PRABHAVAA.COM

ಕಾಂಗ್ರೆಸ್ ಸರಕಾರ ಕಿತ್ತೊಗೆಯಲು ಹೋರಾಟ- ಯಡಿಯೂರಪ್ಪ

Raichur:

Font size:

ಕಾಂಗ್ರೆಸ್ ಸರಕಾರ ಕಿತ್ತೊಗೆಯಲು ಹೋರಾಟ- ಯಡಿಯೂರಪ್ಪ

ಕಾಂಗ್ರೆಸ್ ಸರಕಾರ ಕಿತ್ತೊಗೆಯಲು ಹೋರಾಟ- ಯಡಿಯೂರಪ್ಪ

ಲಿಂಗಸುಗೂರು (ರಾಯಚೂರು): ಪಾದಯಾತ್ರೆಯು 6 ಕೋಟಿ ಕನ್ನಡಿಗರ ಆಶೋತ್ತರದ ಕಹಳೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶ್ಲೇಷಿಸಿದರು.
ಕಹಳೆ ಊದುವ ಮೂಲಕ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದ ಬಳ್ಳಾರಿ ಚಲೋ ಪಾದಯಾತ್ರೆಯ ಉದ್ಘಾಟನೆ ನೆರವೇರಿಸಲಾಯಿತು. ರೈತಗೀತೆಯನ್ನು ಹಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, ಅಧಿಕಾರದ ಮದದಲ್ಲಿ ಮೆರೆಯುವ ರೈತ ವಿರೋಧಿ, ಜನವಿರೋಧಿ, ಪ್ರಗತಿವಿರೋಧಿ, ಮಹಿಳಾ ವಿರೋಧಿ, ಭ್ರಷ್ಟಾಚಾರದಲ್ಲಿ ತೊಡಗಿದ ಈ ಸರಕಾರವನ್ನು ಕಿತ್ತೊಗೆಯುವ ವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.

ಮುಖ್ಯಮಂತ್ರಿಗಳಿಗೆ ಸ್ವಾತಂತ್ರ್ಯ ಇದೆಯೇ?
ಇದು ಚುನಾವಣಾ ಪ್ರಚಾರದ ಸಭೆ ಅಲ್ಲ; ಭ್ರಷ್ಟ ಕಾಂಗ್ರೆಸ್ ಸರಕಾರ ಕಿತ್ತೊಗೆಯುವ ಸಂಕಲ್ಪದೊಂದಿಗೆ ಹೋರಾಟ ಪ್ರಾರಂಭವಾಗಿದೆ ಎಂದರು. ಮುಖ್ಯಮಂತ್ರಿಗಳಿಗೆ ಸ್ವಾತಂತ್ರ್ಯ ಇದೆಯೇ? ಪ್ರತಿಯೊಂದಕ್ಕೂ ದೆಹಲಿಗೆ ಹೋಗಿ ರಾಹುಲ್ ಗಾಂಧಿ ಕಾಲು ಹಿಡಿಯುವ ನೀವು ಮುಖ್ಯಮಂತ್ರಿಯೇ ಎಂದು ಪ್ರಶ್ನಿಸಿದರು. ಇದು ಮುಖ್ಯಮಂತ್ರಿ ಸ್ಥಾನಕ್ಕೆ ಶೋಭೆ ತರುತ್ತದೆಯೇ ಎಂದು ಕೇಳಿದರು.
ಪಾದಯಾತ್ರೆಗೆ ಜನಬೆಂಬಲ ನೀಡಲು ಮನವಿ ಮಾಡಿದರು. ಇದು ಹೋರಾಟದ ಮೊದಲ ಹೆಜ್ಜೆ. ಭ್ರಷ್ಟ ಸರಕಾರಕ್ಕೆ ಲೂಟಿ ವಿರುದ್ಧ ಮನವರಿಕೆ ಮಾಡೋಣ ಎಂದು ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಕಾರ್ಯಕ್ರಮ ನಿರೂಪಿಸಿದರು. ಬರ ಪ್ರದೇಶ ಘೋಷಣೆಯಲ್ಲಿ ರಾಜ್ಯ ಸರಕಾರ ಅನ್ಯಾಯ ಮಾಡಿದೆ. ಪರಿಹಾರ ನೀಡುವಲ್ಲಿ ಕ್ರಮ ಕೈಗೊಂಡಿಲ್ಲ; ಪಾದಯಾತ್ರೆಯ ಒಂದೊಂದು ಹೆಜ್ಜೆಯೂ ಬಿಜೆಪಿ ರೈತಪರವಾಗಿದೆ. ಬಿಜೆಪಿ ಹೆಜ್ಜೆಯಲ್ಲಿ ದಲಿತ ಧ್ವನಿಯಿದೆ ಎಂದು ಅವರು ತಿಳಿಸಿದರು.

