PRABHAVAA.COM

ವಿದ್ಯಾರ್ಥಿ ಸುರಕ್ಷತೆಗೆ ಕಠಿಣ ಆದೇಶ — ಆತ್ಮಹತ್ಯೆ ಅಥವಾ ಅಸ್ವಾಭಾವಿಕ ಮರಣ ಪ್ರಕರಣಗಳಲ್ಲಿ ತಕ್ಷಣ FIR ಕಡ್ಡಾಯ

Bengaluru Urban:

Font size:

ವಿದ್ಯಾರ್ಥಿ ಸುರಕ್ಷತೆಗೆ ಕಠಿಣ ಆದೇಶ — ಆತ್ಮಹತ್ಯೆ ಅಥವಾ ಅಸ್ವಾಭಾವಿಕ ಮರಣ ಪ್ರಕರಣಗಳಲ್ಲಿ ತಕ್ಷಣ FIR ಕಡ್ಡಾಯ

ವಿದ್ಯಾರ್ಥಿ ಸುರಕ್ಷತೆಗೆ ಕಠಿಣ ಆದೇಶ — ಆತ್ಮಹತ್ಯೆ ಅಥವಾ ಅಸ್ವಾಭಾವಿಕ ಮರಣ ಪ್ರಕರಣಗಳಲ್ಲಿ ತಕ್ಷಣ FIR ಕಡ್ಡಾಯ

link -https://prabhavaa.com/media/documents/sudents_safty.pdf

ಬೆಂಗಳೂರು , ಆ.25-ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳು, ಕಾನೂನು ಕಾಲೇಜುಗಳು, ಚಿತ್ರಕಲಾ ಕಾಲೇಜುಗಳು, ಸಂಸ್ಕೃತ ಕಾಲೇಜುಗಳು ಹಾಗೂ ಬಿ.ಎಡ್ ಕಾಲೇಜುಗಳಿಗೆ ಅನ್ವಯಿಸುತ್ತದೆ. ವಿದ್ಯಾರ್ಥಿಗಳ ಆತ್ಮಹತ್ಯೆ ಅಥವಾ ಅಸ್ವಾಭಾವಿಕ ಮರಣ ಪ್ರಕರಣಗಳು ಸಂಭವಿಸಿದರೆ ತಕ್ಷಣವೇ FIR ದಾಖಲಿಸುವುದು ಕಡ್ಡಾಯವಾಗಿದೆ.

ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದ ಆಧಾರದ ಮೇಲೆ ಕಾಲೇಜು ಶಿಕ್ಷಣ ಇಲಾಖೆ ಹೊರಡಿಸಿರುವ ಈ ಸುತ್ತೋಲೆ, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಹಕ್ಕುಗಳ ರಕ್ಷಣೆಗೆ ಜೀವಾಳದಂತೆ ಪರಿಣಮಿಸಿದೆ. ಆತ್ಮಹತ್ಯೆ ಅಥವಾ ಅಸ್ವಾಭಾವಿಕ ಮರಣ ಸಂಭವಿಸಿದರೆ ತಕ್ಷಣ FIR ದಾಖಲಿಸುವುದು ಕೇವಲ ಕಾನೂನು ಕ್ರಮವಲ್ಲ ಅದು ವಿದ್ಯಾರ್ಥಿಯ ಜೀವಕ್ಕೆ ಸಲ್ಲಿಸುವ ಗೌರವ. ಹಾಜರಾತಿ ದಾಖಲೆ, ವೈದ್ಯಕೀಯ ನೆರವು, ಮಾನಸಿಕ ಬೆಂಬಲ, ಪರೀಕ್ಷಾ ಫಲಿತಾಂಶ, CCTV ಫುಟೇಜ್ ಪ್ರತಿಯೊಂದು ವಿವರವನ್ನು ತಕ್ಷಣವೇ ಸಲ್ಲಿಸುವುದು, ಅವರ ಬದುಕಿನ ಪ್ರತಿಯೊಂದು ಹಂತವನ್ನು ಗೌರವಿಸುವ ಮಾನವೀಯ ಕರ್ತವ್ಯ.

