PRABHAVAA.COM

ಕಾವೇರಿ ಹ್ಯಾಂಡಿಕ್ರಾಫ್ಟ್ಸ್‌ಗೆ ಡಿಜಿಟಲ್ ಪುಶ್; 3 ವರ್ಷಗಳಲ್ಲಿ ಆನ್‌ಲೈನ್ ಮಾರಾಟ ವಾರ್ಷಿಕ ₹70 ಲಕ್ಷದಿಂದ ₹5 ಕೋಟಿಗೆ ಹೆಚ್ಚಿಸುವ ಗುರಿ

Bengaluru Urban:

Font size:

ಮುಂಬರುವ ಗಣಪತಿ ಹಬ್ಬಕ್ಕೆ ಹೊಸ ಇ-ಕಾಮರ್ಸ್ ಪೋರ್ಟಲ್ ಲೋಕಾರ್ಪಣೆ - ಗ್ರಾಹಕರ ಆಯ್ಕೆಗೆ ತಕ್ಕಂತೆ ಕರಕುಶಲ ಉತ್ಪನ್ನಗಳ ‘ಕಸ್ಟಮೈಸೇಷನ್’ಗೆ ಅವಕಾಶ

ಬೆಂಗಳೂರು, ಸೆಪ್ಟೆಂಬರ್ 02 : ಕರ್ನಾಟಕದ ವಿಶ್ವವಿಖ್ಯಾತ ಕರಕುಶಲ ಉತ್ಪನ್ನಗಳಿಗೆ ದೇಶ-ವಿದೇಶಗಳಲ್ಲಿ ವಿಶಾಲ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ (KSHDCL) ಕಾವೇರಿ ಹ್ಯಾಂಡಿಕ್ರಾಫ್ಟ್ಸ್‌ಗೆ ಹೊಸ ಡಿಜಿಟಲ್ ರೂಪ ನೀಡುತ್ತಿದ್ದು, ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿರುವ ಹೊಸ ಇ-ಕಾಮರ್ಸ್ ಪೋರ್ಟಲ್ ಅನ್ನು ಮುಂಬರುವ ಗಣಪತಿ ಹಬ್ಬದ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲು ಉದ್ದೇಶಿಸಲಾಗಿದೆ.

ಹೊಸ ಡಿಜಿಟಲ್ ವೇದಿಕೆಯ ಮೂಲಕ ಕಾವೇರಿ ಹ್ಯಾಂಡಿಕ್ರಾಫ್ಟ್ಸ್‌ನ ಆನ್‌ಲೈನ್ ಮಾರಾಟವನ್ನು ಪ್ರಸ್ತುತ ವಾರ್ಷಿಕ ₹70 ಲಕ್ಷದಿಂದ ಮುಂದಿನ ಮೂರು ವರ್ಷಗಳಲ್ಲಿ ₹5 ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಹಾಲಿ ಇ-ಕಾಮರ್ಸ್ ಪೋರ್ಟಲ್ ಅನ್ನು 2012ರಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಹೊಸ ಪೋರ್ಟಲ್ ಕೇವಲ ವಿನ್ಯಾಸ ಬದಲಾವಣೆಯಾಗಿರದೆ, ಗ್ರಾಹಕಸ್ನೇಹಿ ಹಾಗೂ ವಿಸ್ತೃತ ಡಿಜಿಟಲ್ ಮಾರುಕಟ್ಟೆಯಾಗಿ ರೂಪುಗೊಳ್ಳುತ್ತಿದೆ.

