PRABHAVAA.COM

ಶ್ರೀ ಸಾಯಿ ಫಿಲ್ಮ್ ಅಕಾಡೆಮಿಯ 6ನೇ ವರ್ಷದ ಸಂಭ್ರಮಾಚರಣೆ

Bengaluru Urban:

Font size:

ಶ್ರೀ ಸಾಯಿ ಫಿಲ್ಮ್ ಅಕಾಡೆಮಿಯ 6ನೇ ವರ್ಷದ ಸಂಭ್ರಮಾಚರಣೆ

ಬೆಂಗಳೂರು: ಕೆಂಪೇಗೌಡನಗರದಲ್ಲಿರುವ ಲಗ್ಗೆರೆ ಶ್ರೀ ಸಾಯಿ ಫಿಲ್ಮ್ ಅಕಾಡೆಮಿಯ 6ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮವನ್ನು ನಟ, ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ ಉದ್ಘಾಟಿಸಿ ಮಾತನಾಡಿದರು.
ಚಿತ್ರರಂಗದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಬಯಸುವ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗುವ ನಿಟ್ಟಿನಲ್ಲಿ ಶ್ರೀ ಸಾಯಿ ಫಿಲ್ಮ್ ಅಕಾಡೆಮಿ (ರಿ.) ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಅಕಾಡೆಮಿಯಲ್ಲಿ ನಟನೆ, ನೃತ್ಯ ಹಾಗೂ ನಿರ್ದೇಶನ ಕ್ಷೇತ್ರಗಳಲ್ಲಿ ತರಬೇತಿ ನೀಡಲಾಗುತ್ತಿದ್ದು, ಚಿತ್ರರಂಗಕ್ಕೆ ಪ್ರವೇಶಿಸಲು ಆಸಕ್ತಿ ಹೊಂದಿರುವ ಯುವಕ-ಯುವತಿಯರಿಗೆ ಅಗತ್ಯ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಉತ್ತಮ ಅವಕಾಶ ಕಲ್ಪಿಸಲಾಗುತ್ತಿದೆ. ಯುವ ಪ್ರತಿಭೆಗಳು ಈ ತರಬೇತಿಯ ಸದುಪಯೋಗ ಪಡೆದುಕೊಂಡು ತಮ್ಮ ಕಲಾ ಪ್ರತಿಭೆಯನ್ನು ಮತ್ತಷ್ಟು ಬೆಳೆಸಿಕೊಳ್ಳಬೇಕು ಎಂದು ಗಂಡಸಿ ಸದಾನಂದ ಸ್ವಾಮಿ ಸಲಹೆ ನೀಡಿದರು.
ಶ್ರೀ ಸಾಯಿ ಫಿಲ್ಮ್ ಅಕಾಡೆಮಿಯ ಮುಖ್ಯಸ್ಥೆ ಹಾಗೂ ನಟಿ ಕವನ, ಫಲಕ್, ರಕ್ಷಿತ್, ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ *ಡಿಂಗ್ರಿ ನಾಗರಾಜ್, ಸುಲೋಚನ, ಮಾಲಾ ಡಿಂಗ್ರಿ ನಾಗರಾಜ್, ನಾಯಕ ನಟ ಸಾಗರ್ ಗೌಡ ಹಾಸನ್ , ಆಡುಗೋಡಿ, ಶ್ರೀನಿವಾಸ್, ಜೂನಿಯರ್ ಜಗ್ಗಿ, ಭೂಮಿ ಪ್ರಿಯಾರೆಡ್ಡಿ ಸೇರಿದಂತೆ ಹಲವು ಗಣ್ಯರು, ಕಲಾವಿದರು, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಕಾಡೆಮಿಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಹಾಗೂ ಕಲಾ ಪ್ರದರ್ಶನಗಳು ನಡೆಯುವ ಮೂಲಕ ಸಂಭ್ರಮಾಚರಣೆಗೆ ಮೆರುಗು ತಂದವು

