PRABHAVAA.COM

ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ ಹಾಗೂ ಎಸ್. ಷಡಕ್ಷರಿ ಅವರ 'ಕ್ಷಣ ಹೊತ್ತು ಅಣಿ ಮುತ್ತು' ಭಾಗ-16 ಪುಸ್ತಕ ಬಿಡುಗಡೆ ಸಮಾರಂಭ

Bengaluru Urban:

Font size:

ಎಸ್. ಷಡಕ್ಷರಿ ಅವರ ಬದುಕಿನ ಬ್ಯಾಲೆನ್ಸ್ ಶೀಟ್ ಅತ್ಯಂತ ಸುಂದರವಾಗಿದೆ: ಬಸವರಾಜ ಬೊಮ್ಮಾಯಿ

ನಮ್ಮದು ತ್ಯಾಗದ ಸಂಸ್ಕೃತಿ ಪಾಶ್ಚಾತ್ಯರದು ಸಂಗ್ರಹ ಸಂಸ್ಕೃತಿ: ಬಸವರಾಜ ಬೊಮ್ಮಾಯಿ

​ಬೆಂಗಳೂರು: ಪಾಶ್ಚಿಮಾತ್ಯ ತತ್ವಜ್ಞಾನಿಗಳಿಗೆ ಇವತ್ತಿಗೂ ಭಾರತವನ್ನು ಪರಿಪೂರ್ಣ ವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅವರ ಚಿಂತನೆ ನಮ್ಮ ಚಿಂತನೆಯೇ ಬೆರೆ ಅವರು ವಿಜ್ಣಾನ ಆಳವಾಗಿ ಅಧ್ಯಯನ ಮಾಡಿದ್ದಾರೆ. ನಾವು ಆಧ್ಯಾತ್ಮವನ್ನು ಹೆಚ್ಚು ಅಧ್ಯಯನ ಮಾಡಿದ್ದೇವೆ. ತ್ಯಾಗ ಮಾಡುವುದು ನಮ್ಮ ಸಂಸ್ಕೃತಿ ಸಂಗ್ರಹ ಮಾಡುವುದು ಅವರ ಸಂಸ್ಕೃತಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
​ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ಮತ್ತು ರಮಣಶ್ರೀ ಪ್ರತಿಷ್ಠಾನ ಬೆಂಗಳೂರು ವತಿಯಿಂದ ಆಯೋಜಿಸಿದ್ದ ‘ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ’ ಹಾಗೂ ಎಸ್. ಷಡಕ್ಷರಿ ಅವರ ‘ಕ್ಷಣ ಹೊತ್ತು ಅಣಿ ಮುತ್ತು’ ಭಾಗ-16 ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಶಸ್ತಿ ‌ನೀಡಿ ಮಾತನಾಡಿದರು.
​
​ಪ್ರತಿ ವರ್ಷ 'ಅಣಿ ಮುತ್ತು' ಕೃತಿಗಳನ್ನು ನಿರಂತರವಾಗಿ ಬರೆಯುತ್ತಾ ಬರುತ್ತಿರುವ ಎಸ್. ಷಡಕ್ಷರಿ ಅವರನ್ನು ‘ಸದಾಕ್ಷರಿ’ ಎಂದು ಕರೆಯಬಹುದು. ಹಣದ ಹಿಂದೆ ಬರುವವರು ಅಂಕಿಗಳ ಜೊತೆ ಸಂಬಂಧವಿಟ್ಟುಕೊಂಡರೆ, ಷಡಕ್ಷರಿಯವರು ಅಕ್ಷರದ ಜೊತೆ ಶಾಶ್ವತ ಸಂಬಂಧವಿಟ್ಟುಕೊಂಡಿದ್ದಾರೆ.
​ಕರ್ತವ್ಯವೇ ಕಾಯಕ: ಕರ್ತವ್ಯದ ಫಲವನ್ನು ಇತರಿಗೆ ಹಂಚಿದಾಗ ಅದು ಕಾಯಕವಾಗುತ್ತದೆ. ಷಡಕ್ಷರಿ ಅವರು ತಮ್ಮ ಕರ್ತವ್ಯವನ್ನು ಕಾಯಕವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಇವರಲ್ಲಿರುವ ಹಾಸ್ಯಪ್ರಜ್ಞೆ ಹಾಗೂ ನಿರಂತರ ಬರೆಯುವ ಕ್ರಿಯಾಶೀಲತೆಯಿಂದಾಗಿ ಅವರ ವಯಸ್ಸು ಯಾರಿಗೂ ಗೋಚರಿಸುವುದಿಲ್ಲ ಎಂದು ಹೇಳಿದರು.

