PRABHAVAA.COM

ಜಾಗತಿಕ ಹೂಡಿಕೆ ಇಲಾಖೆ ಸ್ಥಾಪನೆ, ಮೂಲಸೌಕರ್ಯ ಅಭಿವೃದ್ಧಿಗೆ ಬೃಹತ್ ಯೋಜನೆಗಳು, ರೈತರ ಸಂಕಷ್ಟ ಪರಿಹಾರಕ್ಕೆ ವಿಶೇಷ ಅಧಿವೇಶನ

Bengaluru Urban:

Font size:

ಜಾಗತಿಕ ಹೂಡಿಕೆ ಇಲಾಖೆ ಸ್ಥಾಪನೆ, ಮೂಲಸೌಕರ್ಯ ಅಭಿವೃದ್ಧಿಗೆ ಬೃಹತ್ ಯೋಜನೆಗಳು, ರೈತರ ಸಂಕಷ್ಟ ಪರಿಹಾರಕ್ಕೆ ವಿಶೇಷ ಅಧಿವೇಶನ

ಸಚಿವ ಸಂಪುಟದ ಮಹತ್ವದ ನಿರ್ಧಾರಗಳು : ಜಾಗತಿಕ ಹೂಡಿಕೆ ಇಲಾಖೆ ಸ್ಥಾಪನೆ, ಮೂಲಸೌಕರ್ಯ ಅಭಿವೃದ್ಧಿಗೆ ಬೃಹತ್ ಯೋಜನೆಗಳು, ರೈತರ ಸಂಕಷ್ಟ ಪರಿಹಾರಕ್ಕೆ ವಿಶೇಷ ಅಧಿವೇಶನ

ಬೆಂಗಳೂರು , ಸೆ. ೩-ಕಸ್ತೂರಿ ರಂಗನ್ ವರದಿ ಮತ್ತೊಮ್ಮೆ ಚರ್ಚೆಗೆ ಬಂದಿದ್ದು, ಈಗಾಗಲೇ ನಾದು ಬಾರಿ ಅದನ್ನು ತಿರಸ್ಕರಿಲಾಗಿದೆ. ಈ ಬಗ್ಗೆ ಜನ ಸಮುದಾಯಕ್ಕೆ ತಿಳಿಸಲು ಕಸ್ತೂರಿ ರಂಗನ್ ವರದಿಯ ಕುರಿತು ವಿಶೇಷ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ಉಪ ಮುಖ್ಯಮಂತ್ರಿಗಳು, ಕಂದಾಯ ಹಾಗೂ ಕ್ರೀಡಾ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳನ್ನು ಮಾಧ್ಯಮದವರಿಗೆ ವಿವರಿಸಿದರು.

ಜಾಗತಿಕ ಹೂಡಿಕೆ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆ ಸ್ಥಾಪನೆ :

ಸಚಿವ ಸಂಪುಟ ಸಭೆಯಲ್ಲಿ ಹೊಸ ತೀರ್ಮಾನವನ್ನು ಮಾಡಲಾಗಿದೆ. ರಾಜ್ಯದಲ್ಲಿ ಜಾಗತಿಕ ಹೂಡಿಕೆ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆಯನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ. ಈ ಇಲಾಖೆಯ ಹೆಸರು ಕನ್ನಡದಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯೂ ಇದೆ.

ಈ ಇಲಾಖೆಯು ಅನಿವಾಸಿ ಭಾರತೀಯರ ಕಲ್ಯಾಣ ಮತ್ತು ವ್ಯವಹಾರಗಳಿಗೆ ನೆರವಾಗಲಿದೆ. ಇದರಲ್ಲಿ ಸಿಂಗಲ್ ವಿಂಡೋ ಸಿಸ್ಟಮ್ ಇದೆ. ಇಲಾಖೆಯಿಂದ ಅನಿವಾಸಿ ಭಾರತೀಯರಿಗೆ ಎನ್.ಐ.ಆರ್.ಕೆ ಕಾರ್ಡ್ ಗಳನ್ನು ವಿತರಿಸಲಾಗುತ್ತದೆ. ವಿದೇಶಾಂಗ ಉದ್ಯೋಗಾವಕಾಶಗಳಿಗೆ ಇಲಾಖೆ ನೆರವಾಗುವುದು. ವಿದೇಶಿ ನಿಯೋಗಗಳನ್ನು ಇಲಾಖೆ ವತಿಯಿಂದ ಸತ್ಕರಿಸಲಾಗುವುದು.