ಗ್ರಾಹಕರ ಆಯ್ಕೆಗೆ ತಕ್ಕಂತೆ ‘Customize Product’
ಹೊಸ ಪೋರ್ಟಲ್‌ನ ಪ್ರಮುಖ ಆಕರ್ಷಣೆ ‘Customize Product’ ಸೌಲಭ್ಯ. ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಗಾತ್ರ, ವಿನ್ಯಾಸ, ಬಣ್ಣ, ವಸ್ತು, ಕೆತ್ತನೆ, ವೈಯಕ್ತೀಕರಣ, ಪ್ರಮಾಣ ಮತ್ತು ಪ್ಯಾಕೇಜಿಂಗ್ ಕುರಿತ ಬೇಡಿಕೆಗಳನ್ನು ಸಲ್ಲಿಸಬಹುದು. ಕಾರ್ಪೊರೇಟ್ ಗಿಫ್ಟಿಂಗ್ ಹಾಗೂ ವಿಶೇಷ ಕಾರ್ಯಕ್ರಮಗಳ ಅಗತ್ಯಗಳಿಗೂ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ.
ಹೊಸ ಪೋರ್ಟಲ್‌ನಲ್ಲಿ ಶ್ರೀಗಂಧ, ರೋಸ್‌ವುಡ್, ಬಿದರಿ ಕಲೆ, ಚನ್ನಪಟ್ಟಣ ಲ್ಯಾಕರ್‌ವೇರ್, ಕಿನ್ನಾಳ ಆಟಿಕೆಗಳು, ಮೈಸೂರು ಸಾಂಪ್ರದಾಯಿಕ ಚಿತ್ರಕಲೆ, ಗಂಜಿಫಾ ಕಲೆ, ಲೋಹದ ಕರಕುಶಲ ಹಾಗೂ ಕೈಮಗ್ಗ-ಜವಳಿ ಉತ್ಪನ್ನಗಳು ಸೇರಿದಂತೆ ಕರ್ನಾಟಕದ ವೈವಿಧ್ಯಮಯ ಕರಕುಶಲ ಉತ್ಪನ್ನಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಪರಿಚಯಿಸಲಾಗುತ್ತದೆ.

ಹೊಸ ಪೋರ್ಟಲ್ ಕಾವೇರಿ ಹ್ಯಾಂಡಿಕ್ರಾಫ್ಟ್ಸ್ ಎಂಪೋರಿಯಂನ ಡಿಜಿಟಲ್ ವಿಸ್ತರಣೆಯಾಗಿ, ಕರ್ನಾಟಕದ ಕುಶಲಕರ್ಮಿಗಳು ಮತ್ತು ಅವರ ಕಲೆಯನ್ನು ಆಧುನಿಕ ಮಾರುಕಟ್ಟೆಯೊಂದಿಗೆ ಸಂಪರ್ಕಿಸುವ ವೇದಿಕೆಯಾಗಲಿದೆ.

ಕೋಟ್‌:
“ಕರ್ನಾಟಕದ ಕರಕುಶಲ ಉತ್ಪನ್ನಗಳು ವಿಶಿಷ್ಟ ಪರಂಪರೆ ಮತ್ತು ಕುಶಲಕರ್ಮಿಗಳ ಅಪ್ರತಿಮ ಕೌಶಲ್ಯವನ್ನು ಪ್ರತಿನಿಧಿಸುತ್ತವೆ. ಈ ಉತ್ಪನ್ನಗಳಿಗೆ ಡಿಜಿಟಲ್ ಮಾರುಕಟ್ಟೆಯ ಮೂಲಕ ಹೆಚ್ಚಿನ ಗ್ರಾಹಕರನ್ನು ತಲುಪಿಸುವುದು ನಮ್ಮ ಗುರಿ. ಹೊಸ ಪೋರ್ಟಲ್ ಮೂಲಕ ಕಾವೇರಿಯ ಆನ್‌ಲೈನ್ ಮಾರಾಟವನ್ನು ಮೂರು ವರ್ಷಗಳಲ್ಲಿ ₹5 ಕೋಟಿಗೆ ಹೆಚ್ಚಿಸುವುದರ ಜೊತೆಗೆ, ನಮ್ಮ ಕುಶಲಕರ್ಮಿಗಳಿಗೆ ಹೊಸ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸಲು ಉದ್ದೇಶಿಸಲಾಗಿದೆ.”
- ರೋಹಿಣಿ ಸಿಂಧೂರಿ, ಐಎಎಸ್, ಸರ್ಕಾರದ ಕಾರ್ಯದರ್ಶಿಗಳು, ಎಂಎಸ್‌ಎಂಇ, ಗಣಿ ಮತ್ತು ಜವಳಿ ಇಲಾಖೆ

ಕೋಟ್‌:
“ಹೊಸ ಇ-ಕಾಮರ್ಸ್ ಪೋರ್ಟಲ್ ಮೂಲಕ ಕಾವೇರಿ ಉತ್ಪನ್ನಗಳನ್ನು ಹೆಚ್ಚು ಗ್ರಾಹಕಸ್ನೇಹಿಯಾಗಿ ದೇಶ-ವಿದೇಶದ ಗ್ರಾಹಕರಿಗೆ ತಲುಪಿಸುವುದು ನಮ್ಮ ಗುರಿ. ವಿಶೇಷವಾಗಿ ‘Customize Product’ ಸೌಲಭ್ಯವು ಗ್ರಾಹಕರ ಬೇಡಿಕೆ ಮತ್ತು ನಮ್ಮ ಕುಶಲಕರ್ಮಿಗಳ ಕೌಶಲ್ಯಕ್ಕೆ ಸಂಪರ್ಕ ಸೇತುವಾಗಲಿದೆ,”
- ಎಚ್.ಆರ್. ರಾಜಪ್ಪ, ವ್ಯವಸ್ಥಾಪಕ ನಿರ್ದೇಶಕರು KSHDCL