ದಲಿತ, ರೈತ, ಎಸ್.ಟಿ. ಮಹಿಳಾ ವಿರೋಧಿ ಸರಕಾರ ಇಲ್ಲಿದೆ. ಇದು ಅತ್ಯಂತ ಭ್ರಷ್ಟ ಸರಕಾರ.
-ಸುಧಾಕರ ರೆಡ್ಡಿ, ಸಹ ಉಸ್ತುವಾರಿ

ವಿವಿಧ ಆಯಾಮಗಳಲ್ಲಿ, ವಿವಿಧ ವಿಷಯಗಳನ್ನು ಮುಂದಿಟ್ಟು ಹೋರಾಟದ ದಿನಗಳು ಇಡೀ ಕರ್ನಾಟದಲ್ಲಿ ಮುಂದೆ ಇವೆ. ಇದಕ್ಕಾಗಿ ನಾವೆಲ್ಲ ಸಿದ್ಧರಾಗೋಣ. ಕರ್ನಾಟಕದ ಜನತೆಯ ಪರವಾಗಿ ನಾವು ಹೆಜ್ಜೆಗೆ ಹೆಜ್ಜೆ ಇಟ್ಟು ಕೆಲಸ ಮಾಡುತ್ತೇವೆ. ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತೇವೆ. ದಯವಿಟ್ಟು ನಮಗೆ ಹೆಗಲಿಗೆ ಹೆಗಲು ಕೊಡಿ.
- ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ

ರಾಜ್ಯದ ಡಿ.ಕೆ.ಶಿವಕುಮಾರ್ ಸರಕಾರಕ್ಕೆ ಎಚ್ಚರಿಕೆ ನೀಡುವುದಕ್ಕಾಗಿ ಬಿಜೆಪಿ ಈ ಪಾದಯಾತ್ರೆಯನ್ನು ನಡೆಸುತ್ತಿದೆ. ಬಿಜೆಪಿ ತೀವ್ರ ಹೋರಾಟದ ಪರಿಣಾಮವಾಗಿ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದು, ಹೋರಾಟ ಮಾಡಿದ ನಾಯಕರೆಲ್ಲರಿಗೂ ಅಭಿನಂದನೆಗಳು. ಕಾಂಗ್ರೆಸ್ ಸಚಿವಸಂಪುಟದಲ್ಲಿ ಡಿಕೆಶಿ ಗುಂಪು, ಸಿದ್ದರಾಮಯ್ಯರ ಗುಂಪು, ಇನ್ನೊಂದು ಹೈಕಮಾಂಡ್ ಗುಂಪುಗಳಿವೆ. ದೇಣಿಗೆ ಕೊಟ್ಟವರೇ ಸಿಎಂ, ಸಚಿವರಾಗಿದ್ದಾರೆ.
-ಜಗದೀಶ ಶೆಟ್ಟರ್, ಮಾಜಿ ಮುಖ್ಯಮಂತ್ರಿ

ಸಿದ್ದರಾಮಯ್ಯನವರ ಸರಕಾರದಲ್ಲಿ ದರೋಡೆ ಮಾಡುತ್ತಿದ್ದರು. ಈಗ ಡಿ.ಕೆ.ಶಿವಕುಮಾರ್ ಸರಕಾರದಲ್ಲಿ ತೆರಿಗೆ ಹೆಚ್ಚಳದ ಮೂಲಕ ಪಿಕ್ ಪಾಕೆಟ್ ಮಾಡುತ್ತಿದ್ದಾರೆ. 175 ತಾಲ್ಲೂಕುಗಳಲ್ಲಿ ಬರಗಾಲವಿದ್ದರೂ 101 ತಾಲ್ಲೂಕುಗಳನ್ನು ಮಾತ್ರ ಈ ಸರಕಾರ ಬರಪೀಡಿತ ಎಂದು ಪ್ರಕಟಿಸಿದೆ. ಈ ಸರಕಾರದ ಬಳಿ ಹಣ ಇಲ್ಲ. ಉಳಿದ ತಾಲ್ಲೂಕುಗಳನ್ನು ಘೋಷಿಸಿ; ಇಲ್ಲವಾದರೆ ನಿಮ್ಮ ಸರಕಾರ ಪಾಪರ್ ಎಂದು ಜನರೇ ಘೋಷಿಸುತ್ತಾರೆ.
- ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ

ಜನರಿಗಾಗಿ ಜನಪರವಾದ 10 ದಿನಗಳ ಪಾದಯಾತ್ರೆ ಇದು. ರಾಜ್ಯದಲ್ಲಿ ಭ್ರಷ್ಟ ಸರಕಾರದ ವಿಚಾರಗಳನ್ನು ಜನಮನಕ್ಕೆ ಮುಟ್ಟಿಸಲು ಬಿಜೆಪಿ ಈ ಪಾದಯಾತ್ರೆ ಹಮ್ಮಿಕೊಂಡಿದೆ. ಕಾಂಗ್ರೆಸ್ ಸರಕಾರ ಮಹಿಳಾ ವಿರೋಧಿ, ದಲಿತ ವಿರೋಧಿ, ಯುವಜನರ ವಿರೋಧಿ, ರೈತವಿರೋಧಿ.
ಈ ಸರಕಾರ ಶೌಚಾಲಯಗಳನ್ನೂ ಕಟ್ಟಿಸಿಕೊಟ್ಟಿಲ್ಲ. ಕಾಂಗ್ರೆಸ್ ಸರಕಾರವು ಕೇಂದ್ರದಿಂದ ಬಂದ ಹಣವನ್ನೂ ಲೂಟಿ ಮಾಡಿ ನುಂಗಿದೆ.
- ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ವಿಪಕ್ಷ ನಾಯಕ

ಕಾಂಗ್ರೆಸ್ ಸರಕಾರವು ಮಾಡಿರುವ ದುರಾಡಳಿತದ ವಿರುದ್ಧ ಹೋರಾಟ ನಮ್ಮದು. 53 ಸಾವಿರ ಕೋಟಿಗೂ ಹೆಚ್ಚು ಮೊತ್ತದ ದಲಿತರ ಹಣವನ್ನು ಅನ್ಯ ಉದ್ದೇಶಕ್ಕೆ ದುರುಪಯೋಗ ಮಾಡಿಕೊಂಡಿದ್ದಾರೆ. ವಾಲ್ಮೀಕಿ ನಿಗಮದ ಹಣ ವಾಪಸ್ ಖಜಾನೆಗೆ ಬರಬೇಕಿದೆ. ಮೀಸಲಾತಿ ಪ್ರಮಾಣ ಹೆಚ್ಚಿಸಬೇಕಿದೆ.
- ಗೋವಿಂದ ಕಾರಜೋಳ, ಮಾಜಿ ಡಿಸಿಎಂ, ಸಂಸದ

ಅರಮನೆಯಲ್ಲಿ ಕುಳಿತು ಆಡಳಿತ ಮಾಡುವ ಸರಕಾರ ಇದು. ಜನರನ್ನು ಬೀದಿಯಲ್ಲಿ ನಿಲ್ಲಿಸುವ ಕೆಲಸವನ್ನು ಈ ಸರಕಾರ ಮಾಡಿದೆ. ಭ್ರಷ್ಟಾಚಾರ ಮಿತಿಮೀರಿದೆ. ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಬರಗಾಲ ತೀವ್ರವಾಗಿ ರೈತರು ಗುಳೆ ಹೋಗುತ್ತಿದ್ದು, ಸರಕಾರ ಸ್ಪಂದಿಸುತ್ತಿಲ್ಲ.
- ಬಿ.ಶ್ರೀರಾಮುಲು, ಮಾಜಿ ಸಚಿವ

ಜನಹಿತಕ್ಕಾಗಿ ಈ ಹೋರಾಟ. ಒಂದು ಕಡೆ ಬರದಿಂದ ಕಂಗೆಟ್ಟ ಜನರಿದ್ದರೆ, ಬರಗೆಟ್ಟ ಕಾಂಗ್ರೆಸ್ ಇನ್ನೊಂದು ಕಡೆ ಇದೆ. ಉಪ್ಪು ತಿಂದವ ನೀರು ಕುಡಿಯುವಂತೆ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ವಾಲ್ಮೀಕಿ ನಿಗಮದಿಂದ ಲೂಟಿ ಆದ ಹಣ ಖಜಾನೆಗೆ ಬಂದಿಲ್ಲ. ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಸಿದ್ದಾರೆ. ರೈತರು, ಜನತೆ ಸಂಕಷ್ಟದಲ್ಲಿದ್ದಾರೆ.
- ಸಿ.ಟಿ.ರವಿ, ಮಾಜಿ ಸಚಿವ

