PRABHAVAA.COM

ರಂಗಭೂಮಿ ತಾರೆ ರೂಪಶ್ರೀ ವರ್ಕಾಡಿ – 'ಮಿಥ್ಯ' ಚಿತ್ರದ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ, ನಿರ್ದೇಶಕನಿಗೆ ಶ್ರೇಯಸ್ಸು ಅರ್ಪಣೆ"

Dakshina Kannada:

Font size:

ರಂಗಭೂಮಿ ತಾರೆ ರೂಪಶ್ರೀ ವರ್ಕಾಡಿ – 'ಮಿಥ್ಯ' ಚಿತ್ರದ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ, ನಿರ್ದೇಶಕನಿಗೆ ಶ್ರೇಯಸ್ಸು ಅರ್ಪಣೆ"

From Jayaram Udupi

ಮಂಗಳೂರು:
ಪ್ರಶಸ್ತಿ‌ ನಿರೀಕ್ಷೆ ಮಾಡಿರಲಿಲ್ಲ,‌ ಅದರ ಸಂಪೂರ್ಣ ಕ್ರೆಡಿಟ್ ನಿರ್ದೇಶಕರಿಗೆ ಸಲ್ಲಬೇಕು ಎಂದು ಪ್ರಶಸ್ತಿ ಪುರಸ್ಕೃತ ನಟಿ ರೂಪಶ್ರೀ ವರ್ಕಾಡಿ ಹೇಳಿದ್ದಾರೆ.

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ 'ಮಿಥ್ಯ' ಕನ್ನಡ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದ ಹಿರಿಯ ರಂಗಭೂಮಿ ಹಾಗೂ ಚಲನಚಿತ್ರ ನಟಿ ರೂಪಶ್ರೀ ವರ್ಕಾಡಿ ಅವರು ನಗರದ ಪತ್ರಿಕಾಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಸಂತಸ ಮತ್ತು ಕಲಾ ಪಯಣದ ಅನುಭವವನ್ನು ಹಂಚಿಕೊಂಡರು.

ಪ್ರಶಸ್ತಿ ಕುರಿತು ಮಾತನಾಡಿದ ಅವರು, "ಈ ಗೌರವ ನನಗೆ ಮಾತ್ರ ಸಿಕ್ಕ ಪ್ರಶಸ್ತಿಯಲ್ಲ, ಇಡೀ 'ಮಿಥ್ಯ' ಚಿತ್ರದ ತಂಡದ ಪರಿಶ್ರಮಕ್ಕೆ ದೊರೆತ ಮನ್ನಣೆಯಾಗಿದೆ. ನನ್ನ ಕಲಾ ಪಯಣದಲ್ಲಿ ನಿರಂತರ ಬೆಂಬಲ ನೀಡಿದ ಮಾಧ್ಯಮ ಮಿತ್ರರೊಂದಿಗೆ ಈ ಸಂತೋಷವನ್ನು ಮೊದಲು ಹಂಚಿಕೊಳ್ಳಬೇಕೆಂಬ ಉದ್ದೇಶದಿಂದಲೇ ಪತ್ರಿಕಾಗೋಷ್ಠಿ ಆಯೋಜಿಸಿದ್ದೇನೆ," ಎಂದರು.

ಚಿತ್ರದ ನಿರ್ದೇಶಕ ಸುಮಂತ್ ಭಟ್ ಅವರಿಗೆ ಪ್ರಶಸ್ತಿಯ ಶ್ರೇಯಸ್ಸು ಸಲ್ಲಬೇಕು ಎಂದು ಹೇಳಿದ ರೂಪಶ್ರೀ, "ನಾನು ಇದುವರೆಗೆ ಮಾಡಿರದ ವಿಭಿನ್ನ ಪಾತ್ರವನ್ನು ನೀಡಿ, ನನ್ನಿಂದ ಹೊಸ ರೀತಿಯ ಅಭಿನಯವನ್ನು ಹೊರತಂದವರು ನಿರ್ದೇಶಕರು. ಅವರ ಮಾರ್ಗದರ್ಶನದಿಂದಲೇ ಪಾತ್ರ ಸಹಜವಾಗಿ ಮೂಡಿಬಂದಿದೆ. ಈ ಸಾಧನೆಗೆ ಅವರಿಗೆ ನಾನು ಸದಾ ಋಣಿಯಾಗಿದ್ದೇನೆ," ಎಂದು ತಿಳಿಸಿದರು.

ಕಳೆದ ಎರಡೂವರೆ ದಶಕಗಳಿಂದ ಕನ್ನಡ ಹಾಗೂ ತುಳು ರಂಗಭೂಮಿಯಲ್ಲಿ ಸಕ್ರಿಯವಾಗಿರುವ ರೂಪಶ್ರೀ ವರ್ಕಾಡಿ, 700ಕ್ಕೂ ಹೆಚ್ಚು ನಾಟಕಗಳ ಮೂಲಕ 4,000ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿದ್ದಾರೆ.

ತುಳು, ಕನ್ನಡ, ಕೊಂಕಣಿ ಸೇರಿದಂತೆ 85ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಅವರು ಹಲವು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಗೌರವಗಳಿಗೆ ಭಾಜನರಾಗಿದ್ದಾರೆ.

