PRABHAVAA.COM

ಕೇಂದ್ರ ಅಗತ್ಯ ಕ್ರಮ ಕೈಗೊಂಡಿದೆ: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪರಿಹಾರವಲ್ಲ;ವಿಜಯೇಂದ್ರ ಆರೋಪ

Bengaluru Urban:

Font size:

ಕೇಂದ್ರ ಅಗತ್ಯ ಕ್ರಮ ಕೈಗೊಂಡಿದೆ: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪರಿಹಾರವಲ್ಲ;ವಿಜಯೇಂದ್ರ ಆರೋಪ

ಕೇಂದ್ರ ಅಗತ್ಯ ಕ್ರಮ ಕೈಗೊಂಡಿದೆ: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪರಿಹಾರವಲ್ಲ;ವಿಜಯೇಂದ್ರ ಆರೋಪ

ಮುಖ್ಯಾಂಶಗಳು
==============
* ನೀಟ್ ಗೊಂದಲಕ್ಕೆ ಸಚಿವ ಪ್ರಧಾನ್ ರಾಜೀನಾಮೆ ಪರಿಹಾರವಲ್ಲ
* ಜಂತರ್ ಮಂತರ್ ಪ್ರತಿಭಟನೆಗೆ ಕೇಂದ್ರ ಅಡ್ಡಿ ಮಾಡಿಲ್ಲ.
* ಮಾತುಕತೆಗೆ ಕರೆದರೂ ಮತ್ತೆ ಸಿಜೆಪಿ ಯಾಕೆ ಪ್ರತಿಭಟಿಸುತ್ತಿದೆ.
* ನೀಟ್ ಕುರಿತು ಕೇಂದ್ರ ಸರ್ಕಾರ ಚರ್ಚೆಗೆ ಸಿದ್ಧವಿದೆ.
* ಮೋದಿ ಅವರ ನಿಯತ್ತು ಪ್ರಶ್ನಿಸಲು ರಾಹುಲ್‍ಗೆ ಹಕ್ಕಿಲ್ಲ.
* ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಯತ್ನ

ಬೆಂಗಳೂರು: ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾದ ನಂತರ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮ ಕೈಗೊಂಡಿದೆ. ಆದರೂ ಕಾಂಗ್ರೆಸ್ ಪರಿಸ್ಥಿತಿಯನ್ನು ಬಳಸಿಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮತ್ತು ದುರುಪಯೋಗಪಡಿಸಿಕೊಳ್ಳಲು ಹೊರಟಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಗೊತ್ತಾದ ಕೂಡಲೇ ಕೇಂದ್ರ ಸರ್ಕಾರ ಯಾವುದನ್ನೂ ಮುಚ್ಚಿಡಲಿಲ್ಲ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಅವರು ತನಿಖೆಗೆ ಆದೇಶ ಮಾಡಿದರು. ಪ್ರಕರಣದ ಗಂಭೀರತೆ ಅರ್ಥ ಮಾಡಿಕೊಂಡ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಅಗತ್ಯ ಕ್ರಮ ಕೈಗೊಂಡರು. ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದ ಆರೋಪದಲ್ಲಿ ರಾತ್ರೋರಾತ್ರಿ 13 ಜನರ ಬಂಧಿಸಲಾಗಿದೆ. ಆದರೂ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಜತೆ ಸೇರಿ ಕಾಂಗ್ರೆಸ್ ಈಗ ಪ್ರತಿಭಟನೆ ನಾಟಕ ಮಾಡುತ್ತಿದೆ ಎಂದು ತಿಳಿಸಿದರು.
ದೇಶದ ಭವಿಷ್ಯ ಯುವ ಜನತೆ ಭವಿಷ್ಯ ಎಂದು ಮೋದಿ ಅವರು ತಿಳಿದಿದ್ದಾರೆ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚು ಆದ್ಯತೆಯನ್ನು ಹಿಂದಿನಿಂದ ನೀಡ್ತಾ ಇದ್ದಾರೆ. ಎಲ್ಲ ಗೊಂದಲಕ್ಕೆ ತೆರೆ ಎಳೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೂ ಈಗ ಸಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ನೀಟ್ ಪ್ರಕರಣದ ತನಿಖೆಗೆ ಮೋದಿ ಅವರು ಐದು ತ್ವರಿತಗತಿ ನ್ಯಾಯಾಲಯ ಸ್ಥಾಪನೆಗೆ ಆದೇಶ ಮಾಡಿದ್ದಾರೆ. ತಪ್ಪಿತಸ್ಥರಿಗೆ ಆದಷ್ಟು ಬೇಗ ಶಿಕ್ಷೆ ಆಗಲು ಈ ಕ್ರಮ ಕೈಗೊಂಡಿದೆ ಎಂದು ವಿವರಿಸಿದರು.

