UGC ಮಾನ್ಯತೆ, NAAC 'A+' ಗ್ರೇಡ್ – ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರವೇಶಾತಿ ಪ್ರಕ್ರಿಯೆ ಆರಂಭ"
ಬೆಂಗಳೂರು . ಜು.21-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 1996ರಲ್ಲಿ 'ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ' ಎಂಬ ಧ್ಯೇಯವಾಕ್ಯದೊಂದಿಗೆ ಸ್ಥಾಪಿತವಾಗಿ, ಮೂರು ದಶಕಗಳ ಯಶಸ್ವಿ ಪಯಣವನ್ನು ಪೂರೈಸಿದೆ. ಮೈಸೂರಿನ ಹಸಿರು ಪರಿಸರದಲ್ಲಿ 'ಮುಕ್ತ ಗಂಗೋತ್ರಿ' ಕೇಂದ್ರ ಕಛೇರಿಯಿಂದ ಪ್ರಾರಂಭವಾದ ಈ ವಿಶ್ವವಿದ್ಯಾನಿಲಯವು ಇಂದು 38 ಪ್ರಾದೇಶಿಕ ಕೇಂದ್ರಗಳು ಮತ್ತು 118 ಕಲಿಕಾರ್ಥಿ ಸಹಾಯ ಕೇಂದ್ರಗಳ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮನೆ ಬಾಗಿಲಿಗೇ ಉನ್ನತ ಶಿಕ್ಷಣವನ್ನು ತಲುಪಿಸಿದೆ.
ರಾಜ್ಯದ ಘನ ಸರ್ಕಾರವು 2020ರ ಡಿಸೆಂಬರ್ 30ರಂದು ಹೊರಡಿಸಿದ ಅಧಿಸೂಚನೆಯ ಪ್ರಕಾರ, ಕರ್ನಾಟಕದಲ್ಲಿ ದೂರಶಿಕ್ಷಣ ನೀಡುವ ಏಕೈಕ ವಿಶ್ವವಿದ್ಯಾನಿಲಯವೆಂದರೆ ಕ.ರಾ.ಮು.ವಿ. ಮಾತ್ರ. ಯುಜಿಸಿ-DEB ಮಾನ್ಯತೆ ಹೊಂದಿದ ಕೋರ್ಸ್‌ಗಳಿಗೆ ಮಾತ್ರ ಪ್ರವೇಶಾತಿ ನೀಡಲಾಗುತ್ತಿದ್ದು, ನ್ಯಾಕ್‌ನಿಂದ 'A+' ಗ್ರೇಡ್ ಹಾಗೂ ರಾಷ್ಟ್ರೀಯ NIRF ಸಂಸ್ಥೆಯಿಂದ 2ನೇ ಶ್ರೇಣಿ ಪಡೆದಿರುವುದು ನಮ್ಮ ಹೆಮ್ಮೆಎಂದು ಪತ್ರಿಕಾಗೋಷ್ಠಿಯಲ್ಲಿ ಫ್ರೋ.ಎ. ಪಿ . ಜ್ಙಾನ ಪ್ರಕಾಶ್ ಉಪಕುಲಪತಿಗಳು ವಿವರಿಸಿದರು.
ಇದೇ ವೇಳೆ, NSDC ಯೊಂದಿಗೆ ಕೌಶಲ್ಯಾಭಿವೃದ್ಧಿ ಕೋರ್ಸ್‌ಗಳ ಒಡಂಬಡಿಕೆ ಮಾಡಿಕೊಂಡಿರುವುದು ವಿದ್ಯಾರ್ಥಿಗಳಿಗೆ ಉದ್ಯೋಗಮುಖಿ ಶಿಕ್ಷಣದ ದಾರಿಯನ್ನು ತೆರೆದಿದೆ. ಯುಜಿಸಿ ನಿಯಮಾವಳಿಯಂತೆ ಏಕಕಾಲದಲ್ಲಿ ಎರಡು ಪದವಿ ವ್ಯಾಸಂಗ ಮಾಡಲು ಅವಕಾಶವಿದ್ದು, ನಮ್ಮ ವಿಶ್ವವಿದ್ಯಾನಿಲಯದ ಪದವಿಗಳು ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳ ಪದವಿಗಳಿಗೆ ಸಮಾನವಾಗಿವೆ.
2026-27ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ಪ್ರವೇಶಾತಿ ಈಗಾಗಲೇ ಆರಂಭಗೊಂಡಿದ್ದು, ಬಿ.ಎ., ಬಿ.ಕಾಂ., ಬಿ.ಬಿ.ಎ., ಎಂ.ಎ., ಎಂ.ಕಾಂ., ಎಂ.ಬಿ.ಎ., ಎಂ.ಎಸ್ಸಿ. ಗಣಿತಶಾಸ್ತ್ರ ಸೇರಿದಂತೆ 65 ODL ಕೋರ್ಸ್‌ಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 10 ಸಂಪೂರ್ಣ ಆನ್‌ಲೈನ್ ಕೋರ್ಸ್‌ಗಳ ವ್ಯವಸ್ಥೆಯೂ ಕಲ್ಪಿಸಲಾಗಿದೆ.
