PRABHAVAA.COM

ಪೊಲೀಸ್ ಅಧಿಕಾರಿ-ನೌಕರರ ವರ್ಗಾವಣೆ ಮಾರ್ಗಸೂಚಿ ಪರಿಷ್ಕರಣೆ;

Bengaluru Urban:

Font size:

ಪೊಲೀಸ್ ಅಧಿಕಾರಿ-ನೌಕರರ ವರ್ಗಾವಣೆ ಮಾರ್ಗಸೂಚಿ ಪರಿಷ್ಕರಣೆ; ಕಾರ್ಯಕಾರಿ ಮತ್ತು ಕಾರ್ಯಕಾರ್ಯೇತರ ಹುದ್ದೆಗಳ ಹೊಸ ವರ್ಗೀಕರಣಕ್ಕೆ ಸರ್ಕಾರ ಆದೇಶ

ಪೊಲೀಸ್ ಅಧಿಕಾರಿ-ನೌಕರರ ವರ್ಗಾವಣೆ ಮಾರ್ಗಸೂಚಿ ಪರಿಷ್ಕರಣೆ; ಕಾರ್ಯಕಾರಿ ಮತ್ತು ಕಾರ್ಯಕಾರ್ಯೇತರ ಹುದ್ದೆಗಳ ಹೊಸ ವರ್ಗೀಕರಣಕ್ಕೆ ಸರ್ಕಾರ ಆದೇಶ

#KarnatakaPolice #PoliceTransfers #TransferGuidelines #PoliceDepartment #HomeDepartment #KarnatakaGovernment #PoliceInspectors #DSP #CivilPolice #PoliceAdministration #LawAndOrder #PoliceReforms #GovernmentOrder #PolicePosting #KarnatakaNews #PoliceServices #AdministrativeReforms #CyberCrimePolice #RailwayPolice #WomenPoliceStations

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ನೌಕರರ ವರ್ಗಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಮಹತ್ವದ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ. ಪೊಲೀಸ್ ಮಹಾನಿರ್ದೇಶಕ ಮತ್ತು ಆರಕ್ಷಕ ಮಹಾನಿರೀಕ್ಷಕರ (ಡಿಜಿ ಮತ್ತು ಐಜಿಪಿ) ಪ್ರಸ್ತಾವನೆಯನ್ನು ಪರಿಶೀಲಿಸಿರುವ ಸರ್ಕಾರ, ಪೊಲೀಸ್ ಉಪಾಧೀಕ್ಷಕರು (ಸಿವಿಲ್) ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್‌ಗಳ (ಸಿವಿಲ್) ಕಾರ್ಯಕಾರಿ ಮತ್ತು ಕಾರ್ಯಕಾರ್ಯೇತರ ಹುದ್ದೆಗಳ ವರ್ಗೀಕರಣವನ್ನು ಮರುನಿರ್ಧರಿಸಿ ಆದೇಶ ಹೊರಡಿಸಿದೆ.

ಹಿಂದಿನ ಮಾರ್ಗಸೂಚಿಗಳ ಪ್ರಕಾರ, ಕಾರ್ಯಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಪೊಲೀಸ್ ಉಪಾಧೀಕ್ಷಕರು ಪುನಃ ಕಾರ್ಯಕಾರಿ ಹುದ್ದೆಗೆ ಅರ್ಹರಾಗಲು ಎರಡು ವರ್ಷಗಳ ಕಾಲ ಕಾರ್ಯಕಾರ್ಯೇತರ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿತ್ತು. ಇದೇ ರೀತಿ, ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಕಾರ್ಯಕಾರಿ ಹುದ್ದೆಯಲ್ಲಿ ಎರಡು ವರ್ಷ ಸೇವೆ ಪೂರ್ಣಗೊಳಿಸಿದ ನಂತರ ಒಂದು ವರ್ಷದ ಅವಧಿಗೆ ಕಾರ್ಯಕಾರ್ಯೇತರ ಹುದ್ದೆಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿತ್ತು. ಆದರೆ ರಾಜ್ಯದ ಸೈಬರ್ ಅಪರಾಧ ಠಾಣೆಗಳು, ರೈಲ್ವೇ ಪೊಲೀಸ್ ಠಾಣೆಗಳು, ಮಹಿಳಾ ಪೊಲೀಸ್ ಠಾಣೆಗಳು ಸೇರಿದಂತೆ ಅನೇಕ ಹುದ್ದೆಗಳನ್ನು ಕಾರ್ಯಕಾರಿ ಹುದ್ದೆಗಳಾಗಿ ಗುರುತಿಸಿದ್ದರಿಂದ ಕಾರ್ಯಕಾರ್ಯೇತರ ಹುದ್ದೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ವರ್ಗಾವಣೆ ಮತ್ತು ಪದೋನ್ನತಿ ನಂತರ ಅಧಿಕಾರಿಗಳನ್ನು ನಿಯೋಜಿಸಲು ಆಡಳಿತಾತ್ಮಕ ತೊಂದರೆಗಳು ಉಂಟಾಗಿದ್ದವು.