ರಾಜ್ಯದಲ್ಲಿ ಪಾಲುದಾರಿಕೆ, ಸಹಯೋಗ, ಹೂಡಿಕೆಯ ನಿರೀಕ್ಷೆಯಲ್ಲಿ ಬರುವಂತಹ ವಿದೇಶಿ ಹೂಡಿಕೆದಾರರನ್ನು ಇಲಾಖೆಯ ಮುಖ್ಯಸ್ಥರು ಸ್ವಾಗತಿಸಿ ಮುಖ್ಯಮಂತ್ರಿಗಳ ಸಂಪರ್ಕಕ್ಕೆ ತರುತ್ತಾರೆ. ಹೂಡಿಕೆದಾರರ ಜೊತೆಗೆ ಮುಖ್ಯಮಂತ್ರಿಗಳೇ ನೇರವಾಗಿ ಚರ್ಚೆ ನಡೆಸಿ ಪ್ರಸ್ತಾವನೆಗಳನ್ನು ಸ್ವೀಕರಿಸುತ್ತಾರೆ. ನಂತರ ಹೂಡಿಕೆ ಪ್ರಸ್ತಾವನೆಯನ್ನು ಸಮನ್ವಯ ಸಾಧಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿ ಕೊಡುವಲ್ಲಿ ಇಲಾಖೆಯು ಮಹತ್ವದ ಪಾತ್ರ ವಹಿಸಲಿದೆ.

ಇಲಾಖೆಯ ಮತ್ತೊಂದು ಪ್ರಮುಖ ಉದ್ದೇಶವೇನೆಂದರೆ ವಿದೇಶಿ ಹೂಡಿಕೆದಾರರು ಪ್ರಸ್ತಾವನೆ ಮತ್ತು ಹೂಡಿಕೆ ಒಪ್ಪಂದಕ್ಕಾಗಿ ಕಾಯುತ್ತಾರೆ. ವಿದೇಶಿ ಹೂಡಿಕೆದಾರರನ್ನು ಯಾರೂ ಕೇಳುವವರಿಲ್ಲ, ಅವರು ನೊಂದು ಬೇರೆ ರಾಜ್ಯಕ್ಕೆ ಹೋಗಿ ಹೂಡಿಕೆ ಮಾಡುತ್ತಾರೆ ಎಂಬ ವಿಚಾರಗಳನ್ನು ಈ ಹಿಂದೆಯೂ ನಾವು ಕೇಳಿದ್ದೇವೆ. ಹೀಗಾಗಿ ಆಡಳಿತಾತ್ಮಕ ಸ್ಪಂದನೆಯನ್ನು ಸರಿಪಡಿಸಲು ಸರ್ಕಾರ ಈ ತೀರ್ಮಾನವನ್ನು ತೆಗೆದುಕೊಂಡಿದೆ.

ಜಾಗತಿಕ ಸಂಶೋಧನೆ, ಅಭಿವೃದ್ಧಿ, ನಾವೀನ್ಯತೆ, ಜಾಗತಿಕ ಸಾಂಸ್ಕೃತಿಕ ವಿನಿಮಯ, ಮೃದು ಶಕ್ತಿ, ಜಾಗತಿಕ ಕ್ರೀಡಾತಾಂತ್ರಿಕ ಮತ್ತು ಸಹಯೋಗ ಹಾಗೂ ಜಾಗತಿಕ ಸಹೋದರಿ ನಗರ, ಜಾಗತಿಕ ಆರೋಗ್ಯ ವೈದ್ಯಕೀಯ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಸಕಲ ಸೌಲಭ್ಯಗಳನ್ನು ಕಲ್ಪಿಸಲು ಮಂಡಳಿಯನ್ನು ರಚಿಸಲಾಗುವುದು. ಆ ಮಂಡಳಿಗೆ ಮುಖ್ಯಮಂತ್ರಿಗಳು ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳು ಉಪಾಧ್ಯಕ್ಷರಾಗಿರುತ್ತಾರೆ. ಕೈಗಾರಿಕೆ, ಕೃಷಿ, ತೋಟಗಾರಿಕೆ, ಐಟಿ ಬಿಟಿ, ನಗರಾಭಿವೃದ್ಧಿ, ಬೆಂಗಳೂರು ಅಭಿವೃದ್ಧಿ, ಉನ್ನತ ಶಿಕ್ಷಣ, ಇಂಧನ, ಕ್ರೀಡೆ, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ಸಚಿವರುಗಳು ಮಂಡಳಿಯ ಸದಸ್ಯರಾಗಿರುತ್ತಾರೆ.

ಮದ್ದೂರಿನಲ್ಲಿ 137 ಕೋಟಿ ಮೊತ್ತದ ಕಾಮಗಾರಿಗೆ ಒಪ್ಪಿಗೆ: ಮದ್ದೂರಿನಲ್ಲಿ ರಸ್ತೆ ಅಗಲೀಕರಣ ಕಾಮಗಾರಿ

