PRABHAVAA.COM

ಶಿಕ್ಷಕರ ವರ್ಗಾವಣೆ ನಿಯಮಗಳಿಗೆ ತಿದ್ದುಪಡಿ: ಕರಡು ಅಧಿಸೂಚನೆ ಪ್ರಕಟ

Bengaluru Urban:

Font size:

ಶಿಕ್ಷಕರ ವರ್ಗಾವಣೆ ನಿಯಮಗಳಿಗೆ ತಿದ್ದುಪಡಿ: ಕರಡು ಅಧಿಸೂಚನೆ ಪ್ರಕಟ

ಶಿಕ್ಷಕರ ವರ್ಗಾವಣೆ ನಿಯಮಗಳಿಗೆ ತಿದ್ದುಪಡಿ: ಕರಡು ಅಧಿಸೂಚನೆ ಪ್ರಕಟ

#TeacherTransfer #Karnataka #SchoolEducationDepartment #KarnatakaTeachers #GazetteNotification #DDPI #Teachers #Bengaluru #EducationNews #TransferRules2025

copy; https://prabhavaa.com/media/documents/teacherts_transfers.pdf

ಬೆಂಗಳೂರು, ನ. 13-
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಮಹತ್ವದ ಹೆಜ್ಜೆ

ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆ ನಿಯಮಗಳಲ್ಲಿ ಮಹತ್ವದ ಬದಲಾವಣೆ ತರಲು ಸರ್ಕಾರ ಮುಂದಾಗಿದೆ. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ನಿಯಮಗಳು, 2025 ರ ಕರಡನ್ನು ಗೆಜೆಟ್‌ನಲ್ಲಿ ಪ್ರಕಟಿಸಿ, ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಪವಿತ್ರ ಅವರ ಸಹಿಯೊಂದಿಗೆ ನ. 11ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ, 2020ರ ಮೂಲ ನಿಯಮಗಳಿಗೆ 12 ಪ್ರಮುಖ ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ.

ಏನೇನು ಬದಲಾವಣೆ?
1. ಖಾಲಿ ಹುದ್ದೆಗಳ ಅಧಿಸೂಚನೆ ಕಡ್ಡಾಯ
ಮರುಹಂಚಿಕೆ (Redeployment) ನಂತರ ಜಿಲ್ಲೆಯ ತಾಲ್ಲೂಕುವಾರು ಖಾಲಿ ಹುದ್ದೆಗಳನ್ನು ಜಿಲ್ಲಾ ಉಪನಿರ್ದೇಶಕರು (ಡಿಡಿಪಿಐ) ಪ್ರಕಟಿಸಬೇಕು. ಬೋಧಕೇತರ ಹುದ್ದೆಗಳ ಖಾಲಿ ಹುದ್ದೆಗಳನ್ನು ಕೌನ್ಸೆಲಿಂಗ್ ಮೂಲಕ ಮಾತ್ರ ಭರ್ತಿ ಮಾಡಬೇಕು.

2. ವರ್ಗಾವಣೆಗೆ ಬಯಸುವ ಶಿಕ್ಷಕರ ಕರಡು ಪಟ್ಟಿ
ವರ್ಗಾವಣೆಗೆ ಅರ್ಜಿ ಸಲ್ಲಿಸಿದ ಶಿಕ್ಷಕರ ಕರಡು ಪಟ್ಟಿಯನ್ನು ಡಿಡಿಪಿಐ ಅಥವಾ ಸಂಬಂಧಪಟ್ಟ ಕಚೇರಿ ಮುಖ್ಯಸ್ಥರು ಪ್ರಕಟಿಸಬೇಕು.

3. ವೈದ್ಯಕೀಯ ಕಾರಣಕ್ಕೆ ಕಠಿಣ ನಿಯಮ
ಶಿಕ್ಷಕರು, ಪತಿ/ಪತ್ನಿ ಅಥವಾ ಮಕ್ಕಳು ಮಾರಣಾಂತಿಕ ಕಾಯಿಲೆ / ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅಥವಾ 40% ಅಥವಾ ಅದಕ್ಕಿಂತ ಹೆಚ್ಚು ಅಂಗವೈಕಲ್ಯ ಇದ್ದರೆ, ಜಿಲ್ಲಾ ವೈದ್ಯಕೀಯ ಮಂಡಳಿಯ ಪ್ರಮಾಣಪತ್ರ ಕಡ್ಡಾಯ.
ಆ ಪ್ರಮಾಣಪತ್ರದ ನೈಜತೆಯನ್ನು ಪರಿಶೀಲಿಸಲು ಆರೋಗ್ಯ ಇಲಾಖೆಯ ಆಯುಕ್ತಾಲಯದಿಂದ ವಿಭಾಗೀಯ ವಿಶೇಷ ಸಮಿತಿ ರಚಿಸಲಾಗುವುದು. ಈ ಸಮಿತಿಯ ಶಿಫಾರಸಿನ ಆಧಾರದಲ್ಲೇ ವರ್ಗಾವಣೆ ಮಂಜೂರು ಅಥವಾ ತಿರಸ್ಕಾರವಾಗಲಿದೆ.

