ಪರಿಸರ ಸ್ನೇಹಿ ಗಣೇಶ ಹಬ್ಬ – ಪಿ.ಓ.ಪಿ. ವಿಗ್ರಹಗಳಿಗೆ ಸಂಪೂರ್ಣ ನಿಷೇಧ
ಪರಿಸರ ಸ್ನೇಹಿ ಗಣೇಶ ಹಬ್ಬ – ಪಿ.ಓ.ಪಿ. ವಿಗ್ರಹಗಳಿಗೆ ಸಂಪೂರ್ಣ ನಿಷೇಧ
ಬೆಂಗಳೂರು , ಆ.6-ರಾಜ್ಯದಲ್ಲಿ ಈ ಬಾರಿ ಗಣೇಶ ಹಬ್ಬವು ಹೊಸ ಅರ್ಥ ಪಡೆದುಕೊಂಡಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದಂತೆ ಪ್ಲಾಸ್ಟರ್ ಆಫ್ ಪ್ಯಾರೀಸ್ ಹಾಗೂ ರಾಸಾಯನಿಕ ಬಣ್ಣಗಳಿಂದ ತಯಾರಿಸಲಾದ ಗಣೇಶ ವಿಗ್ರಹಗಳಿಗೆ ಸಂಪೂರ್ಣ ನಿಷೇಧ ಜಾರಿಯಾಗಿದೆ, ಈ ಸಂಬಂಧಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 2026ನೇ ಸಾಲಿನ ಗಣೇಶ ಹಬ್ಬದ ಅಂಗವಾಗಿ ಮಹತ್ವದ ಆದೇಶ ಹೊರಡಿಸಿದೆ.
ಈ ನಿರ್ಧಾರವು ಕೇವಲ ಕಾನೂನು ಕ್ರಮವಲ್ಲ, ಅದು ನಮ್ಮ ನದಿಗಳು, ಕೆರೆಗಳು, ಜಲಮೂಲಗಳು ಮತ್ತು ಜಲಚರ ಜೀವಿಗಳ ರಕ್ಷಣೆಯತ್ತ ಒಂದು ಭಾವನಾತ್ಮಕ ಹೆಜ್ಜೆಯಾಗಿದೆ.
ಗಣೇಶನನ್ನು ಮಣ್ಣಿನಿಂದ ರೂಪಿಸುವುದು, ನೈಸರ್ಗಿಕ ಬಣ್ಣಗಳಿಂದ ಅಲಂಕರಿಸುವುದು, ಪರಿಸರ ಸ್ನೇಹಿ ವಸ್ತುಗಳಿಂದ ಹಬ್ಬವನ್ನು ಆಚರಿಸುವುದು ಇವೆಲ್ಲವೂ ನಮ್ಮ ಭಕ್ತಿಗೆ ಹೊಸ ಶುದ್ಧತೆಯನ್ನು ನೀಡುತ್ತವೆ. POP ವಿಗ್ರಹಗಳು ನೀರಿನ ಗುಣಮಟ್ಟವನ್ನು ಹಾಳುಮಾಡಿ ಜೀವಜಗತ್ತಿಗೆ ಅಪಾಯ ತಂದಿದ್ದರೆ, ಮಣ್ಣಿನ ವಿಗ್ರಹಗಳು ಪ್ರಕೃತಿಯೊಂದಿಗೆ ನಮ್ಮ ಸಂಬಂಧವನ್ನು ಮತ್ತಷ್ಟು ಗಾಢಗೊಳಿಸುತ್ತವೆ.
ಪ್ಲಾಸ್ಟರ್ ಆಫ್ ಪ್ಯಾರೀಸ್ (POP) ಹಾಗೂ ರಾಸಾಯನಿಕ ಬಣ್ಣಗಳಿಂದ ತಯಾರಿಸಲಾದ ಗಣೇಶ ವಿಗ್ರಹಗಳ ಉತ್ಪಾದನೆ, ಸಂಗ್ರಹ, ಮಾರಾಟ ಮತ್ತು ವಿಸರ್ಜನೆಗೆ ರಾಜ್ಯಾದ್ಯಂತ ಸಂಪೂರ್ಣ ನಿಷೇಧ ಜಾರಿಯಾಗಿದೆ. ಪರಿಸರ ಸಂರಕ್ಷಣೆ, ಸಾರ್ವಜನಿಕ ಆರೋಗ್ಯ ಹಾಗೂ ಜಲಮೂಲಗಳ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. POP ಹಾಗೂ ರಾಸಾಯನಿಕ ಬಣ್ಣಗಳಿಂದ ತಯಾರಿಸಲಾದ ವಿಗ್ರಹಗಳು ಕೆರೆ, ನದಿ, ಜಲಾಶಯಗಳಲ್ಲಿ ನೀರಿನ ಗುಣಮಟ್ಟ ಕುಸಿಯಲು
ಈ ಆದೇಶದಂತೆ POP ವಿಗ್ರಹಗಳ ತಯಾರಿಕೆ, ಸಂಗ್ರಹಣೆ, ಮಾರಾಟ, ವಿತರಣೆ ಹಾಗೂ ಸಾರ್ವಜನಿಕ ಪ್ರದರ್ಶನಕ್ಕೆ ಅನುಮತಿ ಇಲ್ಲ. ಭಾರಲೋಹ ಮಿಶ್ರಿತ ರಾಸಾಯನಿಕ ಬಣ್ಣಗಳಿಂದ ಅಲಂಕರಿಸಿದ ವಿಗ್ರಹಗಳ ಉತ್ಪಾದನೆ ಹಾಗೂ ಮಾರಾಟವೂ ನಿಷೇಧಿಸಲಾಗಿದೆ. ಸಾರ್ವಜನಿಕರು ಹಾಗೂ ಗಣೇಶೋತ್ಸವ ಸಮಿತಿಗಳು ಮಣ್ಣಿನ ವಿಗ್ರಹಗಳು ಹಾಗೂ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಲಾದ ವಿಗ್ರಹಗಳನ್ನು ಮಾತ್ರ ಬಳಸಬೇಕು. POP ವಿಗ್ರಹಗಳನ್ನು ಯಾವುದೇ ಜಲಮೂಲಗಳಲ್ಲಿ ವಿಸರ್ಜನೆ ಮಾಡಬಾರದು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ಸ್ಥಳೀಯ ಸಂಸ್ಥೆಗಳು ಪರಿಸರ ಸ್ನೇಹಿ ಆಚರಣೆ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕೆಂದು ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆ, ಸ್ಥಳೀಯ ಸಂಸ್ಥೆಗಳು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಜಂಟಿಯಾಗಿ ಈ ಆದೇಶದ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಿತ ಕಾನೂನುಗಳಡಿ ವಶಪಡಿಸಿಕೊಳ್ಳುವ ಹಾಗೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಈ ಬಾರಿ ಗಣೇಶ ಹಬ್ಬವನ್ನು ಮಣ್ಣಿನ ವಿಗ್ರಹಗಳೊಂದಿಗೆ, ಪರಿಸರ ಸ್ನೇಹಿಯಾಗಿ ಆಚರಿಸುವಂತೆ ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಮನವಿ ಮಾಡಿದೆ.



Comments
Leave a Comment