PRABHAVAA.COM

ಮಳೆ ತೀವ್ರ ಕೊರತೆ: ರಾಜ್ಯ ಸರ್ಕಾರ ಸ್ಪಂದಿಸಲಿ: ಬಿ.ವೈ. ವಿಜಯೇಂದ್ರ

Bidar:

Font size:

ಮಳೆ ತೀವ್ರ ಕೊರತೆ: ರಾಜ್ಯ ಸರ್ಕಾರ ಸ್ಪಂದಿಸಲಿ: ಬಿ.ವೈ. ವಿಜಯೇಂದ್ರ

ಮಳೆ ತೀವ್ರ ಕೊರತೆ: ರಾಜ್ಯ ಸರ್ಕಾರ ಸ್ಪಂದಿಸಲಿ: ಬಿ.ವೈ. ವಿಜಯೇಂದ್ರ

ಮುಖ್ಯಾಂಶಗಳು:
 ಅನ್ನದಾತರ ಕಷ್ಟಕ್ಕೆ ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸಲಿ
 ಎಕರೆಗೆ ಐವತ್ತು ಸಾವಿರ ಪರಿಹಾರ ನೀಡಲು ಆಗ್ರಹ
 ಮಾಕೆರ್ಂಟಿಂಗ್ ವಿಚಾರದಲ್ಲಿ ಡಿಕೆಶಿ ಅವರಿಗೆ ಸಾಟಿ ಇಲ್ಲ
 ಸಿಎಂ ಆದ್ಯತೆ ರಿಯಲ್ ಎಸ್ಟೇಟ್ ಆಗುವುದು ಬೇಡ
 ಅನುಭವ ಮಂಟಪಕ್ಕೆ 200 ಕೋಟಿ ಬಿಡುಗಡೆ ಮಾಡಿದ್ದ ಬಿಎಸ್‍ವೈ
 ಆದಷ್ಟು ಸಚಿವ ಸಂಪುಟ ಪೂರ್ಣವಾಗಲಿ.

