PRABHAVAA.COM

ನನಗೆ ಗೊತ್ತಿಲ್ಲ.. ಗೊತ್ತಿಲ್ಲಾ.. ಎಂದ ಸಚಿವ ಪ್ರಿಯಾಂಕ್ ಖರ್ಗೆಗೆ 10 ಪ್ರಶ್ನೆ ಕೇಳಿದ ಹೆಚ್.ಡಿ.ಕುಮಾರಸ್ವಾಮಿ

Bengaluru Urban:

Font size:

ದಶ ಪ್ರಶ್ನೆಗಳ ಮೂಲಕ ಗೃಹ ಸಚಿವರಿಗೆ ಕುಟುಕಿದ ಕೇಂದ್ರ ಸಚಿವರು

ಬೆಂಗಳೂರು 2 ಸೆಪ್ಟೆಂಬರ್ 2026

ನ್ಯಾಯಾಲಯದಲ್ಲಿ ಪ್ರಕರಣವಿದೆ ಎಂದು ನೆಪ ಹೇಳಿಕೊಂಡು ಒಂದೂವರೆ ವರ್ಷದಿಂದ ಸಹಾಯಕ ಅಭಿಯಂತರರು ಗ್ರೇಡ್ 1 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಅಂದಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವರೂ ಆಗಿದ್ದ ಹಾಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹತ್ತು ಪ್ರಶ್ನೆಗಳನ್ನು ಕೇಳಿದ್ದಾರೆ.

ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು; ತಮ್ಮ ಪ್ರಶ್ನೆಗಳಿಗೆ ಉತ್ತರ ಕೊಡುವಂತೆ ಖರ್ಗೆ ಅವರನ್ನು ಒತ್ತಾಯಿಸಿದರು.

ಕೇಂದ್ರ ಸಚಿವರು ಖರ್ಗೆ ಅವರನ್ನು ಕೇಳಿದ ಪ್ರಶ್ನೆಗಳು ಹೀಗಿವೆ;

1.ನಿಮ್ಮ ಗಮನಕ್ಕೆ ಬಾರದೇ ಅಕ್ರಮ ಮಾರ್ಗದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ಕೊಟ್ಟರಾ?
2.ರಾಜ್ಯ ಹೈಕೋರ್ಟ್'ನಲ್ಲಿ ಪ್ರಕರಣ ನಡೆಯುತ್ತಿರುವುದು ನಿಮಗೆ ಗೊತ್ತಿಲ್ಲವೇ?
3.ಇಷ್ಟೆಲ್ಲಾ ದಾಖಲೆಗಳು ಇದ್ದರೂ ನಾನು ನಿಮ್ಮ ರಾಜೀನಾಮೆ ಕೇಳಬಾರದೇ?
4.ಎಇಇಗಳ ಅಕ್ರಮಗಳ ಬಗ್ಗೆ ನಿಮಗೆ ಗೊತ್ತಿಲ್ಲ ಅಂದರೆ ತನಿಖೆ ಮಾಡಿಸಬೇಕಿತ್ತು, ಅಲ್ಲವೇ?
5.ಅಕ್ರಮ ಎಸಗಿದ ಅಭ್ಯರ್ಥಿಗಳಿಗೆ ಷರತ್ತಿನ ಮೇಲೆ ನೇಮಕಾತಿ ಆದೇಶ ಕೊಟ್ಟಿದ್ದು ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ?
6.ನೇಮಕಾತಿ ಮತ್ತು ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಕಾರಣಕ್ಕೆ ಷರತ್ತಿನ ನೇಮಕಾತಿ ಆದೇಶ ಪತ್ರ ಕೊಟ್ಟಿದ್ದು, ಅಲ್ಲವೇ?
7.ಅಕ್ರಮ ನಡೆದಿರುವ ಬಗ್ಗೆ ಅನೇಕ ದಾಖಲೆಗಳು ಇದ್ದರೂ ತರಾತುರಿಯಲ್ಲಿ ಯಾಕೆ ನೇಮಕಾತಿ ಆದೇಶ ನೀಡಿದಿರಿ?
8.ನಿಮ್ಮ ಇಲಾಖೆಯಿಂದ ಅಪರಾಧಿ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ಕೊಟ್ಟ ವಿಷಯ ಸಚಿವರಾಗಿ ನಿಮಗೆ ಗೊತ್ತಿರಲಿಲ್ಲವೇ?
9.ಮಹಿಳಾ ಅಧಿಕಾರಿ ಕಾರ್ಯದರ್ಶಿ ಹುದ್ದೆಯಿಂದ ವರ್ಗಾವಣೆಯಾದ ನಂತರ ಆ ಸ್ಥಾನಕ್ಕೆ ಬಂದ ಅಧಿಕಾರಿ ಅಕ್ರಮ ನಡೆದಿರುವ ಬಗ್ಗೆ ಮುಖ್ಯ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಗೆ ಪತ್ರ ಬರೆದ ದಿನವೇ ನೇಮಕಾತಿ ಆದೇಶ ಪತ್ರಗಳನ್ನು ಕೊಟ್ಟಿದ್ದು ಯಾಕೆ?
10.ರೆಸಾರ್ಟ್ ನಲ್ಲಿ ಓಎಂಆರ್ ಶೀಟುಗಳನ್ನು ತಿದ್ದಿಸಿದ ಅಧಿಕಾರಿ ಜತೆಗೆ ನಿಮ್ಮ ಸಂಬಂಧ ಇಲ್ಲವೇ?