ಮೂವತ್ತೈದು ದಿನದಲ್ಲಿ ಮರು ಪರೀಕ್ಷೆ...
ನೀಟ್ ನಡೆಸಲು ಆರು ತಿಂಗಳು ತಯಾರಿ ಬೇಕು. ಅಂತಹುದರಲ್ಲಿ ಕೇಂದ್ರ ಸರ್ಕಾರ ಕೇವಲ ಮೂವತ್ತೈದು ದಿನದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಮರುಪರೀಕ್ಷೆ ಮಾಡಿ 25 ದಿನದಲ್ಲಿ ಫಲಿತಾಶ ಘೋಷಣೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಪರೀಕ್ಷೆಯಲ್ಲಿ ಗೊಂದಲ ಆಗಬಾರದು ಎಂದು ಕಂಪ್ಯೂಟರ್ ಮೂಲಕ ನಡೆಸಲು, ಕೃತಕ ಬುದ್ಧಿಮತ್ತೆ ಬಳಸಲು, ಪರೀಕ್ಷೆ ನಿಗಾಕ್ಕೆ ಅತ್ಯಾಧುನಿಕ ಕ್ರಮಗಳಿಗೆ ಕೇಂದ್ರ ಮುಂದಾಗಿದೆ. ಒಟ್ಟಾರೆ ಪರೀಕ್ಷೆಗೆ ಹೆಚ್ಚು ರಕ್ಷಣೆ ದೊರೆತು ಪಾರದರ್ಶಕವಾಗಿ ನಡೆಯಲು ಅನೇಕ ಕ್ರಮ ಕೈಗೊಂಡಿದೆ. ಇμÁ್ಟದರೂ ದೆಹಲಿಯ ಜಂತರ್ ಮಂತರ್‍ನಲ್ಲಿ ಪ್ರತಿಭಟನೆ ನಡೆಸುವುದು ಏಕೆ ಎಂದು ಕೇಳಿದರು.

ಯಾವುದೇ ರೀತಿ ಅಡ್ಡಿ ಮಾಡಿಲ್ಲ...
ದೆಹಲಿಯ ಜಂತರ್ ಮಂತರ್‍ನಲ್ಲಿ ಸಿಜೆಪಿ ನೇತೃತ್ವದಲ್ಲಿ ಧರಣಿ, ಹೋರಾಟ, ಪ್ರತಿಭಟನೆ ನಡೆಯುತ್ತಿದೆ. ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ಮಾಡ್ತಾ ಇದ್ದಾರೆ. ಕೇಂದ್ರ ಸರ್ಕಾರ ಪ್ರತಿಭಟನೆಗೆ ಯಾವುದೇ ರೀತಿ ಅಡ್ಡಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ವಿದೇಶದಲ್ಲಿದ್ದಾಗ ಇಲ್ಲದ ಕಾಳಜಿ ಈಗೇಕೆ?
ರಾಹುಲ್ ಗಾಂಧಿ ಅವರು ಹದಿನೈದು ಇಪ್ಪತ್ತು ದಿನ ವಿದೇಶದಲ್ಲಿದ್ದರು. ಆಗ ಅವರಿಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇರಲಿಲ್ಲ. ಸ್ವದೇಶಕ್ಕೆ ಬಂದ ಕೂಡಲೇ ಅವರಿಗೆ ಕಾಳಜಿ ಉಕ್ಕಿ ಹರಿಯುತ್ತಿದೆ. ಭಾರತಕ್ಕೆ ಬಂದ ಕೂಡಲೇ ಹೈ ಸೆಕ್ಯೂರಿಟಿ ಇವರು ಪ್ರಧಾನಿ ನಿವಾಸದ ಬಳಿ ಧರಣಿ ಮಾಡ್ತಾರೆ ಎಂದರು.