ನಡೆಸಲು 137.92 ಕೋಟಿ ರೂಪಾಯಿಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. 51.3 ಕೋಟಿ ರೂಪಾಯಿಗಳು ರಸ್ತೆ ಕಾಮಗಾರಿಗಳಿಗೆ ಮತ್ತು 86 ಕೋಟಿ ರೂಪಾಯಿಗಳು ಭೂ ಸ್ವಾಧೀನಕ್ಕಾಗಿ. ಒಟ್ಟಾರೆ 137 ಕೋಟಿ ರೂಪಾಯಿಗಳ ಕಾಮಗಾರಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಆದರೆ, ಈ ಅನುಮೋದಿತ ಮೊತ್ತವನ್ನು ಪುನರ್‌ ಪರಿಶೀಲಿಸಲು ತಾಂತ್ರಿಕ ಸಮಿತಿಗೆ ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ. ಬೆಳಗಾವಿಯ ಕಾಗವಾಡ ತಾಲ್ಲೂಕಿನಲ್ಲಿ ರಾಜ್ಯ ಹೆದ್ದಾರಿ 290ರಲ್ಲಿ ಹರಳಿಹಟ್ಟಿಯಲ್ಲಿ ಸೇತುವೆ ನಿರ್ಮಾಣಕ್ಕೆ 70 ಕೋಟಿ ರೂ.ಅಂದಾಜಿನಲ್ಲಿ ಅನುಮೋದನೆ ನೀಡಲಾಗಿದೆ. ಅರಸಿಕೆರೆಯಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ 13 ಕೋಟಿ ರೂ. ಅಂದಾಜಿಸಲಾಗಿತ್ತು. ಮುಖ್ಯ ನ್ಯಾಯದೀಶರು ಭೇಟಿ ನೀಡಿ ಬದಲಾಯಿಸಲು ಸಲಹೆ ನೀಡದ ಮೇರೆಗೆ 21.17

ಕೋಟಿಗೆ ಅನುಮೋದಿಸಲಾಗಿದೆ.

ಕೇಂದ್ರ ಸರ್ಕಾರದಲ್ಲಿ ಪಿಎಂ ಇ-ಡ್ರೈವ್ ಕಾರ್ಯಕ್ರಮದಲ್ಲಿ 4,500 ವಿವಿಧ ಮಾದರಿಯ ಎಲೆಕ್ನಿಕ್ ಬಸ್‌ಗಳು ಮಂಜೂರು ಮಾಡಲಾಗಿದೆ. 6 ಕಂಪನಿಗಳಿಗೆ ಟೆಂಡ‌ರ್ ನೀಡಲಾಗಿದ್ದು, ಒಂದು ಬಸ್ ವೆಚ್ಚ 1.2 ಕೋಟಿ ರೂ. ಆಗುತ್ತದೆ. ನಿರ್ವಹಣೆ ರಾಜ್ಯ ಸರ್ಕಾರದ ಜವಾಬ್ದಾರಿ.

ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಅನುಮೋದನೆ : ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ

ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಪಾಲಿಕೆಯು ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಪ್ರಸ್ತಾವನೆಗೆ ಸಂಪುಟ ಅನುಮೋದನೆಯನ್ನು ನೀಡಿದೆ. ಮಹಾನಗರ ಪಾಲಿಕೆ ವತಿಯಿಂದಲೇ ಪುತ್ಥಳಿ ನಿರ್ಮಿಸಿ ಸ್ಥಾಪಿಸಲಿದ್ದಾರೆ.

ಮೂಲಸೌಕರ್ಯ ಅಭಿವೃದ್ಧಿಯಡಿ ಉಡಾನ್ ಕಾರ್ಯಕ್ರಮಕ್ಕೆ ಕೆಲವು ಮಾರ್ಪಾಡುಗಳನ್ನು ಮಾಡಿ ಅದಕ್ಕೆ ಆಡಳಿತಾತ್ಮಕ ಸ್ವರೂಪ ನೀಡಿ ಪ್ರಾದೇಶಿಕ ವಿಮಾನಯಾನ ಮೂಲಸೌಕರ್ಯಕ್ಕೆ ರಾಜ್ಯ ಸರ್ಕಾರ ಅನುಮೋದನೆಯನ್ನು ನೀಡಿದೆ. ಉಡಾನ್ ಕಾರ್ಯಕ್ರಮಕ್ಕೆ ನೆರವಾಗಲು ರಾಜ್ಯ ಸರ್ಕಾರ ನೀಡಬೇಕಿರುವ ಅನುದಾನದ ವಿಚಾರದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ಅನುಮೋದನೆಯನ್ನು ನೀಡಲಾಗಿದೆ.

2026- 27ನೇ ಸಾಲಿನಲ್ಲಿ ಕೃಷಿ ಸಹಕಾರಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನವರು ನಬಾರ್ಡ್ ಗೆ 2,000 ಕೋಟಿ ರೂಪಾಯಿ ಮೊತ್ತವನ್ನು ರಿಫೈನಾನ್ಸ್ ಮಾಡುವ ಸಲುವಾಗಿ ಸರ್ಕಾರದ ಗ್ಯಾರಂಟಿಗಾಗಿ ಪ್ರಸ್ತಾವನೆ ಸಲ್ಲಿಸಿದೆ. ಗ್ಯಾರಂಟಿ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಕಬಿನಿ ಜಲಾಶಯದ ಬಳಿಯಿರುವ ತಾರಕ ಗ್ರಾಮದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ 61 ಕೋಟಿ ರೂ. ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಗುಡ್ಡದ ಮಲ್ಲಾಪುರದಲ್ಲಿರುವ 137 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ 115 ಕೋಟಿ ರೂ. ಮೊತ್ತದ ಕಾಮಗಾರಿಗೆ ಸಂಪುಟ ಅನುಮೋದನೆ ನೀಡಿದೆ.

ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ಡೋಣಿ ನದಿಯಿಂದ ನೀರನ್ನು ಮೇಲಕ್ಕೆತ್ತಿ 12 ಕೆರೆಗಳನ್ನು ತುಂಬಿಸುವ 66 ಕೋಟಿ ರೂ. ವೆಚ್ಚದ ಏತನೀರಾವರಿ ಯೋಜನೆಗೆ ಅನುಮೋದನೆ ಸಿಕ್ಕಿದೆ.

ಕೆಲವು ಜಿಲ್ಲೆಯಲ್ಲಿ ಗಣಿಗಾರಿಕೆ ನಿಧಿ ಇದೆ. ಅದರ ನಿಯಮಗಳಲ್ಲಿ ಕೇಂದ್ರ ಸರ್ಕಾರ ಮಾರ್ಪಾಡುಗಳನ್ನು ತಂದು ಜಿಲ್ಲಾಧಿಕಾರಿಗಳನ್ನು ಅಧ್ಯಕ್ಷರನ್ನಾಗಿ & ಉಸ್ತುವಾರಿ ಸಚಿವರನ್ನು ಸದಸ್ಯರನ್ನಾಗಿ ಕಾರ್ಯ ನಿರ್ವಹಿಸುವಂತೆ ಮಾಡಿತ್ತು. ಆದರೆ, ರಾಜ್ಯ ಸರ್ಕಾರ ಇವತ್ತಿನ ಸಂಪುಟ ಸಭೆಯಲ್ಲಿ ನಿರ್ವಹಣಾ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ. ಸಿಎಂ, ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗಣಿ ಇಲಾಖೆಯ ಸಚಿವರು ಈ ಸಮಿತಿಗೆ ಅಧ್ಯಕ್ಷರಾಗಿರಲಿದ್ದಾರೆ. ಜಿಲ್ಲಾಧಿಕಾರಿಗಳು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಸಮಿತಿಗೆ ಕಳಿಸಬೇಕು. ಈ ಸಮಿತಿಯೇ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳಿಗೆ ಅನುಮೋದನೆಯನ್ನು ನೀಡುತ್ತದೆ. ಇದರಿಂದ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದಂತಾಗುವುದಿಲ್ಲ.

ಸರ್ಕಾರಿ ಉದ್ಯಾನವನಗಳ ಸಂರಕ್ಷಣೆ 75ರ ತಿದ್ದುಪಡಿಯನ್ನು ಕಳೆದ ಅಧಿವೇಶನದಲ್ಲಿ ತರಲಾಗಿತ್ತು. ಉದ್ಯಾನವನಗಳ ಶೇ. 5ರಷ್ಟು ಜಾಗವನ್ನು ಸಾರ್ವಜನಿಕ ಬಳಕೆಗೆ ತೆಗೆದುಕೊಳ್ಳಲು ತಿದ್ದುಪಡಿ ವಿಧೇಯಕವನ್ನು ತರಲಾಗಿತ್ತು. ಈ ಬಗ್ಗೆ ವಿರೋಧ ಪಕ್ಷಗಳು ಚರ್ಚೆಯನ್ನು ಮಾಡದೆ ಜನರಲ್ಲಿ ತಪ್ಪು ಕಲ್ಪನೆಯನ್ನು ಹರಡಿದರು. ಹೀಗಾಗಿ ಈ ವಿಧೇಯಕವನ್ನು ಹಿಂಪಡೆದು ಸಾರ್ವಜನಿಕ ಚರ್ಚೆಗೆ ಅವಕಾಶ ನೀಡಿ ಮುಂಬರುವಕೋಟಿಗೆ ಅನುಮೋದಿಸಲಾಗಿದೆ.

ಕೇಂದ್ರ ಸರ್ಕಾರದಲ್ಲಿ ಪಿಎಂ ಇ-ಡ್ರೈವ್ ಕಾರ್ಯಕ್ರಮದಲ್ಲಿ 4,500 ವಿವಿಧ ಮಾದರಿಯ ಎಲೆಕ್ನಿಕ್ ಬಸ್‌ಗಳು ಮಂಜೂರು ಮಾಡಲಾಗಿದೆ. 6 ಕಂಪನಿಗಳಿಗೆ ಟೆಂಡ‌ರ್ ನೀಡಲಾಗಿದ್ದು, ಒಂದು ಬಸ್ ವೆಚ್ಚ 1.2 ಕೋಟಿ ರೂ. ಆಗುತ್ತದೆ. ನಿರ್ವಹಣೆ ರಾಜ್ಯ ಸರ್ಕಾರದ ಜವಾಬ್ದಾರಿ.

ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಅನುಮೋದನೆ : ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ

ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಪಾಲಿಕೆಯು ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಪ್ರಸ್ತಾವನೆಗೆ ಸಂಪುಟ ಅನುಮೋದನೆಯನ್ನು ನೀಡಿದೆ. ಮಹಾನಗರ ಪಾಲಿಕೆ ವತಿಯಿಂದಲೇ ಪುತ್ಥಳಿ ನಿರ್ಮಿಸಿ ಸ್ಥಾಪಿಸಲಿದ್ದಾರೆ.