ರಾಷ್ಟ್ರ ಪ್ರಶಸ್ತಿ ತಮ್ಮ ಜೀವನದ ಅತ್ಯಂತ ಮಹತ್ವದ ಕ್ಷಣವಾಗಿದ್ದು, ಈ ಸಾಧನೆಗೆ ಬೆಂಬಲ ನೀಡಿದ ಮಾಧ್ಯಮ ಮಿತ್ರರು, ಕಲಾಭಿಮಾನಿಗಳು ಹಾಗೂ ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದ ಅವರು, ಮುಂದಿನ ದಿನಗಳಲ್ಲಿಯೂ ಉತ್ತಮ ಕಲಾಸೇವೆ ಮೂಲಕ ಮತ್ತಷ್ಟು ಸಾಧನೆ ಮಾಡುವ ಸಂಕಲ್ಪ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ 'ಮಿಥ್ಯ' ಚಿತ್ರದ ನಿರ್ದೇಶಕ ಸುಮಂತ್ ಭಟ್ ಹಾಗೂ ಬಾಲನಟ ಅತೀಶ್ ಶೆಟ್ಟಿ ಉಪಸ್ಥಿತರಿದ್ದರು.

Comments

Leave a Comment

Prev Post ಜುಲೈ 25, 26 ರಂದು ಎಸ್‍ಐಆರ್ ಮಹಾಸಂಪರ್ಕ ಅಭಿಯಾನ ಒಂದು ಕೋಟಿ ಮನೆ ತಲುಪುವ ಗುರಿ: ವಿಜಯೇಂದ್ರ
Next Post ನಾಳೆ 2.20 ಕ್ಕೆ ಸಚಿವ ಸಂಪುಟ ವಿಸ್ತರಣೆ/ ಪ್ರಮಾಣ ವಚನ

ಕರ್ನಾಟಕ ಚಲನಚಿತ್ರ ಪೋಷಕರ ಕಲಾವಿದರ ಸಂಘದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಡಿಂಗ್ರಿ ನಾಗರಾಜ್ ಅವಿರೋಧ ಆಯ್ಕೆ

ಕರ್ನಾಟಕ ಚಲನಚಿತ್ರ ಪೋಷಕರ ಕಲಾವಿದರ ಸಂಘದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಡಿಂಗ್ರಿ ನಾಗರಾಜ್ ಅವಿರೋಧ ಆಯ್ಕೆ

ಕಂಠೀರವ ಸ್ಟುಡಿಯೋಸ್ ಆವರಣದಲ್ಲಿ ಟಿ.ಎಸ್. ಕರಿಬಸಯ್ಯ ಪುತ್ಥಳಿ ಅನಾವಣಗೊಳಿಸಿ, ವಜ್ರಮಹೋತ್ಸವ ಆಚರಿಸಬೇಕು : ಕಲಾ ಕಂಠೀರವ ದಿ. ಟಿ.ಎಸ್. ಕರಿಬಸಯ್ಯ ಸೇವಾ ಟ್ರಸ್ಟ್ ಆಗ್ರಹ

ಕಂಠೀರವ ಸ್ಟುಡಿಯೋಸ್ ಆವರಣದಲ್ಲಿ ಟಿ.ಎಸ್. ಕರಿಬಸಯ್ಯ ಪುತ್ಥಳಿ ಅನಾವಣಗೊಳಿಸಿ, ವಜ್ರಮಹೋತ್ಸವ ಆಚರಿಸಬೇಕು : ಕಲಾ ಕಂಠೀರವ ದಿ. ಟಿ.ಎಸ್. ಕರಿಬಸಯ್ಯ ಸೇವಾ ಟ್ರಸ್ಟ್ ಆಗ್ರಹ

ಬೆಂಗಳೂರು: ವಿಶ್ವ ಗುಬ್ಬಚ್ಚಿ ದಿನಾಚರಣೆ ವಿಶೇಷವಾಗಿ ಆಚರಣೆ

ಬೆಂಗಳೂರು: ವಿಶ್ವ ಗುಬ್ಬಚ್ಚಿ ದಿನಾಚರಣೆ ವಿಶೇಷವಾಗಿ ಆಚರಣೆ

ಬಿಡದಿ–ಬೈರಮಂಗಲ ಸ್ಮಾರ್ಟ್ ಸಿಟಿ: ಅಭಿವೃದ್ಧಿ ಕನಸುಗಳ ನಡುವೆ ರೈತರ ಬದುಕಿನ ಹೋರಾಟ

ಬಿಡದಿ–ಬೈರಮಂಗಲ ಸ್ಮಾರ್ಟ್ ಸಿಟಿ: ಅಭಿವೃದ್ಧಿ ಕನಸುಗಳ ನಡುವೆ ರೈತರ ಬದುಕಿನ ಹೋರಾಟ

*ಅದ್ದೂರಿಯಾಗಿ ಪ್ರದರ್ಶನಗೊಂಡ “ಸಂಪೂರ್ಣ ರಾಮಾಯಣ

*ಅದ್ದೂರಿಯಾಗಿ ಪ್ರದರ್ಶನಗೊಂಡ “ಸಂಪೂರ್ಣ ರಾಮಾಯಣ

ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ಜನ್ಮದಿನ ಸಂಭ್ರಮ

ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ಜನ್ಮದಿನ ಸಂಭ್ರಮ

Read all News