ರಾಜೀನಾಮೆ ಮಾತ್ರ ಉತ್ತರವಲ್ಲ...
ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರು, ಈಗಾಗಲೇ ಸಿಜೆಪಿ ನಿಯೋಗÀದೊಂದಿಗೆ ಮಾತನಾಡಿದ್ದಾರೆ. ಅವರ ಅಪೇಕ್ಷೆ, ನಿರೀಕ್ಷೆ ಎಂದು ತಿಳಿದಿದ್ದಾರೆ. ಕೇಂದ್ರ ಸಚಿವರ ರಾಜೀನಾಮೆ ಪಡೆದರೆ ಮಾತ್ರ ಉತ್ತರ ಕಂಡುಕೊಳ್ಳಲು ಆಗದು. ಸಂಸತ್ತಿನಲ್ಲಿ ನೀಟ್ ಕುರಿತು ಚರ್ಚೆ ಆಗಬೇಕು. ಅದಕ್ಕೆ ಕೇಂದ್ರ ಸರ್ಕಾರ ಸಿದ್ಧವಿದೆ. ಎಷ್ಟು ಗಂಟೆಗಳ ಕಾಲ ಬೇಕಾದರೂ ಚರ್ಚೆಗೆ ಸರ್ಕಾರ ತಯಾರಿದೆ. ಇμÉ್ಟಲ್ಲ ಹೇಳಿದ ಮೇಲೂ ರಾಹುಲ್ ಗಾಂಧಿ ಅವರು ಪ್ರತಿಭಟನೆ ನಡೆಸುವುದು ಏಕೆ ಎಂದರು.

ಯುವಕರ ಭವಿಷ್ಯದ ಜೊತೆ ಚೆಲ್ಲಾಟ...
ಕಾಂಗ್ರೆಸ್ ಯುವಕರ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದೆ. ಧಾರವಾಡದಲ್ಲಿ ಉದ್ಯೋಗಕ್ಕಾಗಿ ಯುವಕರು ಭಾರಿ ಪ್ರತಿಭಟನೆ ಮಾಡಿದಾಗ ರಾಜ್ಯ ಸರ್ಕಾರ ಅವರ ಮೇಲೆ ಲಾಠಿ ಪ್ರಹಾರ ಮಾಡಿತು. ಚಿನ್ನಸ್ವಾಮಿ ಸ್ಟೇಡಿಯಂ ಕಾಳ್ತುಳಿತದಲ್ಲಿ ಅಮಾಯಕರು ಪ್ರಾಣ ಕಳೆದುಕೊಂಡಾಗ ಸರ್ಕಾರ ಜವಾಬ್ದಾರಿ ಹೊರದೆ ಅಧಿಕಾರಿಗಳ ಮೇಲೆ ಹೊಣೆ ಹೊರಿಸಿ ಕೈ ತೊಳೆದುಕೊಂಡಿತು. ಆಗೆಲ್ಲ ಮಾತನಾಡದ ರಾಹುಲ್ ಗಾಂಧಿ ಅವರು ಈಗ ಮೋದಿ ಅವರ ನಿಯತ್ತಿನ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂದರು.

