PRABHAVAA.COM

12 ದಿನ, 12 ಗಂಟೆ, 11 ನಿಮಿಷ..! ಸಮೂಹ ಸಂಗೀತ; ಗಿನ್ನೆಸ್ ದಾಖಲೆ ಬರೆದ ಮಾಂಡ್ ಸೊಭಾಣ್.

Dakshina Kannada:

Font size:

12 ದಿನ, 12 ಗಂಟೆ, 11 ನಿಮಿಷ..! ಸಮೂಹ ಸಂಗೀತ; ಗಿನ್ನೆಸ್ ದಾಖಲೆ ಬರೆದ ಮಾಂಡ್ ಸೊಭಾಣ್.

12 ದಿನ, 12 ಗಂಟೆ, 11 ನಿಮಿಷ..! ಸಮೂಹ ಸಂಗೀತ; ಗಿನ್ನೆಸ್ ದಾಖಲೆ ಬರೆದ ಮಾಂಡ್ ಸೊಭಾಣ್.

From Jayaram Udupi

ಮಂಗಳೂರು:
ಆ ಕ್ಷಣ ಸಾಕಾರಗೊಂಡಾಗ ಅಲ್ಲಿದ್ದ ಜನಸಮೂಹ ರೋಮಾಂಚನಗೊಂಡಿತ್ತು.ಕೆಲವು ಕಣ್ಣುಗಳಲ್ಲಿ ಸಾರ್ಥಕತೆಯ ಜೊತೆಗೆ ಸಾಧನೆಯ ಸಂಭ್ರಮದ ಕಣ್ಣೀರಿತ್ತು. ಶ್ರಮ ಸಾರ್ಥಕವಾದ ತೃಪ್ತಿ ಇತ್ತು. ಮಾಂಡ್ ಸೊಭಾಣ್
12 ದಿನ, 12 ಗಂಟೆ, 11 ನಿಮಿಷ..! ಎಂಬ ಅತೀ ದೀರ್ಘ ಸಮೂಹ ಗಾಯನದಲ್ಲಿ ಗಿನ್ನೆಸ್‌ ವಿಶ್ವದಾಖಲೆಯನ್ನು ಮಾಡಿದ ಕ್ಷಣಗಳವು.

ಮಂಗಳೂರಿನ ಕೀರ್ತಿಗೆ ಮತ್ತೊಂದು ಗರಿ ಸೇರಿದೆ.
ಮಂಗಳೂರು ಮತ್ತೊಮ್ಮೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ನಗರದ ಪುರಭವನದಲ್ಲಿ ಮಾಂಡ್ ಸೊಭಾಣ್ ನೇತೃತ್ವದಲ್ಲಿ ಆಯೋಜಿಸಿದ ಅತೀ ದೀರ್ಘಾವಧಿಯ ಸಮೂಹ ಗಾಯನವು ನ.15ರ ಸಂಜೆ 6.12 ಗಂಟೆಗೆ ಹನ್ನೆರಡು ದಿನ, ಹನ್ನೆರಡು ಗಂಟೆ ಹಾಗೂ ಹನ್ನೆರಡು ನಿಮಿಷಗಳನ್ನ ಪೂರ್ಣಗೊಳಿಸುವುದರೊಂದಿಗೆ ಹೊಸ ಗಿನ್ನೆಸ್‌ ವಿಶ್ವದಾಖಲೆ ಪಟ್ಟಿಯಲ್ಲಿ ಸಾಧನೆ ಬರೆದಿದೆ.

ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ ಪಿಂಟೊ ಹಾಗೂ ಇತರ ಸಂಘಟಕರು ಹರ್ಷೋದ್ಗಾರದೊಂದಿಗೆ ವಿಶ್ವ ದಾಖಲೆಯನ್ನು ಸಂಭ್ರಮಿಸಿದರು. ಈ ಹಿಂದೆ 2024ರಲ್ಲಿ ಗುಜರಾತಿನ ವಡ್ತಾಲ್‌ನಲ್ಲಿ ಶ್ರೀ ಹರಿಕೃಷ್ಣ ಕೀರ್ತನ್ ಯಾಗ್ ಸಂಸ್ಥೆಯು ನಿರ್ಮಿಸಿದ್ದ 11 ದಿನಗಳು, 11 ಗಂಟೆಗಳು ಮತ್ತು 11 ನಿಮಿಷಗಳ (275 ಗಂಟೆಗಳು ಮತ್ತು 11 ನಿಮಿಷಗಳು) ಹಿಂದಿನ ಮೈಲಿಗಲ್ಲನ್ನು ಮಾಂಡ್ ಸೊಭಾಣ್ ಸಂಗೀತ ಮ್ಯಾರಥಾನ್ ಶನಿವಾರ ಸಂಜೆ ಮೀರಿಸಿದ್ದು ಇದೀಗ ಒಂದು ದಿನ ಹೆಚ್ಚುವರಿ ಸಾಧನೆಯೊಂದಿಗೆ ಮಾಂಡ್ ಸೊಭಾಣ್ ತನ್ನ ಹೆಸರಿನಲ್ಲಿ ಹೊಸ ದಾಖಲೆಯನ್ನು ಸಾಧಿಸಿದೆ.

