ಮಂಗಳೂರು ಕಾಲೇಜು ಶಿಕ್ಷಣ ಜಂಟಿ ನಿರ್ದೇಶಕರ ವಿರುದ್ದ ಲೋಕಾಯುಕ್ತಕ್ಕೆ ದೂರು.
From Jayaram Udupi
ಮಂಗಳೂರು ಕಾಲೇಜು ಶಿಕ್ಷಣ ಜಂಟಿ ನಿರ್ದೇಶಕರ ವಿರುದ್ದ ಲೋಕಾಯುಕ್ತಕ್ಕೆ ದೂರು.
ಮಂಗಳೂರು:
ಪಿಂಚಣಿ ಮಂಜೂರಾತಿಗೆ ಸಂಬಂಧಿಸಿ ಕರ್ತವ್ಯ ನಿರ್ಲಕ್ಷ ತೋರಲಾಗಿದೆ ಎಂದಾರೋಪಿಸಿ ಮಂಗಳೂರು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ವಿರುದ್ದ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.
ಬಂಟ್ವಾಳದ ಎಸ್.ವಿ.ಎಸ್. ಕಾಲೇಜಿನಲ್ಲಿ ಅನುದಾನಿತ ಹುದ್ದೆಯಲ್ಲಿ ಪರಿಚಾರಕರಾಗಿ ಕೆಲಸ ಮಾಡುತ್ತಿದ್ದ ಕಾಂತಪ್ಪ ಅವರ ಮರಣಾನಂತರದ ಕುಟುಂಬ ಪಿಂಚಣಿ ಮತ್ತು ಇತರ ಆರ್ಥಿಕ ಸೌಲಭ್ಯಗಳನ್ನು ಅವರ ಪತ್ನಿಗೆ ನಿರಾಕರಿಸಲಾಗಿತ್ತು.
ಈ ಬಗ್ಗೆ ಮೃತ ಕಾಂತಪ್ಪ ಅವರ ಪತ್ನಿ ಗಿರಿಜಾ ಅವರು ಕಾಲೇಜು ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳಿಗೆ ದೂರು ನೀಡಿದ್ದರು. ಕಾಲೇಜು ಶಿಕ್ಷಣ ಆಯುಕ್ತರ ಕಚೇರಿಯು ೨೦೨೫ರ ನವೆಂಬರ್ ೨೪ ರಂದು ಪ್ರಕರಣವನ್ನು ಪರಿಶೀಲಿಸಿ ಪಿಂಚಣಿ ಪ್ರಸ್ತಾವನೆ ಹಾಗೂ ಸೇವಾ ಪುಸ್ತಕವನ್ನು ಮರು ಟಪ್ಪಾಲಿನಲ್ಲಿ ಸಲ್ಲಿಸುವಂತೆ ಜಂಟಿ ನಿರ್ದೇಶಕರಾದ ಡಾ.ಕವಿತಾ ಅವರಿಗೆ ನಿರ್ದೇಶನ ನೀಡಿತ್ತು.
ಆದರೆ ಮಂಗಳೂರಿನ ಜಂಟಿ ನಿರ್ದೇಶಕರು ಈ ಬಗ್ಗೆ ಕ್ರಮ ವಹಿಸದೆ ನಿರ್ಲಕ್ಷ್ಯ ಮಾಡಿದ್ದರು. ಇದರಿಂದ ನೊಂದ ಗಿರಿಜಾ ಅವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.
ಲೋಕಾಯುಕ್ತ ದೂರಿನ ಸಂಖ್ಯೆ ವೆಬ್ ಸೈಟಿನಲ್ಲಿ ಲಭ್ಯವಿದೆ.೧೮೩೦೨/೨೦೨೫.
ಲೋಕಾ, ಎಂ.ವೈ.ಎಸ್
--------
*ಅಟೋ ಪ್ರಯಾಣ ದರ ಏರಿಕೆ.
ಮಂಗಳೂರು: ಆಟೋ ರಿಕ್ಷಾ ಪ್ರಯಾಣಿಕರಿಗೆ ಪರಿಷ್ಕೃತ ದರ ಜಾರಿಗೆ ಬರಲಿದ್ದು, ಮೊದಲ 1.5 ಕಿ.ಮೀ. ಪ್ರಯಾಣಕ್ಕೆ ಕನಿಷ್ಠ ₹40 ದರ ನಿಗದಿಪಡಿಸಲಾಗಿದೆ. ಗರಿಷ್ಠ ಮೂರು ಮಂದಿ ಪ್ರಯಾಣಿಕರಿಗೆ ಈ ದರ ಅನ್ವಯವಾಗಲಿದೆ. ನಂತರದ ಪ್ರತಿ ಹೆಚ್ಚುವರಿ ಕಿಲೋಮೀಟರ್‌ಗೆ ₹20 ದರ ವಿಧಿಸಬಹುದಾಗಿದೆ.
ಆಟೋ ಕಾಯುವಿಕೆಯ ಮೊದಲ 10 ನಿಮಿಷ ಉಚಿತವಾಗಿದ್ದು, ಬಳಿಕ ಪ್ರತಿ 15 ನಿಮಿಷಕ್ಕೆ ಅಥವಾ ಅದರ ಭಾಗಕ್ಕೆ ₹5 ದರ ವಿಧಿಸಲು ಅವಕಾಶ ನೀಡಲಾಗಿದೆ.
ಪ್ರಯಾಣಿಕರ ಲಗೇಜ್‌ಗೆ ಮೊದಲ 20 ಕೆ.ಜಿ.ವರೆಗೆ ಯಾವುದೇ ಶುಲ್ಕ ಇರುವುದಿಲ್ಲ. ನಂತರ ಪ್ರತಿ 20 ಕೆ.ಜಿ. ಅಥವಾ ಅದರ ಭಾಗಕ್ಕೆ ₹5 ದರ ವಿಧಿಸಬಹುದಾಗಿದೆ. ಲಗೇಜ್ ಸಾಗಿಸುವ ಸಂದರ್ಭದಲ್ಲಿ ಕನಿಷ್ಠ ಒಬ್ಬ ಪ್ರಯಾಣಿಕ ಕಡ್ಡಾಯವಾಗಿ ಜೊತೆಗಿರಬೇಕು.
ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಪರಿಷ್ಕೃತ ದರದ ಒಂದೂವರೆ ಪಟ್ಟು ದರವನ್ನು ಪ್ರಯಾಣಿಕರಿಂದ ಪಡೆಯಲು ಅವಕಾಶ ನೀಡಲಾಗಿದೆ.






Comments
Leave a Comment