ಗೂಳ್ಯಗೂಳ್ಯನಂದಿಗುಂದ ಸರ್ಕಾರಿ ಗೋಮಾಳ ಜಮೀನು ವಿವಾದ – ನಕಲಿ ದಾಖಲೆ ಆರೋಪ, ಪ್ರತಿಭಟನಾಕಾರರ ಮೇಲೆ ಸುಳ್ಳು ಪ್ರಕರಣ ಖಂಡನೆ
ಗೂಳ್ಯಗೂಳ್ಯನಂದಿಗುಂದ ಸರ್ಕಾರಿ ಗೋಮಾಳ ಜಮೀನು ವಿವಾದ – ನಕಲಿ ದಾಖಲೆ ಆರೋಪ, ಪ್ರತಿಭಟನಾಕಾರರ ಮೇಲೆ ಸುಳ್ಳು ಪ್ರಕರಣ ಖಂಡನೆ
ಬೆಂಗಳೂರು . ಸೆ. 21-ದೊಡ್ಡಬಳ್ಳಾಪುರ ತಾಲ್ಲೂಕು ತೂಬಗೆರೆ ಹೋಬಳಿ, ಗೂಳ್ಯನಂದಿಗುಂದ ಗ್ರಾಮದ ಸರ್ಕಾರಿ ಗೋಮಾಳ ಜಮೀನಿನ ಮೇಲೆ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಆಸ್ತಿ ಲಪಟಾಯಿಸಿರುವುದನ್ನು ಸಂಘಟನೆಗಳು ಆರೋಪಿಸಿವೆ. ಸರ್ವೆ ನಂ.28 (8-14 ಎಕರೆ) ಮತ್ತು ಸರ್ವೆ ನಂ.30 (4-30 ಎಕರೆ) ಜಮೀನುಗಳು ಸರ್ಕಾರಿ ಗೋಮಾಳವಾಗಿದ್ದು, ನಕಲಿ ದಾಖಲೆಗಳ ಮೂಲಕ ಸರ್ಕಾರಕ್ಕೆ ಮೋಸ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಪ್ರಬುದ್ಧ ಕರ್ನಾಟಕ ಭೀಮ ಸೇನೆ (ರಿ.), ಕಸ್ತೂರಿ ಕರ್ನಾಟಕ ಸಂಘಟನೆಗಳ ಒಕ್ಕೂಟ (ರಿ.), ಕರ್ನಾಟಕ ದಲಿತ ಸಂರಕ್ಷಣಾ ಸೇನೆ (ರಿ.), ವಿಶ್ವರತ್ನ ಅಂಬೇಡ್ಕರ್ ಸೇನೆ (ರಿ.) ಸೇರಿದಂತೆ ಅನೇಕ ಸಂಘಟನೆಗಳ ಒಕ್ಕೂಟದ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ದೊಡ್ಡಬಳ್ಳಾಪುರ ತಾಲ್ಲೂಕು ತೂಬಗೆರೆ ಹೋಬಳಿ, ಗೂಳ್ಯನಂದಿಗುಂದ ಗ್ರಾಮದ ಸರ್ಕಾರಿ ಗೋಮಾಳ ಜಮೀನಿನ ಮೇಲೆ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಆಸ್ತಿ ಲಪಟಾಯಿಸಿರುವುದನ್ನು ಸಂಘಟನೆಗಳು ಆರೋಪಿಸಿವೆ. ಸರ್ವೆ ನಂ.28 (8-14 ಎಕರೆ) ಮತ್ತು ಸರ್ವೆ ನಂ.30 (4-30 ಎಕರೆ) ಜಮೀನುಗಳು ಸರ್ಕಾರಿ ಗೋಮಾಳವಾಗಿದ್ದು, ನಕಲಿ ದಾಖಲೆಗಳ ಮೂಲಕ ಸರ್ಕಾರಕ್ಕೆ ಮೋಸ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸಂಘಟನೆಗಳ ಪ್ರತಿನಿಧಿಗಳು, ಈ ಪ್ರಕರಣದಲ್ಲಿ ರಾಜಕೀಯ ಪ್ರಭಾವದಿಂದ ಪ್ರತಿಭಟನಾಕಾರರ ಮೇಲೆ ಸುಳ್ಳು ಎಫ್‌ಐಆರ್ ದಾಖಲಿಸಿರುವುದನ್ನು ತೀವ್ರವಾಗಿ ಖಂಡಿಸಿದರು. ಅವರು ಮೂಲ ದಾಖಲೆಗಳ ಪರಿಶೀಲನೆ, ಅಕ್ರಮ ಅತಿಕ್ರಮಣ ತೆರವು, ನಕಲಿ ದಾಖಲೆ ಸೃಷ್ಟಿಸಿದವರ ವಿರುದ್ಧ ಕಾನೂನು ಕ್ರಮ, ಅಧಿಕಾರಿಗಳ ಕರ್ತವ್ಯಲೋಪದ ವಿರುದ್ಧ ಕ್ರಮ, ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆ, ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಸುಳ್ಳು ಪ್ರಕರಣಗಳ ಪರಿಶೀಲನೆ, ರಾಜಕೀಯ ಅಥವಾ ಪೊಲೀಸ್ ಒತ್ತಡ ಹೇರಬಾರದು, ಸರ್ಕಾರಿ ಆಸ್ತಿ ಮತ್ತು ಸಾರ್ವಜನಿಕ ದಾಖಲೆಗಳ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಂಘಟನೆಗಳು, ಸರ್ಕಾರಿ ಆಸ್ತಿಯನ್ನು ಕಾಪಾಡುವುದು ಆಡಳಿತದ ಕರ್ತವ್ಯವಾಗಿದ್ದು, ನಕಲಿ ದಾಖಲೆಗಳ ಮೂಲಕ ಸಾರ್ವಜನಿಕ ಹಕ್ಕುಗಳನ್ನು ಹತ್ತಿಕ್ಕಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿವೆ.
ಪ್ರತಿಭಟನಕಾರರ ಮೇಲೆ ಸುಳ್ಳು ಆರೋಪಗಳು ಮಾಡಿರುವುದು ಖಂಡನೀಯ ಸಾರ್ವಜನಿಕರ ಆಸ್ತಿ ಮತ್ತು ಸರ್ಕಾರಿ ದಾಖಲೆಗಳ ಕುರಿತು ಪ್ರಶ್ನಿಸಿ ಕಾನೂನು ಬದ್ಧವಾಗಿ ನಡೆಸುತ್ತಿರುವ ಪ್ರತಿಭಟನಾಕಾರರ ಮೇಲೆ ರಾಜಕೀಯ ಪ್ರಭಾವ ಅಥವಾ ಅಧಿಕಾರಿಗಳ ಒತ್ತಡದಿಂದ ಸುಳ್ಳು ಆರೋಪ/ಪ್ರಕರಣ ದಾಖಲಿಸಿರುವುದನ್ನು ಖಂಡಿಸಿದ್ದಾರೆ,ನ್ಯಾಯಯುತವಾಗಿ ಪ್ರಶ್ನಿಸುವ ಮತ್ತು ಕಾನೂನು ಹೋರಾಟ ಮಾಡುವ ನಾಗರೀಕರ ಹಕ್ಕುಗಳನ್ನು ಹತ್ತಿಕ್ಕಬಾರದು. ಯಾವುದೇ ಪ್ರಕರಣ ದಾಖಲಾಗಿದ್ದರೆ ಅದರ ಕುರಿತು ನಿಷ್ಪಪಕ್ಷಪಾತವಾಗಿ ತನಿಖೆ ನಡೆಸಿ ಸಾಕ್ಷ್ಯಾದಾರಗಳ ಮೇಲೆ ಮಾತ್ರ ಕಾನೂನು ಕ್ರಮ ಕೈಗೊಳ್ಳಬೇಕು. ರಾಜಕೀಯ ಅಥವಾ ಅಧಿಕಾರದ ಒತ್ತಡಕ್ಕೆ ಮಣಿದು ಯಾವುದೇ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂದು ಅಗ್ರಹಪಡಿಸಿದರು.