ಬೀದರ್: ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ ಮಳೆಯ ತೀವ್ರ ಕೊರತೆಯಾಗಿದ್ದು, ರೈತರು ಆತಂಕಕ್ಕೊಳಗಾಗಿದ್ದಾರೆ. ಆದ್ದರಿಂದ ಸರ್ಕಾರ ಅನ್ನದಾತರ ಕಷ್ಟಕ್ಕೆ ಸ್ಪಂದಿಸಬೇಕು. ಸಂಕಷ್ಟದಲ್ಲಿರುವ ರೈತರಿಗೆ ಎಕರೆಗೆ ಐವತ್ತು ಸಾವಿರ ಪರಿಹಾರವನ್ನು ಸರ್ಕಾರ ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಮುಂಗಾರು ದುರ್ಬಲವಾಗಿದೆ. ಕಲ್ಯಾಣ ಕರ್ನಾಟದ ಭಾಗದಲ್ಲಿ 30 ಲಕ್ಷ ಹೆಕ್ಟೇರ್‍ಗೂ ಹೆಚ್ಚು ಜನೀನಿನಲ್ಲಿ ಬಿತ್ತನೆ ಆಗಿಲ್ಲ. ಕಳೆದ ವಾರ ಸ್ವಲ್ಪ ಮಳೆ ಆಗಿತ್ತು. ಆ ಮಳೆಗೆ ಬಿತ್ತನೆ ಆಗಿತ್ತು. ಆದರೆ ತೊಗರಿ, ಉದ್ದು, ಸೂರ್ಯಕಾಂತಿ ಮೊಳಕೆ ಒಡೆಯುವ ಸ್ಥಿತಿಯಲ್ಲಿ ಇಲ್ಲ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು.
ಸಿಎಂಗೆ ಯಾರೂ ಸಾಟಿ ಇಲ್ಲ...
ಕಳೆದ ವಾರ ಸಿಎಂ ಮೊದಲಿಗೆ ಬೀದರ್‍ಗೆ ಬಂದಿದ್ದರು. ಬಸವಕಲ್ಯಾಣಕ್ಕೂ ಭೇಟಿ ನೀಡಿದ್ದ ಅವರು ಶಿವಲಿಂಗವನ್ನು ಕೈಯಲ್ಲಿ ಹಿಡಿದು ಫೆÇೀಟೊ ಶೂಟ್ ಮಾಡಿದ್ದಾರೆ. ಮಾಕೆರ್ಂಟಿಂಗ್ ವಿಚಾರದಲ್ಲಿ ಡಿ ಕೆ ಶಿವಕುಮಾರ್ ಅವರಿಗೆ ಯಾರೂ ಸಾಟಿ ಇಲ್ಲ. ಕಳೆದ ಮೂರು ವರ್ಷ ಸಹ ಅಭಿವೃದ್ಧಿ ಕಾರ್ಯ ಆಗಿಲ್ಲ. ಶಾಸಕರಿಗೆ ಹಣ ನೀಡಲಿಲ್ಲ. ಬೆಂಗಳೂರು ಅಭಿವೃದ್ಧಿ ಆದರೆ ಮಾತ್ರ ರಾಜ್ಯದ ಅಭಿವೃದ್ಧಿ ಎಂದು ಹಿಂದಿನ ಸಿಎಂ ತಿಳಿದಿದ್ದರು. ಆದರೆ ಈಗಿನ ಸಿಎಂ ಸಹ ಬದಲಾಗಿಲ್ಲ ಎಂದರು.
ಪರಿಹಾರದ ಹಣ ಕೇವಲ ಜಲ್ಲಾಧಿಕಾರಿಗಳ ಅಕೌಂಟ್‍ನಲ್ಲಿ ಉಳಿಯಬಾರದು. ರೈತರಿಗೆ ಸಿಗಬೇಕು. ಹಿಂದಿನ ಸಿಎಂ ಕಪಟ ನಾಟಕವಾಡಿದರು. ಕೇಂದ್ರದಿಂದ ಬಂದ ಅನುದಾನ ಹೇಗೆ ದುರ್ಬಳಕೆ ಮಾಡಿದರು ಎಂಬುದನ್ನು ನೋಡಿದ್ದೇವೆ. ಕೇಂದ್ರದಿಂದ ಬರುವ ಅನುದಾನ ಜನರಿಗೆ ಸಿಗಬಾರದು ಎಂದು ಷಡ್ಯಂತ್ರವನ್ನು ಈ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ರಿಯಲ್ ಎಸ್ಟೇಟ್ ಆದ್ಯತೆ ಅಲ್ಲ..
ರಾಜ್ಯದ ಸಿಎಂ ಆದವರಿಗೆ ರೈತರು ಆದ್ಯತೆ ಹೊರತು ರಿಯಲ್ ಎಸ್ಟೇಟ್ ಅಲ್ಲ. ರಾಜ್ಯದ ನೂತನ ಸಿಎಂ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಾರೆ ಎಂದು ಬಯಸಿದ್ದರು. ಬಿಡದಿಯಲ್ಲೂ ರಿಯಲ್ ಎಸ್ಟೇಟ್ ಮಾಡಲು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣಕ್ಕೆ ನೀಡುವ ಆದ್ಯತೆಯನ್ನು ಉತ್ತರ ಕರ್ನಾಟಕ ಭಾಗಕ್ಕೆ ನೀಡಲಿ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗೆ ಪರಿಹಾರ ಸಿಗಬೇಕು. ನೀರಾವರಿ ಸಮಸ್ಯೆಗೆ ಉತ್ತರ ಸಿಗಬೇಕಿದೆ ಎಂದರು.
ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು, ಅನುಭವ ಮಂಟಪದ ಅಭಿವೃದ್ಧಿಗೆ ಆಸಕ್ತಿ ವಹಿಸಿದ್ದರು. ಜಾಗತಿಕ ಮಟ್ಟದ ಕೇಂದ್ರ ಮಾಡಲು ಮುಂದಾಗಿದ್ದರು. ಸುಮಾರು 500 ಕೋಟಿ ಯೋಜನಾ ವರದಿ ಮಾಡಿ 200 ಕೋಟಿ ಬಿಡುಗಡೆ ಮಾಡಿದ್ದರು. ಬಸವಕಲ್ಯಾಣದ ಅಭಿವೃದ್ಧಿ ಸಂಬಂಧ ಸಿಎಂ ಹೇಳಿಕೆ ಕೇವಲ ಹೇಳಿಕೆಗೆ ಸೀಮಿತವಾಗದೆ ಮಾತು ನೀಡಿದಂತೆ ಅನುμÁ್ಠನವಾಗಲಿ ಎಂದು ಹೇಳಿದರು.