ಮೂಲಸೌಕರ್ಯ ಅಭಿವೃದ್ಧಿಯಡಿ ಉಡಾನ್ ಕಾರ್ಯಕ್ರಮಕ್ಕೆ ಕೆಲವು ಮಾರ್ಪಾಡುಗಳನ್ನು ಮಾಡಿ ಅದಕ್ಕೆ ಆಡಳಿತಾತ್ಮಕ ಸ್ವರೂಪ ನೀಡಿ ಪ್ರಾದೇಶಿಕ ವಿಮಾನಯಾನ ಮೂಲಸೌಕರ್ಯಕ್ಕೆ ರಾಜ್ಯ ಸರ್ಕಾರ ಅನುಮೋದನೆಯನ್ನು ನೀಡಿದೆ. ಉಡಾನ್ ಕಾರ್ಯಕ್ರಮಕ್ಕೆ ನೆರವಾಗಲು ರಾಜ್ಯ ಸರ್ಕಾರ ನೀಡಬೇಕಿರುವ ಅನುದಾನದ ವಿಚಾರದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ಅನುಮೋದನೆಯನ್ನು ನೀಡಲಾಗಿದೆ.

2026- 27ನೇ ಸಾಲಿನಲ್ಲಿ ಕೃಷಿ ಸಹಕಾರಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನವರು ನಬಾರ್ಡ್ ಗೆ 2,000 ಕೋಟಿ ರೂಪಾಯಿ ಮೊತ್ತವನ್ನು ರಿಫೈನಾನ್ಸ್ ಮಾಡುವ ಸಲುವಾಗಿ ಸರ್ಕಾರದ ಗ್ಯಾರಂಟಿಗಾಗಿ ಪ್ರಸ್ತಾವನೆ ಸಲ್ಲಿಸಿದೆ. ಗ್ಯಾರಂಟಿ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಕಬಿನಿ ಜಲಾಶಯದ ಬಳಿಯಿರುವ ತಾರಕ ಗ್ರಾಮದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ 61 ಕೋಟಿ ರೂ. ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಗುಡ್ಡದ ಮಲ್ಲಾಪುರದಲ್ಲಿರುವ 137 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ 115 ಕೋಟಿ ರೂ. ಮೊತ್ತದ ಕಾಮಗಾರಿಗೆ ಸಂಪುಟ ಅನುಮೋದನೆ ನೀಡಿದೆ.

ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ಡೋಣಿ ನದಿಯಿಂದ ನೀರನ್ನು ಮೇಲಕ್ಕೆತ್ತಿ 12 ಕೆರೆಗಳನ್ನು ತುಂಬಿಸುವ 66 ಕೋಟಿ ರೂ. ವೆಚ್ಚದ ಏತನೀರಾವರಿ ಯೋಜನೆಗೆ ಅನುಮೋದನೆ ಸಿಕ್ಕಿದೆ.

ಕೆಲವು ಜಿಲ್ಲೆಯಲ್ಲಿ ಗಣಿಗಾರಿಕೆ ನಿಧಿ ಇದೆ. ಅದರ ನಿಯಮಗಳಲ್ಲಿ ಕೇಂದ್ರ ಸರ್ಕಾರ ಮಾರ್ಪಾಡುಗಳನ್ನು ತಂದು ಜಿಲ್ಲಾಧಿಕಾರಿಗಳನ್ನು ಅಧ್ಯಕ್ಷರನ್ನಾಗಿ & ಉಸ್ತುವಾರಿ ಸಚಿವರನ್ನು ಸದಸ್ಯರನ್ನಾಗಿ ಕಾರ್ಯ ನಿರ್ವಹಿಸುವಂತೆ ಮಾಡಿತ್ತು. ಆದರೆ, ರಾಜ್ಯ ಸರ್ಕಾರ ಇವತ್ತಿನ ಸಂಪುಟ ಸಭೆಯಲ್ಲಿ ನಿರ್ವಹಣಾ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ. ಸಿಎಂ, ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗಣಿ ಇಲಾಖೆಯ ಸಚಿವರು ಈ ಸಮಿತಿಗೆ ಅಧ್ಯಕ್ಷರಾಗಿರಲಿದ್ದಾರೆ. ಜಿಲ್ಲಾಧಿಕಾರಿಗಳು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಸಮಿತಿಗೆ ಕಳಿಸಬೇಕು. ಈ ಸಮಿತಿಯೇ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳಿಗೆ ಅನುಮೋದನೆಯನ್ನು ನೀಡುತ್ತದೆ. ಇದರಿಂದ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದಂತಾಗುವುದಿಲ್ಲ.

