ಮಂಗಳೂರಿನ ಡಾ. ಗುರುಪ್ರಸಾದ್ ಭಟ್ – ಇಂಗ್ಲಿಷ್ ಚಾನೆಲ್ ಯಶಸ್ವಿಯಾಗಿ ಈಜಿದ ಮೊದಲ ಮಂಗಳೂರಿಗ
From Jayaram Udupi
ಮಂಗಳೂರು:
ವಿಶ್ವದ ಅತ್ಯಂತ ಸವಾಲಿನ ಸಮುದ್ರ ಮಾರ್ಗಗಳಲ್ಲಿ ಒಂದಾದ ಇಂಗ್ಲಿಷ್ ಚಾನೆಲ್ ಅನ್ನು ಆರು ಸದಸ್ಯರ ರಿಲೇ ತಂಡದೊಂದಿಗೆ ಜುಲೈ 3ರಂದು ಯಶಸ್ವಿಯಾಗಿ ಈಜಿದ ಮಂಗಳೂರಿನ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಖ್ಯಾತ ಈಜುಪಟು ಡಾ. ಗುರುಪ್ರಸಾದ್ ಭಟ್ ಪಾತ್ರರಾಗಿದ್ದಾರೆ.
ತಮ್ಮ ಸಾಧನೆಯ ಅನುಭವವನ್ನು ಸೋಮವಾರ ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಹಂಚಿಕೊಂಡರು.
ಇಂಗ್ಲಿಷ್ ಚಾನೆಲ್ ಈಜು ವಿಶ್ವದ ಅತ್ಯಂತ ಕಠಿಣ ಸಾಹಸಗಳಲ್ಲಿ ಒಂದಾಗಿದೆ. 13ರಿಂದ 14 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ತಾಪಮಾನ, ಅಟ್ಲಾಂಟಿಕ್ ಮಹಾಸಾಗರ ಮತ್ತು ಉತ್ತರ ಸಮುದ್ರದ ಸಂಗಮದಿಂದ ಉಂಟಾಗುವ ಪ್ರಬಲ ಅಲೆಗಳು ಹಾಗೂ ವಿಶ್ವದ ಅತ್ಯಂತ ಬ್ಯುಸಿಯಾದ ಹಡಗು ಸಂಚಾರ ಮಾರ್ಗವಾಗಿರುವ ಕಾರಣ ಈ ಸವಾಲು ಇನ್ನಷ್ಟು ದುಸ್ತರವಾಗುತ್ತದೆ. ಅಲೆಗಳ ಒತ್ತಡದಿಂದ ನೇರವಾಗಿ ಈಜಲು ಸಾಧ್ಯವಾಗದೆ ಸುಮಾರು 50ರಿಂದ 56 ಕಿಲೋಮೀಟರ್‌ವರೆಗೆ ಕ್ರಮಿಸಿ ಈ ಸಾಧನೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಈ ಸಾಧನೆಯೊಂದಿಗೆ ಜಗತ್ತಿನ ಏಳು ಭೂಖಂಡಗಳ ಅತಿ ಎತ್ತರದ ಶಿಖರಗಳು ಹಾಗೂ ಏಳು ಮಹಾಸಾಗರಗಳನ್ನು ಕ್ರಮಿಸುವ ಪ್ರತಿಷ್ಠಿತ 'ಸೆವೆನ್ ಡಬಲ್ ಸಮಿಟ್ಸ್' ಗುರಿಯತ್ತ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿರುವುದಾಗಿ ತಿಳಿಸಿದರು. ಈ ಯೋಜನೆಯಡಿ ಈಗಾಗಲೇ ಐದು ಸವಾಲುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಆಫ್ರಿಕಾದ ಕಿಲಿಮಂಜಾರೋ, ಯುರೋಪ್‌ನ ಮೌಂಟ್ ಎಲ್ಬ್ರಸ್, ಆಸ್ಟ್ರೇಲಿಯಾದ ಮೌಂಟ್ ಕೊಸಿಯಸ್‌ಕೊ ಶಿಖರಗಳನ್ನು ಅವರು ಏರಿದ್ದಾರೆ. ಅಲ್ಲದೆ, ಪೆಸಿಫಿಕ್ ಮಹಾಸಾಗರದ ಕ್ಯಾಟಲಿನಾ ಚಾನೆಲ್ ಹಾಗೂ ಇಂಗ್ಲಿಷ್ ಚಾನೆಲ್ ಈಜಿನಲ್ಲೂ ಯಶಸ್ಸು ಸಾಧಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈಜು ತರಬೇತುದಾರ ಸಂಕೇತ್ ಬೆಂಗ್ರೆ ಉಪಸ್ಥಿತರಿದ್ದರು.






Comments
Leave a Comment