ಪ್ರಿಯಾಂಕ್ ಖರ್ಗೆ ಅವರೇ.. ಮೊದಲು ನನ್ನ ಇಷ್ಟೂ ಪ್ರಶ್ನೆಗಳಿಗೆ ಉತ್ತರ ಕೊಡಿ. ಉಳಿದದ್ದನ್ನು ಆಮೇಲೆ ಚರ್ಚೆ ಮಾಡೋಣ. ನಾನೇನು ಪಲಾಯನ ಮಾಡಿ ಓಡಿ ಹೋಗುವುದಿಲ್ಲ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಜಗತ್ತಿನಲ್ಲಿ ನಡೆಯುವ ಎಲ್ಲಾ ಬೆಳವಣಿಗೆಗಳ ಬಗ್ಗೆ ಪ್ರಿಯಾಂಕ್ ಖರ್ಗೆ ಅವರಿಗೆ ಮಾಹಿತಿ ಇರುತ್ತದೆ. ಆದರೆ ತಮ್ಮ ಇಲಾಖೆಯಲ್ಲಿ ನಡೆಯುವ ವಿಷಯಗಳು ಮಾತ್ರ ತಿಳಿಯುವುದಿಲ್ಲ ಎಂದರೆ ನಾವು ನಂಬಬೇಕು, ಪ್ರಿಯಾಂಕ ಖರ್ಗೆ ಅವರೇ ಯಾರ ಕಿವಿಯಲ್ಲಿ ಹೂವು ಇಡಲು ಹೊರಟಿದ್ದೀರಿ ಎಂದು ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.

ಇತ್ತೀಚಿನ ವರ್ಷಗಳಲ್ಲಿ ಪ್ರಶ್ನೆ ಪತ್ರಿಕೆ ಕೊಟ್ಟು, ಬಸ್ಸುಗಳಲ್ಲಿ ಅಭ್ಯರ್ಥಿಗಳನ್ನು ಪರೀಕ್ಷೆಗೆ ಕರೆದುಕೊಂಡು ಹೋಗಿ ರೆಸಾರ್ಟ್ ನಲ್ಲಿ ಪರೀಕ್ಷೆ ಬರೆಸಿದ್ದಾರೆ ಎಂದು ಸಚಿವರು ಆರೋಪ ಮಾಡಿದರು.

