2011ರ ಜನಗಣತಿ ಆಧರಿಸಿ ಮೀಸಲಾತಿ ಸರಿಯಲ್ಲ: ಫರ್ಝಾನಾ
2011ರ ಜನಗಣತಿ ಆಧರಿಸಿ ಮೀಸಲಾತಿ ಸರಿಯಲ್ಲ: ಫರ್ಝಾನಾ
From Jayaram Udupi
ಮಂಗಳೂರು:
ನಾರಿ ಶಕ್ತಿ ವಂದನ ಮಸೂದೆಯು ವಿಫಲಗೊಂಡ ಹಿನ್ನೆಲೆಯಲ್ಲಿ ಬಿಜೆಪಿಗರು ರಾಜ್ಯದಾದ್ಯಂತ ಜಾಗೃತಿ ಮೂಡಿಸುತ್ತೇವೆ ಎಂದು ಹೇಳುತ್ತಾರೆ. 2011ರ ಜನಗಣತಿಯನ್ನೇ ಆಧರಿಸಿ ಮೀಸಲಾತಿಯನ್ನು ತರುವುದಾದರೆ 2023 ರವರೆಗೆ ಕಾಯುವಂತ ಅವಶ್ಯಕತೆ ಏನಿತ್ತು? ಎಂದು ಕೆಪಿಸಿಸಿ ವಕ್ತಾರೆ ಯು.ಟಿ.ಫರ್ಝಾನ ಪ್ರಶ್ನಿಸಿದ್ದಾರೆ.
ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ 1955ರಲ್ಲಿ ಹಿಂದೂ ವಿವಾಹ ಮತ್ತು ಉತ್ತರಾಧಿಕಾರ ಕಾಯ್ದೆ, 1961ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ, 1993ರಲ್ಲಿ ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿ ತಂದು ಲಕ್ಷಾಂತರ ಮಹಿಳೆಯರು ಈ ದೇಶದ ರಾಜಕೀಯದ ಭಾಗವಾಗಲು ಅವಕಾಶ ನೀಡಿದೆ. 1992 ರಲ್ಲಿ ಮಹಿಳಾ ಆಯೋಗದ ಸ್ಥಾಪನೆ ಮಾಡಿ ಮಹಿಳೆಯರ ಹಕ್ಕುಗಳ ರಕ್ಷಣೆ ಮಾಡಿದೆ ಎಂದು ಹೇಳಿದರು.
ಬಲ್ಕಿಸ್ ಬಾನು ಪ್ರಕರಣದಲ್ಲಿ ಗರ್ಭಿಣಿಯನ್ನು ಕೊಂದು ಜೈಲುಪಾಲಾಗಿ ತಾತ್ಕಾಲಿಕವಾಗಿ ಹೊರಬಂದ ಆರೋಪಿಗಳನ್ನ ಹೊತ್ತು ಮೆರೆದಾಡಿದವರು, ಕಥುವಾದಲ್ಲಿ ಬಾಲಕಿ ಅತ್ಯಾಚಾರ, ಉನ್ನವೋದಲ್ಲಿ ದಲಿತ ಮಹಿಳೆಯರ ಅತ್ಯಾಚಾರದ ಆರೋಪಿಗಳ ಪರ ನಿಂತವರು ಬಿಜೆಪಿಗರು. 2014 ರಿಂದ 2024 ಬಿಜೆಪಿಯವರೇ ಮಹಿಳಾ ದ್ರೋಹಿ ಕೆಲಸಗಳಲ್ಲಿ ಭಾಗವಹಿಸಿದ್ದಾರೆ ಎಂಬ ಅಂಶದ ಬಗ್ಗೆ ನ್ಯಾಷನಲ್ ಕ್ರೈಂ ರಿಪೋರ್ಟ್ ಬ್ಯೂರೋ ವರದಿ ನೀಡಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಉಷಾ ಅಂಚನ್ ಕಡಬ , ರೂಪ ಚೇತನ್, ಗೀತಾ ಅತ್ತವರ, ಸುರೇಖಾ , ಸಾರಿಕಾ ಪೂಜಾರಿ, ಚಂದ್ರಕಲಾ ಜೋಗಿ, ನಮಿತಾ ಡಿ. ರಾವ್ ಉಪಸ್ಥಿತರಿದ್ದರು





Comments
Leave a Comment