ವಂದೇ ಮಾತರಂ ನಿಲ್ಲಿಸಲು ಹೇಳಿದ ಸೋನಿಯಾ ಗಾಂಧಿ ವಿರುದ್ಧ ಹೆಚ್ಡಿಕೆ ಕಿಡಿ ಅವರು ನಮ್ಮ ದೇಶದವರಲ್ಲ, ಅವರಲ್ಲಿ ಹರಿಯುತ್ತಿರುವುದು ಇಟಲಿ ರಕ್ತ ಎಂದ ಕೇಂದ್ರ ಸಚಿವರು ಬಿಡದಿ ಬಗ್ಗೆ ನಿಮ್ಮ ಸತ್ಯಶೋಧನಾ ಸಮಿತಿ ವರದಿಯ ಬಗ್ಗೆ ಜಾಹಿರಾತು ಕೊಡಿ; ಸಿಎಂಗೆ ಟಾಂಗ್ ಹೆಚ್ಎಂಟಿ ಗಡಿಯಾರಗಳ ಇಂಡಿಪೆಂಡೆನ್ಸ್ ಡೇ ಸೇಲ್; ಒಂದೇ ದಿನ #35 ಲಕ್ಷ ವಹಿವಾಟು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂತಸ ಗ್ರಾಹಕರಿಗೆ, ವಿಶೇಷವಾಗಿ ಯುವ ಜನರಿಗೆ ಧನ್ಯವಾದ ಹೇಳಿದ ಹೆಚ್ಡಿಕೆ
ವಂದೇ ಮಾತರಂ ನಿಲ್ಲಿಸಲು ಹೇಳಿದ ಸೋನಿಯಾ ಗಾಂಧಿ ವಿರುದ್ಧ ಹೆಚ್ಡಿಕೆ ಕಿಡಿ
ಅವರು ನಮ್ಮ ದೇಶದವರಲ್ಲ, ಅವರಲ್ಲಿ ಹರಿಯುತ್ತಿರುವುದು ಇಟಲಿ ರಕ್ತ ಎಂದ ಕೇಂದ್ರ ಸಚಿವರು
ಬಿಡದಿ ಬಗ್ಗೆ ನಿಮ್ಮ ಸತ್ಯಶೋಧನಾ ಸಮಿತಿ ವರದಿಯ ಬಗ್ಗೆ ಜಾಹಿರಾತು ಕೊಡಿ; ಸಿಎಂಗೆ ಟಾಂಗ್
ಹಾಸನ 17 ಆಗಸ್ಟ್ 2026
ಬಂಕಿಮಚಂದ್ರ ಚಟರ್ಜಿ ಅವರು ಬರೆದಿರುವ ವಂದೇ ಮಾತರಂ ಗೀತೆಗೆ ಎಲ್ಲರೂ ಗೌರವ ಕೊಡಬೇಕು ಎಂದು ಸಂಸತ್ತು ಒಪ್ಪಿಗೆ ನೀಡಿದೆ. ಆದರೆ ಕಾಂಗ್ರೆಸ್ಸಿಗೆ ಅದು ಇಷ್ಟವಾಗುತ್ತಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.
ಹಾಸನದ ಹೊಳೆನರಸೀಪುರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು; ಸೋನಿಯಾ ಗಾಂಧಿ ಅವರಿಂದ ವಂದೇ ಮಾತರಂ ಗೀತೆಗೆ ಅವಮಾನ ವಿಚಾರದ ಬಗ್ಗೆ ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಈ ಗೀತೆಗೆ ಪತಿಯೊಬ್ಬರೂ ಗೌರವಸಬೇಕು ಎನ್ನೋದು ನಮ್ಮ ಅಭಿಪ್ರಾಯ. ಕಾಂಗ್ರೆಸ್ ನಾಯಕರು ಇದರಲ್ಲಿ ಸಣ್ಣತನ ತೋರಿಸುವ ಅಗತ್ಯ ಇಲ್ಲ. ಮಹಾತ್ಮಗಾಂಧಿ ಅವರು ಭಾಗಿಯಾಗಿ ಕಾಂಗ್ರೆಸ್ ಅಧಿವೇಶನದಲ್ಲಿ ಮತ್ತು ಮೊದಲ ಬಾರಿಗೆ ಈ ಗೀತೆಯನ್ನು ಹಾಡಲಾಗಿತ್ತು. ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ಅವರೇ ಹಾಡಿದ್ದರು. ಹೀಗಿದ್ದರೂ ಕೂಡ ಕಾಂಗ್ರೆಸ್ ವಂದೇ ಮಾತರಂ ಗೀತೆಯನ್ನು ವಿರೋಧಿಸುತ್ತಿರುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.
ವಂದೇ ಮಾತರಂ ಗಾಯನಕ್ಕೆ ಸ್ವತಃ ಸೋನಿಯಾ ಗಾಂಧಿ ಅವರೇ ಅಡ್ಡಿಪಡಿಸಿದರು ಎಂದು ಸುದ್ದಿಗಾರರು ಗಮನ ಸೆಳೆದಾಗ ಖಾರವಾಗಿ ಉತ್ತರಿಸಿದ ಸಚಿವರು; ಸೋನಿಯಾ ಗಾಂಧಿ ಅವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ? ಸೋನಿಯಾ ಗಾಂಧಿ ಅವರೇನು ನಮ್ಮ ದೇಶದವರಾ? ಅವರು ಮದುವೆಯಾಗಿ ನಮ್ಮ ದೇಶಕ್ಕೆ ಬಂದರು ಅಷ್ಟೇ. ಅವರಲ್ಲಿ ಹರಿಯುತ್ತಿರುವುದು ಇಟಲಿಯ ರಕ್ತ ಅಲ್ಲವೇ? ಎಂದು ಹೇಳಿದರು.
ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ಈಗಾಗಲೇ ತಕ್ಕಪಾಠ ಕಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಶಾಸ್ತಿ ಮಾಡಲಿದ್ದಾರೆ ಎಂದು ಸಚಿವರು ಹೇಳಿದರು.
ಹನೂರಿನ ಶೂಟೌಟ್ ಪ್ರಕರಣದ ಬಗ್ಗೆ:
ಈ ಘಟನೆಯ ಬಗ್ಗೆ ಸರಕಾರದಿಂದ ಒಂದು ಬುಲೆಟಿನ್ ಬಿಟ್ಟಿದ್ದಾರೆ. ಅಲ್ಲಿಯ ರೈತರು ಕುಟುಂಬಗಳು ಅವರ ನೋವು ವ್ಯಕ್ತಪಡಿಸಿದ್ದಾರೆ. ಒಂದೇ ಕುಟುಂಬದ ಮೂವರ ಸಾವಿನ ಬಗ್ಗೆ ಜನರ ಆಕ್ರೋಶ ಇರುವುದು ಸಹಜ. ಸರ್ಕಾರ ಅವರ ಉತ್ತಮ ಬದುಕಿಗೆ ದಾರಿ ಮಾಡಿದಾಗ ಇಂತಹ ಘಟನೆಗಳು ಆಗಲ್ಲ. ಇದನ್ನ ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದರು.
ಜಿಂಕೆ ಭೇಟೆಗೆ ಹೋಗಿದ್ದವರು ಎಂದು ಸರ್ಕಾರದಿಂದ ಮಾಹಿತಿ ನೀಡಲಾಗಿದೆ. ಸಿಎಂ ತನಿಖೆ ಮಾಡಿ ಸೊದಾಗಿ ಹೇಳಿದ್ದಾರೆ. ಪ್ರಶ್ನೆ ಇರುವುದು ನಮ್ಮ ಅರಣ್ಯ ಇಲಾಖೆ ಸಿಬ್ಬಂದಿ ಸಾಯುವ ರೀತಿ ಗುಂಡು ಹಾರಿಸಿದ ಬಗ್ಗೆ. ಇದು ತಪ್ಪು. ಕಾಲಿಗೊ ಅಥವಾ ಜೀವಕ್ಕೆ ಅಪಾಯ ಆಗದಂತೆ ಗುಂಡು ಹಾರಿಸಿದ್ದರೆ ಎಲ್ಲರೂ ಒಪ್ಪುತ್ತಿದ್ದರು ಎಂದರು ಸಚಿವರು.