ಅರಾಜಕತೆ ಸೃಷ್ಟಿಸುವ ಯತ್ನ....
ಎನ್‍ಡಿಎ ಅಧಿಕಾರದಲ್ಲಿ ಎಂಬಿಬಿಎಸ್ ಸೀಟ್, ಮೆಡಿಕಲ್ ಕಾಲೇಜು, ವೈದ್ಯಕೀಯ ಪಿಜಿ ಸೀಟುಗಳು, ಐಐಟಿ ಹಾಗೂ ಐಐಎಂ ಸೀಟುಗಳು ಹೆಚ್ಚಳವಾಗಿವೆ. ಯುವಜನತೆಯ ಭವಿದ್ಯ ರೂಪಿಸಲು ಮೋದಿ ಅವರು ಅನೇಕ ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಇದನ್ನೆಲ್ಲ ನೋಡದ ಕಾಂಗ್ರೆಸ್ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಯತ್ನ ಮಾಡುತ್ತಿದೆ ಎಂದು ದೂರಿದರು.
ರಾಹುಲ್ ಗಾಂಧಿ ಅವರು, ಮೋದಿ ಅವರ ಮನೆ ಮುಂದೆ ಕೂತು ನಾಟಕ ಆಡುವ ಬದಲು ಸಂಸತ್ತಿನ ಅಧಿವೇಶನದಲ್ಲಿ ಭಾಗವಹಿಸಿ. ಚರ್ಚೆ ಮಾಡಿ. ಆಗ ಉತ್ತರ ಸಿಗಲಿದೆ. ಇದನ್ನೆಲ್ಲ ಬಿಜೆಪಿ ವಿರೋಧಿಸಲಿದೆ ಎಂದರು.

ಗಲಭೆಯಲ್ಲಿ ಪೆÇಲೀಸರ ಮೇಲೆ, ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಆಗಿದೆ. ಇದನ್ನು ವಿದ್ಯಾರ್ಥಿಗಳು ಮಾಡಲು ಸಾಧ್ಯವಿಲ್ಲ. ಸಮಯ ದುರುಪಯೋಗಪಡಿಸಿಕೊಂಡು ಗೂಂಡಾಗಳನ್ನು ಬಿಟ್ಟು ಶ್ರೀಲಂಕಾ, ನೇಪಾಳದಲ್ಲಿ ಅರಾಜಕತೆ ಸೃಷ್ಟಿ ಮಾಡಿದಂತೆ ಮಾಡಲು ಸಂಚು ನಡೆಸಿತ್ತು. ತುಕ್ಡೆ ಗ್ಯಾಂಗ್‍ಗಳ ಕೃತ್ಯವನ್ನು ಖಂಡಿಸಲಾಗುವುದು ಎಂದರು.

ನಿನ್ನೆ ನಡೆದ ಪ್ರತಿಭಟನೆ ಸಂಬಂಧ ಪೆÇಲೀಸ್ ಆಯುಕ್ತರು ಕಾಂಗ್ರೆಸ್ ಏಜೆಂಟ್ ರೀತಿ ವರ್ತಿಸುವುದನ್ನು ಬಿಡಿ. ಯಾರು ಗೂಂಡಾಗಳು ಇದ್ದಾರೆ ಅವರನ್ನು ಒದ್ದು ಒಳಗೆ ಹಾಕಿ. ನಮಗೆ ಉಪದೇಶ ಮಾಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ಚರ್ಚೆಗೆ ಬಾರದೆ ರಾಹುಲ್ ಗಾಂಧಿ ಪಲಾಯನ: ಆರ್.ಅಶೋಕ್
==================================
ಚುನಾಯಿತ ಪ್ರತಿನಿಧಿಗಳು ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಬೇಕು. ಅದರೆ ನೀಟ್ ವಿಚಾರದಲ್ಲಿ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಚರ್ಚೆಗೆ ಬಾರದೆ ಯಾಕೆ ಪಲಾಯನ ಮಾಡಿದರು ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರ ಯಾವುದೇ ರೀತಿ ಚರ್ಚೆಗೆ ಸಿದ್ಧವಿದೆ ಎಂದು ಹೇಳಿದೆ. ಆಮೇಲೆ ಧರಣಿ ಮಾಡಬಹುದು ಎಂದರು.
ಸಿಜೆಪಿ ಮತ್ತು ರಾಹುಲ್ ಗಾಂಧಿ ಅವರು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ಜೆನ್‍ಜಿ ಧಂಗೆ ಆದಾಗ ಕೂಗುತ್ತಿದ್ದ ಘೋಷಣೆಗಳನ್ನೇ ಜಂತರ್ ಮಂತರ್ ಧರಣಿ ವೇಳೆ ಕೂಗುತ್ತಿದ್ದಾರೆ. ಹಾಗಾಗಿ ಇವರ ಏಜೆಂಟ್, ಸೂತ್ರಧಾರ ಸಹ ವಿದೇಶದಲ್ಲಿ ಇದ್ದಾರೆ. ದೇಶವಿರೋಧಿ ಕೃತ್ಯ ನಡೆಸುವ ಸಂಸ್ಥೆಗಳ ಜೊತೆ ರಾಹುಲ್ ಗಾಂಧಿ ಶಾಮೀಲಾಗಿದ್ದಾರೆ ಎಂದು ಟೀಕಿಸಿದರು.

