ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಕರ್ನಾಟಕ ಸರ್ಕಾರದಿಂದ ಭರ್ಜರಿ ನಗದು ಪುರಸ್ಕಾರ ಘೋಷಣೆ
ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಕರ್ನಾಟಕ ಸರ್ಕಾರದಿಂದ ಭರ್ಜರಿ ನಗದು ಪುರಸ್ಕಾರ ಘೋಷಣೆ
link ; https://view.officeapps.live.com/op/view.aspx?src=https%3A%2F%2Fprabhavaa.com%
2Fmedia%2Fdocuments%2Fsslc_
rewards_2.docx&wdOrigin=BROWSELINK
ಬೆಂಗಳೂರು, ಆ. 31-ಪ್ರಸಕ್ತ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಶೈಕ್ಷಣಿಕ ಜಿಲ್ಲಾವಾರು ಹಾಗೂ ಬ್ಲಾಕ್‌ವಾರು ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ನಗದು ಪುರಸ್ಕಾರ ನೀಡಲು ಮಹತ್ವದ ಆದೇಶ ಹೊರಡಿಸಿದೆ. ಈ ಯೋಜನೆಯಡಿ ಅಂದಾಜು 800 ವಿದ್ಯಾರ್ಥಿಗಳಿಗೆ ತಲಾ ರೂ.50,000ರಂತೆ ನೇರವಾಗಿ ಆಧಾರ್ ಜೋಡಣೆಗೊಂಡ ಬ್ಯಾಂಕ್ ಖಾತೆಗೆ State DBT Portal ಮೂಲಕ ಪುರಸ್ಕಾರ ಜಮಾ ಮಾಡಲಾಗುವುದು.
ಕರ್ನಾಟಕ ಸರ್ಕಾರವು 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆಯನ್ನು ಗೌರವಿಸಲು ಭರ್ಜರಿ ಹೆಜ್ಜೆ ಇಟ್ಟಿದೆ. ಕರ್ನಾಟಕ ಸರ್ಕಾರವು 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆಯನ್ನು ಉತ್ತೇಜಿಸಲು ತೆಗೆದುಕೊಂಡಿರುವ ಕ್ರಮ ಅಭೂತಪೂರ್ವ ಎನ್ನಬಹುದಾಗಿದೆ.
ಶೈಕ್ಷಣಿಕ ಜಿಲ್ಲಾವಾರು ಹಾಗೂ ಬ್ಲಾಕ್‌ವಾರು ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ತಲಾ ರೂ.50,000ರ ನಗದು ಪುರಸ್ಕಾರ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದ್ದು, ಅಂದಾಜು 800 ವಿದ್ಯಾರ್ಥಿಗಳ ಆಧಾರ್ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ನೇರವಾಗಿ DBT ಪೋರ್ಟಲ್ ಮೂಲಕ ಈ ಮೊತ್ತ ಜಮಾ ಆಗಲಿದೆ. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದೊಂದಿಗೆ ಹೊರಡಿಸಿರುವ ಈ ಆದೇಶವು ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದೆ.
“ಗುಣಮಟ್ಟ ಭರವಸೆ ಮತ್ತು ವಿದ್ಯಾರ್ಥಿ ಪ್ರೇರಣಾ ಉಪಕ್ರಮ” ಕಾರ್ಯಕ್ರಮದಡಿ ರೂ.325.00 ಲಕ್ಷ ಅನುದಾನವನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗಿದ್ದು, ಕೊರತೆಯಾಗುವ ಮೊತ್ತವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ತನ್ನ ಸ್ವಂತ ಮೂಲಗಳಿಂದ ಭರಿಸಬೇಕಾಗಿದೆ. ಈ ಪುರಸ್ಕಾರವು ಜಿಲ್ಲಾವಾರು ಆಯ್ಕೆಯಾದ 3 ವಿದ್ಯಾರ್ಥಿಗಳು ಹಾಗೂ ಬ್ಲಾಕ್‌ವಾರು ಆಯ್ಕೆಯಾದ 3 ವಿದ್ಯಾರ್ಥಿಗಳಿಗೆ (ಜಿಲ್ಲಾವಾರು ಆಯ್ಕೆಯಾದವರನ್ನು ಹೊರತುಪಡಿಸಿ ನೀಡಲಾಗುವುದು. ಸಮಾನ ಅಂಕ ಪಡೆದ ವಿದ್ಯಾರ್ಥಿಗಳನ್ನೂ ಒಳಗೊಂಡಂತೆ ಪುರಸ್ಕಾರ ವಿತರಣೆ ನಡೆಯಲಿದೆ.
ಅನುದಾನದ ಬಳಕೆಯ ಲೆಕ್ಕಪತ್ರಗಳನ್ನು ನಿಯಮಾನುಸಾರ ಮಂಡಲಿಯು ಇಡಬೇಕು, ಪುರಸ್ಕಾರವನ್ನು ಕಡ್ಡಾಯವಾಗಿ State Scholarship Portal ಮೂಲಕವೇ ಪಾವತಿಸಬೇಕು, ವರ್ಷಾಂತ್ಯದಲ್ಲಿ ಉಪಯೋಗಿತಾ ಪ್ರಮಾಣ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಬೇಕು, ಫಲಾನುಭವಿಗಳ ಪಟ್ಟಿ ಹಾಗೂ ಪಾವತಿ ವಿವರಗಳನ್ನು ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಬೇಕು ಎಂಬ ಷರತ್ತುಗಳನ್ನು ಸರ್ಕಾರ ಸ್ಪಷ್ಟಪಡಿಸಿದೆ.
ಈ ನಿರ್ಧಾರವು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿದೆ. ರಾಜ್ಯದಾದ್ಯಂತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಸುವಲ್ಲಿ ಈ ಪುರಸ್ಕಾರ ಯೋಜನೆ ಪ್ರಮುಖ ಪಾತ್ರವಹಿಸಲಿದೆ .






Comments
Leave a Comment