PRABHAVAA.COM

ಸಂಕೀರ್ಣ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ಹೊಸ ಜೀವನ ನೀಡಿದ ಫಾದರ್ ಮುಲ್ಲರ್ ವೈದ್ಯರ ತಂಡ

Dakshina Kannada:

Font size:

ಸಂಕೀರ್ಣ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ಹೊಸ ಜೀವನ ನೀಡಿದ ಫಾದರ್ ಮುಲ್ಲರ್ ವೈದ್ಯರ ತಂಡ

ಸಂಕೀರ್ಣ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ಹೊಸ ಜೀವನ ನೀಡಿದ ಫಾದರ್ ಮುಲ್ಲರ್ ವೈದ್ಯರ ತಂಡ

From ; Jayram Udupi

ಮಂಗಳೂರು: ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯ ಹೃದಯ ರೋಗ ಚಿಕಿತ್ಸಾ ವಿಭಾಗದ ಡಾ. ಎಚ್. ಪ್ರಭಾಕರ್ ನೇತೃತ್ವದ ತಜ್ಞ್ ವೈದ್ಯರ ತಂಡ ಮಿಡಿತ ಇಲ್ಲದ ಖಾಯಿಲೆ ಎಂದು ಕರೆಯಲ್ಪಡುವ ಅಪರೂಪದ ಖಾಯಿಲೆ ಬಾಧಿತ ಮಹಿಳೆಗೆ ತುರ್ತು ಚಿಕಿತ್ಸೆ ನಡೆಸಿ ಜೀವ ಉಳಿಸಿದೆ. ಸಾಮಾನ್ಯವಾಗಿ ನಲವತ್ತರ ಆಸುಪಾಸಿನ ಮಹಿಳೆಯರಲ್ಲಿ ಕಂಡು ಬರುವ ಟಕಾಯಸು ಖಾಯಿಲೆ ಹೃದಯದ ಸ್ನಾಯುಗಳಿಗೆ ರಕ್ತ ಪೂರೈಕೆಯನ್ನು ತಡೆಯುತ್ತದೆ. ಇದರಿಂದ ರೋಗಿಗಳಲ್ಲಿ ಉಸಿರಾಟದ ಸಮಸ್ಯೆ ಉಂಟಾಗುತ್ತದೆ.

ಫಾದರ್ ಮುಲ್ಲರ್ ವೈದ್ಯರ ತಂಡ ಆಧುನಿಕ ತಂತ್ರಜ್ಞಾನ ಬಳಸಿ ಕನಿಷ್ಠ ಗಾಯಗಳೊಂದಿಗೆ ರಕ್ತ ನಾಳಗಳನ್ನು ತೆರೆದು ಹೃದಯಕ್ಕೆ ರಕ್ತ ಪೂರೈಕೆಯನ್ನು ಸುಗಮಗೊಳಿಸುವ ಮೂಲಕ ಕಾಸರಗೋಡು ಜಿಲ್ಲೆಯ ೪೬ರ ಹರೆಯದ ಮಹಿಳೆಯ ಜೀವ ಉಳಿಸಿದೆ. ಇದು ಅತ್ಯಂತ ಅಪರೂಪದ ಮತ್ತು ವಿಶಿಷ್ಟವಾದ ಕೊರೋನರಿ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಯಾಗಿದ್ದು, ವೈದ್ಯರ ತಂಡ ತ್ರುರ್ತಾಗಿ ಕೈಗೊಂಡಿದೆ.

ಈ ರೋಗ ಬಾಧಿತರಲ್ಲಿ ಉಸಿರಾಟದ ಸಮಸ್ಯೆಯ ಜೊತೆ ಆಯಾಸ, ಚಲನೆಗೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುತ್ತವೆ. ಫಾದರ್ ಮುಲ್ಲರ್ ಆಸ್ಪತ್ರೆಗೆ ಬಂದ ರೋಗಿಯಲ್ಲಿ ಅಪರೂಪದ ಖಾಯಿಲೆಗಳ ಲಕ್ಷಣಗಳನ್ನು ವಿವರವಾದ ಕ್ಲಿನಿಕಲ್ ಪರೀಕ್ಷೆಯಲ್ಲಿ ಗಮನಿಸಿದ ಡಾ. ಪ್ರಭಾಕರ್ ಅವರು ಹೃದಯದ ಸ್ನಾಯುಗಳಿಗೆ ರಕ್ತ ಪೂರೈಕೆಯಾಗುವ ಎರಡೂ ಅಪಧಮನಿಗಳಲ್ಲಿ ಅಡೆತಡೆಗಳು ಇರುವುದನ್ನು ಪತ್ತೆ ಹಚ್ಚಿದರು. ಚಿಕಿತ್ಸೆಗಾಗಿ ಅಂತರಶಿಸ್ತೀಯ ತಜ್ಞ್ ವೈದ್ಯರ ತಂಡವನ್ನು ರೂಪಿಸಿ ಚಿಕಿತ್ಸೆ ನೀಡಿದರು. ಡಾ. ಅಶೋಕ, ಡಾ. ಪ್ರದೀಪ ಪಿರೇರಾ, ಡಾ. ಜೋಸ್ಟಲ್ ಪಿಂಟೋ ಅವರನ್ನು ಒಳಗೊಂಡ ನುರಿತ ವೈದ್ಯರ ತಂಡ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಕೈಗೊಂಡು ರೋಗಿಯ ಜೀವ ರಕ್ಷಣೆ ಮಾಡಿದೆ.

