PRABHAVAA.COM

ಆಗಸ್ಟ್ 17ರ ವಿಧಾನಸಭಾ ಅಧಿವೇಶನ – 20 ಪ್ರಮುಖ ಗಮನ ಸೆಳೆಯುವ ಸೂಚನೆಗಳ ಚರ್ಚೆ

Bengaluru Urban:

Font size:

ಆಗಸ್ಟ್ 17ರ ವಿಧಾನಸಭಾ ಅಧಿವೇಶನ – 20 ಪ್ರಮುಖ ಗಮನ ಸೆಳೆಯುವ ಸೂಚನೆಗಳ ಚರ್ಚೆ

ಆಗಸ್ಟ್ 17ರಂದು ಆರಂಭವಾಗುವ ವಿಧಾನಸಭಾ ಅಧಿವೇಶನ – 20 ಪ್ರಮುಖ ಸೂಚನೆಗಳ ಚರ್ಚೆ

ಬೆಂಗಳೂರು: ಕರ್ನಾಟಕ ವಿಧಾನಸಭೆಯ 16ನೇ ವಿಧಾನಸಭೆಯ ಹತ್ತನೇ ಅಧಿವೇಶನವು ಸೋಮವಾರ, ಆಗಸ್ಟ್ 17, 2026ರಂದು ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ. ಈ ಅಧಿವೇಶನದಲ್ಲಿ ಹಲವು ಪ್ರಮುಖ ವಿಷಯಗಳು ಚರ್ಚೆಗೆ ಬರಲಿದ್ದು, ಶಾಸಕರ ಗಮನ ಸೆಳೆಯುವ ಸೂಚನೆಗಳು, ವರದಿ ಮಂಡನೆ ಹಾಗೂ ವಿಧೇಯಕ ಹಿಂಪಡೆಯುವ ಪ್ರಕ್ರಿಯೆಗಳು ನಡೆಯಲಿವೆ.

ಸಭೆಯ ಆರಂಭದಲ್ಲಿ ಪ್ರಶೋತ್ತರ ನಡೆಯಲಿದ್ದು, ಸದಸ್ಯರು ಸಲ್ಲಿಸಿರುವ ಪ್ರಶ್ನೆಗಳಿಗೆ ಉತ್ತರ ನೀಡಲಾಗುವುದು. ನಂತರ, ಕಾಗದ ಪತ್ರಗಳು ಹಾಗೂ ಸಮಿತಿಗಳ ವರದಿಗಳನ್ನು ಮಂಡಿಸಲಾಗುವುದು. ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಮಿತಿಯ 44ನೇ ವರದಿಯನ್ನು ಶ್ರೀ ಎ.ಬಿ. ರಮೇಶ್ ಬಂಡಿಸಿದ್ದೇಗೌಡ ಮಂಡಿಸಲಿದ್ದಾರೆ.

ವಿಧಾನ ರಚನೆ ವಿಭಾಗದಲ್ಲಿ, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕವನ್ನು ಹಿಂಪಡೆಯಲು ಅನುಮತಿ ಕೋರಲಿದ್ದಾರೆ.

ಸಭೆಯಲ್ಲಿ ಶಾಸಕರಿಂದ ಒಟ್ಟು 20 ಗಮನ ಸೆಳೆಯುವ ಸೂಚನೆಗಳು ಮಂಡನೆಯಾಗಲಿದ್ದು ಪ್ರಕಾಶ್ ಕೆ. ಕೋಳಿವಾಡ – ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ, ದೇವಸ್ಥಾನ ಮತ್ತು ಸರ್ಕಾರಿ ಶಾಲೆಗಳಿಗೂ ಇ-ಸ್ವತ್ತು. ದರ್ಶನ್ ಧ್ರುವನಾರಾಯಣ – ಮೈಸೂರು ಜಿಲ್ಲೆಗೆ ಬಾಲಕರ ಕುಸ್ತಿ ಕ್ರೀಡಾನಿಲಯ ಮಂಜೂರು. ಟಿ.ಡಿ. ರಾಜೇಗೌಡ – ಪಶ್ಚಿಮಘಟ್ಟ ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸುವ ಕರಡು ಅಧಿಸೂಚನೆ. ಹೆಚ್.ಕೆ. ಸುರೇಶ್ – ಬೇಲೂರು ಕ್ಷೇತ್ರದಲ್ಲಿ ಬರಗಾಲದಿಂದ ಕುಂಠಿತ ಮೆಕ್ಕೆಜೋಳ ಬೆಳೆ ಹಾಗೂ ಬಿಳಿ ಸುಳಿ ರೋಗ ಪರಿಹಾರ. ಕೆ.ವೈ. ನಂಜೇಗೌಡ – ಪ್ರತಿ ಹಳ್ಳಿಗೂ ಹಾಲು ಉತ್ಪಾದಕರ ಸಂಘ ಸ್ಥಾಪನೆ. ಅಶೋಕ್ ಕುಮಾರ್ ರೈ ಕೆ.ಎಸ್. – ಟೆಲಿಮೆಟ್ರಿಕ್ ಮಳೆ ಮಾಪಕ ದೋಷ ಸರಿಪಡಿಸಿ ಬೆಳೆ ವಿಮೆ ಸಮಸ್ಯೆ ಪರಿಹಾರ. ಪಠಾಣ್ ಯಾಸೀರ್ ಅಹಮ್ಮದ್ ಖಾನ್ – ತಪ್ಪಾಗಿ ಅರಣ್ಯವೆಂದು ದಾಖಲಾದ ಭೂಮಿಗಳನ್ನು ಕಂದಾಯ ಇಲಾಖೆಗೆ ಹಸ್ತಾಂತರ. ದರ್ಶನ್ ಪುಟ್ಟಣ್ಣಯ್ಯ – ಗ್ರಾಮೀಣ ಭಾಗದಲ್ಲಿ ಡಿಜಿಟಲ್ ಸೇವೆಗಳ ಲಭ್ಯತೆ ಮೌಲ್ಯಮಾಪನ. ಅಭಯ ಪಾಟೀಲ್ – ಬೆಳಗಾವಿ ನಗರದಲ್ಲಿ ಜಿ+3 ಗೃಹ ನಿರ್ಮಾಣ ಯೋಜನೆ ವಿಳಂಬ. ಯು.ಬಿ. ಬಣಕಾರ್ – ಇ-ಸ್ವತ್ತು ಮತ್ತು ಕಾವೇರಿ ತಂತ್ರಾಂಶಗಳ ಲಿಂಕಿಂಗ್ ಪೂರ್ಣಗೊಳಿಸುವುದರ ಬಗ್ಗೆ ಗಮನ ಸೆಳೆದಿದ್ದಾರೆ.