4. ಗರ್ಭಿಣಿ ಹಾಗೂ 5 ವರ್ಷದೊಳಗಿನ ಮಗುವಿರುವ ಶಿಕ್ಷಕಿಯರಿಗೆ ಆದ್ಯತೆ
ಗರ್ಭಿಣಿ ಶಿಕ್ಷಕಿಯರಿಗೆ ಜಿಲ್ಲಾ ವೈದ್ಯಕೀಯ ಮಂಡಳಿಯ ಪ್ರಮಾಣಪತ್ರ, 5 ವರ್ಷದೊಳಗಿನ ಮಗುವಿರುವ ಮಹಿಳಾ ಶಿಕ್ಷಕಿಯರಿಗೆ ಮಗುವಿನ ಜನನ ಪ್ರಮಾಣಪತ್ರ ಸಲ್ಲಿಸಬೇಕು.

5. ನಿರ್ಣಾಯಕ (Critical) ಖಾಲಿ ಹುದ್ದೆಗಳಿಗೆ ಮೊದಲ ಆದ್ಯತೆ
ಶೈಕ್ಷಣಿಕ ಬ್ಲಾಕ್ ಮಟ್ಟದ ಎಲ್ಲಾ ನಿರ್ಣಾಯಕ ಖಾಲಿ ಹುದ್ದೆಗಳನ್ನು ಮೊದಲು ಭರ್ತಿ ಮಾಡಬೇಕು. ಅದರ ನಂತರವೇ ಉಳಿದ ಹುದ್ದೆಗಳಿಗೆ ಜಿಲ್ಲಾ ಮಟ್ಟದಲ್ಲಿ ಅವಕಾಶ. ವಿಭಾಗೀಯ ಮಟ್ಟದಲ್ಲೂ ಇದೇ ನಿಯಮ ಅನ್ವಯ.

6. ಬೋಧಕೇತರ ಸಿಬ್ಬಂದಿಗೂ ಹೊಸ ವೇಳಾಪಟ್ಟಿ
ಗಜೆಟೆಡ್ ಅಸಿಸ್ಟೆಂಟ್, ಎಡಿಪಿಐ, ಅಕೌಂಟ್ಸ್ ಸೂಪರಿಂಟೆಂಡೆಂಟ್, ಗುಮಾಸ್ತ, ಟೈಪಿಸ್ಟ್, ಚಾಲಕ, ಗ್ರಂಥಪಾಲಕ, ಅಡುಗೆ ಕೆಲಸಗಾರ, ತೋಟಗಾರ, ಡಿ-ಗ್ರೂಪ್ ಸೇರಿದಂತೆ 21 ವಿಧದ ಬೋಧಕೇತರ ಹುದ್ದೆಗಳನ್ನು ಹೊಸ ಅನುಸೂಚಿಯಲ್ಲಿ ಸೇರಿಸಲಾಗಿದೆ.

7. ಹೆಚ್ಚುವರಿ ಶಿಕ್ಷಕರಿಗೆ ವಿನಾಯಿತಿ ಇಲ್ಲ
ಯಾವುದೇ ಶಾಲೆಯಲ್ಲಿ ಹುದ್ದೆ ಅನಗತ್ಯವಾಗಿ ಮತ್ತೊಂದು ಶಾಲೆಗೆ ವರ್ಗಾಯಿಸಲ್ಪಟ್ಟರೆ, ಆ ಹುದ್ದೆಯಲ್ಲಿದ್ದ ಶಿಕ್ಷಕರಿಗೆ ನಿಯಮ 10ರ ಅಡಿಯಲ್ಲಿ ಯಾವುದೇ ವಿನಾಯಿತಿ ಸಿಗುವುದಿಲ್ಲ.