ಪೂರ್ಣ ಸಚಿವ ಸಂಪುಟ ಸಹ ಇಲ್ಲ...
ಭೀಕರ ಬರ ಬಂದಿರುವಾಗಲೇ ರಾಜ್ಯ ಸರ್ಕಾರಕ್ಕೆ ಪೂರ್ಣ ಸಚಿವ ಸಂಪುಟ ಸಹ ಇಲ್ಲ. ಈಗ ಮತ್ತೆ ಶಾಸಕರು ದೆಹಲಿಗೆ ಹೋಗಿ ಬೀಡು ಬಿಡುತ್ತಿದ್ದಾರೆ. ರಾಹುಲ್ ಗಾಂಧಿ ವಿದೇಶ ಪ್ರವಾಸದಿಂದ ಬಂದಿದ್ದಾರೆ. ಮತ್ತೆ ಸಚಿವಗಿರಿಗೆ ಲಾಬಿ ಆರಂಭವಾಗಲಿದೆ ಎಂದು ವ್ಯಂಗವಾಡಿದರು.
ಪಿಆರ್‍ಸಿ ದೇಶದ್ರೋಹದ ಕೆಲಸ..
ರಾಜ್ಯದಲ್ಲಿ ಎಸ್‍ಐ ಆರ್ ನಡೆಯುತ್ತಾರೆ ಇದೆ. ಹಿಂದೆ ಇದೇ ಕಾಂಗ್ರೆಸ ಸರ್ಕಾರ ಎಸ್ ಐಆರ್ ವಿರೋಧಿಸಿತ್ತು. ಆದರೆ ಈಗ ಅಧಿಕಾರಿಗಳನ್ನು ದುರ್ಬಳಕೆ ಮಾಡಿ ಅವರ ಮೇಲೆ ಒತ್ತಡ ಹೇರಿ ಅಕ್ರಮ ವಲಸಿಗರನ್ನು ಮತಪಟ್ಟಿಗೆ ಸೇರಿಸಲು ರಾಜ್ಯಾದಾದ್ಯಂತ ಕೆಲಸ ನಡೆಯುತ್ತಿದೆ. ಮತ್ತೊಂದು ಕಡೆ ಅಕ್ರಮ ವಲಸಿಗರಿಗೆ ಪಿಆರ್‍ಸಿ (ಶಾಶ್ವತ ನಿವಾಸಿ ಪ್ರಮಾಣ ಪತ್ರ) ನೀಡುವ ಸಂಚು ಮಾಡಲಾಗುತ್ತಿದೆ. ಪಿಆರ್‍ಸಿ ನೀಡುತ್ತಿರುವುದು ದೇಶದ್ರೋಹದ ಕೆಲಸ. ಸದುದ್ದೇಶದಿಂದ ಮತಪಟ್ಟಿ ಪರಿಷ್ಕರಣೆ ನಡೆಯಬಾರದು ಎಂದು ಸರ್ಕಾರ ಇದನ್ನೆಲ್ಲ ಮಾಡುತ್ತಿದೆ. ಈ ಬಗ್ಗೆ ಬಿಜೆಪಿ ಜಾಗೃತಿ ಮಾಡಿಸುತ್ತಿದೆ ಎಂದು ವಿವರಿಸಿದರು.
ಬೀದರ್‍ನಲ್ಲೂ ಎಸ್‍ಐಆರ್ ಅನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಒಟ್ಟಾಗಿ ಒಂದಾಗಿ ಸಂಘಟನೆ ಕೆಲಸ ಮಾಡುತ್ತಿದ್ದೇವೆ ಎಂದರು.
ಹತ್ತಾರು ಬಾರಿ ಶಾಸಕರ ಸಭೆ, ಮಂಡಲಾಧ್ಯಕ್ಷರ, ಜಿಲ್ಲಾಧ್ಯಕ್ಷರ ಸಭೆ ಮಾಡಿದ್ದೇವೆ. ಸಂಘಟನೆ ವಿಷಯದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರು ಉಸ್ತುವಾರಿ ಇದ್ದಾರೆ. ಯಾವುದರಲ್ಲೂ ಹಿಂದೆ ಬಿದ್ದಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.
ಬೀದರ್‍ನಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲು ಕಾರಣಗಳ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ವರಿಷ್ಠರ ಗಮನಕ್ಕೆ ತಂದಿದ್ದೇವೆ. ಅವರು ಸರಿಯಾದ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ತಿಳಿಸಿದರು.
ಕೆಲವು ಜಿಲ್ಲೆಗಳಲ್ಲಿ ಸಂಘಟನಾತ್ಮಕ ಸಮಸ್ಯೆ ಇವೆ. ಇನ್ನು ಮೇಲೆ ಸಂಘಟನೆಗಾಗಿ ಕೆಲಸ ಮಾಡಿ ಎಂದು ಹೇಳಿದ್ದೇನೆ. ಎಲ್ಲವನ್ನೂ ಸರಿಪಡಿಸುತ್ತೇವೆ ಎಂದರು.
ಹಾಲಿನ ಪೆÇ್ರೀತ್ಸಾಹಧನ ಈ ಹಿಂದಿನ ಬಿಜೆಪಿ ಸರ್ಕಾರ ಜಾರಿ ಮಾಡಿದ್ದು. ಕಾಂಗ್ರೆಸ್ ಸರ್ಕಾರ ಪೆÇ್ರೀತ್ಸಾಹ ಧನ ಕೊಡುತ್ತಿಲ್ಲ. ಇರೋ ಐದು ರೂಪಾಯಿ ಕೊಡಲಿ ಎಂದರು. ದಸರಾದಲ್ಲಿ ಕಂಬಳ ಬೇಡ ಎಂದು ಸಂಸದರ ಹಾಗೂ ಜನರ ಆಗ್ರಹವಿದೆ ಎಂದು ನುಡಿದರು.
ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ರಾಜ್ಯ ಕಾರ್ಯದರ್ಶಿ ಮತ್ತು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಶಾಸಕರಾದ ಬಸವರಾಜ ಮತ್ತಿಮಡು, ಸಿದ್ದು ಪಾಟೀಲ್, ಶರಣು ಸಲಗಾರ್, ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಉಪಸ್ಥಿತರಿದ್ದರು.

