PRABHAVAA.COM

ಭ್ರಷ್ಟಾಚಾರವನ್ನು ಸೆದೆ ಬಡಿಯುವುದು ಎಂದರೆ ಹೀಗೇನಾ ಮುಖ್ಯಮಂತ್ರಿಗಳೇ? ಎಂದು ಡಿಕೆಶಿಗೆ ಪ್ರಶ್ನೆ

Bengaluru Urban:

Font size:

ಕೆಪಿಎಸ್‌ಸಿ ಸಂತ್ರಸ್ಥರ ಜತೆ ಸಂವಾದ ನಡೆಸಿ; ರಾಹುಲ್ ಗಾಂಧಿಗೆ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ

ರಾಹುಲ್ ಗಾಂಧಿ ಎಲ್ಲಿದ್ದೀರಪ್ಪ? ನಿಮ್ಮ ಕೆಪಿಎಸ್‌ಸಿ ಕೊಳೆತು ನಾರುತ್ತಿದೆ!!

ಕೆಪಿಎಸ್‌ಸಿ ಸಂತ್ರಸ್ಥರ ಜತೆ ಸಂವಾದ ನಡೆಸಿ; ರಾಹುಲ್ ಗಾಂಧಿಗೆ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ

ಗ್ಯಾನೇಂದ್ರ ಬಂಧನ; ಈಗ ಬಂಧಿಸುತ್ತೀರಿ, 2 ತಿಂಗಳಾದ ಮೇಲೆ ಪೊಗದಸ್ತಾದ ಇಲಾಖೆ ಕೊಡುತ್ತೀರಿ*

ಭ್ರಷ್ಟಾಚಾರವನ್ನು ಸೆದೆ ಬಡಿಯುವುದು ಎಂದರೆ ಹೀಗೇನಾ ಮುಖ್ಯಮಂತ್ರಿಗಳೇ? ಎಂದು ಡಿಕೆಶಿಗೆ ಪ್ರಶ್ನೆ

ಹೈಕೋರ್ಟಿಗೆ ಆಕ್ಷೇಪಣೆ ಸಲ್ಲಿಸಲಿಲ್ಲ, ಏಕೆ?: ಪ್ರಿಯಾಂಕ್ ಖರ್ಗೆಗೆ ನೇರ ಪ್ರಶ್ನೆ

ಬೆಂಗಳೂರು 30 ಆಗಸ್ಟ್ 2026

ರಾಹುಲ್ ಗಾಂಧಿ ಎಲ್ಲಿದ್ದೀರಪ್ಪ? ನಿಮ್ಮ ಕೆಪಿಎಸ್‌ಸಿ ಕೊಳೆತು ನಾರುತ್ತಿದೆ. ದೇಶದ ಮೂಲೆಮೂಲೆಗೂ ಹೋಗಿ ಮೈಕು ಹಿಡಿದು ವಿದ್ಯಾರ್ಥಿಗಳು, ಯುವಜನರ ಜೊತೆ ಸಂವಾದ ನಡೆಸುವ ನೀವು ಬೆಂಗಳೂರಿಗೆ ಬಂದು ಕೆಪಿಎಸ್‌ಸಿ ಸಂತ್ರಸ್ತರ ಜೊತೆ ಸಂವಾದ ನಡೆಸುವುದು ಯಾವಾಗ? ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತಾಡಿದ ಕೇಂದ್ರ ಸಚಿವರು;.ದಿನ ಬೆಳಗಾದರೆ ಆರೆಸ್ಸೆಸ್ ಬಗ್ಗೆ ಟೀಕೆ ಮಾಡುವ ಪ್ರಿಯಾಂಕ್ ಖರ್ಗೆ ಅವರಿಗೆ, ತನ್ನ ಇಲಾಖೆಯಲ್ಲಿ ಹೆಗ್ಗಣ ಸತ್ತು ಬಿದಿರುವುದು ಕಣ್ಣಿಗೆ ಕಾಣುತ್ತಿಲ್ಲ. ಯೋಗ್ಯತೆ ಇಲ್ಲದವರಿಂದ ಪರೀಕ್ಷೆ ಬಳಸಿ ಕೆಲಸ ಕೊಟ್ಟಿದ್ದಾರೆ. ನಿಮ್ಮ ಯೋಗ್ಯತೆಗೆ ಕೆಪಿಎಸ್ಸಿಯನ್ನು ಸ್ವಚ್ಛ ಮಾಡುವುದು ಸಾಧ್ಯವೇ? ಎಂದು ಖಾರವಾಗಿ ಪ್ರಶ್ನಿಸಿದರು.