ನಿಮ್ಮ ಸತ್ಯಶೋಧನಾ ಸಮಿತಿ ವರದಿಯ ಬಗ್ಗೆ ಜಾಹಿರಾತು ಕೊಡಿ; ಸಿಎಂಗೆ ಟಾಂಗ್
ಬಿಡದಿ ಪಾದಯಾತ್ರೆ ಬಗ್ಗೆ ಕಾಂಗ್ರೆಸ್ ಪಕ್ಷ ನೀಡಿರುವ ಜಾಹೀರಾತುಗಳ ಬಗ್ಗೆ ಕಿಡಿ ಕಾರ್ಯಕ್ರಮ ಕೇಂದ್ರ ಸಚಿವರು; ಇಂತಹ ಇನ್ನೂ ಹತ್ತು ಜಾಹೀರಾತು ಕೊಟ್ಟರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ರೈತರು, ರೈತ ಮಹಿಳೆಯರು ನಾವು ಭೂಮಿ ಕೊಡಲ್ಲ ಎಂದು ಹೇಳಿದ್ದಾರೆ. ಐನೂರು ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಯಾಕೆ ದಬ್ಬಾಳಿಕೆ ಮಾಡಿ, ಕೆಲವು ರೌಡಿಗಳನ್ನು ಬಿಟ್ಟು ಹೆದರಿಸಿ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ನೀವು ಭೂಮಿ ಕೊಡದೆ ಹೋದರೆ ಗ್ರಾಂಟ್ ಭೂಮಿ ವಾಪಸ್ ಪಡೆಯುತ್ತೇವೆ ಎಂದು ದಬ್ಬಾಳಿಕೆ ಮಾಡಿ ಏನು ಸಾಧನೆ ಮಾಡಲಿಕ್ಕೆ ಹೊರಟಿದ್ದಾರೆ ಇವರು? ಈ ಯೋಜನೆ ನಿಮಗಷ್ಟೇ ಯಾಕೆ ಬೇಕಾಗಿದೆ? ಬೇರೆ ಕಡೆ ಜಾಗ ಇಲ್ಲವೆ? ಇಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮ ಪಕ್ಷದ ಸತ್ಯ ಶೋಧನಾ ಸಮಿತಿ ವರದಿಯನ್ನು ಇಡೀ ರಾಜ್ಯದ ಮುಂದೆ ಇಡಿ. ಕಾಗೋಡು ತಿಮ್ಮಪ್ಪ ಸಮಿತಿಯಲ್ಲಿ ನೀವು ಸದಸ್ಯರಾಗಿದ್ದಿರಿ ಅಲ್ಲವೇ? ಆ ಸಮಿತಿಯ ವರದಿಯಲ್ಲಿ ಏನು ಉಲ್ಲೇಖ ಮಾಡಿದ್ದಾರೆ ಎಂಬುದು ಈ ಮುಖ್ಯಮಂತ್ರಿಗೆ ಗೊತ್ತಿಲ್ಲವೇ?ಯಾವುದೇ ಕಾರಣಕ್ಕೂ ಟೌನ್‌ಶಿಪ್ ಬರಕೂಡದು ಎಂದು ಅದರಲಿ ವರದಿ ನೀಡಿದ್ದಾರೆ. ಆಗ ಏನು ಶಿಫಾರಸು ಮಾಡಿದ್ದೀರಿ, ಅದೇ ಅಂಶಗಳನ್ನು ಮುದ್ರಿಸಿ ಜಾಹೀರಾತು ಕೊಡಿ ನೋಡೋಣ. ಹಾಗೆ ಮಾಡಿದರೆ ನಮಗೂ ಸ್ವಲ್ಪ ಹಣ ಖರ್ಚು ಕಡಿಮೆ ಆಗುತ್ತದೆ ಎಂದು ಸಿಎಂಗೆ ಟಾಂಗ್ ನೀಡಿದರು.
ಹೆಚ್ಎಂಟಿ ಗಡಿಯಾರಗಳ ಇಂಡಿಪೆಂಡೆನ್ಸ್ ಡೇ ಸೇಲ್; ಒಂದೇ ದಿನ #35 ಲಕ್ಷ ವಹಿವಾಟು
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂತಸ
ಗ್ರಾಹಕರಿಗೆ, ವಿಶೇಷವಾಗಿ ಯುವ ಜನರಿಗೆ ಧನ್ಯವಾದ ಹೇಳಿದ ಹೆಚ್ಡಿಕೆ
ಹಾಸನ 17 ಆಗಸ್ಟ್ 2026
ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಹೆಚ್'ಎಂಟಿ ಕೈಗಡಿಯಾರಗಳ ಮಾರಾಟ ದಾಖಲೆಯ ಪ್ರಮಾಣದಲ್ಲಿ ಆಗಿದ್ದು ಒಂದೇ ದಿನ ಸುಮಾರು ₹35 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆದಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು.
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಸ್ವಾತಂತ್ರ್ಯ ದಿನದ ಪ್ರಯುಕ್ತ ಹೆಚ್ಎಂಟಿ ಕಂಪನಿಯು ವಿಶೇಷ ಆವೃತ್ತಿಯ ಕೆಲ ಅಪರೂಪದ ಕೈಗಡಿಯಾರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಅಂದು ವಾಚ್ಚುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು ಸುಮಾರು ಎರಡು ವರೆ ಕಿಲೋಮೀಟರ್ ಗೂ ಹೆಚ್ಚು ದೂರ ಸಾಲಿನಲ್ಲಿ ನಿಂತು ಖರೀದಿ ಮಾಡಿದರು. ಇದನ್ನು ಕಂಡು ನಾನು ಆಶ್ಚರ್ಯಚಕಿತನಾಗಿದ್ದೆ ಎಂದರು.