ಕುರಿ ಕಾಯಲು ತೋಳನನ್ನು ನೇಮಿಸಿದಂತಿದೆ ಈ ಸರಕಾರ. ಬೇಲಿ ಎದ್ದು ಹೊಲ ಮೇಯುವ ಪರಿಸ್ಥಿತಿ ಇದೆ. ಇನ್ನೆಂಥ ಆಡಳಿತ ನೋಡಲು ಸಾಧ್ಯ?
- ವಿರೂಪಾಕ್ಷಪ್ಪ, ಮಾಜಿ ಸಂಸದ

ಲಿಂಗಸುಗೂರಿನಿಂದ ಪಕ್ಷದ ಪಾದಯಾತ್ರೆ ನಡೆಯುತ್ತಿರುವುದು ಶುಭ ಸೂಚನೆ. ನಾಗೇಂದ್ರ ರಾಜೀನಾಮೆ ಎಂಬುದು ಬಿಜೆಪಿಗೆ ಕೇವಲ ಅಣು ಮಾತ್ರ. ಇಲ್ಲಿನ ನವಲಿ ಜಲಾಶಯ ನಿರ್ಮಾಣ ಆಗಬೇಕು. ಇದಕ್ಕಾಗಿ 20 ಸಾವಿರ ಕೋಟಿ ಹಣವನ್ನು ಮೀಸಲಿಡಿ. 2028ರಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬರಲಿದೆ.
- ಜನಾರ್ದನ ರೆಡ್ಡಿ, ಮಾಜಿ ಸಚಿವ

ಮಳೆ ಇಲ್ಲದೇ ಬರಗಾಲ ಈ ಭಾಗವನ್ನು ತೀವ್ರವಾಗಿ ಕಾಡುತ್ತಿದೆ. ಆದರೂ ಈ ಸರಕಾರ ಕಣ್ತೆರೆದಿಲ್ಲ. ಬರ ಘೋಷಣೆಯಲ್ಲಿ ವಿಫಲವಾಗಿದೆ.
-ಶಶೀಲ್ ನಮೋಶಿ, ವಿಧಾನಪರಿಷತ್ ಅಭ್ಯರ್ಥಿ

ಪಾದಯಾತ್ರೆಯು ಲಿಂಗಸುಗೂರಿನಿಂದ ಬಳ್ಳಾರಿಗೆ ತೆರಳಲಿದೆ. ಅವ್ಯವಹಾರಗಳು, ಹಗರಣಗಳು ಸೇರಿ ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ಜನರ ಮುಂದಿಡುವುದೇ ಇದರ ಉದ್ದೇಶ.
- ಮಾನಪ್ಪ ವಜ್ಜಲ್, ಶಾಸಕ

Comments

Leave a Comment

Prev Post ಪಾರ್ಕ್ ಜಾಗದ ಶೇ.5 ರಷ್ಟು ಬಳಕೆ ಪ್ರಸ್ತಾವನೆ ವಿವರಗಳ ಪರಿಶೀಲನೆ: ಸಿಎಂ ಡಿ.ಕೆ. ಶಿವಕುಮಾರ್
Next Post "ದೆಹಲಿಯಲ್ಲಿ ಮೇಕೆದಾಟು ಅಸ್ತ್ರ - ಸುಪ್ರೀಂ ಕೋರ್ಟ್ ಹಿರಿಯ ವಕೀಲ ಶ್ಯಾಮ್ ದಿವಾನ್ ಜೊತೆ ಸಚಿವ ಚಲುವರಾಯಸ್ವಾಮಿ ಮಹತ್ವದ ಸಮಾಲೋಚನೆ"

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ನ್ಯಾ.‌ನಾಗಮೋಹನ್ ದಾಸ್ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ:ಬಸವರಾಜ ಬೊಮ್ಮಾಯಿ

ಸಿಎಂ ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದಿದ್ದಾರೆ: ಬಸವರಾಜ ಬೊಮ್ಮಾಯಿ

ಒಡಿಶಾ ಶಾಸಕರನ್ನು ನಾನು ಕರೆಸಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಪಕ್ಷ ಹೇಳಿದ್ದನ್ನು ಮಾಡುತ್ತೇನೆ ನನಗೆ ಇದು ಹೊಸತಲ್ಲ, ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದಿಂದಲೂ ಇದನ್ನು ಮಾಡುತ್ತಿರುವೆ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News