ಹಿಂದೆ ಹೀಗೆಯೇ ಸ್ವಚ್ಛ ಮಾಡುತ್ತೇವೆ ಎಂದು ಹೊರಟು ಬಿಡಿಎ ಸಂಸ್ಥೆಯಲ್ಲಿ ಮಾಡಬಾರದನ್ನು ಮಾಡಿದ್ದ ವ್ಯಕ್ತಿಯನ್ನು ತಂದು ಕೆಪಿಎಸ್ಸಿ ಅಧ್ಯಕ್ಷನನ್ನಾಗಿ ಮಾಡಿದಿರಿ. ಆ ವ್ಯಕ್ತಿ ಕೋಟಿ ಕೋಟಿ ಲೆಕ್ಕದಲ್ಲಿ ಹುದ್ದೆಗಳನ್ನು ಹಾದಿಬೀದಿಯಲ್ಲಿ ಹರಾಜಿಗೆ ಇಟ್ಟರು. ಈಗ ನೋಡಿದರೆ 75,000 ಹುದ್ದೆಗಳನ್ನು ತುಂಬುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದಿರಿ. ಇದೇ ರೀತಿಯಲ್ಲಿ ಅಕ್ರಮವಾಗಿ ತುಂಬುತ್ತೀರಾ ಹೇಗೆ? ಎಲ್ಲಿದ್ದಾರೆ ನಿಮ್ಮ ರಾಹುಲ್ ಗಾಂಧಿ? ಕರೆದುಕೊಂಡು ಬನ್ನಿ ಒಮ್ಮೆ ಬೆಂಗಳೂರಿಗೆ. ಯುವಕರ ಜೊತೆ ಸಂವಾದ ನಡೆಸಲಿ. ಆಗ ನಿಮ್ಮ ಬಣ್ಣ ಬಯಲಾಗುತ್ತದೆ ಎಂದು ಸಚಿವ ಕುಮಾರಸ್ವಾಮಿ ಅವರು ಹರಿಹಾಯ್ದರು.

ಈಗ ಬಂಧಿಸುತ್ತೀರಿ, ಎರಡು ತಿಂಗಳಾದ ಮೇಲೆ ಪೊಗದಸ್ತಾದ ಇಲಾಖೆ ಕೊಡುತ್ತೀರಿ:

ಕೆಪಿಎಸ್ಸಿ ಅಕ್ರಮದಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಸಿಐಡಿ ಬಂಧನಕ್ಕೆ ಒಳಗಾದ ಮರುದಿನ ಕೂಡ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ಈಗ ಅರೆಸ್ಟ್ ಮಾಡಿ ಒಂದೆರಡು ತಿಂಗಳು ನಾಟಕ ಮಾಡುತ್ತಾರೆ. ಸ್ವಲ್ಪ ದಿನ ಆದಮೇಲೆ ಇದಕ್ಕಿಂತ ಪೊಗದಸ್ತಾದ ಜಾಗವನ್ನು ಕೊಟ್ಟು ಇನ್ನೊಂದು ಅಕ್ರಮ ಮಾಡಲು ಹಾದಿ ಮಾಡಿಕೊಡುತ್ತಾರೆ ಎಂದು ಕೇಂದ್ರ ಸಚಿವರು ಹರಿಹಾಯ್ದರು. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕೆಪಿಎಸ್ಸಿಯನ್ನು ಸ್ವಚ್ಛ ಮಾಡುವ ಮನಸ್ಸು ಮತ್ತು ಇಚ್ಛಾಶಕ್ತಿ ಎರಡು ಇಲ್ಲ ಎಂದು ಗಂಭೀರ ಆರೋಪ ಮಾಡಿದರು.

95 ಪರ್ಸೆಂಟ್ ಬಂದವರು ಎಲ್ಲೋ ಕೊನೆಯಲ್ಲಿದ್ದಾರೆ:

ಪಶುವೈದ್ಯಕೀಯ ಪರೀಕ್ಷೆಯಲ್ಲಿ ಶೇಕಡ 95 ರಷ್ಟು ಅಂಕ ಬಂದವರಿಗೆ ಅವಕಾಶ ಸಿಕ್ಕಿಲ್ಲ. ಅವರು ಪಟ್ಟಿಯಲ್ಲಿ ಎಲ್ಲೋ ಕೊನೆಯಲ್ಲಿದ್ದಾರೆ. ಆದರೆ ಎರಡೆರಡು ಬಾರಿ ಫೇಲ್ ಆದವರಿಗೆ ಎರಡನೇ ರ‍್ಯಾಂಕ್ ಬಂದಿದೆ. ಇದು ಯಾವ ರೀತಿಯ ಜಾದು ಎಂಬುದನ್ನು ಪ್ರಿಯಾಂಕ ಖರ್ಗೆ ಹೇಳಬೇಕಾಗಿದೆ ಎಂದು ಕೇಂದ್ರ ಸಚಿವರು ಟೀಕಾಪ್ರಹಾರ ನಡೆಸಿದರು.