ನಮ್ಮ ಪ್ರಮುಖ ಬೇಡಿಕೆಗಳು
1. ಸರ್ವೆ ನಂ.28 ಮತ್ತು 30ರ ಸಂಪೂರ್ಣ ಮೂಲ ದಾಖಲೆಗಳನ್ನು ಪರಿಶೀಲಿಸಿ, ನಕಲಿ/ಅಕ್ರಮ ದಾಖಲೆಗಳ ಆರೋಪದ ಕುರಿತು ಸಮಗ್ರ ತನಿಖೆ ನಡೆಸಬೇಕು.
2. ಸರ್ವೆ ನಂ.28 ಮತ್ತು 30ರ ಸರ್ಕಾರಿ ಗೋಮಾಳ ಜಮೀನಿನ ಸರ್ಕಾರಿ ಸ್ವರೂಪವನ್ನು ದಾಖಲೆಗಳ ಆಧಾರದ ಮೇಲೆ ಪರಿಶೀಲಿಸಿ ಅಕ್ರಮ ಅತಿಕ್ರಮಣ ಕಂಡುಬಂದರೆ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು.
3. ನಕಲಿ ದಾಖಲೆ ಸೃಷ್ಟಿಸಿ ಅಥವಾ ಅಕ್ರಮ ನೋಂದಣಿಯಲ್ಲಿ ಯಾರಾದರೂ ಭಾಗಿಯಾಗಿರುವುದು ತನಿಖೆಯಲ್ಲಿ ದೃಡಪಟ್ಟರೆ, ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು.
4. ದಾಖಲೆಗಳನ್ನು ಸೃಷ್ಟಿಸಲು ಅಥವಾ ಬದಲಾಯಿಸಲು ಯಾವುದೇ ಅಧಿಕಾರಿ/ಸಿಬ್ಬಂದಿ ಕರ್ತವ್ಯಲೋಪ ಅಥವಾ ಅಕ್ರಮವಾಗಿ ಸಹಕರಿಸಿರುವುದು ಕಂಡುಬಂದರೆ ಅವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು. 5.
ಈ ಪ್ರಕರಣ ಕುರಿತು ಸ್ವಂತಂತ್ರ ನಿಷ್ಟಪಕ್ಷಪಾತ ಹಾಗೂ ಪಾರದರ್ಶಕ ತನಿಖೆ ನಡೆಸಬೇಕು.
6. ಪ್ರತಿಭಟನಕಾರರ ವಿರುದ್ಧ ದಾಖಲಾಗಿರುವ ಆರೋಪ/ಪ್ರಕರಣಗಳು ಸತ್ಯಾ ಸತ್ಯತೆ ಇಲ್ಲದೆ ಅಥವಾ ದುರುದ್ದೇಶದಿಂದ ದಾಖಲಿಸಲ್ಪಟ್ಟಿದ್ದರೆ ಅವುಗಳ ಕುರಿತು ಮೇಲಾಧಿಕಾರಿಗಳಿಂದ ಪರಿಶೀಲನೆ ನಡೆಸಬೇಕು.
7. ಪ್ರತಿಭಟನಕಾರರ ಮೇಲೆ ಯಾವುದೇ ರೀತಿಯ ರಾಜಕೀಯ ಅಡಳಿತಾತ್ಮಕ ಅಥವಾ ಪೊಲೀಸ್ ಒತ್ತಡ ಹೇರಬಾರದು.
8 ಸರ್ಕಾರಿ ಆಸ್ತಿ ಮತ್ತು ಸಾರ್ವಜನಿಕ ದಾಖಲೆಗಳ ರಕ್ಷಣೆಗೆ ಜಿಲ್ಲಾಡಳಿತವು ತಕ್ಷಣ ಕ್ರಮ ಕೈಗೊಳ್ಳಬೇಕು.






Comments
Leave a Comment