PRABHAVAA.COM

ಬಿಜೆಪಿಗೂ ಮೆಟ್ರೋ ಉದ್ಘಾಟನೆಗೂ ಏನು ಸಂಬಂಧ: ಸಿಎಂ ಡಿ ಕೆ ಶಿವಕುಮಾರ್

Bengaluru Rural:

Font size:

ಬಿಜೆಪಿಗೂ ಮೆಟ್ರೋ ಉದ್ಘಾಟನೆಗೂ ಏನು ಸಂಬಂಧ: ಸಿಎಂ ಡಿ ಕೆ ಶಿವಕುಮಾರ್

ಬಿಜೆಪಿಗೂ ಮೆಟ್ರೋ ಉದ್ಘಾಟನೆಗೂ ಏನು ಸಂಬಂಧ: ಸಿಎಂ ಡಿ ಕೆ ಶಿವಕುಮಾರ್

ಪ್ರಧಾನಿಗಳ ಮೆಟ್ರೋ ಉದ್ಘಾಟಿಸಲು ಆಹ್ವಾನಿಸಿದ್ದು ನಾವು

ಕೆಲವರು ನಾವು ಆಹ್ವಾನಿಸಿದ್ದು ಎಂದು ಪ್ರಚಾರ ಗಿಟ್ಟಿಸುತ್ತಿದ್ದಾರೆ

ರಾಹುಲ್ ಗಾಂಧಿಯವರ ಸಭೆಗಾಗಿ ದೆಹಲಿಗೆ ಪ್ರಯಾಣ

ಕನಕಪುರ, ನ.06:

"ನಮ್ಮ ಆಹ್ವಾನದ ಮೇರೆಗೆ ಪ್ರಧಾನಮಂತ್ರಿಯವರು ಮೆಟ್ರೋ ಗುಲಾಬಿ ಮಾರ್ಗವನ್ನು ಉದ್ಘಾಟಿಸಲು ನವೆಂಬರ್ 13 ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಕೆಲವರು ಪ್ರಧಾನಿಯನ್ನು ನಾವು ಆಹ್ವಾನಿಸಿದ್ದು ಎಂದು ಪ್ರಚಾರ ಗಿಟ್ಟಿಸುತ್ತಿದ್ದಾರೆ. ಬಿಜೆಪಿಯವರಿಗೂ ಇದಕ್ಕೂ ಏನು ಸಂಬಂಧ?" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಪ್ರಶ್ನಿಸಿದರು.

ಕನಕಪುರದಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಅವರುಶುಕ್ರವಾರ ಪ್ರತಿಕ್ರಿಯೆ ನೀಡಿದರು.

"ಇದು ಜನರ ದುಡ್ಡು. ನಾವು ಸಾಲವನ್ನು ಪಡೆದು ಮೆಟ್ರೋ ಅಭಿವೃದ್ಧಿ ಮಾಡುತ್ತಿದ್ದೇವೆ. ಕೆಲವು ವಿಚಾರಗಳನ್ನು 13 ರಂದು ಪ್ರಧಾನಿಗಳ ಮುಂದೆ ಮಂಡಿಸಲಿದ್ದೇನೆ" ಎಂದರು.

ರಾಹುಲ್ ಗಾಂಧಿಯವರು ಕರೆದಿರುವ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಪ್ರಯಾಣ

"ದೆಹಲಿಯಲ್ಲಿ ರಾಹುಲ್ ಗಾಂಧಿಯವರು ಪಿಸಿಸಿ ಅಧ್ಯಕ್ಷರನ್ನು ಹಾಗೂ ಸಿ ಎಲ್ ಪಿ ನಾಯಕರನ್ನು ಸಂಜೆ ಸಭೆಗೆ ಕರೆದಿದ್ದಾರೆ. ಒಂದೂವರೆ ಗಂಟೆಗಳ ಕಾಲ ಸಭೆ ನಡೆಯಲಿದ್ದು, ಹೀಗಾಗಿ ದೆಹಲಿಗೆ ತೆರಳುತ್ತಿದ್ದೇನೆ. ದೀಪಾವಳಿ ಹಬ್ಬವಿರುವುದರಿಂದ ದೆಹಲಿಯಲ್ಲಿ ಯಾರನ್ನೂ ಭೇಟಿ ಮಾಡುತ್ತಿಲ್ಲ" ಎಂದರು