ಕೆಪಿಎಸ್‌ಸಿ ಬಗ್ಗೆ ಮಾತನಾಡುವುದಕ್ಕೆ ಅಸಹ್ಯವಾಗುತ್ತದೆ. ಅಲ್ಲಿ ಎಲ್ಲವೂ ಕೊಳೆತು ನಾರುತ್ತಿದೆ. ಇಂತಹ ಸಂಸ್ಥೆಯಿಂದ ರಾಜ್ಯಕ್ಕೆ ಒಳ್ಳೆಯದಾಗುವುದಿಲ್ಲ ಎಂದ ಸಚಿವ ಕುಮಾರಸ್ವಾಮಿ ಅವರು; ಹೈಕೋರ್ಟ್ ನಲ್ಲಿ ದಿನವೂ ಈ ಸಂಸ್ಥೆಯ ಅಕ್ರಮಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ. ನೀರಾವರಿ ಇಲಾಖೆ ನೇಮಕಾತಿ ಬಗ್ಗೆ ಹೈಕೋರ್ಟ್ ತಡೆಯಾಜ್ಞೆ ಕೊಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನನಗೆ ಅಧಿಕಾರ ಸಿಕ್ಕರೆ ಕೆಪಿಎಸ್‌ಸಿ ರದ್ದು ಮಾಡುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ಅವರು ನೀಡಿದ್ದ ಹೇಳಿಕೆ ಬಗ್ಗೆ ಪ್ರಸ್ತಾಪ ಮಾಡಿದ ಕೇಂದ್ರ ಸಚಿವರು; ಈಗ ಅಧಿಕಾರ ಸಿಕ್ಕಿದೆಯಲ್ಲ. ಕೆಪಿಎಸ್ಸಿಯನ್ನು ಸ್ವಚ್ಛ ಮಾಡಿ. ಅದು ಯಾವ ಸೋಪು ಸರ್ಫು ಬಳಕೆ ಮಾಡಿ ಕ್ಲೀನ್ ಮಾಡುತ್ತೀರೋ ಮಾಡಿ. ಹಿಂದೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಮಂತ್ರಿಯಾಗಿ ಅಕ್ರಮ ಎಸಗಿದ್ದಿರಿ. ಈಗ ಗೃಹ ಸಚಿವರಾಗಿ ನೀವೇನು ಮಾಡಿದ್ದೀರಿ ಎಂಬುದನ್ನು ಹೇಳಿ? ಎಂದು ಪ್ರಶ್ನಿಸಿದರು.

ಭ್ರಷ್ಟಾಚಾರವನ್ನು ಸೆದೆ ಬಡಿಯುವುದು ಎಂದರೆ ಹೀಗೇನಾ?:

ರಾಜ್ಯದಲ್ಲಿ ನಿರುದ್ಯೋಗ ದಿನೇ ದಿನೇ ಹೆಚ್ಚಾಗುತ್ತಿದೆ. ಜವಾಬ್ದಾರಿ ಸ್ಥಾನದಲ್ಲಿರುವ ಸರ್ಕಾರ ಮತ್ತು ಕೆಪಿಎಸ್ಸಿ ಎರಡೂ ಕೂಡ ಅಕ್ರಮಗಳಲ್ಲಿ ಭಾಗಿಯಾಗಿವೆ. ಯುವಜನರ ಬದುಕಿನಲ್ಲಿ ಈ ಸಂಸ್ಥೆ ಚೆಲ್ಲಾಟವಾಡುತ್ತಿದೆ. ಪ್ರತಿ ಒಂದು ಹುದ್ದೆ ಲಕ್ಷಗಳಷ್ಟೇ ಅಲ್ಲದೆ ಕೋಟಿ ಲೆಕ್ಕದಲ್ಲಿ ಬೀದಿ ಬೀದಿಯಲ್ಲಿ ಬಿಕರಿಯಾಗುತ್ತಿದೆ. ಭ್ರಷ್ಟಾಚಾರವನ್ನು ಸೆದೆ ಬಡಿಯುವುದು ಎಂದರೆ ಹೀಗೇನಾ ಮುಖ್ಯಮಂತ್ರಿಗಳೇ ಎಂದು ಕೇಂದ್ರ ಸಚಿವರು ಸಿಎಂ ಡಿಕೆಶಿ ಅವರನ್ನು ತೀಕ್ಷ್ಣವಾಗಿ ಪ್ರಶ್ನಿಸಿದರು.