(ಕರುಣಾಕರ ಖಾಸಲೆ)
ರಾಜ್ಯ ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ

Comments

Leave a Comment

Prev Post ಹೂಡಿಕೆ ಆಕರ್ಷಣೆಗೆ ಕೋಲ್ಕತ್ತಾದಲ್ಲಿ ರೋಡ್ ಶೋ ನಡೆಸಿದ ಸಚಿವ ಎಂ.ಬಿ.ಪಾಟೀಲ
Next Post ಮಂಗಳೂರಿನ ಡಾ. ಗುರುಪ್ರಸಾದ್ ಭಟ್ – ಇಂಗ್ಲಿಷ್ ಚಾನೆಲ್ ಯಶಸ್ವಿಯಾಗಿ ಈಜಿದ ಮೊದಲ ಮಂಗಳೂರಿಗ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ನ್ಯಾ.‌ನಾಗಮೋಹನ್ ದಾಸ್ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ:ಬಸವರಾಜ ಬೊಮ್ಮಾಯಿ

ಸಿಎಂ ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದಿದ್ದಾರೆ: ಬಸವರಾಜ ಬೊಮ್ಮಾಯಿ

ಒಡಿಶಾ ಶಾಸಕರನ್ನು ನಾನು ಕರೆಸಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಪಕ್ಷ ಹೇಳಿದ್ದನ್ನು ಮಾಡುತ್ತೇನೆ ನನಗೆ ಇದು ಹೊಸತಲ್ಲ, ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದಿಂದಲೂ ಇದನ್ನು ಮಾಡುತ್ತಿರುವೆ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News