Comments

Leave a Comment

Prev Post ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ: ಬಿ.ವೈ.ವಿಜಯೇಂದ್ರ ಸವಾಲು
Next Post ವಿಮಾನ ಚಾಲನಾ ತರಬೇತಿ ಅಕಾಡೆಮಿ ಸ್ಥಾಪನೆಗೆ ಕಾರ್ವರ್ ಏವಿಯೇಷನ್ ಆಸಕ್ತ: ಎಂ ಬಿ ಪಾಟೀಲ

ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟಕ್ಕೆ ₹10.61 ಕೋಟಿ ಲಾಭ.

ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟಕ್ಕೆ ₹10.61 ಕೋಟಿ ಲಾಭ.

ಬಾಗ್ಮನೆ ಸಾಧನೆ ದೇಶವೇ ಹೆಮ್ಮೆಪಡುವಂತದ್ದು: ಡಿಸಿಎಂ ಡಿ.ಕೆ. ಶಿವಕುಮಾರ್

ಬಾಗ್ಮನೆ ಸಾಧನೆ ದೇಶವೇ ಹೆಮ್ಮೆಪಡುವಂತದ್ದು: ಡಿಸಿಎಂ ಡಿ.ಕೆ. ಶಿವಕುಮಾರ್

₹6,000 ಕೋಟಿ ಹೂಡಿಕೆಗೆ ಆ್ಯಕ್ಸಿಸ್‌ಕೇಡ್ಸ್‌ ಏರೊಸ್ಪೇಸ್‌ ಒಲವು: ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ

* ಮೂರು ವರ್ಷಗಳಲ್ಲಿ ವೈಮಾಂತರಿಕ್ಷ, ರಕ್ಷಣೆ, ಎಂಆರ್‌ಒ, ತಯಾರಿಕಾ ಕ್ಲಸ್ಟರ್‌ ಅಭಿವೃದ್ಧಿ * 20 ಸಾವಿರ ಪ್ರತ್ಯಕ್ಷ ಹಾಗೂ 54 ಸಾವಿರ ಪರೋಕ್ಷ ಉದ್ಯೋಗ ಅವಕಾಶಗಳು ಸೃಷ್ಟಿ

ಎಂ.ಸಿ.ಸಿ.ಬ್ಯಾಂಕ್ ಕಾರ್ಯವ್ಯಾಪ್ತಿ ರಾಜ್ಯಕ್ಕೆ ವಿಸ್ತರಣೆ: ಅಧ್ಯಕ್ಷ ಅನಿಲ್ ಲೋಬೋ

ಎಂಸಿಸಿ ಬ್ಯಾಂಕ್: ದೇರಳಕಟ್ಟೆ ಮತ್ತು ಕಟಪಾಡಿಯಲ್ಲಿ ಹೊಸ ಶಾಖೆಗಳ ಉದ್ಘಾಟನೆ, 1,535 ಕೋಟಿ ರೂ. ವ್ಯವಹಾರ ಮೈಲಿಗಲ್ಲು

ಬ್ಯಾಂಕ್ ನೀಡುವ ಸಾಲದಿಂದ ಗ್ರಾಹಕರು ಆದಾಯ ಹೆಚ್ಚಿಸಿಕೊಳ್ಳಬೇಕು: ಬಸವರಾಜ ಬೊಮ್ಮಾಯಿ

ಬ್ಯಾಂಕ್ ನೀಡುವ ಸಾಲದಿಂದ ಗ್ರಾಹಕರು ಆದಾಯ ಹೆಚ್ಚಿಸಿಕೊಳ್ಳಬೇಕು: ಬಸವರಾಜ ಬೊಮ್ಮಾಯಿ

ಹೂಡಿಕೆ ಆಕರ್ಷಣೆಗೆ ಕೋಲ್ಕತ್ತಾದಲ್ಲಿ ರೋಡ್ ಶೋ ನಡೆಸಿದ ಸಚಿವ ಎಂ.ಬಿ.ಪಾಟೀಲ

ಹೂಡಿಕೆ ಆಕರ್ಷಣೆಗೆ ಕೋಲ್ಕತ್ತಾದಲ್ಲಿ ರೋಡ್ ಶೋ ನಡೆಸಿದ ಸಚಿವ ಎಂ.ಬಿ.ಪಾಟೀಲ

Read all News