PRABHAVAA.COM

ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ಜನ್ಮದಿನ ಸಂಭ್ರಮ

Bengaluru Urban:

Font size:

ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ಜನ್ಮದಿನ ಸಂಭ್ರಮ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ಕಲಾವಿದ, ರಂಗಕರ್ಮಿ ಹಾಗೂ ಡಿಂಗ್ರಿ ನಾಗರಾಜ್ ಅವರ ಜನ್ಮದಿನವನ್ನು ಆಡುಗೋಡಿಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಿತ್ರರಂಗದ ಕಲಾಭಿಮಾನಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ಅದ್ದೂರಿಯಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅರ್ಚನೆ ನೆರವೇರಿಸಿ ಡಿಂಗ್ರಿ ನಾಗರಾಜ್ ಅವರ ಆರೋಗ್ಯ, ಆಯುಷ್ಯ ಹಾಗೂ ಇನ್ನಷ್ಟು ಕಲಾಸೇವೆಗೆ ಶುಭ ಹಾರೈಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಟ ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ, ಎಸ್ಕಾರ್ಟ್ ಶ್ರೀನಿವಾಸ್, ಶಿವಮೊಗ್ಗ ಭಾಸ್ಕರ್, ಆಡುಗೋಡಿ ಶ್ರೀನಿವಾಸ್, ಕಲಾವಿದರಾದ ಜೂನಿಯರ್ ಜಗ್ಗಿ ಬಸವರಾಜು, ಸುಧಾ, ಭೂಮಿ ಪ್ರಿಯ, ಆಡುಗೋಡಿ ರಾಜು, ದಾಸೇಗೌಡ , ಸೇರಿದಂತೆ ಅನೇಕ ಅಭಿಮಾನಿಗಳು ಕೇಕ್ ಕತ್ತರಿಸಿ, ಪುಷ್ಪಗುಚ್ಛಗಳನ್ನು ನೀಡಿ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಿದರು.
ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಡಿಂಗ್ರಿ ನಾಗರಾಜ್ ಅವರು 10 ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಹಾಗೂ 800ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳು ಮತ್ತು ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿ ಕನ್ನಡಿಗರ ಮನೆಮಾತಾಗಿದ್ದಾರೆ. ತಮ್ಮ ವಿಶಿಷ್ಟ ಹಾಸ್ಯ ಶೈಲಿ, ಸರಳ ವ್ಯಕ್ತಿತ್ವ ಮತ್ತು ಅದ್ಭುತ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.
ಕೇವಲ ನಟನೆಯಲ್ಲಿ ಮಾತ್ರವಲ್ಲದೆ, ಕಲಾವಿದರ ಹಿತಾಸಕ್ತಿಗಾಗಿ ಕೂಡ ಅವರು ನಿರಂತರವಾಗಿ ಶ್ರಮಿಸುತ್ತಿದ್ದು, ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಅಧ್ಯಕ್ಷರಾಗಿ ಅನೇಕ ಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರ ಸಾಮಾಜಿಕ ಕಾಳಜಿ ಹಾಗೂ ಕಲಾವಿದರ ಪರ ಹೋರಾಟಗಳು ಚಿತ್ರರಂಗದಲ್ಲಿ ವಿಶೇಷ ಗೌರವವನ್ನು ತಂದಿವೆ.
ಡಿಂಗ್ರಿ ನಾಗರಾಜ್ ಅವರ ಕಲಾಸಾಧನೆಗೆ ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಸಾವಿರಾರು ಪ್ರಶಸ್ತಿಗಳು ಮತ್ತು ಸನ್ಮಾನಗಳನ್ನು ನೀಡಿ ಗೌರವಿಸಿವೆ. ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ಅಪಾರವಾಗಿದ್ದು, ಯುವ ಕಲಾವಿದರಿಗೆ ಪ್ರೇರಣೆಯಾಗಿ ನಿಂತಿದ್ದಾರೆ.
ಜನ್ಮದಿನದ ಸಂಭ್ರಮದಲ್ಲಿ ಭಾಗವಹಿಸಿದ್ದ ಸ್ನೇಹಿತರು ಹಾಗೂ ಅಭಿಮಾನಿಗಳು, ಡಿಂಗ್ರಿ ನಾಗರಾಜ್ ಅವರು ಇನ್ನೂ ಹಲವು ವರ್ಷಗಳ ಕಾಲ ಉತ್ತಮ ಆರೋಗ್ಯದೊಂದಿಗೆ ಕನ್ನಡ ಕಲೆ ಮತ್ತು ಸಂಸ್ಕೃತಿಗೆ ಸೇವೆ ಸಲ್ಲಿಸಲಿ ಎಂದು ಹಾರೈಸಿದರು.