ಈ ಹಿನ್ನೆಲೆಯಲ್ಲಿ ಸರ್ಕಾರ ಹೊಸ ವರ್ಗೀಕರಣ ಜಾರಿಗೆ ಮುಂದಾಗಿದೆ. ಪರಿಷ್ಕೃತ ಆದೇಶದಂತೆ, ಪೊಲೀಸ್ ಉಪಾಧೀಕ್ಷಕರ ವೃಂದದಲ್ಲಿ ರಾಜ್ಯದ ಎಲ್ಲಾ ಕಾನೂನು ಮತ್ತು ಸುವ್ಯವಸ್ಥೆಯ ಪೊಲೀಸ್ ಉಪವಿಭಾಗಗಳು, ನಗರ ಪೊಲೀಸ್ ಆಯುಕ್ತರ ಅಧೀನದ ಸಂಚಾರಿ ಉಪವಿಭಾಗಗಳು ಹಾಗೂ ಸಿಸಿಬಿ ಅಪರಾಧ ತನಿಖಾ ಘಟಕಗಳ ಹುದ್ದೆಗಳನ್ನು ಕಾರ್ಯಕಾರಿ ಹುದ್ದೆಗಳಾಗಿ ಪರಿಗಣಿಸಲಾಗಿದೆ. ಉಳಿದ ಎಲ್ಲಾ ಹುದ್ದೆಗಳನ್ನು ಕಾರ್ಯಕಾರ್ಯೇತರ ಹುದ್ದೆಗಳೆಂದು ವರ್ಗೀಕರಿಸಲಾಗಿದೆ.

ಅದೇ ರೀತಿ, ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವೃಂದದಲ್ಲಿ ರಾಜ್ಯದ ಎಲ್ಲಾ ಕಾನೂನು ಮತ್ತು ಸುವ್ಯವಸ್ಥೆಯ ಪೊಲೀಸ್ ವೃತ್ತಗಳು, ಇನ್‌ಸ್ಪೆಕ್ಟರ್‌ಗಳು ಠಾಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುವ ಪೊಲೀಸ್ ಠಾಣೆಗಳು, ಸಂಚಾರಿ ಪೊಲೀಸ್ ಠಾಣೆಗಳು ಹಾಗೂ ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯ ಸಿಸಿಬಿ ಹುದ್ದೆಗಳನ್ನು ಕಾರ್ಯಕಾರಿ ಹುದ್ದೆಗಳೆಂದು ಗುರುತಿಸಲಾಗಿದೆ. ಉಳಿದ ಎಲ್ಲಾ ಹುದ್ದೆಗಳು ಕಾರ್ಯಕಾರ್ಯೇತರ ಹುದ್ದೆಗಳಾಗಿರಲಿವೆ.

Comments

Leave a Comment

Prev Post ‎ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಅವರಿಗೆ ಸಮಾನ ಮನಸ್ಕ ಪತ್ರಕರ್ತರಿಂದ ಅಭಿನಂದನೆಗಳು
Next Post ರಾಜ್ಯದಲ್ಲಿ ಗೂಂಡಾ ಸರ್ಕಾರ, ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ

ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ: ಎಂ ಬಿ ಪಾಟೀಲ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಲಸಿಕೆ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಅಕ್ಕಪಡೆ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News