ಹಿಂದೆ ಐದು ವರ್ಷ ಅಧಿಕಾರದಲ್ಲಿದ್ದೀರಿ. ಈಗ ನಿಮ್ಮದೇ ಪಕ್ಷ ಮೂರು ವರ್ಷದಿಂದ ಅಧಿಕಾರದಲ್ಲಿದೆ. ಅವಧಿಯಲ್ಲಿ ನಿರುದ್ಯೋಗಿ ಯುವಕರಿಗೆ ಎಷ್ಟು ಕೆಲಸಗಳನ್ನು ಕೊಟ್ಟಿದ್ದೀರಿ? ಈ ಮಾಹಿತಿಯನ್ನು ಸರ್ಕಾರ ಜನರ ಮುಂದೆ ಇಡಬೇಕಾಗುತ್ತದೆ. ಈಗಲಾದರೂ ಒಬ್ಬ ಐಎಎಸ್ ಅಧಿಕಾರಿಗೆ ಬಂಧನಕ್ಕೆ ಒಳಗಾದ ಸಂದರ್ಭದಲ್ಲಿ ಕೆಪಿಎಸ್ಸಿ ಸಂಸ್ಥೆಯನ್ನು ಸ್ವಚ್ಛ ಮಾಡಬೇಕಾಗಿದೆ ಎಂದು ಸಚಿವರು ಕೆಂಡಕಾರಿದರು.

ಕೆಪಿಎಸ್ಸಿ ಸಾಂವಿಧಾನಿಕ ಸಂಸ್ಥೆ. ಆದರೆ ತಾನು ಸರ್ಕಾರದ ಮರ್ಜಿಯಲ್ಲಿ ಇರುವಂತೆ ವರ್ತಿಸುತ್ತಿದೆ. ಇಷ್ಟಕ್ಕೂ ಕೆಪಿಎಸ್ಸಿ ಅಧ್ಯಕ್ಷರ ಅಧಿಕಾರವೇನು? ಹಾಗೆಯೇ ಸದಸ್ಯರ ಅಧಿಕಾರ ವ್ಯಾಪ್ತಿ ಏನು? ಪರೀಕ್ಷಾ ನಿಯಂತ್ರಕನ ಅಧಿಕಾರ ವ್ಯಾಪ್ತಿ ಏನು ಎಂದು ಪ್ರಶ್ನಿಸಿದ ಸಚಿವ ಕುಮಾರಸ್ವಾಮಿ ಅವರು; ಇದುವರೆಗೂ ಈ ಸಂಸ್ಥೆಯಲ್ಲಿ ಇಷ್ಟೊಂದು ಅಕ್ರಮಗಳು ನಿರಂತರವಾಗಿ ನಡೆದುಕೊಂಡು ಬಂದಿವೆ. ಎಲ್ಲಾದರೂ ಒಬ್ಬ ಐಎಎಸ್ ಅಧಿಕಾರಿಯ ಮೇಲೆ ಕ್ರಮ ಜರುಗಿಸಿದ ಉದಾಹರಣೆ ಇದೆಯಾ? ಎಂದು ಕುಮಾರಸ್ವಾಮಿ ಅವರು ಕೇಳಿದರು.

ದಲಿತ ವ್ಯಕ್ತಿಯನ್ನು ಕೆಪಿಎಸ್‌ಸಿ ಅಧ್ಯಕ್ಷನನ್ನಾಗಿ ನೇಮಿಸಿದೆ:

ನನ್ನ ಬಗ್ಗೆ ಪ್ರಿಯಾಂಕ್ ಖರ್ಗೆ ಲಘುವಾಗಿ ಮಾತನಾಡುವ ಅಗತ್ಯ ಇಲ್ಲ. ಏಕೆಂದರೆ ಆರೋಪ ಇರುವುದು ಅವರ ಮೇಲೆ. ಅದನ್ನು ಬೇರೊಬ್ಬರ ಮೇಲೆ ತಿರುಗಿಸಿ ಬಚಾವಾಗುವ ವ್ಯರ್ಥ ಪ್ರಯತ್ನ ಬೇಡ. ಈ ಪ್ರಕರಣದಿಂದ ಖರ್ಗೆ ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎರಡು ಅವಧಿಗಳಲ್ಲ ನಾನು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಯಾವುದೇ ಸಂದರ್ಭದಲ್ಲಿ, ಯಾವುದೇ ಕಾರಣಕ್ಕೂ ನಾನು ಅಕ್ರಮಕ್ಕೆ ಎಡೆ ಮಾಡಿಕೊಟ್ಟಿಲ್ಲ. ಕಾನೂನು ಮೀರಿ ಯಾವುದೇ ಸೂಚನೆ ಅಥವಾ ಆದೇಶಗಳನ್ನು ಕೊಟ್ಟಿಲ್ಲ. 2006ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ದಲಿತ ಸಮುದಾಯದ ವ್ಯಕ್ತಿ ಒಬ್ಬರನ್ನು ಕೆಪಿಎಸ್ಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದೆ. ನನ್ನ ಸಂಬಂಧಿಕರನ್ನು ಅಥವಾ ಆಪ್ತರನ್ನು ಕರೆದುಕೊಂಡು ಬಂದು ಆ ಹುದ್ದೆಯ ಮೇಲೆ ಕೂರಿಸಿಲ್ಲ. ಒಬ್ಬ ದಲಿತ ವ್ಯಕ್ತಿಯನ್ನು ಕೆಪಿಎಸ್ಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದೆ. ನನ್ನ ಕಾಲದಲ್ಲಿ ಯಾವುದಾದರೂ ಪ್ರಶ್ನೆ ಪತ್ರಿಕೆ ಲೀಕ್ ಆಗಿತ್ತಾ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಿದರು.

ಬೆಂಗಳೂರಿಗೆ ರಾಹುಲ್ ಗಾಂಧಿ ಬರಲಿ:

ನಿಮ್ಮ ಕಾಲದಲ್ಲಿ ಏನೆಲ್ಲಾ ಅಕ್ರಮಗಳು ನಡೆದಿದೆ ಎಂಬುದನ್ನು ಹೇಳಲು ಅಸಹ್ಯ ಆಗುತ್ತದೆ ಎಂದು ಪ್ರಿಯಾಂಕ ಖರ್ಗೆ ಮೇಲೆ ಚಾಟಿ ಬೀಸಿದ ಸಚಿವರು; ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಹಾಯಕ ಏಕ್ಸಿಟೀವ್ ಎಂಜಿನಿಯರ್-ಗ್ರೇಡ್ 1 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತುಟಿ ಬಿಚ್ಚಲು ಭಯ ಪಡುತ್ತಿದ್ದೀರಿ. ಪ್ರಶ್ನೆ ಪತ್ರಿಕೆಗಳನ್ನು ರೆಸಾರ್ಟಿಗೆ ತೆಗೆದುಕೊಂಡು ಹೋಗಿ ಹಣ ಕೊಟ್ಟ ಅಭ್ಯರ್ಥಿಗಳಿಗೆ ನೀಡುತ್ತಿರಿ. ಉತ್ತರ ಹೇಗೆ ಬರೆಯಬೇಕು ಎಂದು ಅವರಿಗೆ ತರಬೇತಿ ನೀಡಿದ್ದೀರಿ. ನಿಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ದೇಶದ ಉದ್ದಗಲಕ್ಕೂ ಓಡಾಡಿಕೊಂಡು ಭಾಷಣ ಬಿಗಿದಿದ್ದೇ ಬಿಗಿದಿದ್ದು.. ವಿದ್ಯಾರ್ಥಿಗಳ ಜೊತೆ ಸಂವಾದ ಮಾಡಿದ್ದೆ ಮಾಡಿದ್ದು. ಅವರನ್ನು ಬೆಂಗಳೂರಿಗೆ ಒಮ್ಮೆ ಕರೆಸಿ. ಕೆಪಿಎಸ್ಸಿ ಅಕ್ರಮಗಳ ಬಗ್ಗೆ ಎದುರಿಗೆ ಯುವಕರನ್ನು ಕೂರಿಸಿಕೊಂಡು ಸಂವಾದ ನಡೆಸುವಂತೆ ಹೇಳಿ ಎಂದು ಕಿಡಿಕಾರಿದರು.