ಸರ್ಕಾರಿ ಉದ್ಯಾನವನಗಳ ಸಂರಕ್ಷಣೆ 75ರ ತಿದ್ದುಪಡಿಯನ್ನು ಕಳೆದ ಅಧಿವೇಶನದಲ್ಲಿ ತರಲಾಗಿತ್ತು. ಉದ್ಯಾನವನಗಳ ಶೇ. 5ರಷ್ಟು ಜಾಗವನ್ನು ಸಾರ್ವಜನಿಕ ಬಳಕೆಗೆ ತೆಗೆದುಕೊಳ್ಳಲು ತಿದ್ದುಪಡಿ ವಿಧೇಯಕವನ್ನು ತರಲಾಗಿತ್ತು. ಈ ಬಗ್ಗೆ ವಿರೋಧ ಪಕ್ಷಗಳು ಚರ್ಚೆಯನ್ನು ಮಾಡದೆ ಜನರಲ್ಲಿ ತಪ್ಪು ಕಲ್ಪನೆಯನ್ನು ಹರಡಿದರು. ಹೀಗಾಗಿ ಈ ವಿಧೇಯಕವನ್ನು ಹಿಂಪಡೆದು ಸಾರ್ವಜನಿಕ ಚರ್ಚೆಗೆ ಅವಕಾಶ ನೀಡಿ ಮುಂಬರುವಅಧಿವೇಶನದಲ್ಲಿ ತಿದ್ದುಪಡಿಗಳೊಂದಿಗೆ ಮತ್ತೆ ಮಂಡಿಸಲು ತೀರ್ಮಾನಿಸಲಾಗಿದೆ.

ರಾಜ್ಯದ ಕೃಷಿ & ತೋಟಗಾರಿಕಾ ಉತ್ಪನ್ನಗಳ ರಫಿಗೆ ಉತ್ತೇಜನ ನೀಡುವ ಸಲುವಾಗಿ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ ಅನುಮತಿಯನ್ನು ಕೋರಿ ಸಲ್ಲಿಸಿದ್ದ ಪ್ರಸ್ತಾವನೆಗೆ ಸಂಪುಟದಲ್ಲಿ ಒಪ್ಪಿಗೆ ಸೂಚಿಸಲಾಗಿದೆ.

ರಾಜ್ಯದಲ್ಲಿನ 182 ಸರ್ಕಾರಿ ಆಸ್ಪತ್ರೆಗಳಿಗೆ ಇಸಿಆರ್‌ಪಿ-2 ಕಾರ್ಯಕ್ರಮದಡಿಯಲ್ಲಿ ಬರುವ ಇ-ಹಾಸ್ಪಿಟಲ್ ಯೋಜನೆಯಡಿ 46 ಕೋಟಿ ರೂ. ವೆಚ್ಚದಲ್ಲಿ 47 ತಾಲ್ಲೂಕು ಆಸ್ಪತ್ರೆಗಳು ಹಾಗೂ 135 ಸಮುದಾಯ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಡಿಜಿಟಲ್ ಉಪಕರಣಗಳು ಹಾಗೂ ಎಲ್ಲ ಆಸ್ಪತ್ರೆಗಳಲ್ಲಿನ ರೋಗಿಗಳ ಸಂಯೋಜಿತ ದತ್ತಾಂಶ ಸಂಗ್ರಹದ ತಾಂತ್ರಿಕ ಸೌಲಭ್ಯ ಕಲ್ಪಿಸಲು ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.

ವಿಶ್ವೇಶ್ವರಯ್ಯ ಇಂಜಿನಿಯರ್ ಕಾಲೇಜು ಅನ್ನು ₹249 ಕೋಟಿ ವೆಚ್ಚದಲ್ಲಿ ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆಯನ್ನು ನೀಡಿದೆ.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗುಳಬಿ ಗ್ರಾಮದಲ್ಲಿ ಕೂಡಿಗನೂರು ನಾಲಾವರಗೆ ಚೆಕ್‌ ಡ್ಯಾಮ್, ನಾಲಾ ಆಳಗೊಳಿಸುವುದು, ಅಗಲೀಕರಣ & ಕೊಳವೆ ಬಾವಿಗಳ ನವೀಕರಣಕ್ಕೆ 49 ಕೋಟಿ ರೂ. ವೆಚ್ಚದ ಕಾಮಗಾರಿಗೆ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.

ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್ ಗಳಲ್ಲಿ ಮೂಲಸೌಕರ್ಯ ಹೆಚ್ಚಿಸುವ ಸಲುವಾಗಿ 25 ಕೋಟಿ ರೂಪಾಯಿಗಳ ವೆಚ್ಚದ ಪ್ರಸ್ತಾವನೆಗೆ ಅನುಮೋದನೆ ಸಂಪುಟ ಸಭೆ ನೀಡಿದೆ.

ಸರ್ಕಾರಿ ಸಾಮ್ಯದ ವಸತಿ ಶಿಕ್ಷಣ ಸಂಘಗಳ ಅಡಿಯಲ್ಲಿ ನಡೆಯುತ್ತಿರುವ ಹಾಸ್ಟೆಲ್‌ಗಳಲ್ಲಿ ಮೂಲಸೌಕರ್ಯ ಹೆಚ್ಚಿಸಲು ಅಗತ್ಯ ಉಪಕರಣಗಳ ಖರೀದಿಗಾಗಿ 49.94 ಕೋಟಿ ರೂ. ವೆಚ್ಚದ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಧಾರವಾಡ ಇವರಿಗೆ ಗುಲಗಂಜಿ ಕೊಪ್ಪ ಗ್ರಾಮದಲ್ಲಿ 1,441.6 ಚ.ಮೀ ನಿವೇಶನವನ್ನು ಶೇ.10ರ ದರದಲ್ಲಿ ಮಂಜೂರು ಮಾಡಲು ತೀರ್ಮಾನಿಸಲಾಗಿದೆ.