8. ಆನ್‌ಲೈನ್ ಕೌನ್ಸೆಲಿಂಗ್
ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಶಿಕ್ಷಕರಿಗೆ ಸಕ್ಷಮ ಪ್ರಾಧಿಕಾರವು ಸಾಫ್ಟ್‌ವೇರ್ ಆಧಾರಿತ ಆನ್‌ಲೈನ್ ಕೌನ್ಸೆಲಿಂಗ್ ನಡೆಸಲಿದೆ.

ಸಾರ್ವಜನಿಕರಿಂದ ಸಲಹೆಗೆ ಅವಕಾಶ
ಈ ಕರಡು ನಿಯಮಗಳ ಕುರಿತು ಆಕ್ಷೇಪಣೆ ಅಥವಾ ಸಲಹೆ ಇದ್ದರೆ, ಗೆಜೆಟ್ ಪ್ರಕಟಣೆಯ ದಿನಾಂಕದಿಂದ 15 ದಿನಗಳ ಒಳಗೆ ಸರ್ಕಾರಕ್ಕೆ ಸಲ್ಲಿಸಬಹುದು. ಸಲಹೆಗಳನ್ನು ಪರಿಶೀಲಿಸಿದ ನಂತರವೇ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು.

Comments

Leave a Comment

Prev Post ಬೆಂಗಳೂರಿಗೆ ಆಗಮಿಸಿದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ
Next Post ಋತು ತಾರೆ: ಮಧ್ಯವಯಸ್ಸಿನ ಮಹಿಳೆಯರ ಆರೋಗ್ಯಕ್ಕೆ ಮಮತೆಯ ಬೆಳಕು

ದೇಶ ಹಾಗೂ ರಾಜ್ಯದ ಬೆಳವಣಿಗೆಗೆ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ: ಡಿಸಿಎಂ ಡಿ.ಕೆ. ಶಿವಕುಮಾರ್

ಎಲ್ಲರೂ ಜ್ಞಾನ ಹಂಚಿಕೊಂಡು ಬಾಳಬೇಕು ಬೆಂಗಳೂರಿನ ಹೆಮ್ಮೆ ಜ್ಯೋತಿ ನಿವಾಸ್ ಕಾಲೇಜು

ಮಂಗಳೂರು ವಿಶ್ವವಿದ್ಯಾನಿಲಯ ಘಟಿಕೋತ್ಸವ ; ಗೌರವ ಡಾಕ್ಟರೇಟ್ ಪ್ರದಾನ.

ಮಂಗಳೂರು ವಿಶ್ವವಿದ್ಯಾನಿಲಯ ಘಟಿಕೋತ್ಸವ ; ಗೌರವ ಡಾಕ್ಟರೇಟ್ ಪ್ರದಾನ.

ಕರ್ನಾಟಕ ಸರ್ಕಾರದ ಮಹತ್ವದ ಆದೇಶ: ಹದಿಹರೆಯದವರ ಆರೋಗ್ಯಕ್ಕಾಗಿ ‘ಸ್ನೇಹ ಕೇಂದ್ರ’ಗಳ ವಿಸ್ತರಣೆ, ಸಮಗ್ರ ಸಮಾಲೋಚನಾ ಕೇಂದ್ರಗಳ ಸ್ಥಾಪನೆ

ಕರ್ನಾಟಕ ಸರ್ಕಾರದ ಮಹತ್ವದ ಆದೇಶ: ಹದಿಹರೆಯದವರ ಆರೋಗ್ಯಕ್ಕಾಗಿ ‘ಸ್ನೇಹ ಕೇಂದ್ರ’ಗಳ ವಿಸ್ತರಣೆ, ಸಮಗ್ರ ಸಮಾಲೋಚನಾ ಕೇಂದ್ರಗಳ ಸ್ಥಾಪನೆ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ National Academic Depository (NAD) – DigiLocker ಮೂಲಕ ಫಲಿತಾಂಶದ ದಿನವೇ ಅಂಕಪಟ್ಟಿ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ National Academic Depository (NAD) – DigiLocker ಮೂಲಕ ಫಲಿತಾಂಶದ ದಿನವೇ ಅಂಕಪಟ್ಟಿ

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಅಮೂಲಾಗ್ರ ಬದಲಾವಣೆ ಗೆಜೆಟ್ ಪ್ರಕಟಣೆ

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಅಮೂಲಾಗ್ರ ಬದಲಾವಣೆ ಗೆಜೆಟ್ ಪ್ರಕಟಣೆ

ಸಹಾಯಧನ ಪಡೆಯುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ

ಸಹಾಯಧನ ಪಡೆಯುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ

Read all News