ಹೆಜ್ಜೆಹೆಜ್ಜೆಗೂ ತಪ್ಪು ಮಾಡಿದ ಕಾರ್ಯದರ್ಶಿ:

ಸಹಾಯಕ ಏಕ್ಸಿಟೀವ್ ಎಂಜಿನಿಯರ್-ಗ್ರೇಡ್ 1 ಹುದ್ದೆಗಳಿಗೆ ಆಯ್ಕೆ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಅಂದಿನ ಕೆಪಿಎಸ್ಸಿ ಕಾರ್ಯದರ್ಶಿ ಹೆಜ್ಜೆಹೆಜ್ಜೆಗೂ ತಪ್ಪು ಮಾಡಿದ್ದಾರೆ. ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಲು ಉದ್ದೇಶಪೂರ್ವಕವಾಗಿಯೇ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಅಂತಿಮ ಪಟ್ಟಿ ಮಾಡಿ ಕಳಿಸುವಾಗ ಅವರು ಯಾವುದೇ ನಿಯಮವನ್ನು ಪಾಲನೆ ಮಾಡಿಲ್ಲ. ಅಧ್ಯಕ್ಷರು ಮತ್ತು ಸದಸ್ಯರ ಗಮನಕ್ಕೆ ತಾರದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ. ಕೋರಂ ಇಲ್ಲದಿದ್ದರೂ ಅವರು ಯಾವ ಆಧಾರದಲ್ಲಿ ಅಂತಿಮ ಪಟ್ಟಿಯನ್ನು ಕಲಿಸಿದರು ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

ಹೈಕೋರ್ಟಿಗೆ ಆಕ್ಷೇಪಣೆ ಸಲ್ಲಿಸಲಿಲ್ಲ, ಏಕೆ?:

ಇಡಿ ಆಯ್ಕೆ ಪ್ರಕ್ರಿಯೆ ಅಕ್ರಮದಿಂದ ಕೂಡಿದೆ. ಕಾರ್ಬನ್ ಬಳಕೆ ಮಾಡಿ ಓಎಂಆರ್ ಶೀಟ್ ಗಳನ್ನು ತಿದ್ದಲಾಗಿದೆ. ತನಿಖೆಯಲ್ಲಿ ಎಲ್ಲವೂ ಬಯಲಿಗೆ ಬಂದಿದೆ. ಫೋರೆನ್ಸಿಕ್ ವರದಿಯಲ್ಲಿ ಕೂಡ ಅಕ್ರಮ ನಡೆದಿರುವುದು ಮತ್ತು ಓಎಂಆರ್ ಶೀಟ್ ಗಳನ್ನು ತಿದ್ದಿರುವುದು, ಸಿಸಿ ಕ್ಯಾಮೆರಾ ಡಾಟಾವನ್ನು ಹಾಳು ಮಾಡಿರುವುದು ಸಾಬೀತಾಗಿದೆ. ಹೀಗಿದ್ದರೂ ಕೂಡ ರಾಜ್ಯ ಸರ್ಕಾರದ ಕಡೆಯಿಂದ ಹೈಕೋರ್ಟಿಗೆ ಯಾವುದೇ ಆಕ್ಷೇಪಣೆ ಸಲ್ಲಿಸುವುದಿಲ್ಲ. ಎಲ್ಲವನ್ನೂ ಉದ್ದೇಶಪೂರ್ವಕವಾಗಿಯೇ ಕಡೆಗಣಿಸುವ ಜಾಣತನ ಮಾಡಲಾಗುತ್ತದೆ ಎಂದು ಸಚಿವರು ಗಂಭೀರ ಆರೋಪ ಮಾಡಿದರು.

ಅಷ್ಟೇ ಅಲ್ಲದೆ ನ್ಯಾಯಾಲಯಕ್ಕೆ ತಪ್ಪು ಮಾಹಿತಿಯನ್ನು ನೀಡಿ ದಾರಿ ತಪ್ಪಿಸುವ ಕೆಲಸವನ್ನು ಕೂಡ ಸರ್ಕಾರ ಮಾಡಿದೆ. ಅನೇಕ ಬಾರಿ ಹೈಕೋರ್ಟ್ ನಲ್ಲಿ ಸಮಯ ಕೇಳಿ ವಿಚಾರಣೆಯನ್ನು ಮುಂದಕ್ಕೆ ಹಾಕಿಸಿಕೊಳ್ಳುವ ಪರಿಪಾಠವನ್ನು ಸರ್ಕಾರ ನಡೆಸಿಕೊಂಡು ಬಂದಿದೆ. ಇನ್ನೊಂದೆಡೆ ಅಕ್ರಮ ಮಾರ್ಗದಲ್ಲಿ ಉದ್ಯೋಗ ಗಿಟ್ಟಿಸಿದ ಅಭ್ಯರ್ಥಿಗಳು ಕಳೆದ ಒಂದು ವರ್ಷದಿಂದ ಸರ್ಕಾರಿ ವೇತನವನ್ನು ಪಡೆದುಕೊಂಡು ಮುಂದುವರೆದಿದ್ದಾರೆ. ನಿಮ್ಮ ವಕೀಲರು ಏನು ಮಾಡುತ್ತಿದ್ದಾರೆ? ಕೆಲಸ ಮಾಡುವುದು ಬಿಟ್ಟು ಎಲ್ಲರೂ ಐಸಿಯುನಲ್ಲಿ ಇದ್ದಾರೆಯೇ? ಎಂದು ಸಚಿವರು ಪ್ರಿಯಾಂಕ ಖರ್ಗೆ ವಿರುದ್ಧ ಕಠಿಣ ಶಬ್ದಗಳಲ್ಲಿ ವಾಗ್ದಾಳಿ ನಡೆಸಿದರು.