ಕಬ್ಬು ಬೆಳೆಗಾರರ ಹೋರಾಟ ವಾಪಸ್ಸು: ಪ್ರತಿಷ್ಠೆ ಬೇಡ ಎಂದು ಮನವಿ ಮಾಡಿದ್ದೆವು

"ಕಬ್ಬು ಬೆಳೆಗಾರರು ಹೋರಾಟ ಕೈ ಬಿಟ್ಟಿರುವ ಬಗ್ಗೆ ಕೇಳಿದಾಗ ನಾವು ರೈತರಿಗೆ ಮನವಿ ಮಾಡಿದ್ದೆವು, ಇದರಲ್ಲಿ ಪ್ರತಿಷ್ಠೆ ಬೇಡ. ಇಂದು ಸಕ್ಕರೆ ಕಾರ್ಖಾನೆಗಳು ಹಾಗೂ ನಮ್ಮ ಸಚಿವರು ಕುಳಿತು ಚರ್ಚಿಸಿದ್ದಾರೆ. ಕೆಲವರು ಕಬ್ಬು ಅರೆಯಲು ಅನುಮತಿ ನೀಡಿ ರಕ್ಷಣೆ ಕೊಡಿ ಎಂದು ನ್ಯಾಯಾಲಯದ ಮೊರೆಯನ್ನು ಹೋಗಿದ್ದಾರೆ. ಅದಕ್ಕೂ ಇಂದು ಅಫಿಡವಿಟ್ ಹಾಕಲಾಗುತ್ತಿದೆ" ಎಂದರು.

ಪ್ರಧಾನಿಗಳ ಬಳಿ ಸಕ್ಕರೆ ಬೆಲೆ ನಿಗದಿ ಮಾಡುವ ಬಗ್ಗೆ ಪ್ರಸ್ತಾಪ

"ಕೇಂದ್ರ ಸರ್ಕಾರದವರು ಸಕ್ಕರೆ ಬೆಲೆಯನ್ನು ನಿಗದಿ ಮಾಡಬೇಕು. ಈ ಬಗ್ಗೆಯೂ ಪ್ರಧಾನಿಗಳ ಬಳಿ ಪ್ರಸ್ತಾಪಿಸಿ ಪತ್ರವನ್ನು ಬರೆಯಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಈ ಬಗ್ಗೆ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದ್ದಾರೆ" ಎಂದರು.

ರೈತರಿಗೆ ಅಗೌರವ ತೋರಿಸಬಾರದು

"ಸಮಸ್ಯೆ ಇತ್ಯರ್ಥವಾಗದಿದ್ದರೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಸರ್ಕಾರವನ್ನು ಹೆದರಿಸುವುದು ಸರಿಯಲ್ಲ. ಸ್ವಲ್ಪ ಸೌಜನ್ಯತೆ ಇರಬೇಕು. ಏ ಬಾರೋ ಇಲ್ಲಿ ಎಂದು ಕರೆಯುವುದು ರೈತರಿಗೆ ಅಗೌರವವಾದಂತೆ. ಇಂಥದ್ದು ಆಗಬಾರದು" ಎಂದರು

ಕನಕಪುರಕ್ಕೆ ಬರುತ್ತೇನೆ

"ಕನಕಪುರಕ್ಕೆ ಯಾವಾಗ ಬರುತ್ತೀರಿ ಎಂದು ಕೇಳಿದಾಗ ಮೂರು ನಾಲ್ಕು ದಿನ ಬಿಟ್ಟು ಬರುತ್ತೇನೆ" ಎಂದರು.

Comments

Leave a Comment

Prev Post ಸಚಿವ ಸಂಪುಟ;20 ಸಾವಿರ ಕೋಟಿ ರಸ್ತೆ ಅಭಿವೃದ್ಧಿ, ಮಲ್ಪೆಯಲ್ಲಿ ಬಹುಮಹಡಿ ಪಾರ್ಕಿಂಗ್, ಎರಡು ಜಿಲ್ಲೆಗಳಲ್ಲಿ ಕೈಗಾರಿಕಾ ವಸಾಹತು,
Next Post ₹200 ಕೋಟಿ ಹೂಡಿಕೆ: ಸಚಿವ ಎಂ.ಬಿ.ಪಾಟೀಲ ಸಮ್ಮುಖದಲ್ಲಿ ಬೇಯರ್ ಕಂಪನಿ ಜತೆ ಒಪ್ಪಂದಕ್ಕೆ ಸಹಿ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ನ್ಯಾ.‌ನಾಗಮೋಹನ್ ದಾಸ್ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ:ಬಸವರಾಜ ಬೊಮ್ಮಾಯಿ

ಸಿಎಂ ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದಿದ್ದಾರೆ: ಬಸವರಾಜ ಬೊಮ್ಮಾಯಿ

ಒಡಿಶಾ ಶಾಸಕರನ್ನು ನಾನು ಕರೆಸಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಪಕ್ಷ ಹೇಳಿದ್ದನ್ನು ಮಾಡುತ್ತೇನೆ ನನಗೆ ಇದು ಹೊಸತಲ್ಲ, ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದಿಂದಲೂ ಇದನ್ನು ಮಾಡುತ್ತಿರುವೆ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News