ಪೊಲೀಸ್‌ ಮಹಾನೀರಿಕ್ಷಕರು ಪೂರ್ವ ವಲಯ ದಾವಣಗೆರೆ ಇಲ್ಲಿನ ವಸತಿ ನಿಲಯಗಳು ಮತ್ತು ಸಂಕೀರ್ಣಗಳಿಗಾಗಿ 2,640 ಚ.ಮೀ ಜಾಗವನ್ನು ಮಂಜೂರು ಮಾಡಲಾಗಿದೆ.

ಸಿಂಧಗಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿರು ಸಿಂಧಗಿ ತಾಲೂಕು ಕಾಂಗ್ರೆಸ್ ಭವನ ಟ್ರಸ್ಟ್ ಗೆ 920 ಚ.ಮೀ. ಜಾಗವನ್ನು ಶೇ.5ರ ದರದಲ್ಲಿ ಮಂಜೂರು ಮಾಡಲಾಗಿದೆ.

ಪುಟ್ಟಣ್ಣ ಅವರನ್ನು ಕರ್ನಾಟಕ ವಿಧಾನ ಪರಿಷತ್ ಗೆ ಹಂಗಾಮಿ ಸಭಾಪತಿಯನ್ನಾಗಿ ನೇಮಿಸಿದ್ದು, ಕರ್ನಾಟಕ ವಿಧಾನಪರಿಷತ್ ನ ಸಭಾಪತಿ ಹುದ್ದೆಗೆ ನಡೆಸಲಾದ ಚುನಾವಣೆ ದಿನಾಂಕ ನಿಗದಿ ಮಾಡಿದ್ದು ಟಿ. ಬಿ ಜಯಚಂದ್ರ ಅವರು ಕ್ಯಾಬಿನೆಟ್ ಸದಸ್ಯರಾಗಿ ಹಂಗಾಮಿ ಸದಸ್ಯರನ್ನಾಗಿ ನೇಮಿಸಿದ ವಿಷಯಗಳಿಗೆ ಸಂಪುಟದ ಅನುಮೋದನೆ ನೀಡಲಾಗಿದೆ.

ರಾಜ್ಯದ ರೈತರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಜ್ವಲಂತ ಸಮಸ್ಯೆಗಳನ್ನು ಚರ್ಚಿಸಲು ಕಳೆದ ಅಧಿವೇಶನದಲ್ಲಿ ಅವಕಾಶ ಸಿಗದಿರುವುದರಿಂದ ಈ (ಸೆಪ್ಟೆಂಬರ್) ತಿಂಗಳ 21,22,23ರಂದು ವಿಶೇಷ ಅಧಿವೇಶನ ಕರೆಯಲು ಸಂಪುಟ ಸಭೆ ತೀರ್ಮಾನಿಸಿದೆ.

ಕಸ್ತೂರಿ ರಂಗನ್ ವರದಿ ಮತ್ತೊಮ್ಮೆ ಚರ್ಚೆಗೆ ಬಂದಿದ್ದು, ಈಗಾಗಲೇ ನಾದು ಬಾರಿ ಅದನ್ನು ತಿರಸ್ಕರಿಲಾಗಿದೆ. ಈ ಬಗ್ಗೆ ಜನ ಸಮುದಾಯಕ್ಕೆ ತಿಳಿಸಲು ಕಸ್ತೂರಿ ರಂಗನ್ ವರದಿಯ ಕುರಿತು ವಿಶೇಷ ಅಧಿವೇಶನದಲ್ಲಿ ಚರ್ಚಿಸಲಾಗುವುದು.

ಬರದಿಂದಾಗಿ ಸಂಕಷ್ಟಗೊಳಗಾದ ರೈತರಿಗೆ ಮೇವು ಖರೀದಿಸಲು, ಮೇವಿನ ಬೀಜದ ಕಿಟ್ ವಿತರಿಸಲು ಪಶು ಸಂಗೋಪನೆ ಇಲಾಖೆಗೆ 25 ಕೋಟಿ ರೂ. ಮಂಜೂರು ಮಾಡಲಾಗಿದೆ.

ಬೆಂಗಳೂರಿನಲ್ಲಿ ಏಪ್ರಿಲ್ 20- 23ರವರೆಗೆ ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರಸಭಾ ವ್ಯಾಪ್ತಿಯಲ್ಲಿ ಹೊಸದಾಗಿ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ 30 ಕೋಟಿ ರೂ. ಮಂಜೂರು ಮಾಡಲಾಗಿದೆ.