ಈ ಸುತ್ತೋಲೆ ಕೇವಲ ಆಡಳಿತದ ಆದೇಶವಲ್ಲ, ಅದು ವಿದ್ಯಾರ್ಥಿಗಳ ಜೀವಕ್ಕೆ ನೀಡಿದ ಭರವಸೆ. ಪ್ರತಿಯೊಂದು ಕಾಲೇಜು, ಪ್ರತಿಯೊಂದು ಪ್ರಾಂಶುಪಾಲ, ಪ್ರತಿಯೊಂದು ಜಂಟಿ ನಿರ್ದೇಶಕರು — ಎಲ್ಲರೂ ಈ ಭರವಸೆಯನ್ನು ಜೀವಂತವಾಗಿಡುವ ಜವಾಬ್ದಾರಿಯನ್ನು ಹೊರಬೇಕಾಗಿದೆ.

ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ವಿದ್ಯಾರ್ಥಿಗಳ ಸುರಕ್ಷತೆ, ಸಾಂಸ್ಥಿಕ ಉತ್ತರದಾಯಿತ್ವ ಮತ್ತು ನಿಯಮಾನುಸರಣೆ ಕುರಿತಂತೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದ ಆಧಾರದ ಮೇಲೆ ಹೊಸ ಸುತ್ತೋಲೆ ಹೊರಡಿಸಲಾಗಿದೆ.

ಈ ಆದೇಶವು ವಿದ್ಯಾರ್ಥಿಗಳ ಆತ್ಮಹತ್ಯೆ ಅಥವಾ ಅಸ್ವಾಭಾವಿಕ ಮರಣ ಪ್ರಕರಣಗಳು ಕಾಲೇಜು ಆವರಣದೊಳಗೆ ಅಥವಾ ವಿದ್ಯಾರ್ಥಿನಿಲಯದಲ್ಲಿ ಸಂಭವಿಸಿದರೆ, ಹಾಜರಾತಿ ದಾಖಲೆ, ವೈದ್ಯಕೀಯ ಮತ್ತು ಮಾನಸಿಕ ಬೆಂಬಲ, ಪರೀಕ್ಷಾ ಫಲಿತಾಂಶ, ಶಿಸ್ತು ಕ್ರಮ, CCTV ಫುಟೇಜ್ ಸೇರಿದಂತೆ ಎಲ್ಲಾ ವಿವರಗಳನ್ನು ಕೂಡಲೇ ಜಂಟಿ ನಿರ್ದೇಶಕರ ಕಚೇರಿಗೆ ಹಾಗೂ studentsafety.dce@gmail.com ಗೆ ಕಳುಹಿಸಬೇಕಾಗಿದೆ. 2026 ಜನವರಿಯಿಂದ ನಡೆದಿರುವ ಎಲ್ಲಾ ಪ್ರಕರಣಗಳ FIR ವರದಿಗಳನ್ನು ತ್ರೈಮಾಸಿಕ ಹಾಗೂ ವಾರ್ಷಿಕ ವರದಿ ರೂಪದಲ್ಲಿ ಸಲ್ಲಿಸುವುದು ಕಡ್ಡಾಯವಾಗಿದೆ.

ಕಾಲೇಜು ಸುತ್ತಮುತ್ತ 1 ಕಿಮೀ ವ್ಯಾಪ್ತಿಯಲ್ಲಿ ಮಾನ್ಯತೆ ಪಡೆದ ಆಸ್ಪತ್ರೆಗಳೊಂದಿಗೆ ತಕ್ಷಣ ಸಂಪರ್ಕ ಸಾಧಿಸಿ, ವಿದ್ಯಾರ್ಥಿಗಳಿಗೆ ತುರ್ತು ವೈದ್ಯಕೀಯ ನೆರವು ದೊರಕುವಂತೆ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿವೇತನ ವಿತರಣೆಯಲ್ಲಿ ಯಾವುದೇ ವಿಳಂಬವಾಗದಂತೆ ನೋಡಿಕೊಳ್ಳಬೇಕು. ವಿಳಂಬವಾದರೆ ಇಲಾಖೆಗೆ ಲಿಖಿತವಾಗಿ ತಿಳಿಸಬೇಕು. ವಿದ್ಯಾರ್ಥಿಗಳ ಪರೀಕ್ಷೆ, ತರಗತಿ, ವಿದ್ಯಾರ್ಥಿನಿಲಯ ಪ್ರವೇಶ, ವಿದ್ಯಾರ್ಥಿವೇತನ, ಶುಲ್ಕ ಪಾವತಿ ಅಥವಾ ಪ್ರಮಾಣಪತ್ರ ವಿತರಣೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು.