ನಡೆದಿರುವ ಹಗರಣದ ಬಗ್ಗೆ ನಾನು ಮಾತನಾಡುತ್ತಿದ್ದರೆ, ಮುಗಿದು ಹೋಗಿರುವ ವಿಷಯದ ಬಗ್ಗೆ ಪ್ರಿಯಾಂಕ್ ಖರ್ಗೆ ಮಾತಾಡುತ್ತಿದ್ದಾರೆ. ನಾನು ಜೈಲಿನಲ್ಲಿ ಕೆಪಿಸಿ ಮಾಜಿ ಅಧ್ಯಕ್ಷರನ್ನು ಭೇಟಿಯಾಗಿದ್ದು ನಿಜ. ನನ್ನ ಮೇಲಿನ ರಾಜಕೀಯ ಸೇಡಿಗಾಗಿ ಅವರನ್ನು ಬಲಿಪಶು ಮಾಡಲಾಯಿತು. ಇತ್ತೀಚೆಗೆ ಹೈಕೋರ್ಟ್ ಕೊಟ್ಟ ತೀರ್ಪನ್ನು ಬಹುಶಃ ಸಚಿವರು ಓದಿಲ್ಲ. ಅವರ ವಿರುದ್ಧ ಯಾವ ಆರೋಪವನ್ನು ಸಾಬೀತು ಮಾಡಲು ಸಾಧ್ಯವಾಗಿಲ್ಲ ಎಂದು ಸಚಿವ ಕುಮಾರಸ್ವಾಮಿ ಅವರು ಕೆಂಡಕಾರಿದರು.

ಡಾ. ಹೆಚ್.ಎನ್.ಕೃಷ್ಣ ಅವರನ್ನು ನೇಮಿಸಿದ್ದು ಯಾರು? ನಿಮ್ಮ ತಂದೆಯನ್ನು ಕೇಳಪ್ಪ ಎಂದ ಹೆಚ್ಡಿಕೆ:

ಡಾ. ಹೆಚ್.ಎನ್.ಕೃಷ್ಣ ಅವರು ಯಾರ ಕಾಲದಲ್ಲಿ ಕೆಪಿಎಸ್ಸಿ ಅಧ್ಯಕ್ಷರಾಗಿ ನೇಮಕವಾದರು ಎಂಬುದು ಪ್ರಿಯಾಂಕ್ ಖರ್ಗೆ ಅವರಿಗೆ ತಿಳಿದಿಲ್ಲವೇ? ಎಸ್.ಎಂ. ಕೃಷ್ಣ ಅವರ ನೇತೃತ್ವದಲ್ಲಿ ಆ ನಿರ್ಧಾರ ಕೈಗೊಂಡ ಸಂಪುಟ ಸಭೆಯಲ್ಲಿ ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಇದ್ದರು. ಗೊತ್ತಿಲ್ಲದಿದ್ದರೆ ಕೇಳಿ ತಿಳಿದುಕೊಳ್ಳಿ. ಡಾ.ಕೃಷ್ಣ ಅವರ ಕಾಲದಲ್ಲಿ 13,000 ಜನರು ಉದ್ಯೋಗ ಪಡೆದರು ಎಂದು ಕೇಂದ್ರ ಸಚಿವರು ಚಾಟಿ ಬೀಸಿದರು.

ಡಾ.ಕೃಷ್ಣ ಅವರ ಕಾಲದಲ್ಲಿ ಯಾವುದೇ ದೂರು ಅವರ ಮೇಲೆ ಇರಲಿಲ್ಲ. ನಂತರ ಬಂದ ಬಿಜೆಪಿ ಸರ್ಕಾರವೇ ಅವರ ಮೇಲೆ ಅನುಮಾನ ಪಟ್ಟರು. ಯಡಿಯೂರಪ್ಪ, ಶಂಕರ ಬಿದರಿ ಇನ್ನೂ ಬದುಕಿದ್ದಾರೆ. ಅವರಿಗೆ ಸತ್ಯ ಗೊತ್ತಿದೆ. ಕೇಳಿ ತಿಳಿದುಕೊಳ್ಳಿ. ನಾನು ಯಡಿಯೂರಪ್ಪ ಮನೆಗೆ ಹೋಗಿ ಬಂದಿದ್ದೆ. ನನ್ನ ಮತ್ತು ನಿಮ್ಮ ಗಲಾಟೆಯಲ್ಲಿ ಯಾವುದೇ ಆರೋಪ ಇಲ್ಲದವರ ಮೇಲೆ ಯಾಕೆ ಗದಾಪ್ರಹಾರ ಮಾಡುತ್ತೀರಿ ಎಂದು ಯಡಿಯೂರಪ್ಪ ಅವರನ್ನೇ ಕೇಳಿದ್ದೆ. ಅವರಿಗೆ ಅನ್ಯಾಯ ಮಾಡಬೇಡಿ ಎಂದು ಶಂಕರ ಬಿದರಿ ಅವರಿಗೂ ಹೇಳಿದ್ದೆ. ನಾನು ಕದ್ದೂಮುಚ್ಚಿ ರಾಜಕಾರಣ ಮಾಡುವುದಿಲ್ಲ. ಏನಿದ್ದರೂ ನೇರಾನೇರ ರಾಜಕಾರಣ ಮಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ಗುಡುಗಿದರು.

