PRABHAVAA.COM

ಆಯುಷ್ ವೈದ್ಯರ ಬೇಡಿಕೆಗಳಿಗಾಗಿ ಸೆಪ್ಟೆಂಬರ್ 22ರಿಂದ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ AFI ಕರ್ನಾಟಕ ಕರೆ

Bengaluru Urban:

Font size:

ಆಯುಷ್ ವೈದ್ಯರ ಬೇಡಿಕೆಗಳಿಗಾಗಿ ಸೆಪ್ಟೆಂಬರ್ 22ರಿಂದ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ AFI ಕರ್ನಾಟಕ ಕರೆ

ಆಯುಷ್ ವೈದ್ಯರ ಬೇಡಿಕೆಗಳಿಗಾಗಿ ಸೆಪ್ಟೆಂಬರ್ 22ರಿಂದ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ AFI ಕರ್ನಾಟಕ ಕರೆ

ಬೆಂಗಳೂರು , ಸೆ.21-
ಆಯುಷ್ ಫೆಡರೇಷನ್ ಆಫ್ ಇಂಡಿಯಾ (AFI) ಕರ್ನಾಟಕ ರಾಜ್ಯ ಘಟಕವು ಆಯುಷ್ ವೈದ್ಯರ ಹಕ್ಕುಗಳು ಮತ್ತು ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ರಾಜ್ಯಾದ್ಯಂತದ ವೈದ್ಯರನ್ನು ಒಗ್ಗೂಡಿಸಿದೆ. ಸೆಪ್ಟೆಂಬರ್ 22ರಿಂದ ಅನಿರ್ದಿಷ್ಟಾವಧಿ ಮುಷ್ಕರ ಮತ್ತು ಧರಣಿ ಸತ್ಯಾಗ್ರಹ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಹೋರಾಟದಲ್ಲಿ ರಾಜ್ಯದ 32 ಜಿಲ್ಲೆಗಳ ಸಾವಿರಾರು ಆಯುಷ್ ವೈದ್ಯರು ಭಾಗವಹಿಸಲಿದ್ದು, 'ರಾಯಚೂರು ಚಲೋ' ಕಾರ್ಯಕ್ರಮದ ಮೂಲಕ ತಮ್ಮ ಧ್ವನಿಯನ್ನು ಸರ್ಕಾರದವರೆಗೆ ತಲುಪಿಸಲಿದ್ದಾರೆ.

ವೈದ್ಯರ ಪ್ರಮುಖ ಬೇಡಿಕೆಗಳಲ್ಲಿ ಪ್ರಾಥಮಿಕ ಆರೋಗ್ಯ ಸೇವೆಯಲ್ಲಿ ಆಧುನಿಕ ಔಷಧ ಬಳಕೆಗೆ ಕಾನೂನುಬದ್ಧ ಅನುಮತಿ, NCISM ಮತ್ತು NCH ಕಾಯ್ದೆಗಳ ಅನುಷ್ಠಾನ, KPME ಕಾಯಿದೆಯಡಿ ದೂರುಗಳ ಸರಿಯಾದ ಪರಿಶೀಲನೆ, ನೋಂದಣಿ ಮತ್ತು Fire NOC ಸಂಬಂಧಿತ ಸಮಸ್ಯೆಗಳ ಸರಳೀಕರಣ, ಸರ್ಕಾರಿ ಸಮಿತಿಗಳಲ್ಲಿ ಆಯುಷ್ ವೈದ್ಯರ ಪ್ರತಿನಿಧಿತ್ವ ಹಾಗೂ ಗ್ರಾಮೀಣ ಆರೋಗ್ಯ ಸೇವೆಯಲ್ಲಿ ಅವರ ಸಮರ್ಪಕ ಬಳಕೆ ಸೇರಿವೆ. ಈ ಬೇಡಿಕೆಗಳು ಸಾರ್ವಜನಿಕರಿಗೆ ಸುರಕ್ಷಿತ, ಕೈಗೆಟುಕುವ ಮತ್ತು ಸಮಗ್ರ ಆರೋಗ್ಯ ಸೇವೆ ಒದಗಿಸುವ ಉದ್ದೇಶವನ್ನು ಹೊಂದಿವೆ.

ರಾಜ್ಯಾಧ್ಯಕ್ಷ ಡಾ. ಮೋಹನ ಬಿರಾದಾರ ಮತ್ತು ಪ್ರಧಾನ ಕಾರ್ಯದರ್ಶಿ ಡಾ. ಆನಂದ್ ಕಿರಿಶಾಳ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಹೋರಾಟದಲ್ಲಿ ವೈದ್ಯರು ಶಾಂತಿಯುತವಾಗಿ ಹಾಗೂ ಶಿಸ್ತುಬದ್ಧವಾಗಿ ಭಾಗವಹಿಸುವಂತೆ ಸಂಘಟನೆ ಮನವಿ ಮಾಡಿದೆ. "ನಮ್ಮ ಹೋರಾಟ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧವಲ್ಲ; ಆಯುಷ್ ವೈದ್ಯರ ಕಾನೂನುಬದ್ಧ ಹಕ್ಕುಗಳು, ವೃತ್ತಿಪರ ಗೌರವ ಮತ್ತು ಜನತೆಗೆ ಉತ್ತಮ ಆರೋಗ್ಯ ಸೇವೆ ದೊರಕಿಸುವ ಉದ್ದೇಶದಿಂದ ನಡೆಯುತ್ತಿದೆ" ಎಂದು ಸಂಘಟನೆ ಸ್ಪಷ್ಟಪಡಿಸಿದೆ. ಬೇಡಿಕೆಗಳನ್ನು ಸರ್ಕಾರ ತಕ್ಷಣ ಪರಿಗಣಿಸಿ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕೆಂದು ಒತ್ತಾಯಿಸಲಾಗಿದೆ. ಬೇಡಿಕೆಗಳು ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ ಎಂದು AFI ಕರ್ನಾಟಕ ತಿಳಿಸಿದೆ.