Comments

Leave a Comment

Prev Post ಗ್ರೇಟರ್ ಬೆಂಗಳೂರು ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ವಿನಾಯಿತಿ – ಸರ್ಕಾರದ ಹೊಸ ಆದೇಶದಿಂದ ಮನೆಮಾಲೀಕರಿಗೆ ದೊಡ್ಡ ಸೌಲಭ್ಯ

ಕರ್ನಾಟಕ ಚಲನಚಿತ್ರ ಪೋಷಕರ ಕಲಾವಿದರ ಸಂಘದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಡಿಂಗ್ರಿ ನಾಗರಾಜ್ ಅವಿರೋಧ ಆಯ್ಕೆ

ಕರ್ನಾಟಕ ಚಲನಚಿತ್ರ ಪೋಷಕರ ಕಲಾವಿದರ ಸಂಘದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಡಿಂಗ್ರಿ ನಾಗರಾಜ್ ಅವಿರೋಧ ಆಯ್ಕೆ

ಕಂಠೀರವ ಸ್ಟುಡಿಯೋಸ್ ಆವರಣದಲ್ಲಿ ಟಿ.ಎಸ್. ಕರಿಬಸಯ್ಯ ಪುತ್ಥಳಿ ಅನಾವಣಗೊಳಿಸಿ, ವಜ್ರಮಹೋತ್ಸವ ಆಚರಿಸಬೇಕು : ಕಲಾ ಕಂಠೀರವ ದಿ. ಟಿ.ಎಸ್. ಕರಿಬಸಯ್ಯ ಸೇವಾ ಟ್ರಸ್ಟ್ ಆಗ್ರಹ

ಕಂಠೀರವ ಸ್ಟುಡಿಯೋಸ್ ಆವರಣದಲ್ಲಿ ಟಿ.ಎಸ್. ಕರಿಬಸಯ್ಯ ಪುತ್ಥಳಿ ಅನಾವಣಗೊಳಿಸಿ, ವಜ್ರಮಹೋತ್ಸವ ಆಚರಿಸಬೇಕು : ಕಲಾ ಕಂಠೀರವ ದಿ. ಟಿ.ಎಸ್. ಕರಿಬಸಯ್ಯ ಸೇವಾ ಟ್ರಸ್ಟ್ ಆಗ್ರಹ

ಬೆಂಗಳೂರು: ವಿಶ್ವ ಗುಬ್ಬಚ್ಚಿ ದಿನಾಚರಣೆ ವಿಶೇಷವಾಗಿ ಆಚರಣೆ

ಬೆಂಗಳೂರು: ವಿಶ್ವ ಗುಬ್ಬಚ್ಚಿ ದಿನಾಚರಣೆ ವಿಶೇಷವಾಗಿ ಆಚರಣೆ

ಬಿಡದಿ–ಬೈರಮಂಗಲ ಸ್ಮಾರ್ಟ್ ಸಿಟಿ: ಅಭಿವೃದ್ಧಿ ಕನಸುಗಳ ನಡುವೆ ರೈತರ ಬದುಕಿನ ಹೋರಾಟ

ಬಿಡದಿ–ಬೈರಮಂಗಲ ಸ್ಮಾರ್ಟ್ ಸಿಟಿ: ಅಭಿವೃದ್ಧಿ ಕನಸುಗಳ ನಡುವೆ ರೈತರ ಬದುಕಿನ ಹೋರಾಟ

*ಅದ್ದೂರಿಯಾಗಿ ಪ್ರದರ್ಶನಗೊಂಡ “ಸಂಪೂರ್ಣ ರಾಮಾಯಣ

*ಅದ್ದೂರಿಯಾಗಿ ಪ್ರದರ್ಶನಗೊಂಡ “ಸಂಪೂರ್ಣ ರಾಮಾಯಣ

Read all News