ಇನ್ನೊಂದು ಪ್ರಕರಣದಲ್ಲಿ ನಾನು ಕೆಪಿಎಸ್ಸಿ ಅಭ್ಯರ್ಥಿಗಳ ಪರವಾಗಿ ನಾನು ಹೋರಾಟ ನಡೆಸಿದ್ದೆ. ವಿ.ಎಸ್. ಉಗ್ರಪ್ಪ ಅವರ ಸಂಬಂಧಿಕರು ದೂರು ಕೊಟ್ಟಿದ್ದರು. 362 ಹುದ್ದೆಗಳ ಸಂಬಂಧ ಕೆಲ ಅಭ್ಯರ್ಥಿಗಳು ನ್ಯಾಯಾಲಯಕ್ಕೆ ಹೋಗಿದ್ದರು. ಆಗ ವಿಧಾನಸಭೆಯಲ್ಲಿ ಚರ್ಚೆ ಮಾಡಿ ಆಯ್ಕೆ ಪಟ್ಟಿ ತಡೆ ಹಿಡಿದಿದ್ದೇವೆ ಎಂದು ತಪ್ಪು ಮಾಹಿತಿ ಕೊಟ್ಟರು. ಅಭ್ಯರ್ಥಿಗಳು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಕೂಲಂಕಶವಾಗಿ ಪರಿಶೀಲಿಸಿ ನ್ಯಾಯಯುತ ಕ್ರಮ ತೆಗೆದುಕೊಳ್ಳಿ ಎಂದು ದೇವೇಗೌಡರು ಪತ್ರ ಬರೆದಿದ್ದರು. ಖರ್ಗೆ ಅವರೇ.. ಮಾಹಿತಿ ಗೊತ್ತಿಲ್ಲದಿದ್ದರೆ ತಿಳಿದುಕೊಳ್ಳಿ ಎಂದು ಕುಮಾರಸ್ವಾಮಿ ಅವರು ಚಾಟಿ ಬೀಸಿದರು.

ಗೋವಿಂದರೆಡ್ಡಿ ಯಾರು ಎಂದು ಹೇಳಿ ಪ್ರಿಯಾಂಕ್ ಖರ್ಗೆ ಅವರೇ:

ನ್ಯಾಯ ಆಗಿದ್ದಕ್ಕೆ ನಾನು ಧ್ವನಿ ಎತ್ತಿದೇನೆ. ಪ್ರಿಯಾಂಕ್ ಖರ್ಗೆ ಅವರೇ, ಒಂದು ಪ್ರಶ್ನೆ ಕೇಳುತ್ತೇನೆ ಉತ್ತರ ಕೊಡಿ. ನಿಮ್ಮ ಕುಟುಂಬಕ್ಕೆ ಆಪ್ತರಾಗಿರುವ ಗೋವಿಂದ ರೆಡ್ಡಿ ಯಾರ ಕಾಲದಲ್ಲಿ ಆಯ್ಕೆ ಆಗಿದ್ದು? ಅವರ ಆಯ್ಕೆ ಹೇಗೆ ಆಯಿತು ಎಂಬುದನ್ನು ನಿಮ್ಮ ತಂದೆಯವರನ್ನು ಕೇಳಿ. ಆಹಾರ ಇಲಾಖೆಯಲ್ಲಿ ಅಧಿಕಾರಿ ಗ್ಯಾನೇಂದ್ರ ಇದ್ದರು. ಅಲ್ಲಿ ಇಬ್ಬರು ಹೆಣ್ಣುಮಕ್ಕಳು ಆಯ್ಕೆ ಹೇಗೆ ನಡೆಯಿತು ಎಂದು ಕೇಳಿ ತಿಳಿದುಕೊಳ್ಳಿ. ಹಿರಿಯ ಪೊಲೀಸ್ ಅಧಿಕಾರಿ ಒಬ್ಬರು ತಮ್ಮ ಇಬ್ಬರು ಮಕ್ಕಳನ್ನು ರೆಸಾರ್ಟ್ ಗೆ ಕರೆದುಕೊಂಡು ಹೋಗಿ ಪರೀಕ್ಷೆ ಬರೆಸಿದ್ದಾರೆ. ಇದೆಲ್ಲಾ ನಿಮಗೆ ಗೊತ್ತಿಲ್ಲವೆಂದರೆ ಹೇಗೆ ಪ್ರಿಯಾಂಕ್ ಖರ್ಗೆ ಅವರೇ? ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.