ವಿಭಿನ್ನ ದೇಶ
ನಮ್ಮದು ಬಹಳಷ್ಟು ವಿಭಿನ್ನವಾಗಿರುವ ದೇಶ ಪಾಶ್ಚಿಮಾತ್ಯ ತತ್ವಜ್ಞಾನಿಗಳಿಗೆ ಇವತ್ತಿಗೂ ಭಾರತವನ್ನು ಪರಿಪೂರ್ಣ ವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅವರ ಚಿಂತನೆ ನಮ್ಮ ಚಿಂತನೆಯೇ ಬೆರೆ ಅವರು ವಿಜ್ಣಾನ ಆಳವಾಗಿ ಅಧ್ಯಯನ ಮಾಡಿದ್ದಾರೆ. ನಾವು ಆಧ್ಯಾತ್ಮವನ್ನು ಹೆಚ್ಚು ಅಧ್ಯಯನ ಮಾಡಿದ್ದೇವೆ. ಅಲೆಕ್ಷಾಂಡರ್ ಗೆ ಅವನ ಗುರು ಅರಿಸ್ಟಾಟಲ್ ನೀನು ಭಾರತ ಗೆದ್ದರೆ ಜಗತ್ತು ಗೆದ್ದ ಹಾಗೆ ಅಂತ ಹೇಳಿದ. ಅಲೆಕ್ಸಾಂಡರ್ ಮೊದಲು ಒಬ್ಬ ತತ್ವಜ್ಞಾನಿಯನ್ನು ಕಳಿಸಿದ ಆತನಿಗೆ ಸಂತರು ಸಿಗುತ್ತಾರೆ. ಆತ ನಿಮಗೂ ನಮಗೂ ಏನು ವ್ಯತ್ಯಾಸ ಅಂತ ಕೇಳಿದಾಗ ಆಗ ಅವರು ನಿಮ್ಮ ರಾಜ ಇಡಿ ಜಗತ್ತು ಗೆಲ್ಲಲು ಹೊರಟಿದ್ದಾನೆ ಅದು ನಿಮ್ಮ ತತ್ವಜ್ಞಾನ, ನಾವು ಈಗ ನಿಂತಿರುವುದಷ್ಟೇ ನಮ್ಮದು ಇದು ನಮ್ಮ ತತ್ವಜ್ಞಾನ ಎಂದು ಹೇಳಿದರು. ತ್ಯಾಗ ಮಾಡುವುದು ನಮ್ಮ ಸಂಸ್ಕೃತಿ ಸಂಗ್ರಹ ಮಾಡುವುದು ಅವರ ಸಂಸ್ಕೃತಿ. ನಾವು ನಿಮಗಿಂತ ಸಂತೋಷವಾಗಿದ್ದೇವೆ‌ ಹಲವಾರು ಚಿಂತನೆಗಳಿರುವ ಈ ದೇಶದಲ್ಲಿ ಹುಟ್ಟಿರುವ ನಾವು ಪುಣ್ಯವಂತರು. ಇಲ್ಲಿ ವಯಸ್ಸಾದ ಮೇಲ ಅನಾಥರಾಗುತ್ತಾರೆ. ಅಲ್ಲಿ ವಯಸ್ಸಿದ್ದಾಗಲೇ ಅನಾಥರಾಗುತ್ತಾರೆ ಎಂದು ಹೇಳಿದರು.