Comments

Leave a Comment

Prev Post ಗೂಳ್ಯಗೂಳ್ಯನಂದಿಗುಂದ ಸರ್ಕಾರಿ ಗೋಮಾಳ ಜಮೀನು ವಿವಾದ – ನಕಲಿ ದಾಖಲೆ ಆರೋಪ, ಪ್ರತಿಭಟನಾಕಾರರ ಮೇಲೆ ಸುಳ್ಳು ಪ್ರಕರಣ ಖಂಡನೆ
Next Post ರಾಜ್ಯದ ರೈತರು, ಜನರ ರಕ್ಷಣೆಗೆ ಬದ್ಧ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್

ಸರ್ಕಾರಿ ಆಸ್ಪತ್ರೆಗಳಿಗೆ ಖಾಸಗಿ ವೈದ್ಯಕೀಯ ಕಾಲೇಜುಗಳ ಸಹಕಾರ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಸರ್ಕಾರದ ಮಹತ್ವದ ಹೆಜ್ಜೆ

ಸರ್ಕಾರಿ ಆಸ್ಪತ್ರೆಗಳಿಗೆ ಖಾಸಗಿ ವೈದ್ಯಕೀಯ ಕಾಲೇಜುಗಳ ಸಹಕಾರ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಸರ್ಕಾರದ ಮಹತ್ವದ ಹೆಜ್ಜೆ

ಸಂಕೀರ್ಣ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ಹೊಸ ಜೀವನ ನೀಡಿದ ಫಾದರ್ ಮುಲ್ಲರ್ ವೈದ್ಯರ ತಂಡ

ಸಂಕೀರ್ಣ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ಹೊಸ ಜೀವನ ನೀಡಿದ ಫಾದರ್ ಮುಲ್ಲರ್ ವೈದ್ಯರ ತಂಡ

2026ನೇ ಸಾಲಿನ ಆರೋಗ್ಯ ಇಲಾಖೆಯ ವರ್ಗಾವಣೆ ಪ್ರಕ್ರಿಯೆಗೆ ನೂತನ ತಂಡಗಳ ರಚನೆ

2026ನೇ ಸಾಲಿನ ಆರೋಗ್ಯ ಇಲಾಖೆಯ ವರ್ಗಾವಣೆ ಪ್ರಕ್ರಿಯೆಗೆ ನೂತನ ತಂಡಗಳ ರಚನೆ

ರಾಷ್ಟ್ರೀಯ ದಂತ ಸಲಹಾ ಮಂಡಳಿ ರಚನೆ: ಕರ್ನಾಟಕ ಪ್ರತಿನಿಧಿಯಾಗಿ ಡಾ. ಶಿವಶರಣ್ ಶೆಟ್ಟಿ

ರಾಷ್ಟ್ರೀಯ ದಂತ ಸಲಹಾ ಮಂಡಳಿ ರಚನೆ: ಕರ್ನಾಟಕ ಪ್ರತಿನಿಧಿಯಾಗಿ ಡಾ. ಶಿವಶರಣ್ ಶೆಟ್ಟಿ

ಶಿಗ್ಗಾಂವಿ ಆಸ್ಪತ್ರೆ 250 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೆ — ಹಾವೇರಿ ಜಿಲ್ಲೆಯ ಆರೋಗ್ಯ ಸೇವೆಗೆ ಗ್ರಾಮೀಣ ಜನತೆಗೆ ತಜ್ಞರ ಸೇವೆ, ಉತ್ತಮ ಚಿಕಿತ್ಸಾ ಸೌಲಭ್ಯ ಮತ್ತು ಹೊಸ ಉದ್ಯೋಗಾವಕಾಶಗಳ ಭರವಸೆ

ಶಿಗ್ಗಾಂವಿ ಆಸ್ಪತ್ರೆ 250 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೆ — ಹಾವೇರಿ ಜಿಲ್ಲೆಯ ಆರೋಗ್ಯ ಸೇವೆಗೆ ಗ್ರಾಮೀಣ ಜನತೆಗೆ ತಜ್ಞರ ಸೇವೆ, ಉತ್ತಮ ಚಿಕಿತ್ಸಾ ಸೌಲಭ್ಯ ಮತ್ತು ಹೊಸ ಉದ್ಯೋಗಾವಕಾಶಗಳ ಭರವಸೆ

ಯೋಗವು ಆರೋಗ್ಯಕರ ಮತ್ತು ಸಮತೋಲಿತ ಜೀವನಕ್ಕೆ ಅತ್ಯಂತ ವಿಶ್ವಾಸಾರ್ಹ ಸಾಧನ : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಯೋಗವು ಆರೋಗ್ಯಕರ ಮತ್ತು ಸಮತೋಲಿತ ಜೀವನಕ್ಕೆ ಅತ್ಯಂತ ವಿಶ್ವಾಸಾರ್ಹ ಸಾಧನ : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Read all News