ಅಲ್ಪಸಂಖ್ಯಾತರು, ತೃತೀಯ ಲಿಂಗದವರು, ದೃಷ್ಟಿಹೀನರು, ಕೋವಿಡ್-19ರಿಂದ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ನೀಡಲಾಗುತ್ತಿದೆ. ಡಿಫೆನ್ಸ್ ಹಾಗೂ ಮಾಜಿ ಸೈನಿಕರು, ಅಟೋ/ಕ್ಯಾಬ್ ಚಾಲಕರು ಮತ್ತು ಅವರ ಕುಟುಂಬಕ್ಕೆ ಶೇ.10ರಷ್ಟು ರಿಯಾಯಿತಿ ನೀಡಲಾಗುತ್ತಿದೆ. SC/ST ವಿದ್ಯಾರ್ಥಿಗಳಿಗೆ SSP ಮುಖಾಂತರ ವಿದ್ಯಾರ್ಥಿ ವೇತನ ಹಾಗೂ ಶುಲ್ಕ ಮರುಭರಿಕೆ ಯೋಜನೆ ಲಭ್ಯವಿದೆ.
ವಿದ್ಯಾರ್ಥಿಗಳ ಹಿತದೃಷ್ಠಿಯಿಂದ KSOU Academic Platform App, 'ಕರಾಮುವಿ ದೃಶ್ಯವಾಹಿನಿ' ಯೂಟ್ಯೂಬ್ ಚಾನೆಲ್, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ, ಪ್ರಸಾರಾಂಗ, ರೇಡಿಯೋ ಕೇಂದ್ರ, E-Library, ಹಾಸ್ಟೆಲ್, ವೈದ್ಯಕೀಯ ಸೇವೆ, ಆಟದ ಮೈದಾನ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ.
ನಮ್ಮ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದವರು ಇಂದು IAS, KAS, ಪೊಲೀಸ್ ಅಧಿಕಾರಿಗಳು, ಪ್ರಾಧ್ಯಾಪಕರು, ಶಿಕ್ಷಕರು, ಸಮಾಜ ಸೇವಕರು, ರಾಜಕೀಯ ಚಿಂತಕರು, ಸಾಧು ಸಂತರು, ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನಮಾನದಲ್ಲಿದ್ದಾರೆ. ಪ್ರಸ್ತುತ ಮಾನ್ಯ ಮುಖ್ಯಮಂತ್ರಿ ಸಹ ನಮ್ಮ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವೀಧರರಾಗಿರುವುದು ನಮ್ಮ ಹೆಮ್ಮೆ.
ವಿದ್ಯಾರ್ಥಿಗಳು ಹಾಗೂ ಪೋಷಕರು ಅಧಿಕೃತ ವೆಬ್‌ಸೈಟ್ www.ksoumysuru.ac.in ಮೂಲಕ ಪ್ರವೇಶಾತಿ ಪ್ರಕ್ರಿಯೆ ನಡೆಸಿ, ಪ್ರಾದೇಶಿಕ ಕೇಂದ್ರಗಳಲ್ಲಿ ದಾಖಲೆ ಪರಿಶೀಲನೆ ಮಾಡಿ, ಆನ್‌ಲೈನ್ ಮೂಲಕ ಶುಲ್ಕ ಪಾವತಿಸಬಹುದು. ಅನಧಿಕೃತ ಕೇಂದ್ರಗಳು ಮತ್ತು ವ್ಯಕ್ತಿಗಳ ಬಗ್ಗೆ ಎಚ್ಚರ ವಹಿಸಿ, ವಿಶ್ವವಿದ್ಯಾನಿಲಯದ ನಿಗದಿತ ಶುಲ್ಕವನ್ನೇ ಪಾವತಿಸಬೇಕು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಮುಂದುವರೆಯುವ ಪಯಣದಲ್ಲಿ ಶಿಕ್ಷಣಮುಖಿ, ಉದ್ಯೋಗಮುಖಿ ಮತ್ತು ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸುತ್ತಾ, ಉನ್ನತ ಶಿಕ್ಷಣವನ್ನು ಎಲ್ಲರಿಗೂ ಎಲ್ಲೆಡೆ ತಲುಪಿಸುವ ಧ್ಯೇಯವನ್ನು ಸಾಧಿಸುತ್ತಿದೆ."ಎಂದು ಅವರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಫ್ರೋ:ನವೀನ್ ಕುಮಾರ್ . ಫ್ರೋ;ಎಂ ರಾಮನತಹಮ ನಾಯಿಡು , ಡಾ; ಸಿಎಸ್ . ಆನಂದ ಕುಮಾರ್ , ಡಾ; ನಿರಂಜನ್ ರಾಜ್ , ಹಾಗೂ ಡಾ; ಆನಂದ ಗೌಡ ಹಾಜರಿದ್ದರು.




Comments
Leave a Comment