ಹರೀಶ್ ಪೂಂಜ – ರಾಷ್ಟ್ರೀಯ ಹೆದ್ದಾರಿ ಪಕ್ಕದ ರೈತರ ಜಮೀನು ವಶಪಡಿಕೆ ಸಮಸ್ಯೆ. ಎಂ.ವೈ. ಪಾಟೀಲ್ – ಗ್ರಾಮೀಣ ಮಹಿಳೆಯರಿಗೆ ಹೈಟೆಕ್ ಶೌಚಾಲಯ ನಿರ್ಮಾಣ. ಶರಣಗೌಡ ಕಂದಕೂರ್ – ಯಾದಗಿರಿ ಜಿಲ್ಲೆಯ ಅಲೆಮಾರಿ ಭಿಕ್ಷುಕ ಜನಾಂಗದ ವಸತಿ ನಿಲಯ ಪುನರ್ ನಿರ್ಮಾಣ. ಅಲ್ಲಮಪ್ರಭು ಪಾಟೀಲ್ – ಕಲಬುರ್ಗಿ ಪ್ರದೇಶಕ್ಕೆ ಭೀಮಾ ನದಿಯಿಂದ ನೀರು ಪಡೆಯುವುದು. ಶಾರದಾ ಪೂರ ನಾಯಕ – ಶರಾವತಿ ಮುಳುಗಡೆ ರೈತರಿಗೆ ಪೋಡಿ ಅಭಿಯಾನ. ಬಿ.ಆರ್. ಪಾಟೀಲ್ – ಹಂಪಿ ಕನ್ನಡ ವಿಶ್ವವಿದ್ಯಾಲಯದ ಗ್ರೂಪ್ "ಡಿ" ನೌಕರರ ವೇತನ ವಿಳಂಬ. ಕೆ.ಹೆಚ್. ಪುಟ್ಟಸ್ವಾಮಿಗೌಡ – ಗೌರಿಬಿದನೂರು ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆ ವಿಳಂಬ. ಹೆಚ್.ಎಂ. ಗಣೇಶ್ ಪ್ರಸಾದ್ – ಗುಂಡ್ಲುಪೇಟೆ ಕ್ಷೇತ್ರದಲ್ಲಿ ಬರಗಾಲ ಘೋಷಣೆ. ಎಂ. ಕೃಷ್ಣಪ್ಪ – ಬೆಂಗಳೂರಿನ ಉದ್ಯಾನವನಗಳಲ್ಲಿ ಅಕ್ರಮ ಕಟ್ಟಡ ತೆರವು. ಡಾ. ಸಿ.ಎನ್. ಅಶ್ವಥ್ ನಾರಾಯಣ್ – ಪಾರ್ಶ್ವವಾಯು ಮತ್ತು ಸಂಧಿವಾತ ರೋಗಗಳಿಗೆ ಪುನರ್ವಸತಿ ಸಂಸ್ಥೆ ಸ್ಥಾಪನೆ

ಈ ಅಧಿವೇಶನದಲ್ಲಿ ಗ್ರಾಮೀಣಾಭಿವೃದ್ಧಿ, ಕೃಷಿ, ಪರಿಸರ, ಕೈಗಾರಿಕೆ, ವಸತಿ, ಶಿಕ್ಷಣ, ನೀರಾವರಿ ಸೇರಿದಂತೆ ಹಲವು ಇಲಾಖೆಗಳ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚೆ ನಡೆಯಲಿದ್ದು, ರಾಜ್ಯದ ಜನಜೀವನಕ್ಕೆ ಸಂಬಂಧಿಸಿದ ಪ್ರಮುಖ ನಿರ್ಣಯಗಳು ಹೊರಬರುವ ನಿರೀಕ್ಷೆಯಿದೆ.

Comments

Leave a Comment

Prev Post ಸಾರಿಗೆ ನೌಕರರಿಗೆ ವರಮಹಾಲಕ್ಷ್ಮಿ ಹಬ್ಬದ ಕೊಡುಗೆ

ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ

ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ: ಎಂ ಬಿ ಪಾಟೀಲ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಲಸಿಕೆ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಅಕ್ಕಪಡೆ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News