PRABHAVAA.COM

ಇಂಡಿಗೋ ತಾಂತ್ರಿಕ ದೋಷ; ಪೈಲೆಟ್ ಸಮಯ ಪ್ರಜ್ಞೆ ಕಾಪಾಡಿತು‌ ಜೀವ

Dakshina Kannada:

Font size:

ಇಂಡಿಗೋ ತಾಂತ್ರಿಕ ದೋಷ; ಪೈಲೆಟ್ ಸಮಯ ಪ್ರಜ್ಞೆ ಕಾಪಾಡಿತು‌ ಜೀವ

ಇಂಡಿಗೋ ತಾಂತ್ರಿಕ ದೋಷ;
ಪೈಲೆಟ್ ಸಮಯ ಪ್ರಜ್ಞೆ ಕಾಪಾಡಿತು‌ ಜೀವ

from Jayaram Udupi
ಮಂಗಳೂರು:
ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಪ್ರಯಾಣಿಕರು ಭಾರೀ ಅನಾಹುತದಿಂದ ಸ್ವಲ್ಪದರಲ್ಲೇ ಪಾರಾದ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಪೈಲೆಟ್ ಸಮಯ ಪ್ರಜ್ಞೆಯಿಂದಾಗಿ ವಿಮಾನದಲ್ಲಿದ್ದ ಜನರ ಜೀವ ಬಚಾವಾಗಿದೆ.

ಸಂಜೆ ಆರು ಗಂಟೆ ವೇಳೆಗೆ ವಿಮಾನ ಇನ್ನೇನು ಟೇಕ್ ಆಫ್ ಆಗುತ್ತದೆ ಎನ್ನುವಾಗಲೇ ಪೈಲಟ್ ಇಂಜಿನ್ ನಲ್ಲಿ ದೋಷ ಇರುವುದನ್ನು ಕಂಡಿದ್ದು ಕೂಡಲೇ ಬ್ರೇಕ್ ಎಳೆದು ವಿಮಾನವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ ಟೇಬಲ್ ಟಾಪ್ ಏರ್ಪೋಟ್್ರ ಆಗಿದ್ದರಿಂದ ಅದಾಗಲೇ ವಿಮಾನ ಮುಂದಕ್ಕೆ ಹೋಗಿದ್ದು ಬ್ರೇಕ್ ಅದುಮಿದ್ದರಿಂದ ನಿಧಾನಕ್ಕೆ ಮುಂದಕ್ಕೆ ಹೋಗುತ್ತಾ ರನ್ ವೇ ಕೊನೆಯಲ್ಲಿ ನಿಂತು ಬಿಟ್ಟಿದೆ. ಇದರಿಂದ ಕೂದಲೆಳೆಯ ಅಂತರದಲ್ಲಿ ಭಾರೀ ದುರಂತ ತಪ್ಪಿದಂತಾಗಿದೆ.

ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ 229 ಪ್ರಯಾಣಿಕರು ಹಾಗು ಪೈಲಟ್ ಸೇರಿ 7 ಮಂದಿ ಸಿಬ್ಬಂದಿ ವರ್ಗ ಇದ್ದರು. ಪ್ರಯಾಣಿಕರು, ಸಿಬಂದಿ ಕುಳಿತ ಬಳಿಕ ಗ್ರೀನ್ ಸಿಗ್ನಲ್ ಸಿಗುತ್ತಲೇ ವಿಮಾನ ಮುಂದಕ್ಕೆ ಚಲಿಸಿತ್ತು. ಇನ್ನೇನು ಮೇಲಕ್ಕೆ ಹೋಗುತ್ತದೆ ಎನ್ನುವಾಗಲೇ ವಿಮಾನದ ಇಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಆದರೆ ಪೈಲೆಟ್ ಸಮಯ ಪ್ರಜ್ಞೆ ಮೆರೆದು ಕೂಡಲೇ ಬ್ರೇಕ್ ಹಾಕಿ ವಿಮಾನ ನಿಲ್ಲಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ. ರನ್ ವೇ ಬಿಟ್ಟು ಮುಂದಕ್ಕೆ ಚಲಿಸುತ್ತಿದ್ದರೆ ಕೆಲವೇ ಕ್ಷಣಗಳಲ್ಲಿ ವಿಮಾನ ಪತನವಾಗುವ ಸಾಧ್ಯತೆ ಇತ್ತು. ತಿರುಗಿ ಬಂದು ವಿಮಾನವನ್ನು ಇಳಿಸುವುದಕ್ಕೂ ಸಮಯ ಸಿಗುತ್ತಿರಲಿಲ್ಲ.

ತಕ್ಷಣ ವಿಮಾನ ನಿಲ್ಲಿಸಿದ್ದಲ್ಲದೆ, ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಮತ್ತೆ ಹಿಂದಕ್ಕೆ ತಂದು ಸಮಯ ಪ್ರಜ್ಞೆ ಮೆರೆದಿದ್ದಾರೆ. ಕೂಡಲೇ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲು ವ್ಯವಸ್ಥೆ ಮಾಡಿದ್ದಾರೆ. ಇಂಡಿಗೋ ಸಂಸ್ಥೆಯು ಬಳಿಕ ಪ್ರಯಾಣಿಕರಿಗೆ ಬೇರೆ ವಿಮಾನದ ವ್ಯವಸ್ಥೆ ಮಾಡಿ ಕಳುಹಿಸಿಕೊಟ್ಟಿದೆ.

Comments

Leave a Comment

Prev Post ಬಸವನಾಡಿನಲ್ಲಿ ಕೈಗಾರಿಕಾ ಕ್ರಾಂತಿಯ ನವಯುಗದ ಆರಂಭ
Next Post ಆರ್‌ಎಸ್‌ಎಸ್‌ಡಿಐ 2026: ಬೆಂಗಳೂರಿನಲ್ಲಿ ಮಧುಮೇಹ ಚಿಕಿತ್ಸೆಯ ಭವಿಷ್ಯಕ್ಕೆ ದಿಕ್ಕು ತೋರುವ ಮಹಾಸಮ್ಮೇಳನ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

Read all News