ಮಾಂಡ್ ಸೊಭಾಣ್ ಸಂಸ್ಥೆಯ 40 ನೇ ವಾರ್ಷಿಕೋತ್ಸವದ ನೆನಪಿಗಾಗಿ ಮತ್ತು ಅದರ ಸ್ಥಾಪಕ ದಿವಂಗತ ಎರಿಕ್ ಒಝೇರಿಯೊ ಅವರ ಸ್ಮರಣಾರ್ಥ ಹಮ್ಮಿಕೊಳ್ಳಲಾದ ಮಹಾಸಂಗೀತ ಸಮ್ಮೇಳನದ ಭಾಗವಾಗಿ ಈ ಐತಿಹಾಸಿಕ ದಾಖಲೆಯ ಪ್ರಯತ್ನ ನಡೆದಿತ್ತು. ಎರಿಕ್ ಬಾಯ್ಲಾ ಶೋ ಮತ್ತಿತರ ವಿನೂತನ ಕಲ್ಪನೆಗಳೊಂದಿಗೆ ಮಂಗಳೂರಿನಲ್ಲಿ ಕೊಂಕಣಿ ಸಮುದಾಯದ ಸಂಗೀತ- ಸಂಸ್ಕ್ರತಿಯನ್ನು ಜನಪ್ರಿಯಗೊಳಿಸಿದ್ದರು.ಕೊಂಕಣಿ ಸಮುದಾಯ ಹೆಮ್ಮೆಪಡಲು ಕಾರಣರಾಗಿದ್ದರು ಎಂಬುದನ್ನಿಲ್ಲಿ ಸ್ಮರಿಸಬಹುದು.

ದಾಖಲೆ ಮೂಲಕ ಮಾಂಡ್ ಸೊಭಾಣ್ ಮತ್ತೊಮ್ಮೆ ಕೊಂಕಣಿ ಭಾಷೆ ಮತ್ತು ಸಂಸ್ಕೃತಿಗೆ ಜಾಗತಿಕ ಮನ್ನಣೆ ತಂದುಕೊಟ್ಟಿದೆ. ಮುಖ್ಯವಾಗಿ ಕರಾವಳಿ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಮತ್ತು ಕೇರಳದ ಕೆಲವು ಭಾಗಗಳಲ್ಲಿ ನೆಲೆಸಿರುವ ಕೊಂಕಣಿ ಸಮುದಾಯವು ಹೊಸ ವಿಶ್ವದಾಖಲೆಯನ್ನ ಸ್ಥಾಪಿಸುವ ಮೂಲಕ ತನ್ನಲ್ಲಿನ ಒಗ್ಗಟ್ಟು, ಶಿಸ್ತು ಹಾಗೂ ಭಾಷಾ ಪ್ರೇಮಕ್ಕೆ ಸಾಕ್ಷಿಯಾಯಿತು.

ದಾಖಲೆಯ ನಂತರವೂ ಗಾಯನ ಮುಂದುವರೆದಿದ್ದು, ಭಾನುವಾರ ಸಂಜೆ 5 ಗಂಟೆಗೆ 'ಟೀಮ್ ಸುಮೇಲ್' ತಂಡದ ಹಾಡುಗಾರಿಕೆಯೊಂದಿಗೆ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಮೇಳಕ್ಕೆ ಅಧಿಕೃತ ತೆರೆ ಬಿದ್ದಿದೆ. ಅಲ್ಲದೆ, ಮಂಗಳೂರಿನಲ್ಲಿ ಮತ್ತೊಂದು ಹೊಸ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಾಧನೆಯೂ ಸೇರಿಕೊಂಡಿದೆ.

ಮ್ಯಾರಥಾನ್ ಗಾಯನ (ಬಹು ಗಾಯಕರು)' ವಿಭಾಗದಲ್ಲಿ ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ಮ್ಯಾಂಡ್ ಸೊಭಾಣ್‌ ಸಂಸ್ಥೆಯ ಐತಿಹಾಸಿಕ ಸಾಧನೆಯನ್ನು ಮಂಗಳೂರಿನಲ್ಲಿ ಅದ್ಧೂರಿಯಾಗಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಲಾಯಿತು. ಅನಿವಾಸಿ ಭಾರತೀಯ ಉದ್ಯಮಿ ಡಾ. ರೊನಾಲ್ಡ್ ಕೊಲಾಸೊ ದಂಪತಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಂಡ್ ಸೊಭಾಣ್‌ ಅಧ್ಯಕ್ಷ ಲುವಿ ಜೆ. ಪಿಂಟೊ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ವಾನಿ ಅಲ್ವಾರಿಸ್ ಹಾಗೂ ರಾಯ್ ಕ್ಯಾಸ್ಟೆಲಿನೊ ಸೇರಿದಂತೆ ಕೊಂಕಣಿ ಸಂಸ್ಕೃತಿಯ ಹಲವು ಗಣ್ಯರು ಈ ಸಂಭ್ರಮಕ್ಕೆ ಸಾಕ್ಷಿಯಾದರು.

Comments

Leave a Comment

Prev Post ₹1 ಕೋಟಿ ವರೆಗೆ PSI, ₹1 ಕೋಟಿಗೂ ಹೆಚ್ಚು ಮೊತ್ತದ ವಂಚನೆ ಪ್ರಕರಣಗಳಿಗೆ PI ಅಥವಾ ಹಿರಿಯ ಅಧಿಕಾರಿ ತನಿಖೆ: ಡಿಜಿಪಿ ಸಲೀಂ ಸುತ್ತೋಲೆ
Next Post ಹಿರಿಯೂರು ಗೊಂದಲ ಇಲ್ಲ; ಒಮ್ಮತ ಅಭ್ಯರ್ಥಿಯನ್ನೇ ಕಣಕ್ಕಿಳಿಸುತ್ತೇವೆ ಎಂದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

Read all News