾವು ತ್ವರಿತವಾಗಿ ಒದಗಿಸುತ್ತೇವೆ. ನೂತನ ಉತ್ಪಾದನಾ ಸ್ಥಾವರವು ಇನ್ನು ಒಂದು ವರ್ಷದಲ್ಲಿ ಕಾರ್ಯಾರಂಭ ಮಾಡಲಿದೆ ಎಂದಿದ್ದಾರೆ.

ಕಂಪನಿಯು ಈಗ ಕುಂಬಳಗೋಡಿನಲ್ಲಿ ಬಾಡಿಗೆ ಆಧಾರದಲ್ಲಿ ಒಂದು ತಯಾರಿಕಾ ಘಟಕ ಹೊಂದಿದ್ದು, ಅಲ್ಲಿ ವರ್ಷಕ್ಕೆ 80 ಸಾವಿರ ಹೈಡ್ರಾಲಿಕ್ ಪಂಪ್ ತಯಾರಿಸಲಾಗುತ್ತಿದೆ. ಉದ್ದೇಶಿತ ಘಟಕವು ಕಂಪನಿಯ ತಯಾರಿಕಾ ಚಟುವಟಿಕೆಯ ವಿಸ್ತರಣೆಯಾಗಿದೆ. ಇಲ್ಲಿ ವರ್ಷಕ್ಕೆ 2 ಲಕ್ಷಕ್ಕೂ ಹೆಚ್ಚು ಹೈಡ್ರಾಲಿಕ್ ಪಂಪ್‌ಗಳನ್ನು ತಯಾರಿಸಿ, ಮಾರುಕಟ್ಟೆಗೆ ಪೂರೈಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಿಪ್ರೋ ಕವಾಸಕಿ ಕಂಪನಿಯ ಈ ಯೋಜನೆ ಆಕರ್ಷಕವಾಗಿದೆ. ಹೀಗಾಗಿ ಕಂಪನಿಗೆ ಈಗಿನಿಂದಲೇ ಅಗತ್ಯ ಕೆಲಸಗಳನ್ನು ಆರಂಭಿಸುವಂತೆ ಕೋರಲಾಗಿದೆ. ಈ ಹೂಡಿಕೆ ಯೋಜನೆಗೆ ಮುಂದಿನ ಸಭೆಯಲ್ಲಿ ಅಂತಿಮ ಅನುಮೋದನೆ ಕೊಡಲಾಗುವುದು ಎಂದು ಪಾಟೀಲ ಹೇಳಿದ್ದಾರೆ.

ಈ ಹೈಡ್ರಾಲಿಕ್ಸ್ ಪಂಪ್ ಗಳನ್ನು ಜೆಸಿಬಿ ಸೇರಿದಂತೆ ಇತರ ಭೂ ಸಂಬಂಧಿ ಕಾಮಗಾರಿಗಳನ್ನು ನಡೆಸಲು ಉಪಯೋಗಿಸುವ ಯಂತ್ರಗಳಲ್ಲಿ ಬಳಸಲಾಗುತ್ತದೆ.

ಮಾತುಕತೆಯಲ್ಲಿ ಕಂಪನಿಯ ಹಿರಿಯ ಪ್ರಧಾನ ವ್ಯವಸ್ಥಾಪಕ ಆರ್. ರಾಜೇಶ್, ಸಿಎಫ್ಒ ಉದಯ ರಾಘವನ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಉಪಸ್ಥಿತರಿದ್ದರು.

Comments

Leave a Comment

Prev Post 5 ಲಕ್ಷದವರೆಗೆ ಕೃಷಿ ಸಾಲ ಮನ್ನಾ ಮಾಡಲು ಬಿ.ವೈ.ವಿಜಯೇಂದ್ರ ಆಗ್ರಹ
Next Post "ಸಂಧ್ಯಾ ಕಿರಣ": ನಿವೃತ್ತ ಪಿಂಚಣಿದಾರರಿಗೆ ನಗದುರಹಿತ ಆರೋಗ್ಯ ಯೋಜನೆ ಜಾರಿಗೆ ಆದೇಶ

ಸವಾಲು ಎದುರಿಸಲು ಆಧುನಿಕ ಜ್ಞಾನಸೃಷ್ಟಿ ಅಗತ್ಯ: ಎಂ ಬಿ ಪಾಟೀಲ

ಅಗಸ್ತ್ಯ ಇಂಟರ್ನ್ಯಾಷನಲ್ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗಿ

ಮೇ ತಿಂಗಳಲ್ಲಿ ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026 ಆಯೋಜನೆ

ಮೇ ತಿಂಗಳಲ್ಲಿ ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026 ಆಯೋಜನೆ

ಕಲಬುರಗಿಯಲ್ಲಿ ಪಿಎಂ ಮಿತ್ರ ಜವಳಿ ಪಾರ್ಕ್ ಯೋಜನೆ

ಕೆಐಎಡಿಬಿ ಮೂಲಕ ಮೊದಲ ಹಂತ ಅಭಿವೃದ್ಧಿಗೆ ತೀರ್ಮಾನ: ಎಂ ಬಿ ಪಾಟೀಲ

ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಹೆಚ್‌ಎಂಟಿ ಉನ್ನತಿಗೆ ಕ್ರಮ ಎಂದ ಹೆಚ್‌ʼಡಿಕೆ

ಇಡೀ ದಿನ ಕಾರ್ಖಾನೆಯಲ್ಲೇ ಸಂಚರಿಸಿದ ಸಚಿವರು; ಆಡಳಿತ ವರ್ಗ, ಕಾರ್ಮಿಕರು, ಇನ್ನಿತರ ಪ್ರಮುಖರೊಂದಿಗೆ ವಿಸ್ತೃತ ಸಮಾಲೋಚನೆ

7,506 ಕೋಟಿ ರೂ. ಹೂಡಿಕೆಯ 55 ಯೋಜನೆಗಳಿಗೆ ಅಸ್ತು: ಎಂ ಬಿ ಪಾಟೀಲ

7,506 ಕೋಟಿ ರೂ. ಹೂಡಿಕೆಯ 55 ಯೋಜನೆಗಳಿಗೆ ಅಸ್ತು: ಎಂ ಬಿ ಪಾಟೀಲ

ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆ: ರಾಜ್ಯದ ನೇತೃತ್ವದಲ್ಲಿ ಪಾಲುದಾರರ ಕಾರ್ಯಾಗಾರ

50ಕ್ಕೂ ಹೆಚ್ಚು ಉನ್ನತ ಪ್ರತಿನಿಧಿಗಳು ಭಾಗಿ, ಕರ್ನಾಟಕಕ್ಕೆ ನೀತಿ ನಿರೂಪಣೆಯ ಅವಕಾಶ

Read all News