ಇಮೇಜಿಂಗ್ ತಂತ್ರಜ್ಞಾನ ಮತ್ತು ವಿಶೇಷ ಬಲೂನ್ ತಂತ್ರಜ್ಞಾನ ಬಳಸಿ ಕೊರೊನರಿ ಆಂಜಿಯೋಪ್ಲಾಸ್ಟಿ ನಡೆಸಲಾಗಿದೆ ಎರಡು ಹಂತಗಳಲ್ಲಿ ಚಿಕಿತ್ಸೆ ನೀಡಲಾಗಿದ್ದು, ರೋಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಆರೋಗ್ಯದ ಜೀವನ ನಡೆಸುತ್ತಿದ್ದಾರೆ ಎಂದು ಆಸ್ಪತ್ರೆ ಪ್ರಕಟಣೆ ಹೇಳಿದೆ. ವೈದ್ಯರ ತಂಡದ ಪರಿಶ್ರಮ ಯಶಸ್ವಿಯಾಗಿರುವುದಕ್ಕೆ ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ರೆವೆರೆಂಡ್ ಫಾದರ್ ಫೌಸಿನ್ ಲೂಕಸ್ ಲೋಬೋ ವೈದ್ಯರನ್ನು ಅಭಿನಂದಿಸಿದ್ದಾರೆ.

Comments

Leave a Comment

Prev Post ಮಹಿಳಾ ಮೀಸಲಾತಿ ಹೆಸರಿನಲ್ಲಿ ಕಾಂಗ್ರೆಸ್ ಮೊಸಳೆ ಕಣ್ಣೀರು: ರಮಾನಾಥ ರೈ ಆರೋಪ.
Next Post 2011ರ ಜನಗಣತಿ ಆಧರಿಸಿ ಮೀಸಲಾತಿ ಸರಿಯಲ್ಲ: ಫರ್ಝಾನಾ

ಸರ್ಕಾರಿ ಆಸ್ಪತ್ರೆಗಳಿಗೆ ಖಾಸಗಿ ವೈದ್ಯಕೀಯ ಕಾಲೇಜುಗಳ ಸಹಕಾರ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಸರ್ಕಾರದ ಮಹತ್ವದ ಹೆಜ್ಜೆ

ಸರ್ಕಾರಿ ಆಸ್ಪತ್ರೆಗಳಿಗೆ ಖಾಸಗಿ ವೈದ್ಯಕೀಯ ಕಾಲೇಜುಗಳ ಸಹಕಾರ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಸರ್ಕಾರದ ಮಹತ್ವದ ಹೆಜ್ಜೆ

2026ನೇ ಸಾಲಿನ ಆರೋಗ್ಯ ಇಲಾಖೆಯ ವರ್ಗಾವಣೆ ಪ್ರಕ್ರಿಯೆಗೆ ನೂತನ ತಂಡಗಳ ರಚನೆ

2026ನೇ ಸಾಲಿನ ಆರೋಗ್ಯ ಇಲಾಖೆಯ ವರ್ಗಾವಣೆ ಪ್ರಕ್ರಿಯೆಗೆ ನೂತನ ತಂಡಗಳ ರಚನೆ

ರಾಷ್ಟ್ರೀಯ ದಂತ ಸಲಹಾ ಮಂಡಳಿ ರಚನೆ: ಕರ್ನಾಟಕ ಪ್ರತಿನಿಧಿಯಾಗಿ ಡಾ. ಶಿವಶರಣ್ ಶೆಟ್ಟಿ

ರಾಷ್ಟ್ರೀಯ ದಂತ ಸಲಹಾ ಮಂಡಳಿ ರಚನೆ: ಕರ್ನಾಟಕ ಪ್ರತಿನಿಧಿಯಾಗಿ ಡಾ. ಶಿವಶರಣ್ ಶೆಟ್ಟಿ

ಶಿಗ್ಗಾಂವಿ ಆಸ್ಪತ್ರೆ 250 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೆ — ಹಾವೇರಿ ಜಿಲ್ಲೆಯ ಆರೋಗ್ಯ ಸೇವೆಗೆ ಗ್ರಾಮೀಣ ಜನತೆಗೆ ತಜ್ಞರ ಸೇವೆ, ಉತ್ತಮ ಚಿಕಿತ್ಸಾ ಸೌಲಭ್ಯ ಮತ್ತು ಹೊಸ ಉದ್ಯೋಗಾವಕಾಶಗಳ ಭರವಸೆ

ಶಿಗ್ಗಾಂವಿ ಆಸ್ಪತ್ರೆ 250 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೆ — ಹಾವೇರಿ ಜಿಲ್ಲೆಯ ಆರೋಗ್ಯ ಸೇವೆಗೆ ಗ್ರಾಮೀಣ ಜನತೆಗೆ ತಜ್ಞರ ಸೇವೆ, ಉತ್ತಮ ಚಿಕಿತ್ಸಾ ಸೌಲಭ್ಯ ಮತ್ತು ಹೊಸ ಉದ್ಯೋಗಾವಕಾಶಗಳ ಭರವಸೆ

Read all News