ಸಹಾಯಕ ಏಕ್ಸಿಟೀವ್ ಎಂಜಿನಿಯರ್-ಗ್ರೇಡ್ 1 ಹುದ್ದೆಗಳಿಗೆ ಆಯ್ಕೆಯಲ್ಲಿ ಅಕ್ರಮ ಮತ್ತು ಪಶುವೈದ್ಯಾಧಿಕಾರಿಗಳ ಆಯ್ಕೆಯ ಅಕ್ರಮದಲ್ಲಿ ಕೆಪಿಎಸ್ಸಿಗಿಂತ ಸರ್ಕಾರದ ನಿರ್ಲಕ್ಷ ಮತ್ತು ಹೊಣೆಗೇಡಿತನ ಸ್ಪಷ್ಟವಾಗಿ ಕಾಣುತ್ತದೆ. ಹೀಗಾಗಿ ಇದೆಲ್ಲಾ ಅಕ್ರಮಗಳಿಗೆ ಸರ್ಕಾರವೇ ನೇರ ಹೊಣೆ. ಈಗ ಯಾರ ರಾಜೀನಾಮೆ ಪಡಿಯುತ್ತೀರಿ? ಯಾರ ತಲೆದಂಡ ಮಾಡುತ್ತೀರಿ? ಎಂಬುದನ್ನು ಮುಖ್ಯಮಂತ್ರಿ ಅವರೇ ಹೇಳಬೇಕಾಗುತ್ತದೆ. ಎಲ್ಲಾ ಕಡೆ ಕೆಪಿಎಸ್‌ಸಿ ಯಲ್ಲಿ ದುಡ್ಡು ಕೊಟ್ಟರೆ ಅಂಕ ಪಡೆಯಬಹುದು ಮತ್ತು ಕೆಲಸವನ್ನು ಗಿಟ್ಟಿಸಬಹುದು ಎಂದು ಮಾತನಾಡುತ್ತಿದ್ದಾರೆ. ನಿಮ್ಮ ಹಣೆಬರಹ ಇಲ್ಲಿಗೆ ಬಂದು ನಿಂತಿದೆ ಎಂದು ಹೇಳಿದರು ಕೇಂದ್ರ ಸಚಿವರು.

ಗ್ಯಾನೇಂದ್ರ ಅವರನ್ನು ದಿಲ್ಲಿಗೆ ಕಳಿಸಿದ್ದು ಯಾರು?:

ಐಎಎಸ್ ಅಧಿಕಾರಿ ಗ್ಯಾನೇಂದ್ರ ದಿಲ್ಲಿಗೆ ಹೋಗಿದ್ದು ಹೇಗೆ? ಯಾರ ಅನುಮತಿ ಪಡೆದು ಅವರು ಬೆಂಗಳೂರು ಬಿಟ್ಟು ಹೊರಗೆ ಹೋದರು? ಇಲ್ಲಿ ಜಾರಿ ನಿರ್ದೇಶನಾಲಯ ದಾಳಿ ಮಾಡುತ್ತಿದ್ದಾರೆ ಅವರು ಇದ್ದಕ್ಕಿದ್ದ ಹಾಗೆ ದೆಹಲಿಗೆ ಹೋದ ಕಾರಣವೇನು? ದೆಹಲಿಗೆ ಹೋಗಿ ಆ ವ್ಯಕ್ತಿ ಮಾಡಿದ್ದೇನು? ಯಾವ ಮಹಿಳೆ ಜೊತೆ ಗಲಾಟೆ ಮಾಡಿಕೊಂಡರು? ಅಲ್ಲಿಂದ ಯಾರೂ ಬಂದು ಅವರನ್ನು ಹೊರಗಡೆ ಕರೆದುಕೊಂಡು ಹೋದರು? ಕೊನೆಗೆ ಚೆನ್ನೈಗೆ ಬಿಟ್ಟು ಹೋಗಿದ್ದು ಯಾರು? ಚೆನ್ನೈನಿಂದ ಬಂದ ಈ ವ್ಯಕ್ತಿಯನ್ನು ಮೂರು ದಿನ ದೇವನಹಳ್ಳಿ ಬಳಿ ರೆಸಾರ್ಟ್ ನಲ್ಲಿ ಇಟ್ಟಿದ್ದು ಯಾರು? ಎಂಬುದನ್ನು ಗೃಹ ಸಚಿವರು ಹೇಳಲೇಬೇಕಾಗುತ್ತದೆ. ಇದೆಲ್ಲವೂ ಅವರಿಗೆ ಗೊತ್ತಿಲ್ಲದೆ ನಡೆಯಲು ಸಾಧ್ಯವೇ? ಅಥವಾ ರಾಜ್ಯದ ಗುಪ್ತದಳ ನಿದ್ದೆ ಮಾಡುತ್ತಿದೆಯೇ? ಎಂದು ನಾನು ಕೇಳಿದ ಬಯಸುತ್ತೇನೆ ಎಂದು ಸಚಿವ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿದಿನ ಜಾಹೀರಾತಿನ ಜಾಹೀರಾತು ಕೊಟ್ಟುಕೊಂಡು ಪ್ರಚಾರ ಪಡೆಯುತ್ತಿದ್ದೀರಿ. ಈ ಪ್ರಕರಣದ ಬಗ್ಗೆಯೂ ಜಾಹಿರಾತು ಕೊಡಬೇಕಾಗಿತ್ತು. ಅಬ್ಬಬ್ಬಾ.. ರೌಂಡ್ ರೌಂಡ್ ಜಾಹೀರಾತು.. ನೋಡಲು ಎರಡು ಕಣ್ಣು ಸಾಲದು. ನಿಮ್ಮ ಜನ್ಮಕ್ಕೆ ನಾಚಿಕೆ ಆಗಬೇಕು. ಯಾವ ಮುಖ ಇಟ್ಟುಕೊಂಡು ಜನರ ಮುಂದೆ ಹೋಗುತ್ತೀರಿ. ಇನ್ನಾದರೂ ರಾಜ್ಯದ ಯುವಕರು ಎದ್ದು ನಿಲ್ಲಬೇಕು. ಹಣಕ್ಕಾಗಿ ಕೆಪಿಎಸ್ಸಿ ಸಂಸ್ಥೆಯನ್ನು ಹಾಳು ಮಾಡಿರುವ, ನೋಟಿಗಾಗಿ ಉದ್ಯೋಗಗಳನ್ನು ಮಾರಿಕೊಳ್ಳುತ್ತಿರುವ ಇಂಥವರಿಗೆ ಪಾಠ ಕಲಿಸಬೇಕು ಎಂದು ಸಚಿವರು ಕರೆ ನೀಡಿದರು.

ಮಾಧ್ಯಮಗೋಷ್ಠಿಯಲ್ಲಿ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ, ಹಿರಿಯ ಮುಖಂಡ ತಿಮ್ಮೇಗೌಡ, ಪಕ್ಷದ ವಕ್ತಾರರಾದ ಶ್ವೇತಾ ಯಾದವ್, ನರಸಿಂಹಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

Comments

Leave a Comment

Prev Post ಕುದುರೆಮುಖದ ಬೆಟ್ಟಗಳಲ್ಲಿ ನೀಲಕುರಿಂಜಿಯ ನೀಲಿ ಲೋಕ; ಚಾರಣಪ್ರಿಯರ ಗಮನ ಸೆಳೆಯುತ್ತಿರುವ ವಿಶೇಷ ಹೂವುಗಳು
Next Post ದಿವಂಗತ ಮಾಜಿ ಸಚಿವ ವೀರಣ್ಣನವರ ಜನಪರ ಸೇವೆಗೆ ತುಮಕೂರಿನಲ್ಲಿ ನುಡಿ ನಮನ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ನ್ಯಾ.‌ನಾಗಮೋಹನ್ ದಾಸ್ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ:ಬಸವರಾಜ ಬೊಮ್ಮಾಯಿ

ಸಿಎಂ ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದಿದ್ದಾರೆ: ಬಸವರಾಜ ಬೊಮ್ಮಾಯಿ

ಒಡಿಶಾ ಶಾಸಕರನ್ನು ನಾನು ಕರೆಸಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಪಕ್ಷ ಹೇಳಿದ್ದನ್ನು ಮಾಡುತ್ತೇನೆ ನನಗೆ ಇದು ಹೊಸತಲ್ಲ, ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದಿಂದಲೂ ಇದನ್ನು ಮಾಡುತ್ತಿರುವೆ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News