ಸಂಪುಟ ಸಭೆಗೂ ಮುನ್ನ ಸರ್ಕಾರದ ಪ್ರಮುಖ ಆಡಳಿತಾತ್ಮಕ ನಿರ್ಣಯಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಆಯ್ದ ಸಚಿವರುಗಳನ್ನೊಳಗೊಂಡ ರಾಜಕೀಯ ವ್ಯವಹಾರಗಳ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ. ಈ ಮಾದರಿಯ ಸಮಿತಿ ರಚನೆಯಾಗುತ್ತಿರುವುದು ಕರ್ನಾಟಕದಲ್ಲೇ ಮೊದಲು.

ನೂತನ ಸರ್ಕಾರದ ಆಡಳಿತಾತ್ಮಕ ನಿರ್ಣಯಗಳು, ಕಾರ್ಯಕ್ರಮಗಳು ಹಾಗೂ ನೀತಿ, ನಿರೂಪಣೆಗಳ ಕುರಿತು ಅಧಿಕೃತ ಮಾಹಿತಿ ಹಂಚಿಕೊಳ್ಳಲು ಆಯ್ದ ಉಪಮುಖ್ಯಮಂತ್ರಿಗಳನ್ನು ಒಳಗೊಂಡು ಆಯ್ದ ಸಚಿವರನ್ನು ಸರ್ಕಾರದ ವಕ್ತಾರರನ್ನಾಗಿ ನೇಮಿಸಲಾಗಿದೆ.

ನೈಸ್‌ ಯೋಜನೆಗೆ ಜಮೀನು ನೀಡಿದ 1,453 ರೈತರಿಗೆ ನಿವೇಶನಗಳನ್ನು ನೀಡುವ ಭರವಸೆಯನ್ನು ಭೂಸ್ವಾಧೀನದ ಸಂದರ್ಭದಲ್ಲಿ ಆಗಿನ ಜಿಲ್ಲಾಧಿಕಾರಿಗಳು ನೀಡಿದ್ದಾರೆ. ಆದರೆ, ಈ ಒಡಂಬಡಿಕೆಯಾದ ಬಗ್ಗೆ ಕರಾರು ಪತ್ರದಲ್ಲಿರಲಿಲ್ಲ. ಹೀಗಾಗಿ ಇತ್ತೀಚೆಗೆ ವಿಚಾರಣೆ ನಡೆಸಿದ ನ್ಯಾಯಾಲಯ ನಿವೇಶನಗಳ ಹಂಚಿಕೆ ಸರ್ಕಾರ ವಿವೇಚನೆಗೆ ಬಿಟ್ಟದ್ದು ಎಂದು ಹೇಳಿದೆ. ಸದ್ಯ ನೈಸ್ ಸಂಸ್ಥೆ ಕೂಡ ಸಂತ್ರಸ್ತರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಸಿದ್ಧವಿದೆ. ಸದ್ಯ 574 ನಿವೇಶನಗಳು ಲಭ್ಯವಿದೆ. ಉಳಿದ 879 ನಿವೇಶನಗಳನ್ನು ಸಜ್ಜುಗೊಳಿಸಲು ಸರ್ಕಾರವೇ ನೈಸ್‌ ಸಂಸ್ಥೆಗೆ ಸ್ವಾಧೀನ ಪಡಿಸಿಕೊಟ್ಟಿರುವ ಜಾಗಗಳಿವೆ. ಹೀಗಾಗಿ ಆ ಜಾಗಗಳಲ್ಲಿ ನಿವೇಶನಗಳನ್ನು ಅಭಿವೃದ್ಧಿ ಪಡಿಸಿ ಸಂತ್ರಸ್ತರ ಬೇಡಿಕೆಯಂತೆ 2 ತಿಂಗಳೊಳಗಾಗಿ ನಿವೇಶನಗಳನ್ನು ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ.

Comments

Leave a Comment

Prev Post ಜಾರ್ಖಂಡ್‌ನಲ್ಲಿ ಎಕೋ ಟೂರಿಸಂ ಅಭಿವೃದ್ಧಿಗೆ ಕರ್ನಾಟಕದ ಮಾರ್ಗದರ್ಶನ; ಶೀಘ್ರದಲ್ಲೇ ಉಭಯ ರಾಜ್ಯಗಳ ನಡುವೆ ಒಪ್ಪಂದ: ಸಚಿವ ಕೆ.ಜೆ. ಜಾರ್ಜ್‌
Next Post ಮೈಸೂರು ದಸರಾ – ಸಿಎಂ ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ನಿರ್ಧಾರಗಳು

ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ

ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ: ಎಂ ಬಿ ಪಾಟೀಲ

ಇನ್ನೆರಡು ತಿಂಗಳಲ್ಲಿ ಕಳೆದೆರಡು ಸಾಲಿನ ಉದ್ಯೋಗಿನಿ‌ ಯೋಜನೆಯ ಸಹಾಯ ಧನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ತೇರದಾಳ ಶಾಸಕ ಸಿದ್ದು ಸವದಿ ಕೇಳಿದ ಪ್ರಶ್ನೆಗೆ ಸಚಿವರ ಉತ್ತರ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಲಸಿಕೆ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಅಕ್ಕಪಡೆ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News