ಯುಜಿಸಿ ನಿಯಮಗಳು — ರಾಗಿಂಗ್ ತಡೆಗಟ್ಟುವ ನಿಯಮಗಳು 2009, ಸಮಾನತೆ ಪ್ರೋತ್ಸಾಹಿಸುವ ನಿಯಮಗಳು 2012, ಲೈಂಗಿಕ ದೌರ್ಜನ್ಯ ತಡೆಗಟ್ಟುವ ನಿಯಮಗಳು 2015, ವಿದ್ಯಾರ್ಥಿ ಕುಂದುಕೊರತೆ ಪರಿಹಾರ ನಿಯಮಗಳು 2023 — ಎಲ್ಲವನ್ನು ಅಕ್ಷರಶಃ ಪಾಲಿಸಬೇಕಾಗಿದೆ.

ಪ್ರಾದೇಶಿಕ ಜಂಟಿ ನಿರ್ದೇಶಕರು ತಪಾಸಣೆ ನಡೆಸಿ ಎಲ್ಲಾ ಕಾಲೇಜುಗಳಲ್ಲಿ ಈ ನಿಯಮಗಳು ಪಾಲನೆಯಾಗುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ವಿದ್ಯಾರ್ಥಿವೇತನ ವಿತರಣೆಯಲ್ಲಿ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು. ಆತ್ಮಹತ್ಯೆ ಅಥವಾ ಅಸ್ವಾಭಾವಿಕ ಮರಣ ಪ್ರಕರಣಗಳ ಕುರಿತು ಕಾಲೇಜುಗಳಿಂದ ಬಂದ ದಾಖಲೆಗಳೊಂದಿಗೆ ಸಂಪೂರ್ಣ ವರದಿ ಇಲಾಖೆಗೆ ಸಲ್ಲಿಸಬೇಕು. ತ್ರೈಮಾಸಿಕ ಹಾಗೂ ವಾರ್ಷಿಕ ವರದಿಗಳನ್ನು ಸಂಗ್ರಹಿಸಿ ಇಲಾಖೆಗೆ ಕಳುಹಿಸಬೇಕು.

ವಿದ್ಯಾರ್ಥಿಗಳ ಆತ್ಮಹತ್ಯೆ ಅಥವಾ ಅಸ್ವಾಭಾವಿಕ ಮರಣ ಪ್ರಕರಣಗಳು ಸಂಭವಿಸಿದರೆ ತಕ್ಷಣವೇ FIR ದಾಖಲಿಸುವುದು ಕಡ್ಡಾಯವಾಗಿದೆ. ಯಾವುದೇ ವಿಳಂಬವಿಲ್ಲದೆ ಪ್ರಕರಣವನ್ನು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದಾಖಲಿಸಬೇಕೆಂದು ಸೂಚಿಸಲಾಗಿದೆ.

ಕಾಲೇಜು ಅಥವಾ ವಿದ್ಯಾರ್ಥಿನಿಲಯದ ಆವರಣದೊಳಗೆ ಆತ್ಮಹತ್ಯೆ ಅಥವಾ ಅಸ್ವಾಭಾವಿಕ ಮರಣ ಸಂಭವಿಸಿದರೆ, ವಿದ್ಯಾರ್ಥಿಯ ಹಾಜರಾತಿ, ವೈದ್ಯಕೀಯ ಮತ್ತು ಮಾನಸಿಕ ಬೆಂಬಲ, ಶೈಕ್ಷಣಿಕ ದಾಖಲೆಗಳು, ಪರೀಕ್ಷಾ ಫಲಿತಾಂಶ, ಶಿಸ್ತು ಕ್ರಮ, FIR ಪ್ರತಿಗಳು ಹಾಗೂ CCTV ಫುಟೇಜ್ ಸೇರಿದಂತೆ ಎಲ್ಲಾ ವಿವರಗಳನ್ನು ಕೂಡಲೇ ಜಂಟಿ ನಿರ್ದೇಶಕರ ಕಚೇರಿಗೆ ಹಾಗೂ studentsafety.dce@gmail.com ಗೆ ಕಳುಹಿಸಬೇಕೆಂದು ತಿಳಿಸಲಾಗಿದೆ.