ಅಂದು ನಮ್ಮ ಕಡೆಯಿಂದ ಸಾವಿರಾರು ಕೈ ಗಡಿಯಾರಗಳು ಮಾರಾಟವಾಗಿದ್ದು, ಒಂದೇ ₹35 ಲಕ್ಷ ವಹಿವಾಟು ನಡೆದಿರುವುದು ಕಂಪನಿಯನ್ನು ಪುನಶ್ಚೇತನಗೊಳಿಸುವ ನಮ್ಮ ಉದ್ದೇಶಕ್ಕೆ ಮತ್ತಷ್ಟು ಬಲ ನೀಡಿದೆ ಎಂದರು.
ಹೆಚ್ಎಂ.ಟಿ ಗಡಿಯಾರಗಳ ಬಗ್ಗೆ ಜನರಲ್ಲಿ ಇವತ್ತಿಗೂ ಅಭಿಮಾನ ಗೌರವ ಇದೆ. ಹಿಂದೆ ಹಿಂದೆ ಹೆಚ್ಎಂಟಿ ಗಡಿಯಾರ ಕಟ್ಟುವುದು ಎಂದರೆ ಹೆಮ್ಮೆ ಮತ್ತು ಪ್ರತಿಷ್ಠೆಯ ಸಂಗತಿಯಾಗಿತ್ತು. ಆ ವೈಭವವನ್ನು ಮರಳಿ ತರುವುದು ನಮ್ಮ ಉದ್ದೇಶವಾಗಿದೆ. ಅದಕ್ಕಾಗಿ ಗಂಭೀರ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಸಚಿವರು ಪ್ರಶ್ನೆಗೆ ಉತ್ತರಿಸಿದರು.
ಕಾರ್ಖಾನೆಗೆ ಮರುಜೀವ ನೀಡುವ ನಿಟ್ಟಿನಲ್ಲಿ ಎರಡು ವರ್ಷಗಳಿಂದ ನಿರಂತರ ಪ್ರಯತ್ನ ಮಾಡುತ್ತಿದ್ದೇವೆ. ಈ ಕುರಿತು ಯೋಜನಾ ಆಯೋಗದ ಸದಸ್ಯರಾದ ವಿ.ಕೆ. ಸಾರಸ್ವತ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಠದ ಸಮಿತಿಯನ್ನು ರಚಿಸಲಾಗಿತ್ತು. ಈಗಾಗಲೇ ಸಮಿತಿ ವರದಿಯನ್ನು ನೀಡಿ ಕೆಲವು ಮಹತ್ವದ ಶಿಫಾರಸುಗಳನ್ನು ಮಾಡಿದೆ. ಅದರಂತೆಯೇ ಕಾರ್ಖಾನೆಗೆ ಮರುಜೀವ ನೀಡಲು ಈಗಾಗಲೇ ಕೇಂದ್ರದ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರೊಂದಿಗೂ ಕೂಡ ಮತಕತೆ ನಡೆಸಿದ್ದೇನೆ ಎಂದು ಸಚಿವರು ಮಾಹಿತಿ ನೀಡಿದರು.
ಯುವಕರಿಗೆ ಕೃತಜ್ಞತೆ ಸಲ್ಲಿಸಿದ ಸಚಿವರು:
ದೊಡ್ಡ ಪ್ರಮಾಣದಲ್ಲಿ ಯುವಕರು ಸ್ವಾತಂತ್ರ್ಯ ದಿನ ವಾಚ್ ಗಳನ್ನು ಖರೀದಿ ಮಾಡಿದ್ದಾರೆ. ವಯಸ್ಸಿನ ಹಂಗಿಲ್ಲದೆ ಹಿರಿಯರು ಕಿರಿಯರು ಮಕ್ಕಳು ಕೂಡ ಸಾಲಿನಲ್ಲಿ ನಿಂತು ಗಡಿಯಾರಗಳನ್ನು ಖರೀದಿ ಮಾಡಿದ್ದಾರೆ. ಎಚ್ಎಂಟಿಯ ಮೇಲೆ ಅವರೆಲ್ಲರೂ ಇರಿಸಿರುವ ಅಭಿಮಾನಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಮುಖ್ಯವಾಗಿ ಯುವಜನತೆ ನಮ್ಮ ಗಡಿಯಾರಗಳಿಗೆ ಅತಿಹೆಚ್ಚು ಅಭಿಮಾನ ತೋರುತ್ತಿದ್ದಾರೆ, ಅವರ ಬೆಂಬಲ ಹೀಗೆಯೇ ಇರಲಿ ಎಂದು ಸಚಿವ ಕುಮಾರಸ್ವಾಮಿ ಅವರು ಕೋರಿದರು.






Comments
Leave a Comment