ಸಹಾಯಕ ಎಂಜಿನಿಯರ್ ಗ್ರೇಡ್ 1 ಆಯ್ಕೆ ಮತ್ತು ನೇಮಕಾತಿಗೆ 2025ರಲ್ಲಿ ಉತ್ತೀರ್ಣರಾಗಿರುವ ಹುಡುಗರ ಕೈಯಲ್ಲಿ ಅರ್ಜಿ ಹಾಕಿಸುತ್ತಾರೆ. ಅದಕ್ಕೆ ಕೆಎಟಿ ಮಧ್ಯಂತರ ತಡೆ ಕೊಡಲ್ಲ. ಅದಾದ ಮೇಲೆ ಅವರು 11-2-2025 ರಂದು ಹೈಕೋರ್ಟ್'ಗೆ ಹೋಗುತ್ತಾರೆ. ಹೈಕೋರ್ಟ್'ನಲ್ಲಿ ಕೆಪಿಎಸ್ಸಿ ಸಬ್ ಕಮಿಟಿ ತನಿಖೆಯ ಅಂತಿಮ ಆದೇಶಕ್ಕೆ ಒಳಪಟ್ಟು ನೇಮಕಾತಿ ಇರುತ್ತದೆ ಎಂದು ಹೈಕೋರ್ಟ್ ಒಪ್ಪಿಗೆ ನೀಡುತ್ತದೆ. 2024ರಲ್ಲಿ ಅಂತಿಮ ಪಟ್ಟಿ ಬಿಡುಗಡೆ ಆಗುತ್ತಿದೆ. ಅಂದಿನ ಕಾರ್ಯದರ್ಶಿ ಆತುರಾತುರವಾಗಿ ನೇಮಕಾತಿ ಪತ್ರ ಕೊಡುತ್ತಾರೆ. ಒಂದೂವರೆ ವರ್ಷದಿಂದ ರಾಜ್ಯ ಸರಕಾರ ಆಕ್ಷೇಪಣೆ ಸಲ್ಲಿಸಿಲ್ಲ ಯಾಕೆ? ಪ್ರಕರಣವನ್ನು ಮುಗಿಸಿಕೊಳ್ಳುವುದು ಇಷ್ಟವಿಲ್ಲದೆ ರಾಜ್ಯ ಸರ್ಕಾರ ಬೇಕೆಂದಲೇ ದಿನಾಂಕವನ್ನು ಮುಂದಕ್ಕೆ ಹಾಕಿಸಿಕೊಂಡು ಹೋಗುತ್ತಿದೆ ಎಂದು ಸಚಿವರು ಆಕ್ಷೇಪ ವ್ಯಕ್ತಪಡಿಸಿದರು.

ಡೇಟ್ ಮೇಲೆ ಡೇಟ್ ಮುಂದಕ್ಕೆ ಹಾಕಿಸುತ್ತಿದ್ದೀರಿ, ಯಾಕೆ?:

ನ್ಯಾಯಾಲಯದಲ್ಲಿ ಪ್ರಕರಣವಿದೆಯೆಂದು ಒಂದೂವರೆ ವರ್ಷದಿಂದ ಇಟ್ಟುಕೊಂಡಿದ್ದೀರಾ? ಅಂತಿಮ ಪಟ್ಟಿಯಲ್ಲಿ ಲೋಕದೋಷವಿದೆಯೆಂದು ಕೆಪಿಎಸ್‌ಸಿ ಅಧ್ಯಕ್ಷರು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಪತ್ರ ಬರೆದದ್ದರು. ಆಗ ಆ ಇಲಾಖೆಯ ಮಂತ್ರಿ ಯಾರಾಗಿದ್ದರು? ಸದರಿ ಇಲಾಖೆಯ ಮಂತ್ರಿ ಗಮನಕ್ಕೆ ಬಾರದೇ ನೇಮಕಾತಿ ಆದೇಶ ಪತ್ರಗಳನ್ನು ನೀಡಲಾಯಿತ? ಯಾರಿಗೆ ಹೂ ಮುಡಿಸ್ತೀರಾ ಪ್ರಿಯಾಂಕ್ ಖರ್ಗೆ ಅವರೇ? ನಿಮಗೆ ಇದು ಗೊತ್ತಿಲ್ಲವಾ? ಆರ್ ಎಸ್ ಎಸ್ ಅಕೌಂಟ್ ಬಗ್ಗೆ ಕೇಳುತ್ತೀರಿ. ಮೊದಲು ಈ ಅಕೌಂಟ್ ಬಗ್ಗೆ ಮಾಹಿತಿ ಕೊಡಿ. ನಿಮ್ಮ ಗಮನಕ್ಕೆ ಬಾರದೇ ನೇಮಕಾತಿ ಪತ್ರ ಕೊಟ್ಟರಾ? ನಿಮ್ಮ ಗಮನಕ್ಕೆ ಬಾರದೇ ಕೋರ್ಟ್ ನಲ್ಲಿ ಕೇಸ್ ನಡೆಸ್ತಾ ಇದ್ದೀರಾ? ಪರೀಕ್ಷೆಯನ್ನು ಕೆಪಿಎಸ್ಸಿ ಮಾಡುತ್ತದೆ‌. ನೇಮಕಾತಿ ಪತ್ರ ಕೊಡುವುದು ಗ್ರಾಮೀಣಾಭಿವೃದ್ಧಿ ಇಲಾಖೆಯೇ ಅಲ್ಲವೇ? ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಪ್ರಿಯಾಂಕ್ ಖರ್ಗೆ ಅವರೇ.. ನೀವು ಈ ಅಕ್ರಮದಲ್ಲಿ ಭಾಗಿ ಆಗಿಲ್ಲ ಎಂದಾರೆ ನಾನು ಬಿಡುಗಡೆ ಮಾಡಿರುವ ದಾಖಲೆಗಳು ಏನು? ಎಂದು ಖರ್ಗೆ ವಿರುದ್ಧ ಕುಮಾರಸ್ವಾಮಿ ಅವರು ಪ್ರಶ್ನೆಗಳ ಸುರಿಮಳೆಗೈದರು.

ಮಾಧ್ಯಮಗೋಷ್ಠಿಯಲ್ಲಿ ಮಾಜಿ ಶಾಸಕರಾದ ಕೆ.ಎ.ತಿಪ್ಪೇಸ್ವಾಮಿ, ಚೌಡರೆಡ್ಡಿ ತೂಪಲ್ಲಿ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ, ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ. ರಂಗನಾಥ್, ರಾಜ್ಯ ವಕ್ತಾರ ಹೆಚ್.ಎನ್. ದೇವರಾಜ, ನಗರ ಘಟಕದ ಅಧ್ಯಕ್ಷೆ ಶೈಲಜಾ ರಾವ್ ಮುಂತಾದವರು ಉಪಸ್ಥಿತರಿದ್ದರು.

Comments

Leave a Comment

Prev Post ಬಿಜೆಪಿ ಆಂತರಿಕ ಬಿಕ್ಕಟ್ಟು ಮುಚ್ಚಿಕೊಳ್ಳಲು ಪಾದಯಾತ್ರೆ: ಸಿಎಂ ಡಿ ಕೆ ಶಿವಕುಮಾರ್

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ನ್ಯಾ.‌ನಾಗಮೋಹನ್ ದಾಸ್ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ:ಬಸವರಾಜ ಬೊಮ್ಮಾಯಿ

ಸಿಎಂ ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದಿದ್ದಾರೆ: ಬಸವರಾಜ ಬೊಮ್ಮಾಯಿ

ಒಡಿಶಾ ಶಾಸಕರನ್ನು ನಾನು ಕರೆಸಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಪಕ್ಷ ಹೇಳಿದ್ದನ್ನು ಮಾಡುತ್ತೇನೆ ನನಗೆ ಇದು ಹೊಸತಲ್ಲ, ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದಿಂದಲೂ ಇದನ್ನು ಮಾಡುತ್ತಿರುವೆ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News