Comments

Leave a Comment

Prev Post ಬಿಜೆಪಿ ಇರಬಾರದು ಎಂದು ಕುಮಾರಸ್ವಾಮಿ ಹೋರಾಟ: ಸಿಎಂ ಡಿ ಕೆ ಶಿವಕುಮಾರ್
Next Post ಶೀಘ್ರದಲ್ಲೇ ಮುಖ್ಯ ಗ್ರಂಥಪಾಲಕರ ಹುದ್ದೆ ಭರ್ತಿ: ಮಧು ಬಂಗಾರಪ್ಪ

ಕರ್ನಾಟಕ ಚಲನಚಿತ್ರ ಪೋಷಕರ ಕಲಾವಿದರ ಸಂಘದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಡಿಂಗ್ರಿ ನಾಗರಾಜ್ ಅವಿರೋಧ ಆಯ್ಕೆ

ಕರ್ನಾಟಕ ಚಲನಚಿತ್ರ ಪೋಷಕರ ಕಲಾವಿದರ ಸಂಘದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಡಿಂಗ್ರಿ ನಾಗರಾಜ್ ಅವಿರೋಧ ಆಯ್ಕೆ

ಕಂಠೀರವ ಸ್ಟುಡಿಯೋಸ್ ಆವರಣದಲ್ಲಿ ಟಿ.ಎಸ್. ಕರಿಬಸಯ್ಯ ಪುತ್ಥಳಿ ಅನಾವಣಗೊಳಿಸಿ, ವಜ್ರಮಹೋತ್ಸವ ಆಚರಿಸಬೇಕು : ಕಲಾ ಕಂಠೀರವ ದಿ. ಟಿ.ಎಸ್. ಕರಿಬಸಯ್ಯ ಸೇವಾ ಟ್ರಸ್ಟ್ ಆಗ್ರಹ

ಕಂಠೀರವ ಸ್ಟುಡಿಯೋಸ್ ಆವರಣದಲ್ಲಿ ಟಿ.ಎಸ್. ಕರಿಬಸಯ್ಯ ಪುತ್ಥಳಿ ಅನಾವಣಗೊಳಿಸಿ, ವಜ್ರಮಹೋತ್ಸವ ಆಚರಿಸಬೇಕು : ಕಲಾ ಕಂಠೀರವ ದಿ. ಟಿ.ಎಸ್. ಕರಿಬಸಯ್ಯ ಸೇವಾ ಟ್ರಸ್ಟ್ ಆಗ್ರಹ

ಬೆಂಗಳೂರು: ವಿಶ್ವ ಗುಬ್ಬಚ್ಚಿ ದಿನಾಚರಣೆ ವಿಶೇಷವಾಗಿ ಆಚರಣೆ

ಬೆಂಗಳೂರು: ವಿಶ್ವ ಗುಬ್ಬಚ್ಚಿ ದಿನಾಚರಣೆ ವಿಶೇಷವಾಗಿ ಆಚರಣೆ

ಬಿಡದಿ–ಬೈರಮಂಗಲ ಸ್ಮಾರ್ಟ್ ಸಿಟಿ: ಅಭಿವೃದ್ಧಿ ಕನಸುಗಳ ನಡುವೆ ರೈತರ ಬದುಕಿನ ಹೋರಾಟ

ಬಿಡದಿ–ಬೈರಮಂಗಲ ಸ್ಮಾರ್ಟ್ ಸಿಟಿ: ಅಭಿವೃದ್ಧಿ ಕನಸುಗಳ ನಡುವೆ ರೈತರ ಬದುಕಿನ ಹೋರಾಟ

*ಅದ್ದೂರಿಯಾಗಿ ಪ್ರದರ್ಶನಗೊಂಡ “ಸಂಪೂರ್ಣ ರಾಮಾಯಣ

*ಅದ್ದೂರಿಯಾಗಿ ಪ್ರದರ್ಶನಗೊಂಡ “ಸಂಪೂರ್ಣ ರಾಮಾಯಣ

ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ಜನ್ಮದಿನ ಸಂಭ್ರಮ

ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ಜನ್ಮದಿನ ಸಂಭ್ರಮ

Read all News