ಸಂಸ್ಕೃತಿ ನಾಗರಿಕತೆ ನಡುವೆ ವ್ಯತ್ಯಾಸ
ಸಂಸ್ಕೃತಿ ಮತ್ತು ನಾಗರಿಕತೆಯ ನಡುವೆ ವ್ಯತ್ಯಾಸ ಇದೆ. ನಮ್ಮ ಬಳಿ ಏನಿದೆಯೊ ಅದು ನಾಗರಿಕತೆ, ನಾವೇನಾಗಿದ್ದೇವೊ ಅದು ಸಂಸ್ಕೃತಿ. ಇಂತಹ ಎಲ್ಲ ವಿಚಾರಗಳ ಆಧಾರದಲ್ಲಿ ಅವರು ಈ ಲೇಖನಗಳನ್ನು ಬರೆದಿದ್ದಾರೆ. ಕುತೂಹಲ ಮತ್ತು ಮುಗ್ದತೆ ಎರಡೂ ವಿರೊಧಾಭಾಸ ಇದೆ. ಇವೆರಡೂ ಇರುವುದು ಕೇವಲ ಮಕ್ಕಳಲ್ಲಿ ಮಾತ್ರ. ಹುಟ್ಡಿದಾಗ ಇರುವಂತ ಮುಗ್ದತೆಯನ್ನು ಕಾಪಾಡಿಕೊಳ್ಳುವುದೆ ಸಾಧನೆ. ಅದನ್ನು ಷಡಕ್ಷರಿ ಅವರಲ್ಲಿ ಕಾಣುತ್ತೇವೆ. ಬಹಳ ಒಳ್ಳೆಯ ವಿಚಾರವನ್ನು ಎಲ್ಲರೂ ಸೇರಿ ಪ್ರತಿ ಪಾದಿಸಿದ್ದೇವೆ‌ . ಕುತೂಹಲ ಎಂದೂ ಮುಗಿಯುದಿಲ್ಲ. ಅವರ ಹುಟ್ಟಿದ ಹಬ್ಬ ಪ್ರತಿ ವರ್ಷ ಅರ್ಥಪೂರ್ಣವಾಗಿ ಆಚರಿಸುತ್ತಾರೆ ಎಂದು ಹೇಳಿದರು.

​ಸಾಧಕ ಮತ್ತು ಯಶಸ್ಸು:
ಯಶಸ್ಸು ಕಂಡವರಿಗೂ ಮತ್ತು ಸಾಧಕರಿಗೂ ವ್ಯತ್ಯಾಸವಿದೆ. ಸಾಧಕನು ಇಡೀ ಮನುಕುಲಕ್ಕಾಗಿ ಬದುಕುತ್ತಾನೆ. ಸ್ವಾಮಿ ವಿವೇಕಾನಂದರು ಹೇಳಿದಂತೆ, ಸಾಧಕನಿಗೆ ಸಾವಿನ ಅಂತ್ಯವಿರುವುದಿಲ್ಲ; ಆತ ಸಾವಿನ ನಂತರವೂ ಜೀವಂತವಾಗಿರುತ್ತಾನೆ ಎಂದು ಹೇಳಿದರು.
​ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಪ್ರಶಸ್ತಿಗೆ ಭಾಜನರಾದ ಸಾಧಕರನ್ನು ‘ರತ್ನಗಳು’ ಎಂದು ಬಣ್ಣಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಂಡ್ಯದ ಚಿನ್ಮಯ ಮಿಷನ್ ಸ್ವಾಮಿ ಆದಿತ್ಯಾನಂದಜಿ ವಹಿಸಿದ್ದರು. ಕೇಂದ್ರ ಸಚಿವ ವಿ. ಸೋಮಣ್ಣ ಪುಸ್ತಕ ಬಿಡುಗಡೆ ಮಾಡಿದರು, ಕಸಾಪ ಮಾಜಿ ಅಧ್ಯಕ್ಷ ಮನು ಬಳಿಗಾರ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ. ಸೋಮಶೇಖರ, 'ವಿಶ್ವವಾಣಿ' ಸಂಪಾದಕರಾದ ವಿಶ್ವೇಶ್ವರ ಭಟ್, 'ಕನ್ನಡ ಪ್ರಭ' ಸಂಪಾದಕ ರವಿ ಹೆಗಡೆ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Comments

Leave a Comment

Prev Post ಎಐ, ಡೀಪ್ ಟೆಕ್ ಮತ್ತು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಜಾಗತಿಕ ಕೇಂದ್ರವಾಗುವುದು ಕರ್ನಾಟಕದ ಗುರಿ: ಸಿಎಂ ಡಿ ಕೆ ಶಿವಕುಮಾರ್
Next Post ‎ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಅವರಿಗೆ ಸಮಾನ ಮನಸ್ಕ ಪತ್ರಕರ್ತರಿಂದ ಅಭಿನಂದನೆಗಳು

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

Read all News