2026 ಜನವರಿಯಿಂದ ನಡೆದಿರುವ ಎಲ್ಲಾ ಪ್ರಕರಣಗಳ FIR ವರದಿಗಳನ್ನು ತ್ರೈಮಾಸಿಕ ಹಾಗೂ ವಾರ್ಷಿಕ ವರದಿ ರೂಪದಲ್ಲಿ ಸಲ್ಲಿಸುವುದು ಕಡ್ಡಾಯವಾಗಿದೆ. ಈ ವರದಿಗಳಲ್ಲಿ FIR ಪ್ರತಿಗಳು ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಲಗತ್ತಿಸಬೇಕೆಂದು ಸೂಚಿಸಲಾಗಿದೆ.

ಕಾಲೇಜು ಸುತ್ತಮುತ್ತ 1 ಕಿಮೀ ವ್ಯಾಪ್ತಿಯಲ್ಲಿ ಮಾನ್ಯತೆ ಪಡೆದ ಆಸ್ಪತ್ರೆಗಳೊಂದಿಗೆ ತಕ್ಷಣ ಸಂಪರ್ಕ ಸಾಧಿಸಿ, ವಿದ್ಯಾರ್ಥಿಗಳಿಗೆ ತುರ್ತು ವೈದ್ಯಕೀಯ ನೆರವು ದೊರಕುವಂತೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಲಾಗಿದೆ.

ವಿದ್ಯಾರ್ಥಿವೇತನ ವಿತರಣೆಯಲ್ಲಿ ಯಾವುದೇ ವಿಳಂಬವಾಗದಂತೆ ನೋಡಿಕೊಳ್ಳಬೇಕು. ವಿಳಂಬವಾದರೆ ಇಲಾಖೆಗೆ ಲಿಖಿತವಾಗಿ ತಿಳಿಸಬೇಕು. ವಿದ್ಯಾರ್ಥಿಗಳ ದೈನಂದಿನ ಜೀವನ, ಪರೀಕ್ಷಾ ಶುಲ್ಕ ಪಾವತಿ ಅಥವಾ ಇತರ ಅಗತ್ಯಗಳಲ್ಲಿ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.

, ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ಪರೀಕ್ಷೆ, ತರಗತಿ, ವಿದ್ಯಾರ್ಥಿನಿಲಯ ಪ್ರವೇಶ, ವಿದ್ಯಾರ್ಥಿವೇತನ, ಶುಲ್ಕ ಪಾವತಿ ಅಥವಾ ಪ್ರಮಾಣಪತ್ರ ವಿತರಣೆಯಲ್ಲಿ ತೊಂದರೆ ಉಂಟಾಗದಂತೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕೆಂದು ತಿಳಿಸಲಾಗಿದೆ. ವಿದ್ಯಾರ್ಥಿಗಳ ಹಕ್ಕುಗಳನ್ನು ಹಿಂಸಿಸುವಂತಿಲ್ಲವೆಂದು ಸ್ಪಷ್ಟವಾಗಿ ಹೇಳಲಾಗಿದೆ.

ಯುಜಿಸಿ ನಿಯಮಗಳು — ರಾಗಿಂಗ್ ತಡೆಗಟ್ಟುವ ನಿಯಮಗಳು 2009, ಸಮಾನತೆ ಪ್ರೋತ್ಸಾಹಿಸುವ ನಿಯಮಗಳು 2012, ಲೈಂಗಿಕ ದೌರ್ಜನ್ಯ ತಡೆಗಟ್ಟುವ ನಿಯಮಗಳು 2015, ವಿದ್ಯಾರ್ಥಿ ಕುಂದುಕೊರತೆ ಪರಿಹಾರ ನಿಯಮಗಳು 2023 — ಎಲ್ಲವನ್ನು ಅಕ್ಷರಶಃ ಪಾಲಿಸಬೇಕೆಂದು ಸೂಚಿಸಲಾಗಿದೆ. ಜೊತೆಗೆ, ಯುಜಿಸಿ ಹಾಗೂ ಇತರ ಆಡಳಿತ ಸಂಸ್ಥೆಗಳ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕೆಂದು ತಿಳಿಸಲಾಗಿದೆ.

ಈ ಸುತ್ತೋಲೆ ತಕ್ಷಣದಿಂದಲೇ ಜಾರಿಗೆ ಬರುತ್ತದೆ. ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಪ್ರಾದೇಶಿಕ ಜಂಟಿ ನಿರ್ದೇಶಕರು ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಹಕ್ಕುಗಳ ರಕ್ಷಣೆಗೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕೆಂದು ಇಲಾಖೆಯು ಸ್ಪಷ್ಟವಾಗಿ ಸೂಚಿಸಿದೆ.