ನೀಟ್ ರೀತಿ ನೂರಾರು ಪರೀಕ್ಷೆ ಪತ್ರಿಕೆಗಳು ಸೋರಿಕೆಯಾಗಿವೆ. ಆಗ ಕಾಂಗ್ರೆಸ್ ಸಚಿವ ರಾಜೀನಾಮೆ ನೀಡಿಲ್ಲ. ಕೀಳು ರಾಜಕಾರಣ ಮಾಡುವ ಕಾಂಗ್ರೆಸ್ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವ ಕಾಂಗ್ರೆಸ್‍ಗೆ ಯಾವುದೇ ನೈತಿಕತೆ ಇಲ್ಲ ಎಂದರು.

ಕೆಪಿಎಸ್‍ಸಿ ಪರೀಕ್ಷೆ ನಡೆಸಲು ಯೋಗ್ಯತೆ ಇಲ್ಲ...
ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರಿಗೆ ಕೆಪಿಎಸ್‍ಸಿ ಪರೀಕ್ಷೆಯನ್ನೂ ಸರಿಯಾಗಿ ನಡೆಸಲು ಯೋಗ್ಯತೆ ಇಲ್ಲ. ಈ ಹಿಂದೆ ಕೆಪಿಎಸ್‍ಸಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆದಾಗ ಯಾರಾದರೂ ರಾಜೀನಾಮೆ ನೀಡಿಲ್ಲ. ಯುಪಿಎ ಅವಧಿಯಲ್ಲಿ ನಡೆದ ಹಲವಾರು ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಆದಾಗ ರಾಹುಲ್ ಅವರ ಅಮ್ಮ, ಅಜ್ಜಿ ಹೋಗಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ರಾಜೀನಾಮೆ ನೀಡಿಲ್ಲ ಎಂದರು.
ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಯಾದ ನಂತರ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಹಾಗೆ ಆಗಬಾರದಿತ್ತು. ಆದರೆ ರಾಜ್ಯದಲ್ಲಿ ಸ್ಟೇಡಿಯಂ ಕಾಳ್ತುಳಿತದಲ್ಲಿ ವಿದ್ಯಾರ್ಥಿಗಳನ್ನು ಸರ್ಕಾರವೇ ಕೊಂದು ಹಾಕಿದೆ. ನಿಮಗ್ಯಾವ ನೈತಿಕತೆ ಇದೆ. ಯುವಕರ ಹೆಸರಲ್ಲಿ ಮಾಡುತ್ತಿರುವ ರಾಜಕೀಯ ಪಿತೂರಿ ಬಹಳ ದಿನ ನಡೆಯಲ್ಲ ಎಂದರು.

Comments

Leave a Comment

Prev Post ರಾಜ್ಯದ ಸಿಎಸ್ಆರ್ ನಿಧಿಯ ಪ್ರತಿ ಪೈಸೆಯೂ ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗ: ಸಿಎಂ ಡಿ ಕೆ ಶಿವಕುಮಾರ್

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ನ್ಯಾ.‌ನಾಗಮೋಹನ್ ದಾಸ್ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ:ಬಸವರಾಜ ಬೊಮ್ಮಾಯಿ

ಸಿಎಂ ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದಿದ್ದಾರೆ: ಬಸವರಾಜ ಬೊಮ್ಮಾಯಿ

ಒಡಿಶಾ ಶಾಸಕರನ್ನು ನಾನು ಕರೆಸಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಪಕ್ಷ ಹೇಳಿದ್ದನ್ನು ಮಾಡುತ್ತೇನೆ ನನಗೆ ಇದು ಹೊಸತಲ್ಲ, ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದಿಂದಲೂ ಇದನ್ನು ಮಾಡುತ್ತಿರುವೆ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News