ಈ ಸುತ್ತೋಲೆ ತಕ್ಷಣದಿಂದಲೇ ಜಾರಿಗೆ ಬರುತ್ತದೆ. ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಪ್ರಾದೇಶಿಕ ಜಂಟಿ ನಿರ್ದೇಶಕರು ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಹಕ್ಕುಗಳ ರಕ್ಷಣೆಗೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.

Comments

Leave a Comment

Prev Post ರಾಜ್ಯ ಸರ್ಕಾರದ ವೈಫಲ್ಯವನ್ನು ಜನರಿಗೆ ತಿಳಿಸಲು ಬಿಜೆಪಿ ವತಿಯಿಂದ ಸೆಪ್ಟೆಂಬರ್ 1 ರಿಂದ 10 ರವರೆಗೆ ಬೃಹತ್ ಪಾದಯಾತ್ರೆ
Next Post ರಾಯಚೂರು ಐ.ಐ.ಐ.ಟಿ.ಯಲ್ಲಿ ₹12 ಕೋಟಿ ವೆಚ್ಚದಲ್ಲಿ ಎಐ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ: ಎಂ ಬಿ ಪಾಟೀಲ

ದೇಶ ಹಾಗೂ ರಾಜ್ಯದ ಬೆಳವಣಿಗೆಗೆ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ: ಡಿಸಿಎಂ ಡಿ.ಕೆ. ಶಿವಕುಮಾರ್

ಎಲ್ಲರೂ ಜ್ಞಾನ ಹಂಚಿಕೊಂಡು ಬಾಳಬೇಕು ಬೆಂಗಳೂರಿನ ಹೆಮ್ಮೆ ಜ್ಯೋತಿ ನಿವಾಸ್ ಕಾಲೇಜು

ಮಂಗಳೂರು ವಿಶ್ವವಿದ್ಯಾನಿಲಯ ಘಟಿಕೋತ್ಸವ ; ಗೌರವ ಡಾಕ್ಟರೇಟ್ ಪ್ರದಾನ.

ಮಂಗಳೂರು ವಿಶ್ವವಿದ್ಯಾನಿಲಯ ಘಟಿಕೋತ್ಸವ ; ಗೌರವ ಡಾಕ್ಟರೇಟ್ ಪ್ರದಾನ.

ಕರ್ನಾಟಕ ಸರ್ಕಾರದ ಮಹತ್ವದ ಆದೇಶ: ಹದಿಹರೆಯದವರ ಆರೋಗ್ಯಕ್ಕಾಗಿ ‘ಸ್ನೇಹ ಕೇಂದ್ರ’ಗಳ ವಿಸ್ತರಣೆ, ಸಮಗ್ರ ಸಮಾಲೋಚನಾ ಕೇಂದ್ರಗಳ ಸ್ಥಾಪನೆ

ಕರ್ನಾಟಕ ಸರ್ಕಾರದ ಮಹತ್ವದ ಆದೇಶ: ಹದಿಹರೆಯದವರ ಆರೋಗ್ಯಕ್ಕಾಗಿ ‘ಸ್ನೇಹ ಕೇಂದ್ರ’ಗಳ ವಿಸ್ತರಣೆ, ಸಮಗ್ರ ಸಮಾಲೋಚನಾ ಕೇಂದ್ರಗಳ ಸ್ಥಾಪನೆ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ National Academic Depository (NAD) – DigiLocker ಮೂಲಕ ಫಲಿತಾಂಶದ ದಿನವೇ ಅಂಕಪಟ್ಟಿ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ National Academic Depository (NAD) – DigiLocker ಮೂಲಕ ಫಲಿತಾಂಶದ ದಿನವೇ ಅಂಕಪಟ್ಟಿ

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಅಮೂಲಾಗ್ರ ಬದಲಾವಣೆ ಗೆಜೆಟ್ ಪ್ರಕಟಣೆ

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಅಮೂಲಾಗ್ರ ಬದಲಾವಣೆ ಗೆಜೆಟ್ ಪ್ರಕಟಣೆ

ಸಹಾಯಧನ ಪಡೆಯುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ

ಸಹಾಯಧನ ಪಡೆಯುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ

Read all News